'ನನ್ನ ಕನಸಿನ ಕರ್ನಾಟಕದಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು'

Recommended Video

      ನನ್ನ ಕನಸಿನ ಕರ್ನಾಟಕದಲ್ಲಿ ಯುವಕರಿಗೆ ಆದ್ಯತೆ ಸಿಗಬೇಕು | Oneindia Kannada

      ಶಿವಮೊಗ್ಗ, ಮೇ 07 : 'ನನ್ನ ಕನಸಿನ ಕರ್ನಾಟಕದಲ್ಲಿ ಯುವಕರಿಗೆ ಕೌಶಲ್ಯ ಆಧಾರಿತ ತರಬೇತಿ ಸಿಗಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಯಾಗಬೇಕು' ಎಂದು ಸೊರಬ ಕ್ಷೇತ್ರದ ನಿವಾಸಿ ನೀಲಕಂಠ ಶೇಷಗಿರಿ ಹೇಳಿದರು.

      ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ ನೀಲಕಂಠ ಶೇಷಗಿರಿ ಅವರು, ಕನಸಿನ ಕರ್ನಾಟಕ ಹೇಗಿರಬೇಕು? ಎಂಬ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡರು. 'ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಜನರು ಸಹ ಭರವಸೆ ಇಟ್ಟು ಮತದಾನ ಮಾಡುತ್ತಾರೆ' ಎಂದರು.

      Neelakant Sheshagiri shares his dream about Karnataka

      'ಇಡೀ ದೇಶದಲ್ಲಿಯೆ ಕರ್ನಾಟಕ ಅತ್ಯುತ್ತಮ ಸಂಪತ್ತನ್ನು ಹೊಂದಿದೆ. ರಾಜ್ಯದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಬೇಕು. ಅವರಿಗೆ ಕೌಶಲ್ಯ ಆಧಾರಿತ ತರಬೇತಿ ಸಿಗಬೇಕು. ಉದ್ಯೋಗ ಸಿಗಬೇಕು. ರಾಜಕೀಯ ಪಕ್ಷಗಳು ಯುವಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು' ಎಂದು ಹೇಳಿದರು.

      'ನಮ್ಮದು ಕೃಷಿ ಪ್ರಧಾನವಾದ ರಾಜ್ಯವಾಗಿದೆ. ಉತ್ತರ ಕರ್ನಾಟಕ ಮತ್ತು ಈಶಾನ್ಯ ಕರ್ನಾಟಕದಲ್ಲಿ ಕೃಷಿಕರು ಹೆಚ್ಚಿದ್ದಾರೆ. ಇಲ್ಲಿ ನೀರಾವರಿ ವ್ಯವಸ್ಥೆಯನ್ನು ಮಾಡಿದರೆ ರೈತರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢರಾಗುತ್ತಾರೆ ಎಂಬ ನಂಬಿಕೆ ಇದೆ' ಎಂದು ಅಭಿಪ್ರಾಯವನ್ನು ಹಂಚಿಕೊಂಡರು.

      ವಿಡಿಯೋ ನೋಡಿ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+