ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಧಾನಪರಿಷತ್ ಚುನಾವಣೆ: ಇಂದು ಫಲಿತಾಂಶ
ಬೆಂಗಳೂರು, ಜೂನ್ 12: ಶಿಕ್ಷಕರ ಕ್ಷೇತ್ರ ಮತ್ತು ಪದವೀಧರರ ಕ್ಷೇತ್ರದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಜೂನ್ 08 ರಂದು ಈ ಕ್ಷೇತ್ರಗಳಿಗೆ ಮತದಾನ ನಡೆದಿದೆ.
ವಿಧಾನಪರಿಷತ್ ಚುನಾವಣೆ : 11 ಸದಸ್ಯರು ಅವಿರೋಧವಾಗಿ ಆಯ್ಕೆ
ವಿಧಾನ ಪರಿಷತ್ ಚುನಾವಣೆ: 6ರಲ್ಲಿ 2 ಜೆಡಿಎಸ್, 1 ಬಿಜೆಪಿ ಗೆಲುವು
ಒಟ್ಟು ಆರು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ ಫಲಿತಾಂಶ ಹೊರಬೀಳಲಿದೆ.
ನೈರುತ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಶಿಕ್ಷಕರ ಕ್ಷೇತ್ರ, ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಈಶಾನ್ಯ ಪದವೀಧರ ಕ್ಷೇತ್ರ, ನೈರುತ್ಯ ಪದವೀಧರ ಕ್ಷೇತ್ರ, ಬೆಂಗಳೂರು ಪದವೀಧರ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು. ಹಾಲಿ ಸದಸ್ಯರಾದ ರಮೇಶ್ ಬಾಬು, ಮರಿತಿಬ್ಬೇಗೌಡ, ಗಣೇಶ್ ಕಾರ್ಣಿಕ್ ಅವರುಗಳು ಮರು ಆಯ್ಕೆ ಬಯಸಿ ಚುನಾವಣೆ ಕಣದಲ್ಲಿದ್ದಾರೆ.