ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿನಿಮಾದವರಿಗೆ ಕೈಕೊಟ್ಟ ಅದೃಷ್ಟ: ಪಾಸ್ ಆದವರು, ಫೇಲ್ ಆದವರು ಯಾರು.?

By Bharath Kumar
|
Google Oneindia Kannada News

ಸಿನಿಮಾ ಕ್ಲೈಮ್ಯಾಕ್ಸ್ ಗಿಂತ ರೋಚಕವಾಗಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಸಿನಿಮಾ ಅಭ್ಯರ್ಥಿಗಳ ಹಣೆಬರಹ ಕೂಡ ಹೊರ ಬಿದ್ದಿದೆ.

ನಟ ಜಗ್ಗೇಶ್, ಸಾಯಿ ಕುಮಾರ್, ಕುಮಾರ್ ಬಂಗಾರಪ್ಪ, ನಿರ್ಮಾಪಕ ಸಿ ಪಿ ಯೋಗೇಶ್ವರ್, ನಟಿ ಉಮಾಶ್ರೀ, ಶಶಿಕುಮಾರ್, ಬಿ.ಸಿ ಪಾಟೀಲ್, ನೆ.ಲ ನರೇಂದ್ರ ಬಾಬು ಸೇರಿದಂತೆ ಹಲವರು ಈ ಬಾರಿಯ ಚುನಾಣೆಯಲ್ಲಿ ಸ್ಫರ್ಧಿಸಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ

ಆದ್ರೆ, ಇವರುಗಳ ಪೈಕಿ ವಿಜಯ ಲಕ್ಷ್ಮಿ ಒಲಿದಿದ್ದು ಕೆಲವರಿಗೆ ಮಾತ್ರ. ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಜಗ್ಗೇಶ್ ಗೆಲ್ಲಲಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯಾಗಿದ್ದ ಊಮಾಶ್ರೀ ಅವರ ಅದೃಷ್ಟ ಕೈಹಿಡಿಯಲಿಲ್ಲ, ಸಾಯಿಕುಮಾರ್, ಶಶಿಕುಮಾರ್ ಅವರ ನಟನೆಯನ್ನ ಮೆಚ್ಚಿದರೇ ಹೊರತು ರಾಜಕೀಯ ನಡೆಯಲಿಲ್ಲ. ಹಾಗಾದ್ರೆ, ಯಾವ ಯಾವ ಸಿನಿ ತಾರೆಯರು ಸ್ಪರ್ಧಿಸಿದ್ದರು, ಯಾರು ಗೆದ್ದರು, ಯಾರು ಸೋತರು. ಮುಂದೆ ಓದಿ.....

ತೇರದಾಳ ಉಮಾಶ್ರೀ ಸೋಲು

ತೇರದಾಳ ಉಮಾಶ್ರೀ ಸೋಲು

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವೆಯಾಗಿದ್ದ ಉಮಾಶ್ರೀ ಅವರಿಗೆ ಅದೃಷ್ಟ ಕೈಕೊಟ್ಟಿದೆ. ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ವಿರುದ್ಧ ತೇರದಾಳ ಕ್ಷೇತ್ರದಲ್ಲಿ ಉಮಾಶ್ರೀ ಸೋಲು ಅನುಭವಿಸಿದ್ದಾರೆ. ಸಚಿವೆಯಾಗಿದ್ದರೂ ಸೋಲು ಕಂಡಿರುವುದು ನಿಜಕ್ಕೂ ಇದೊಂದು ರೀತಿಯಲ್ಲಿ ಮುಖಭಂಗ.

ಉಮಾಶ್ರೀ ಪಡೆದು ಮತಗಳು : 66324
ಸಿದ್ದು ಸವದಿ ಪಡೆದ ಮತ : 87213

ಹೊಸದುರ್ಗದಲ್ಲಿ ಶಶಿಕುಮಾರ್ ಸೋಲು

ಹೊಸದುರ್ಗದಲ್ಲಿ ಶಶಿಕುಮಾರ್ ಸೋಲು

ಬಿಜೆಪಿ ತೊರೆದು ಜೆ.ಡಿ.ಎಸ್ ಪಕ್ಷ ಸೇರ್ಪಡೆಯಾಗಿದ್ದ ನಟ ಶಶಿಕುಮಾರ್ ಹೊಸದುರ್ಗದಲ್ಲಿ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ವಿರುದ್ಧ ಶಶಿಕುಮಾರ್ ಸೋಲು ಕಂಡಿದ್ದಾರೆ.

ಗೂಳಿಹಟ್ಟಿ ಶೇಖರ್ ಪಡೆದ ಮತ: 90562
ಶಶಿಕುಮಾರ್ ಪಡೆದ ಮತ: 64570

ನಟ ಸಾಯಿ ಕುಮಾರ್

ನಟ ಸಾಯಿ ಕುಮಾರ್

ಕನ್ನಡ ನಿರ್ಮಾಪಕ ಸಿ.ಆರ್ ಮನೋಹರ್ ಬಾಗೇಪಲ್ಲಿಯಲ್ಲಿ ಸೋಲು ಕಂಡಿದ್ದಾರೆ. ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿಯಾಗಿ ಮನೋಹರ್ ಸ್ಪರ್ಧೆ ಮಾಡಿದ್ದರು. ಬಿಜೆಪಿ ಅಭ್ಯರ್ಥಿ ಸಾಯಿಕುಮಾರ್ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು, ಆದ್ರೆ, ಇಬ್ಬರು ನಟರು ಸೋಲು ಕಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್ ಸುಬ್ಬಾರೆಡ್ಡಿ ಜಯಶಾಲಿಯಾಗಿದ್ದಾರೆ.

ಎಸ್.ಎನ್ ಸುಬ್ಬಾರೆಡ್ಡಿ ಪಡೆದ ಮತಗಳು :65710
ಸಿ.ಆರ್ ಮನೋಹರ್ ಪಡೆದ ಮತಗಳು :38302
ಸಾಯಿ ಕುಮಾರ್ ಪಡೆದ ಮತಗಳು :4140

ನೆ.ಲ.ನರೇಂದ್ರ ಬಾಬು ಸೋಲು

ನೆ.ಲ.ನರೇಂದ್ರ ಬಾಬು ಸೋಲು

ಮಹಾ ಲಕ್ಷ್ಮಿಲೇಔಟ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟ ನರೇಂದ್ರ ಬಾಬು ಸೋಲು ಕಂಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ ಭರ್ಜರಿ ಜಯ ಸಾಧಿಸಿದ್ದಾರೆ.

ನರೇಂದ್ರ ಬಾಬು ಪಡೆದ ಮತಗಳು : 88218
ಗೋಪಾಲಯ್ಯ ಪಡೆದ ಮತಗಳು : 47118

ಕುಮಾರ್ ಬಂಗಾರಪ್ಪ ಗೆಲುವು

ಕುಮಾರ್ ಬಂಗಾರಪ್ಪ ಗೆಲುವು

ಸೊರಬ ಕ್ಷೇತ್ರದಲ್ಲಿ ಸಹೋದರರ ಮಧ್ಯೆ ಸೆಣಸಾಟದಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಗೆಲುವು ಕಂಡಿದ್ದಾರೆ. ಜೆ.ಡಿ.ಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸೋಲು ಕಂಡಿದ್ದಾರೆ. ಈ ಇಬ್ಬರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು, ಕಳೆದ ಬಾರಿ ಗೆದ್ದಿದ್ದ ಮಧು ಬಂಗಾರಪ್ಪ ಅವರನ್ನ ಸೋಲಿಸುವಲ್ಲಿ ಕುಮಾರ್ ಬಂಗಾರಪ್ಪ ಯಶಸ್ಸು ಕಂಡಿದ್ದಾರೆ.

ಕುಮಾರ್ ಬಂಗಾರಪ್ಪ ಪಡೆದ ಮತಗಳು : 72091
ಮಧು ಬಂಗಾರಪ್ಪ ಪಡೆದ ಮತಗಳು : 58805

ನಿರ್ಮಾಪಕ ಹೆಚ್.ಡಿ ಕುಮಾರಸ್ವಾಮಿಗೆ ಗೆಲುವು

ನಿರ್ಮಾಪಕ ಹೆಚ್.ಡಿ ಕುಮಾರಸ್ವಾಮಿಗೆ ಗೆಲುವು

ಜೆ.ಡಿ.ಎಸ್ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಹೆಚ್.ಡಿ ಕುಮಾರಸ್ವಾಮಿ ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರದಲ್ಲೂ ಗೆಲುವು ಸಾಧಿಸಿದ್ದಾರೆ. ವಿಶೇಷವಾಗಿ ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ನಿರ್ಮಾಪಕ ಹೆಚ್.ಎಂ ರೇವಣ್ಣ ಮತ್ತು ಬಿಜೆಪಿ ಅಭ್ಯರ್ಥಿ, ನಟ ಸಿ.ಪಿ ಯೋಗೇಶ್ವರ್ ಇಬ್ಬರು ಸೋಲು ಕಂಡಿದ್ದಾರೆ.

ರಾಮನಗರದಲ್ಲಿ ಹೆಚ್.ಡಿ ಕುಮಾರ್ ಸ್ವಾಮಿ ಪಡೆದ ಮತಗಳು : 87995
ಸಿ.ಪಿ ಯೋಗೇಶ್ವರ್ ಪಡೆದ ಮತಗಳು: 66465
ಹೆಚ್ ಎಂ ರೇವಣ್ಣ ಪಡೆದ ಮತಗಳು: 30208

ಯಶವಂತಪುರದಲ್ಲಿ ಸೋಲು ಕಂಡ ಜಗ್ಗೇಶ್

ಯಶವಂತಪುರದಲ್ಲಿ ಸೋಲು ಕಂಡ ಜಗ್ಗೇಶ್

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ನಟ ಜಗ್ಗೇಶ್ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಸ್.ಟಿ ಸೋಮಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.

ಎಸ್.ಟಿ. ಸೋಮಶೇಖರ್ ಪಡೆದ ಮತಗಳು :112571
ಜಗ್ಗೇಶ್ ಪಡೆದ ಮತಗಳು : 58645

ಬಿಸಿ ಪಾಟೀಲ್ ಗೆ ಗೆಲುವು

ಬಿಸಿ ಪಾಟೀಲ್ ಗೆ ಗೆಲುವು

ಹಿರೇಕೆರೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ಪಾಟೀಲ್ (ಬಿಸಿ ಪಾಟೀಲ್) ಬಿಜೆಪಿಯ ಉಜನೇಶ್ವರ್ ಬಣಕಾರ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯ ವಿರುದ್ಧ ತೀವ್ರ ಪೈಪೋಟಿ ನಡೆಸಿದ 72461 ಮತಗಳನ್ನ ಪಡೆದು ಕೇವಲ 555 ಮತಗಳ ಅಂತರದಲ್ಲಿ ಜಯ ತಮ್ಮದಾಗಿಸಿಕೊಂಡಿದ್ದಾರೆ.

English summary
Karnataka Election Results 2018: Here is the list of kannada stars, who won and also faced defeat in assembly Election 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X