ಜೆಡಿಎಸ್ ಪರ ಪ್ರಚಾರಕ್ಕೆ ಇಳಿಯಲಿದ್ದಾರೆ ಪವರ್ ಸ್ಟಾರ್ ಪವನ್ ಕಲ್ಯಾಣ್!

Recommended Video

      ಎಚ್ ಡಿ ಕುಮಾರಸ್ವಾಮಿ ಬೆನ್ನಿಗೆ ನಿಂತ ಪವರ್ ಸ್ಟಾರ್ | Oneindia Kannada

      ಜೆಡಿಎಸ್ ಪರ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಪವರ್ ಸ್ಟಾರ್ ಪ್ರಚಾರ ಮಾಡಲಿದ್ದಾರೆ ಎಂಬ ಸುದ್ದಿ ಬಿರುಸಾಗಿ ಓಡಾಡುತ್ತಿದೆ. ಇದೇನು ಪುನೀತ್ ರಾಜ್ ಕುಮಾರ್ ಜೆಡಿಎಸ್ ಪರ ಪ್ರಚಾರ ಮಾಡ್ತಾರಾ ಎಂದು ಅಚ್ಚರಿ ಪಡಬೇಡಿ. ಈ ಪವರ್ ಸ್ಟಾರ್ ತೆಲುಗು ಚಿತ್ರರಂಗದವರು. ನಟ ಪವನ್ ಕಲ್ಯಾಣ್ ಜೆಡಿಎಸ್ ಪರ ಪ್ರಚಾರ ನಡೆಸುವ ಸಾಧ್ಯತೆಗಳಿವೆ.

      ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

      ತೆಲುಗು ಭಾಷೆ ಪ್ರಭಾವ ದಟ್ಟವಾಗಿರುವ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಪಾವಗಡ ಹೀಗೆ ಆಯ್ದ ವಿಧಾನಸಭಾ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಮತ ಹಾಕುವಂತೆ ಮನವಿ ಮಾಡಲಿದ್ದಾರೆ. ಆ ವೇಳೆ ಎಚ್.ಡಿ.ಕುಮಾರಸ್ವಾಮಿ ಅವರ ಮಗ ನಿಖಿಲ್ ಕೂಡ ಜತೆಗಿರಲಿದ್ದಾರೆ ಎಂಬುದು ಮೂಲಗಳಿಂದ ಬಂದಿರುವ ಮಾಹಿತಿ.

      ನಿಖಿಲ್ ಅವರ ಮೊದಲ ಸಿನಿಮಾ ಜಾಗ್ವಾರ್ ನ ತೆಲುಗು ಅವತರಣಿಕೆಯ ಪ್ರಚಾರಕ್ಕೆ ಪವನ್ ಕಲ್ಯಾಣ್ ರನ್ನು ಕುಮಾರಸ್ವಾಮಿ ಭೇಟಿ ಆಗಿದ್ದರು. ಆ ವೇಳೆಯಲ್ಲಿ ಪವನ್ ಕೂಡ ಎqಜಾಗ್ವಾರ್ ಸಿನಿಮಾದ ಒಳ್ಳೆ ಮಾತನಾಡಿದ್ದರು. ಆ ಸಂದರ್ಭದಲ್ಲೇ ಇಂಥದ್ದೊಂದು ಮಾತು ಚಾಲ್ತಿಯಲ್ಲಿತ್ತು.

      ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್

      ನಿಖಿಲ್ ಕುಮಾರಸ್ವಾಮಿ ಜತೆಗೆ ಇರುತ್ತಾರೆ

      ನಿಖಿಲ್ ಕುಮಾರಸ್ವಾಮಿ ಜತೆಗೆ ಇರುತ್ತಾರೆ

      ಪವನ್ ಕಲ್ಯಾಣ್ ಜೆಡಿಎಸ್ ಪರ ವಿಧಾನಸಭೆ ಚುನಾವಣೆಗೆ ಪ್ರಚಾರ ಮಾಡುತ್ತಾರೆ ಎಂದು ಸುದ್ದಿ ಹರಿದಾಡಿತ್ತು. ಇದೀಗ ಮೂಲಗಳಿಂದ ಬರುತ್ತಿರುವ ಮಾಹಿತಿ ಪ್ರಕಾರ ಏಪ್ರಿಲ್ ಎರಡನೇ ವಾರದಲ್ಲಿ ಪವನ್ ಕಲ್ಯಾಣ್ ಕರ್ನಾಟಕದ ಆಯ್ದ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಾರಂತೆ. ಜತೆಗೆ ನಿಖಿಲ್ ಕುಮಾರ್ ಇರುತ್ತಾರಂತೆ (ಸದ್ಯಕ್ಕೆ ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದಲ್ಲಿ ತೊಡಗಿದ್ದಾರೆ ನಿಖಿಲ್).

      ಗೀತಾ ಶಿವರಾಜ್ ಕುಮಾರ್ ಕೂಡ ಪ್ರಚಾರಕ್ಕೆ ಇಳಿದಿದ್ದಾರೆ

      ಗೀತಾ ಶಿವರಾಜ್ ಕುಮಾರ್ ಕೂಡ ಪ್ರಚಾರಕ್ಕೆ ಇಳಿದಿದ್ದಾರೆ

      ಇದು ಪವರ್ ಸ್ಟಾರ್ ಕಥೆಯಾಯಿತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಅವರು ಅದಾಗಲೇ ಜೆಡಿಎಸ್ ಪರ ಪ್ರಚಾರ ಶುರು ಮಾಡಿ ಆಗಿದೆ. ಶಿವಮೊಗ್ಗದಿಂದ ಕಳೆದ ಲೋಕಸಭಾ ಚುನಾವಣೆ ವೇಳೆ ಸ್ಪರ್ಧಿಸಿದ್ದ ಗೀತಾ ಅವರ ಪರವಾಗಿ ಶಿವರಾಜ್ ಕುಮಾರ್ ಕೂಡ ಪ್ರಚಾರ ನಡೆಸಿದ್ದರು.

      ಮಾಯಾವತಿಯೂ ಕರ್ನಾಟಕಕ್ಕೆ ಬರಬಹುದು

      ಮಾಯಾವತಿಯೂ ಕರ್ನಾಟಕಕ್ಕೆ ಬರಬಹುದು

      ಇನ್ನು ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಜತೆ ಮೈತ್ರಿ ಮಾಡಿಕೊಂಡು ಎರಡು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಿನ ರುಚಿ ತೋರಿಸಿದ ಬಹುಜನ ಸಮಾಜ ಪಕ್ಷದ ಮಾಯಾವತಿ ಸಹ ರಾಜ್ಯದ ಕೆಲವು ಕ್ಷೇತ್ರದಲ್ಲಿ 'ತೆನೆ ಹೊತ್ತ ಮಹಿಳೆ' ಪರವಾಗಿ ಪ್ರಚಾಋಅ ಮಾಡುವ ಎಲ್ಲ ಸಾಧ್ಯತೆ ಇದೆ.

      ಹೊಸ ಉತ್ಸಾಹದಲ್ಲಿ ತೆನೆ ಹೊತ್ತ ಮಹಿಳೆ

      ಹೊಸ ಉತ್ಸಾಹದಲ್ಲಿ ತೆನೆ ಹೊತ್ತ ಮಹಿಳೆ

      ಇನ್ನು ಎನ್ ಸಿಪಿಯಿಂದ ಶರದ್ ಪವಾರ್ ಅವರು ದೇವೇಗೌಡರ ಪಕ್ಷಕ್ಕೆ ಬಲ ತುಂಬಲು ಮಹಾರಾಷ್ಟ್ರದಿಂದ ಬರುವ ಸಾಧ್ಯತೆ ಇದೆ. ಒಟ್ಟಾರೆ ಉತ್ತರಪ್ರದೇಶದಲ್ಲಿನ ಲೋಕ್ಸಭೆ ಉಪಚುನಾವಣೆ ಹಾಗೂ ಬಿಹಾರದಲ್ಲಿನ ಉಪ ಚುನಾವಣೆ ಫಲಿತಾಂಶ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಗೆ ಹೊಸ ಉತ್ಸಾಹ ತಂದಿರುವುದಂತೂ ಸತ್ಯ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+