ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಬೆಂಗಳೂರಿಗೆ ನಮ್ಮ ವಚನ : ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ

|
Google Oneindia Kannada News

ಬೆಂಗಳೂರು, ಮೇ 08 : ಕರ್ನಾಟಕ ಬಿಜೆಪಿ ಬೆಂಗಳೂರು ನಗರಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. 'ನಮ್ಮ ಬೆಂಗಳೂರಿಗೆ ನಮ್ಮ ವಚನ' ಎಂಬ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಮಂಗಳವಾರ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. 42 ಸಂಕಲ್ಪಗಳನ್ನು ಬೆಂಗಳೂರು ನಗರದ ಪ್ರಣಾಳಿಕೆ ಒಳಗೊಂಡಿದೆ.

ಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ : ಜೆಡಿಎಸ್ ಪ್ರಣಾಳಿಕೆ ಮುಖ್ಯಾಂಶಗಳುಜನತಾ ಪ್ರಣಾಳಿಕೆ ಜನರದ್ದೇ ಆಳ್ವಿಕೆ : ಜೆಡಿಎಸ್ ಪ್ರಣಾಳಿಕೆ ಮುಖ್ಯಾಂಶಗಳು

Karnataka elections : BJP releases manifesto for Bengaluru

ಪ್ರಣಾಳಿಕೆಯ ಮುಖ್ಯಾಂಶಗಳು

* ನವ ಬೆಂಗಳೂರಿಗೆ 'ನವ ಬೆಂಗಳೂರು ಕಾಯಿದೆ' ಬೆಂಗಳೂರು ಮಹಾನಗರ ಪ್ರಾದೇಶಿಕ ಆಡಳಿತ ಕಾಯ್ದೆ ಎಂಬ ಹೊಸ ಶಾಸನವನ್ನು ಅನುಷ್ಠಾನಗೊಳಿಸಿ ಸಂವಿಧಾನದ 74ನೇ ತಿದ್ದುಪಡಿಯ ಆಶಯವನ್ನು ಇನಷ್ಟು ಬಲಪಡಿಸಲಾಗುವುದು.

ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳೇನು?ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳೇನು?

* ಬೆಂಗಳೂರಿನ ಅಭಿವೃದ್ಧಿಗೆ 15 ವರ್ಷಗಳ ದೀರ್ಘಾವದಿ ಸಮಗ್ರ ಅಭಿವೃದ್ಧಿ ಯೋಜನೆಯನ್ನು ಸಿದ್ಧ ಪಡಿಸಲಾಗುವುದು. ಸುಸ್ಥಿರತೆ, ವಾಸಯೋಗ್ಯತೆ, ನಗರಬಡತನ, ಸ್ವಚ್ಛಬೆಂಗಳೂರು, ಸಾರಿಗೆ, ಅಭಿವೃದ್ಧಿ ಮುಂತಾದ ಅಂಶಗಳ ಬಗ್ಗೆ ಗಮನ ಹರಿಸಲಾಗುವುದು.

* ಸಂಪರ್ಕಸೇತು ಜಾಲತಾಣ: ಬೆಂಗಳೂರಿನ ಪ್ರಗತಿ ಮತ್ತು ಅಭಿವೃದ್ಧಿಗಾಗಿ ಸಾರ್ವಜನಿಕರು ಹಾಗೂ ಸರ್ಕಾರದ ನಡುವಣ ಸಂಪರ್ಕಸೇತುವಾಗಿ ಕಾರ್ಯನಿರ್ವಹಿಸಲಿರುವ www.bengaluru.gov ಎಂಬ ನೂತನ ಎಂಬ ಜಾಲತಾಣವನ್ನು ಆರಂಭಿಸಲಾಗುವುದು.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳುಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯ ಮುಖ್ಯಾಂಶಗಳು

* ಜನರ ಕೈಗೆ ನಗರಾಡಳಿತ: ಬೃಹತ್ ಬೆಂಗಳೂರು ನಗರದ ಆಡಳಿತ ವ್ಯವಸ್ಥೆಯಲ್ಲಿ ನಾಗರಿಕರೂ ತೊಡಗಿಕೊಳ್ಳುವಂತಾಗಲು ಪ್ರತಿಯೊಂದು ವಾರ್ಡ್ ಸಮಿತಿಯಲ್ಲಿ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ / ಕಲ್ಯಾಣ ಸಂಘಗಳ ಸದಸ್ಯರಿಗೆ ಶೇ.50ರಷ್ಟು ಪ್ರಾತಿನಿಧ್ಯ

ಕಲ್ಪಿಸಲಾಗುವುದು.

* ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ: ಜನವಸತಿಗೆಂದೇ ಮೀಸಲಾದ ಪ್ರದೇಶಗಳಲ್ಲಿ ಶಬ್ದ, ತ್ಯಾಜ್ಯ ಮತ್ತಿತರೆ ಮಾಲಿನ್ಯ ಉಂಟುಮಾಡುವಂತಹ ವಾಣಿಜ್ಯಿಕ ಅಥವಾ ಕೈಗಾರಿಕಾ ಚಟುವಟಿಕೆಗಳನ್ನು ಸ್ಥಳೀಯರೇ ನಿರ್ಬಂಧಿಸಲು ಅನುಕೂಲ ಮಾಡಿಕೊಡುವಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗುವುದು.

* ಬಿಬಿಎಂಪಿ ಆಡಳಿತವನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಲಾಗುವುದು ಮತ್ತು ಜವಾಬ್ದಾರಿಯುತ, ಉತ್ತರದಾಯಿತ್ವಯುಳ್ಳ ಮತ್ತು ಹೊಣೆಗಾರಿಕೆಯುಳ್ಳ ಸಂಸ್ಥೆಯಗಿ ಪರಿವರ್ತಿಸಲಾಗುವುದು.

* ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ಸುಧಾರಿಸಲಾಗುವುದು ಮತ್ತು ಅದನ್ನು ಭ್ರಷ್ಟಾಚಾರ ಮುಕ್ತ ಹಾಗೂ ಪರಿಣಾಮಕಾರಿ ಮೂಲಸೌಕರ್ಯ ಸಂಸ್ಥೆಯನ್ನಾಗಿ ಪರಿವರ್ತಿಸಲಾಗುವುದು.

* ನಾಗರೀಕ ಸೇವಾ ಕೇಂದ್ರಗಳು: ಪ್ರತಿಯೊಂದು ವಾರ್ಡ್‍ನಲ್ಲೂ ಎಲ್ಲಾ ಸರ್ಕಾರಿ ಸಂಸ್ಥೆಗಳ ಸೇವೆಗಳನ್ನು ಒದಗಿಸುವ ಏಕಗವಾಕ್ಷಿ ವ್ಯವಸ್ಥೆಯುಳ್ಳ ನಾಗರೀಕ ಸೇವಾ ಕೇಂದ್ರವನ್ನು ತೆರೆಯಲಾಗುವುದು.

* ಭೂಗಳ್ಳರ ವಿರುದ್ಧ ಕಠಿಣಕ್ರಮ: ಭೂಕಬಳಿಕೆ ತಡೆ ವಿಶೇಷ ನ್ಯಾಯಾಯಲವನ್ನು ಬಲಪಡಿಸಲಾಗುವುದು.

* ಮನೆ ಖರೀದಿಸುವ ಗ್ರಾಹಕರ ಹಿತಾಸಕ್ತಿ ರಕ್ಷಣೆ: ಕರ್ನಾಟಕದಲ್ಲಿ ರೇರಾ ನಿಯಮಗಳನ್ನು ಬಲಪಡಿಸಲಾಗುವುದು ಮತ್ತು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಮತ್ತು ಮೇಲ್ಮನವಿ ಪೀಠವನ್ನು ರಚಿಸಲಾಗುವುದು.

* ನಿರಂತರ ಗುಣಮಟ್ಟದ ವಿದ್ಯುತ್ ಪೂರೈಕೆ: ದಿನದ 24 ಗಂಟೆಗಳೂ ಗುಣಮಟ್ಟದ ವಿದ್ಯುತ್ ಖಾತ್ರಿಗೊಳಿಸಲು ಹೊಸ ನೀತಿ ಅಳವಡಿಸಲಾಗುವುದು.

* ಸ್ವಚ್ಛ ಬೆಂಗಳೂರು: ನಗರದ ಕಸದ ಸಮಸ್ಯೆಯನ್ನು ಸಮರ್ಪಕ ನೀತಿ ಮತ್ತು ಕಾನೂನಿನ ಮೂಲಕ ತ್ವರಿತವಾಗಿ ಪರಿಹರಿಸಲಾಗುವುದು. ಘನತ್ಯಾಜ್ಯ ನಿರ್ವಹಣೆ ಮತ್ತು ಚರಂಡಿ ವ್ಯವಸ್ಥೆಗೆ ಒಂದು ಸಮಗ್ರ ಯೋಜನೆ ರೂಪಿಸಲಾಗುವುದು ಮತ್ತು ಯಾವುದೇ ಬಗೆಯ ತ್ಯಾಜ್ಯವನ್ನು ಗುಂಡಿಗೆ ಸುರಿದು ವಿಲೇವಾರಿ ಮಾಡುವ ಪದ್ಧತಿ
ಕೈಬಿಡಲಾಗುವುದು.

* ಸಮುದಾಯ ಶೌಚಾಲಯ : ಕೊಳಗೇರಿ ಪ್ರದೇಶ ಮತ್ತು ಮತ್ತು ಬಡವರ ವಸತಿ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ಸೇರಿದಂತೆ ನಗರದಾದ್ಯಂತ 2000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು.

* ಮಲ ಹೊರುವ ಪದ್ಧತಿ ನಿಷೇಧ : ಬೆಂಗಳೂರನ್ನು ಮಲ ಹೊರುವ ಪದ್ಧತಿ ಮುಕ್ತ ನಗರವನ್ನಾಗಿ ಮಾಡಲಾಗುವುದು.

* ಶುಭ್ರ ನಗರ : ನಗರ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್ ಮತ್ತು ಭಿತ್ತಿಪತ್ರಗಳ ಬಳಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗುವುದು.

* ಮುಖ್ಯಮಂತ್ರಿ ಜಲಧಾರೆ ಯೋಜನೆ : ಎಲ್ಲಾ ವಾರ್ಡ್‍ಗಳಲ್ಲೂ 24 ಗಂಟೆಗಳ ನಿರಂತರ ಕುಡಿಯುವ ನೀರಿನ ಪೂರೈಕೆ ವ್ಯವಸ್ಥೆ ಮಾಡಲಾಗುವುದು.

* ನಗರ ಬಡವರು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣಕ್ಕಾಗಿ ಸಮಗ್ರ ನೀತಿ
ರೂಪಿಸಲಾಗುವುದು.

* ಬೆಂಗಳೂರನ್ನು ದಿವ್ಯಾಂಗ ಸ್ನೇಹಿ ನಗರವನ್ನಾಗಿ ಮಾಡಲಾಗುವುದು

* ಮಂಗಳಮುಖಿಯರ ಕಲ್ಯಾಣಕ್ಕಾಗಿ ಸಮಗ್ರ ನೀತಿ ರೂಪಿಸಲಾಗುವುದು

* ಸಮಗ್ರ ಅಭಿವೃದ್ಧಿ: ಆಟೋ ರಿಕ್ಷಾ ಚಾಲಕರು, ಪೌರಕಾರ್ಮಿಕರು ಸೇರಿದಂತೆ ನಮ್ಮ ನಗರಕ್ಕೆ ಸೇವೆ ಸಲ್ಲಿಸುತ್ತಿರುವ ಎಲ್ಲರ ಅಭಿವೃದ್ಧಿಗಾಗಿ ಒಂದು ಸಮಗ್ರ ನೀತಿ ರೂಪಿಸಲಾಗುವುದು

* ಕೆಂಪೇಗೌಡ ವಸತಿ ಯೋಜನೆ : ನಗರದ ಎಲ್ಲ ಬಡವರಿಗೂ ಮನೆ: ಕೊಳಗೇರಿ ನಿವಾಸಿಗಳು ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ ಸೂರು ಒದಗಿಸುವ ಸಲುವಾಗಿ 'ಕೆಂಪೇಗೌಡ ವಸತಿ ಯೋಜನೆ' ಜಾರಿಗೊಳಿಸಲಾಗುವುದು.

* ಕೊಳಗೇರಿ ಪುನರ್ವಸತಿ ಅಡಿಯಲ್ಲಿ ವಸತಿ ಕಾರ್ಯಕ್ರಮಗಳ ಯೋಜನೆ ಮತ್ತು ಅನುಷ್ಠಾನ.

* ಆಯುಶ್ಮಾನ್ ಬೆಂಗಳೂರು : ದೇಶದ ಎಲ್ಲಾ ಕುಟುಂಬಗಳಿಗೂ ಖಚಿತ ಆರೋಗ್ಯ ಸೇವೆ ಒದಗಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್' ಯೋಜನೆಯನ್ನು ನಗರದಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗುತ್ತದೆ.

* ಬೆಂಗಳೂರು ಹೆಲ್ತ್ ಕೇರ್ ನೆಟ್‍ವರ್ಕ್ : ನಗರದಾದ್ಯಂತ ದಿನದ 24 ಗಂಟೆಗಳೂ
ಕಾರ್ಯನಿರ್ವಹಿಸುವ 28 ಸ್ಮಾರ್ಟ್ ಕ್ಲಿನಿಕ್‍ಗಳನ್ನೂ ಮತ್ತು 10 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳನ್ನು ಆರಂಭಿಸುವ ಮೂಲಕ ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು.

* ಪ್ರಾಥಮಿಕ ಆರೋಗ್ಯ ಸೇವೆ ಬಲಪಡಿಸಲು ಪ್ರತಿ ವಾರ್ಡ್‍ನಲ್ಲೂ "ಆಯುಶ್ಮಾನ್ ಕ್ಲಿನಿಕ್"
ತೆರೆಯಲಾಗುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಬಲಪಡಿಸಲಾಗುವುದು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.

* ತ್ರೈಮಾಸಿಕ "ಆರೋಗ್ಯ ಬುಲೆಟಿನ್" ಅನ್ನು ಪ್ರಕಟಿಸಲಾಗುವುದು ಮತ್ತು ವ್ಯಾಪಕವಾಗಿ
ವಿತರಿಸಲಾಗುವುದು. ಈ ಬುಲೆಟಿನ್ ಸಾರ್ವಜನಿಕ ಆರೋಗ್ಯ ಅಪಾಯಗಳು ಮತ್ತು ಅದಕ್ಕೆ
ತೆಗೆದುಕೊಳ್ಳಬೇಕಾದ ಸೂಕ್ತ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ.

* ಪ್ರಧಾನಮಂತ್ರಿ ಜನಔಷಧಿ ಕೇಂದ್ರ : ಎಲ್ಲಾ ವಾರ್ಡ್‍ಗಳಲ್ಲಿ 'ಜನಔಷಧಿ ಕೇಂದ್ರ'ಗಳನ್ನು ಸ್ಥಾಪಿಸಿ ನಾಗರಿಕರಿಗೆ ಕೈಗೆಟಕುವ ದರದಲ್ಲಿ ಔಷಧಗಳು ಸಿಗುವ ವ್ಯವಸ್ಥೆ ಮಾಡಲಾಗುವುದು.

* ಉಜ್ವಲ ಬೆಂಗಳೂರು : ನಗರದ ಎಲ್ಲಾ ಬಡ ಕುಟುಂಬಗಳ ಮಹಿಳಾ ಸದಸ್ಯರ ಹೆಸರಿನಲ್ಲಿ ಉಚಿತ ಅಡುಗೆ ಅನಿಲ ಸಂಪರ್ಕ ಒದಗಿಸಲಾಗುವುದು.

* ಇಂದ್ರಧನುಷ್ ಅಭಿಯಾನ : ಏಳು ಮಾರಣಾಂತಿಕ ಕಾಯಿಲೆಗಳಾದ ಕ್ಷಯರೋಗ, ಪೊಲೀಯೋ, ಹೆಪಟೈಟಿಸ್ ಬಿ, ಗಂಟಲುಬೇನೆ, ನಿರಂತರ ಕೆಮ್ಮು, ಧನುರ್ವಾತ ಮತ್ತು ದಡಾರ ಬಾರದಂತೆ ತಡೆಯಲು 2 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಸಿಕೆ ಹಾಕುವ 'ಇಂದ್ರಧನುಷ್ ಅಭಿಯಾನ' ನಡೆಸಲಾಗುವುದು.

* ತರಬೇತಿ ಪ್ರೋತ್ಸಾಹ ಧನ: ಬೆಂಗಳೂರು ನಗರದಾದ್ಯಂತ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಉತ್ಪಾದನೆ ಮತ್ತಿತರ ಉದ್ಯಮಗಳಲ್ಲಿ ತರಬೇತಿ ಪಡೆಯುತ್ತಿರುವವರಿಗೆ ನೀಡುವ ಮೊದಲ ಎರಡು ವರ್ಷಗಳ ಅವಧಿಯ ಶಿಷ್ಯವೇತನದ ಶೇ.50 ರಷ್ಟು ಆಯಾ ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.

* ಮುದ್ರಾ ಬೆಂಗಳೂರು: ಕೇಂದ್ರ ಸರ್ಕಾರ ಮುದ್ರಾ ಯೋಜನೆ ಅಡಿ ನೀಡುತ್ತಿರುವ ಸಾಲವನ್ನು ಅಸಂಘಟಿತ ವಲಯದಲ್ಲಿರುವವರಿಗೆ ವಿಸ್ತರಿಸಲಾಗುವುದು.

* ಅಗ್ಗದ ಬೆಲೆಗೆ ಬಿಎಂಟಿಸಿ ಬಸ್ ಪ್ರಯಾಣ: ಅಸಂಘಟಿತ ವಲಯದ ನೌಕರರಿಗೆ ಮತ್ತು ಕಡಿಮೆ ಆದಾಯವಿರುವವರಿಗೆ ಅನುಕೂಲವಾಗುವಂತೆ ದೂರ ಪ್ರಯಾಣದ ಬಿಎಂಟಿಸಿ ಬಸ್ ದರದಲ್ಲಿ ಶೇ.50% ರಷ್ಟು ಕಡಿತ.

* ರಾಣಿ ಚೆನ್ನಮ್ಮ ಪಡೆ: ನಗರದಲ್ಲಿ ಮಹಿಳೆಯರ ಭದ್ರತೆ ಹಾಗೂ ಸುರಕ್ಷತೆಗಾಗಿ 'ರಾಣಿ ಚೆನ್ನಮ್ಮ ಪಡೆ' ಎಂಬ ವಿಶೇಷವಾದ ಸರ್ವಮಹಿಳಾ ದಳವನ್ನು ರಚಿಸಲಾಗುವುದು.

* ನಮ್ಮ ಮಕ್ಕಳ ರಕ್ಷಣೆ : ಶಾಲೆಗಳು ಮತ್ತು ಇತರೆ ಸ್ಥಳಗಳನ್ನು ಮಕ್ಕಳಿಗೆ ಸುರಕ್ಷಿತಗೊಳಿಸುವ ಒಂದು ಸಮಗ್ರ ಮಾರ್ಗಸೂಚಿಯನ್ನು ರಚಿಸಲಾಗುವುದು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೊಗವನ್ನು (ಏಅPಅಖ) ಬಲಪಡಿಸಲಾಗುವುದು. ಮೂರು ವಿಶೇಷ ಮಕ್ಕಳ-ಸ್ನೇಹಿ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

* ಗುಣಮಟ್ಟದ ಶಿಕ್ಷಣ : ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು.

* ನಿರ್ಭಯ ಬೆಂಗಳೂರು ಸಿಸಿಟಿವಿ ಕಣ್ಗಾವಲು : ಮಹಿಳೆಯರನ್ನು ಛೇಡಿಸುವುದು, ಸರಗಳ್ಳತನ, ಲೈಂಗಿಕ ದೌರ್ಜನ್ಯ ಮತ್ತಿತರ ಹಾವಳಿ ತಡೆಯಲು ನಗರಾದ್ಯಂತ ಆಯಕಟ್ಟಿನ ಸ್ಥಳಗಳಲ್ಲಿ ಚಹರೆ ಗುರುತಿಸಬಲ್ಲ ಕ್ಷಮತೆ ಇರುವ ಕ್ಯಾಮರಾಗಳನ್ನು (ಸಿಸಿಟಿವಿ) ಅಳವಡಿಸಲಾಗುವುದು. ಈ ಮೂಲಕ ನಗರದಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವ ವಾತಾವರಣ ಕಲ್ಪಿಸಲಾಗುವುದು.

* ಏರ್‌ಫೋರ್ಟ್ ಮೆಟ್ರೋ : ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಿಂದ ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲಾಗುವುದು.

* ಮೆಟ್ರೋ ಸಂಪರ್ಕ ವಿಸ್ತರಣೆ : ಕಾರ್ಯಸಾಧುತ್ವದ ವಿಶ್ಲೇಷಣೆಯನ್ನು ಶೀಘ್ರವೇ ನಡೆಸಿ ನೇರಳೆ ಮಾರ್ಗವನ್ನು ಒಂದು ಭಾಗದಲ್ಲಿ ಕಾಡುಗೋಡಿಯ ಮೂಲಕ ಹೊಸಕೋಟೆ ಬಸ್ ನಿಲ್ದಾಣದವರೆಗೆ ಮತ್ತು ಇನ್ನೊಂದು ಭಾಗದಲ್ಲಿ ಕೆಂಗೇರಿ ಮೂಲಕ ಬಿಡದಿ ಬಸ್
ನಿಲ್ದಾಣದವರೆಗೆ ವಿಸ್ತರಿಸಲಾಗುವುದು.

* ಕಾರ್ಯಸಾಧುತ್ವದ ವಿಶ್ಲೇಷಣೆಯನ್ನು ಶೀಘ್ರವೇ ನಡೆಸಿ ಆರ್‍ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಹೊಸ ಮಾರ್ಗವನ್ನು ಅತ್ತಿಬೆಲೆವರೆಗೆ ವಿಸ್ತರಣೆ ಮಾಡಲಾಗುವುದು.

* ರಸ್ತೆ ಜಾಲ ವಿಸ್ತರಣೆ: ತ್ವರಿತವಾಗಿ ಸಾಧ್ಯಾಸಾಧ್ಯತೆ ಅವಲೋಕನ ನಡೆಸಿದ ನಂತರ ಪುಟ್ಟೇನಹಳ್ಳಿ ಕ್ರಾಸ್‍ನಿಂದ ಆರಂಭಿಸಿ ಮೈಸೂರು ರಸ್ತೆ, ಸುಮನಹಳ್ಳಿ, ಯಶವಂತಪುರ, ನಾಗವಾರ, ಕೆ.ಆರ್. ಪುರಂ ಮಾರ್ಗವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್‍ವರೆಗೆ ಒಂದು
ಸಂಪೂರ್ಣ ಹೊರವರ್ತುಲ ರಸ್ತೆ ನಿರ್ಮಿಸಲಾಗುವುದು.

* ಇಡೀ ನಗರಕ್ಕೆ ಅನುಕೂಲವಾಗುವಂತೆ ಹೊರವರ್ತಲ ರಸ್ತೆಯ ಬಾಕಿ ಉಳಿದಿರುವ ರಸ್ತೆ ನಿರ್ಮಾಣವನ್ನು ಪೂರೈಸಿ ನಗರದಲ್ಲಿನ ವಾಹನ ದಟ್ಟಣೆ ಕಡಿಮೆಗೊಳಿಸಲಾಗುವುದು.

* ಬೃಹತ್ ಬೆಂಗಳೂರು ಉಪನಗರ ರೈಲು : ಬಿ-ರೈಡ್: ನಗರದಲ್ಲಿ ಉಪನಗರ ರೈಲು ಯೋಜನೆಯನ್ನು ಅನುಷ್ಠಾನ ಗೊಳಿಸಲು ಬಿ-ರೈಡ್ (ಬೆಂಗಳೂರು ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಲ್‍ಮೆಂಟ್ ಕಾರ್ಪೊರೇಶನ್) ಎಂಬ ವಿಶೇಷ ಸಂಸ್ಥೆ ಸ್ಥಾಪಿಸಲಾಗುವುದು.

* ಬೆಂಗಳೂರಿನಾದ್ಯಂತ ಜನರು ಸರಳ, ಸುಲಲಿತ ಹಾಗೂ ಸಮರ್ಪಕವಾಗಿ ಸಂಚರಿಸುವಂತಾಗಲು ಡಿಜಿಟಲ್ ಪಾವತಿಗೆ ಅವಕಾಶ ಕಲ್ಪಿಸುವ ಏಕೀಕೃತ ಶುಲ್ಕ ವ್ಯವಸ್ಥೆ ಯನ್ನು ಜಾರಿಗೊಳಿಸಲಾಗುವುದು. ಒಂದೇ ಟಿಕೆಟ್ ಪಡೆದು ಜನರು ಆಟೋರಿಕ್ಷಾ, ಬಸ್, ಮೆಟ್ರೋ ರೈಲು ಹಾಗೂ ಬಿ-ರೈಡ್ ಉಪನಗರ ರೈಲುಗಳ ಪೈಕಿ ಯಾವುದರಲ್ಲಿ ಬೇಕೋ, ಅದರಲ್ಲಿ ಪ್ರಯಾಣಿಸಬಹುದಾದ ಏಕೀಕೃತ ಸಾರಿಗೆ ವ್ಯವಸ್ಥೆ ಇದು.

* ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಬಿಎಂಟಿಸಿ, ಬಿಎಂಆರ್‌ಸಿಎಲ್ ಮತ್ತು ಉಪನಗರ ರೈಲು ಸಂಪರ್ಕಕ್ಕಾಗಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸಿಟ್ ಅಥಾರಿಟಿ (ಬಿಎಂಟಿಎ) ಸ್ಥಾಪಿಸಲಾಗುವುದು.

* ನಮ್ಮ ಬೆಂಗಳೂರು ನಮ್ಮ ಜಲ: ನಮ್ಮ ಬೆಂಗಳೂರಿನ ಜಲ ಸುರಕ್ಷತೆಗಾಗಿ ಮಳೆ ನೀರು ಕೊಯ್ಲು, ಕೆರೆಗಳ ಪುನರುಜ್ಜೀವನ ಸೇರಿದಂತೆ ಸಮಗ್ರ ನೀತಿ ಮತ್ತು ಕಾನೂನನ್ನು ರೂಪಿಸಲಾಗುವುದು.

* ನಾಡಪ್ರಭು ಕೆಂಪೇಗೌಡ ನಿಧಿ: ಬೆಂಗಳೂರು ನಗರದ ಕೆರೆಗಳ ಹಾಗೂ ರಾಜಕಾಲುವೆಗಳ ಸಂರಕ್ಷಣೆ ಹಾಗೂ ಪೋಷಣೆಗಾಗಿ ಬೆಂಗಳೂರು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು.

* ಬೆಂಗಳೂರಿನ ಕೆರೆಗಳ ಪುನರುಜ್ಜೀವನಕ್ಕಾಗಿ ರೂ. 2500 ಕೋಟಿ "ನಾಡಪ್ರಭು
ಕೆಂಪೇಗೌಡ ನಿಧಿ" ಸ್ಥಾಪಿಸಲಾಗುವುದು ಮತ್ತು ಪ್ರವಾಹ ಪೀಡಿತ ಸ್ಥಳಗಳನ್ನು ಆದ್ಯತೆಯ ಮೇರೆಗೆ ಪ್ರವಾಹ ಮುಕ್ತ ಸ್ಥಳಗಳನ್ನಾಗಿ ಪುನರ್ ಅಭಿವೃದ್ಧಿಪಡಿಸಿ ಇಲ್ಲಿ ವಾಹನ ಚಾಲನೆಯನ್ನು ಸುರಕ್ಷಿತಗೊಳಿಸಲಾಗುವುದು.

* ಹಸಿರು ಬೆಂಗಳೂರು 1:1 ಎಂಬ ಕಾರ್ಯಕ್ರಮದ ಮೂಲಕ ಬೆಂಗಳೂರಿನ ಮರ-ಮನುಷ್ಯ ಅನುಪಾತವನ್ನು ಕನಿಷ್ಠ 1ಕ್ಕೆ ತರಲಾಗುವುದು.

* ಬೆಂಗಳೂರಿನ ಹಾಲಿ ಅರಣ್ಯ ಪ್ರದೇಶವನ್ನು ಸಂರಕ್ಷಿಸಲು ಮತ್ತು ಬೆಳಸಲು ಒಂದು ಹೊಸ ನೀತಿಯನ್ನು ರೂಪಿಸಲಾಗುವುದು. ಈ ನೀತಿಯು ಕೆಳಕಂಡ ಅಂಶಗಳನ್ನು ಒಳಗೊಂಡಿರುತ್ತದೆ.

* ಎಚ್. ನರಸಿಂಹಯ್ಯ ಹಿರಿಯ ನಾಗರೀಕರ ಯೋಗಕ್ಷೇಮ ಕೇಂದ್ರ: ಉದ್ಯೋಗಸ್ಥ ಕುಟುಂಬಗಳಿಗೆ ಅನುಕೂಲವಾಗಲೆಂದು ಹಿರಿಯ ನಾಗರೀಕರ ಯೋಗಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

* ನಮ್ಮ ಬೆಂಗಳೂರು ಯುವಕ ಕೇಂದ್ರ : ಸುಸಜ್ಜಿತ ಕ್ರೀಡಾ ಸೌಲಭ್ಯ ಸೇರಿದಂತೆ ಯುವಕರಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳಿಗೆ ಯುವ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅವುಗಳಲ್ಲಿ ಕೆಲವನ್ನು ಮಹಿಳೆಯರಿಗೆ ಮೀಸಲಿಡಲಾಗುವುದು.

* ಪ್ರಾರ್ಥನಾ ಕೇಂದ್ರಗಳಿಗೆ 'ಪ್ರಸಾದ': ಎಲ್ಲಾ ಧರ್ಮಗಳ ಪ್ರಾರ್ಥನಾ ಕೇಂದ್ರಗಳ ಸೌಂದರ್ಯ ವರ್ಧನೆ, ಸೌಲಭ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 'ಪ್ರಸಾದ' ಎಂಬ ಯೋಜನೆ ಜಾರಿಗೊಳಿಸಲಾಗುವುದು.

* ಸೋಮೇಶ್ವರ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನ ಮತ್ತು ಬಸವನಗುಡಿಯಂತಹ ಪ್ರಸಿದ್ಧ ದೇವಾಲಯಗಳನ್ನು ಆಕರ್ಷಕ ಪ್ರವಾಸೋದ್ಯಮ ಸ್ಥಳಗಳಾಗಿ ಪರಿವರ್ತಿಸಿ, ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು.

* ನಗರಾಡಳಿತವು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಿದ 5000 ಕಿ.ಮೀ. ಉದ್ದದ ಪಾದಚಾರಿ ರಸ್ತೆಯ ನಿರ್ಮಾಣ ಗುರಿ ಹಾಕಿಕೊಳ್ಳಲಿದೆ.

* ಪಾದಚಾರಿ ರಸ್ತೆಗಳನ್ನು ನಡಿಗೆಗೆ ಅಡೆತಡೆಯಿಲ್ಲದಂತೆ ಹಾಗೂ ವಿಕಲಚೇತನಸ್ನೇಹಿ ಆಗಿರುವಂತೆ ನಿರ್ಮಿಸಲಾಗುವುದು.

* ಅಪಾರ್ಟ್‍ಮೆಂಟ್‍ಗಳ ಸುಧಾರಣೆ: ನೀರು, ವಿದ್ಯುತ್ ಮತ್ತು ಘನತ್ಯಾಜ್ಯ ವಿಲೇವಾರಿ ಶುಲ್ಕಗಳಲ್ಲಿ ಬೇರೆ ಮನೆಗಳು ಮತ್ತು ಅಪಾರ್ಟ್‍ಮೆಂಟ್‍ಗಳ ನಡುವೆ ಇರುವ ವ್ಯತ್ಯಾಸಗಳನ್ನು ತೆಗೆದಹಾಕಲಾಗುವುದು.

English summary
Karnataka BJP released its manifesto for Bengaluru city for Karnataka assembly elections 2018. Here are a highlights of manifesto.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X