ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಲಿಕ್ ಟಿವಿ ಸಮೀಕ್ಷೆ : ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ?

|
Google Oneindia Kannada News

ಬೆಂಗಳೂರು, ಮೇ 09 : ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ವರದಿ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಲಿದೆ. ಶೇ 42ರಷ್ಟು ಜನರು ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೇ 12ರಂದು ರಾಜ್ಯದ 223 (ಜಯನಗರ ಹೊರತು ಪಡಿಸಿ) ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪಬ್ಲಿಕ್ ಟಿವಿ ಚುನಾವಣಾ ಸಮೀಕ್ಷೆ ವರದಿ ಪ್ರಕಾರ ಕಾಂಗ್ರೆಸ್ 89-94, ಬಿಜೆಪಿ 86-91, ಜೆಡಿಎಸ್ 38-43 ಮತ್ತು ಇತರ ಅಭ್ಯರ್ಥಿಗಳು 0-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ?ಪಬ್ಲಿಕ್ ಟಿವಿ ಸಮೀಕ್ಷೆ: ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ?

ಈ ವರದಿ ಪ್ರಕಾರ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ (113) ಬರುವುದಿಲ್ಲ. ಆದ್ದರಿಂದ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವವರು ಇತರ ಪಕ್ಷಗಳ ಸಹಕಾರ ಪಡೆಯುವುದು ಅನಿವಾರ್ಯವಾಗಲಿದೆ. ಹಾಗಾಗಿ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ.

ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು!ಪಬ್ಲಿಕ್ ಟಿವಿ ಸಮೀಕ್ಷೆ : ಸಮ್ಮಿಶ್ರ ಸರ್ಕಾರ ರಚನೆ ಅಂತಾರೆ ಜನರು!

ರಾಜ್ಯದ 224 ಕ್ಷೇತ್ರಗಳಲ್ಲಿ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಮಾಡಲಾಗಿದೆ. ಒಟ್ಟು 21,617 ಮಾದರಿಗಳನ್ನು ಪಡೆದುಕೊಂಡು ಸಮೀಕ್ಷೆಯ ಅಂತಿಮ ವರದಿಯನ್ನು ಸಿದ್ಧಪಡಿಸಲಾಗಿದೆ. ಜೆಡಿಎಸ್ ಕಿಂಗ್ ಮೇಕರ್ ಹೇಗೆ? ಇಲ್ಲಿದೆ ಸಮೀಕ್ಷೆಯ ಫಲಿತಾಂಶ...

ಅತಂತ್ರ ವಿಧಾನಸಭೆ

ಅತಂತ್ರ ವಿಧಾನಸಭೆ

ಪಬ್ಲಿಕ್ ಟಿವಿ ಚುನಾವಣಾ ಸಮೀಕ್ಷೆ ವರದಿ ಪ್ರಕಾರ ಕಾಂಗ್ರೆಸ್ 89-94, ಬಿಜೆಪಿ 86-91, ಜೆಡಿಎಸ್ 38-43 ಮತ್ತು ಇತರ ಅಭ್ಯರ್ಥಿಗಳು 0-6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ಅತಂತ್ರ ವಿಧಾನಸಭೆ ರಚನೆಯಾಗಲಿದೆ.

ಸಮೀಕ್ಷೆ ನಡೆಸುವಾಗ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆಯೇ? ಎಂದು ಪ್ರಶ್ನಿಸಲಾಗಿದೆ. ಹೌದು ಎಂದು 42, ಇಲ್ಲ ಎಂದು 40, ಏನೂ ಹೇಳಲ್ಲ ಎಂದು ಶೇ 18ರಷ್ಟು ಜನರು ಉತ್ತರ ನೀಡಿದ್ದಾರೆ.

ಬೆಂಗಳೂರು ನಗರದ ಸಮೀಕ್ಷೆ

ಬೆಂಗಳೂರು ನಗರದ ಸಮೀಕ್ಷೆ

ಬೆಂಗಳೂರು ನಗರದಲ್ಲಿ ಸಮೀಕ್ಷೆ ಮಾಡುವಾಗ 'ಜೆಡಿಎಸ್ ಕಿಂಗ್ ಮೇಕರ್ ಆಗಲಿದೆಯೇ?' ಎಂದು ಪ್ರಶ್ನಿಸಲಾಗಿದೆ. ಶೇ 32.20 ರಷ್ಟು ಜನರು ಹೌದು ಎಂದು ಹೇಳಿದ್ದಾರೆ. ಇಲ್ಲ ಎಂದು 41.30 ರಷ್ಟು ಜನರು, ಏನೂ ಹೇಳಲ್ಲ ಎಂದು 25.90 ಜನರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹಳೆ ಮೈಸೂರು ಭಾಗದ ಶೇ 36.10 ರಷ್ಟು ಜನರು ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ಹೇಳಿದ್ದಾರೆ. ಆದರೆ, 43.40ಯಷ್ಟು ಜನರು ಇಲ್ಲ ಎಂದು ಹೇಳಿದ್ದಾರೆ. ಏನೂ ಹೇಳಲ್ಲ ಎಂದು ಶೇ 20.50ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

ಎಚ್ಡಿಕೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ರಹಸ್ಯ, ಇದೀಗ ಬಯಲು!ಎಚ್ಡಿಕೆ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರ ರಹಸ್ಯ, ಇದೀಗ ಬಯಲು!

ಜೆಡಿಎಸ್ ಕಿಂಗ್ ಮೇಕರ್ ಅಂತಾರೆ ಜನರು

ಜೆಡಿಎಸ್ ಕಿಂಗ್ ಮೇಕರ್ ಅಂತಾರೆ ಜನರು

ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜನರು ಸಹ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ ಎಂದು ಹೇಳಿದ್ದಾರೆ. ಮುಂಬೈ ಕರ್ನಾಟಕ ಭಾಗದ ಶೇ 46.80 ರಷ್ಟು ಜನರು ಜೆಡಿಎಸ್ ಕಿಂಗ್ ಮೇಕರ್ ಎಂದು, ಶೇ 42.50ರಷ್ಟು ಜನರು ಇಲ್ಲ ಎಂದು, ಶೇ 10.70ರಷ್ಟು ಜನರು ಏನೂ ಹೇಳಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್-ಕರ್ನಾಟಕ ಭಾಗದಲ್ಲಿ ಶೇ 54.80 ರಷ್ಟು ಜನರು ಜೆಡಿಎಸ್ ಕಿಂಗ್ ಮೇಕರ್ ಎಂದು ಹೇಳಿದ್ದಾರೆ. ಇಲ್ಲ ಎಂದು ಶೇ 35.80, ಏನೂ ಹೇಳಲ್ಲ ಎಂದು 9.40 ಜನರು ಅಭಿಪ್ರಾಯಪಟ್ಟಿದ್ದಾರೆ.

ಜೆಡಿಎಸ್‌ ಕಿಂಗ್ ಮೇಕರ್

ಜೆಡಿಎಸ್‌ ಕಿಂಗ್ ಮೇಕರ್

ಮಧ್ಯ ಕರ್ನಾಟಕ ಭಾಗದಲ್ಲಿ ಶೇ 43.70 ರಷ್ಟು ಜನರು ಜೆಡಿಎಸ್ ಕಿಂಗ್ ಮೇಕರ್ ಎಂದು ಹೇಳಿದ್ದಾರೆ. ಆದರೆ, ಶೇ 36.10ರಷ್ಟು ಜನರು ಇಲ್ಲ ಎಂದು, ಶೇ 20.20ರಷ್ಟು ಜನರು ಏನೂ ಹೇಳಲ್ಲ ಎಂದು ಹೇಳಿದ್ದಾರೆ.

ಕರಾವಳಿ ಕರ್ನಾಟಕ ಭಾಗದಲ್ಲಿ ಶೇ 36.20ರಷ್ಟು ಜನರು ಜೆಡಿಎಸ್ ಕಿಂಗ್ ಮೇಕರ್ ಎಂದು ಹೇಳಿದ್ದಾರೆ. ಆದರೆ, 37.10ರಷ್ಟು ಜನರು ಇಲ್ಲ ಎಂದಿದ್ದಾರೆ. ಶೇ 26.70ರಷ್ಟು ಜನರು ಏನೂ ಹೇಳಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
Public Tv pre poll survey on Karnataka assembly elections 2018 has predicted that ruling Congress to emerge as the single largest party in a hung assembly and suggested that JD(S) could emerge as the kingmaker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X