ಬಿಜೆಪಿಗೆ ಮುನ್ನಡೆ, ಸಿದ್ದರಾಮಯ್ಯ ಮುಖ್ಯಮಂತ್ರಿ ಕಚೇರಿಗೆ ಬೀಗ!
ಬೆಂಗಳೂರು, ಮೇ 15: ಮಧ್ಯಾಹ್ನದ ಒಂದು ಸಮಯದಲ್ಲಿ ಬಿಜೆಪಿಯು 115-120 ಸೀಟುಗಳ ಮುನ್ನಡೆ ಸಾಧಿಸಿತ್ತು ಯಡಿಯೂರಪ್ಪ ಅವರು ಇನ್ನೇನು ದೆಹಲಿಗೆ ಫ್ಲೈಟ್ ಹತ್ತಲಿದ್ದಾರೆ ಎಂದೇ ಭಾವಿಸಲಾಗಿತ್ತು ಆದರೆ ಕೇವಲ ಒಂದು ಗಂಟೆ ಅವಧಿಯಲ್ಲಿ ಅಂಕಿ ಅಂಶಗಳು ಬಿಜೆಪಿಯ ಸ್ವತಂತ್ರ ಸರ್ಕಾರದ ಆಸೆಗೆ ತಣ್ಣೀರು ಎರಚಿದವು.
ಬಿಜೆಪಿಗೆ ಭಾರಿ ಮುನ್ನಡೆ ದೊರಕಿದ್ದ ಸಮಯದಲ್ಲಿ ಕೆಲವೇ ಸಮಯದಲ್ಲಿ ಹಲವು ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಕೆಲವು ನಿಜ ಚಿತ್ರಗಳೂ ಅದರಲ್ಲಿದ್ದವು ಅದರಲ್ಲೊಂಡು ವಿಧಾನಸೌಧದಲ್ಲಿ ಸಿದ್ದರಾಮಯ್ಯ ಅವರ ಕಚೇರಿಗೆ ಬೀಗ ಹಾಕುತ್ತಿರುವ ಚಿತ್ರ.
ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕಚೇರಿಗೆ ಸಿಬ್ಬಂದಿಯೊಬ್ಬರು ಬೀಗ ಹಾಕುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬಿಜೆಪಿ ಮುನ್ನಡೆ ಸಾಧಿಸಿದ್ದಕ್ಕೂ ಈ ಚಿತ್ರ ಹರಿದಾಡುತ್ತಿರುವುದಕ್ಕೂ ಸರಿಯಾಗಿ ಹೊಂದಾಣಿಕೆ ಆಗಿದೆ.

ಆದರೆ ಈಗಿನ ಚಿತ್ರಣ ಬೇರೆಯೇ ಆಗಿದೆ. 105 ಸೀಟುಗಳ ಸನಿಹದಲ್ಲಿರುವ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಆದರೆ ಅದಕ್ಕೆ ಸರ್ಕಾರ ರಚಿಸಲು ಯಾವ ಪಕ್ಷದ್ದಾದರೂ ಬೆಂಬಲ ಬೇಕಾಗಿದೆ. ಜೊತೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆ ಸೇರಿದರೂ ಸರ್ಕಾರ ರಚಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.
ಅಕಸ್ಮಾತ್ ಹಾಗೇನಾದರೂ ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ರಚಿಸಿದರೂ ಕೂಡ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಸಾಧ್ಯತೆ ತೀರಾ ಕಡಿಮೆ, ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಪ್ರಯಾಸದ ಗೆಲುವು ಸಾಧಿಸಿದ್ದರಾದರೂ ಚಾಮುಂಡೇಶ್ವರಿಯಲ್ಲಿ ಹೀನಾಯ ಸೋಲು ಕಂಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರ ಕಚೇರಿಗೆ ಬೀಗ ಹಾಕಿರುವುದು ಒಳ್ಳೆಯದೇ ಬಿಡಿ.












Click it and Unblock the Notifications