ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ : ಯಡಿಯೂರಪ್ಪ ಘೋಷಣೆ

Recommended Video

      ವಿಶ್ವಾಸ ಮತ ಯಾಚಿಸದೆ ರಾಜೀನಾಮೆ ನಿರ್ಧಾರ ಪ್ರಕಟಿಸಿದ ಬಿಎಸ್ವೈ | Oneindia Kannada

      ಬೆಂಗಳೂರು, ಮೇ 19 : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ವಿಶ್ವಾಸಮತವನ್ನು ಸಾಬೀತು ಮಾಡಬೇಕಿದೆ. ಭೋಜನ ವಿರಾಮದ ಬಳಿಕ ಕಲಾಪ ಆರಂಭವಾಗಿದ್ದು, ಸದನದಲ್ಲಿ ಯಡಿಯೂರಪ್ಪ ಅವರು ಭಾಷಣವನ್ನು ಆರಂಭಿಸಿದರು.

      ಶನಿವಾರ ಮಧ್ಯಾಹ್ನ 3.45ಕ್ಕೆ ವಿಧಾನಸಭೆಯ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ವಿಶ್ವಾಸಮತವನ್ನು ಸಾಬೀತು ಮಾಡುವಂತೆ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದರು. ವಿಶ್ವಾಸಮತದ ಕುರಿತು ಒಂದು ಸಾಲಿನ ನಿರ್ಣಯವನ್ನು ಓದಿದ ಯಡಿಯೂರಪ್ಪ ಅವರು ತಮ್ಮ ಭಾಷಣವನ್ನು ಆರಂಭಿಸಿದರು.

      Karnataka Floor Test : BS Yeddyurappa speech in assembly

      'ವಿಶ್ವಾಸಮತಯಚನೆಗೆ ಮುಂದಾಗುವುದು ಬೇಡ, ಮುಖ್ಯಮಂತ್ರಿ ಸ್ಥಾನಕ್ಕೆ ನಾನೇ ರಾಜೀನಾಮೆ ಸಲ್ಲಿಸುತ್ತೇನೆ' ಎಂದು ಬಿ.ಎಸ್.ಯಡಿಯೂರಪ್ಪ ಸದನದಲ್ಲಿಯೇ ಘೋಷಣೆ ಮಾಡಿದರು.

      ಯಡಿಯೂರಪ್ಪ ಭಾಷಣ

      May 19, 2018, 4:19 pm IST

      ಸದನದಲ್ಲಿ ಭಾಷಣ ಮುಗಿಸಿ ಹೊರಬಂದ ಬಳಿಕ ಯಡಿಯೂರಪ್ಪ ಅವರು ಕಣ್ಣೀರು ಹಾಕಿದರು. ಶ್ರೀರಾಮುಲು ಮತ್ತು ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ಸಮಾಧಾನಪಡಿಸಿದರು
      May 19, 2018, 4:18 pm IST

      ಯಡಿಯೂರಪ್ಪ ಅವರು ಭಾಷಣ ಮುಗಿಸಿದ ಬಳಿಕ ಹಂಗಾಮಿ ಸ್ಫಿಕರ್ ಕೆ.ಜಿ.ಬೋಪಯ್ಯ ಅವರು ವಿಧಾನಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
      May 19, 2018, 4:16 pm IST

      ಮೇ 17ರಂದು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಮೇ 19 ರಂದು ರಾಜೀನಾಮೆ ಸಲ್ಲಿಸಿದರು.
      May 19, 2018, 4:14 pm IST

      ನಾವು ಪುನಃ ಜನರ ಮುಂದೆ ಹೋಗುತ್ತೇವೆ. ನಮಗೆ ಅಧಿಕಾರವಿಲ್ಲದಿದ್ದರೂ ಹೋರಾಟವನ್ನು ಮುಂದುವರೆಸುತ್ತೇವೆ
      May 19, 2018, 4:13 pm IST

      ವಿಶ್ವಾಸ ಮತ ಯಾಚನೆಗೆ ಮುಂದಾಗುವುದು ಬೇಡ. ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಬಿ.ಎಸ್.‌ಯಡಿಯೂರಪ್ಪ ಅವರ ಘೋಷಣೆ ಮಾಡಿದರು
      May 19, 2018, 4:04 pm IST

      ರಾಜ್ಯದ ಜನರು ನಮಗೆ ಸ್ಪಷ್ಟ ಬಹುಮತ ನೀಡಲಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರವಿದ್ದರೆ ರಾಜ್ಯದ ಅಭಿವೃದ್ಧಿ ವೇಗವಾಗಿ ಸಾಗುತ್ತಿತ್ತು.
      May 19, 2018, 4:03 pm IST

      ರಾಜ್ಯದ 6 ನದಿಗಳನ್ನು ಸೇರಿಸಿ ರಾಜ್ಯದ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ನಾನು ಬಯಸಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಅವರು ರಾಜ್ಯದಕ್ಕೆ ಸಾಕ್ಷಷ್ಟು ಅನುದಾನ ನೀಡಿದ್ದಾರೆ.
      May 19, 2018, 4:01 pm IST

      ಪರಿವರ್ತನಾ ಯಾತ್ರೆ ಸಂದರ್ಭದಲ್ಲಿ ನಾನು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸಂಚಾರ ನಡೆಸಿದೆ. ಜನರು ಉತ್ತಮ ಬೆಂಬಲ ನೀಡಿದರು.
      May 19, 2018, 3:56 pm IST

      ನಾನು ಎಂದೂ ಕೈಕಟ್ಟಿ ಕುಳಿತಿಲ್ಲ. ರೈತರು, ನೇಕಾರರು, ಮಹಿಳೆಯರರ ಕಲ್ಯಾಣಕ್ಕಾಗಿ ಹೋರಾಟ ಮಾಡಿದ್ದೇನೆ, ಕೊನೆ ಕ್ಷಣದ ತನಕ ಹೋರಾಟ ಮಾಡುತ್ತಲೇ ಇರುತ್ತೇನೆ
      May 19, 2018, 3:55 pm IST

      ದೇಶಕ್ಕೆ ಸ್ವತಂತ್ರ ಬಂದು ಇಷ್ಟು ದಿನಗಳು ಕಳೆದರೂ ರೈತರಿಗೆ ಸರಿಯಾಗಿ ನೀರು ಸಿಗುತ್ತಿಲ್ಲ. ರೈತರಿಗೆ ವಿದ್ಯುತ್, ನೀರು ಒದಗಿಸಲು ನಾವು ಬದ್ಧವಾಗಿದ್ದೇವೆ
      May 19, 2018, 3:55 pm IST

      ನಾಡಿನಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನಮ್ಮ ಬದುಕನ್ನು ರೈತರ ಏಳಿಗೆಗಾಗ ಮೀಸಲಾಗಿಟ್ಟಿದ್ದೇನೆ
      May 19, 2018, 3:54 pm IST

      2018ರ ಚುನಾವಣೆಯಲ್ಲಿ ಜನರು ನಮಗೆ ಬೆಂಬಲ ನೀಡಿದರು. ಚುನಾವಣೆಯಲ್ಲಿ ನಮಗೆ 104 ಸ್ಥಾನಗಳನ್ನು ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಬಹುಮತವನ್ನು ಪಡೆಯಲಿಲ್ಲ ಎಂದರು.
      May 19, 2018, 3:54 pm IST

      ಎರಡು ವರ್ಷಗಳ ಕಾಲ ರಾಜ್ಯದ ಉದ್ದಲಗಕ್ಕೂ ಪ್ರವಾಸ ಮಾಡಿದೆ. ರಾತ್ರಿ 10, 11ಗಂಟೆಯ ತನಕ ಜನರ ಕಷ್ಟವನ್ನು ಅರ್ಥಮಾಡಿಕೊಳ್ಳುವ ಕೆಲಸ ಮಾಡಿದೆ.
      May 19, 2018, 3:52 pm IST

      ಏಪ್ರಿಲ್ 14, 2016ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರು ಎಂದು ಹೇಳಿದ, ಯಡಿಯೂರಪ್ಪ ಅವರು ತಮ್ಮ ಭಾಷಣವನ್ನು ಆರಂಭಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+