ಪ್ರಯಾಸದಿಂದ ವಿಜಯನಗರದ ಸಾಮ್ರಾಜ್ಯ ಉಳಿಸಿಕೊಂಡ ಸಚಿವ ಕೃಷ್ಣಪ್ಪ.!
ಬೆಂಗಳೂರಿನ 'ವಿಜಯನಗರ' ಸಾಮ್ರಾಜ್ಯಕ್ಕೆ ಮತ್ತೊಮ್ಮೆ ಎಂ.ಕೃಷ್ಣಪ್ಪ ಅಧಿಪತಿಯಾಗಿದ್ದಾರೆ. ಬಿಜೆಪಿಯ ರವೀಂದ್ರ ಒಡ್ಡಿದ ತೀವ್ರ ಪೈಪೋಟಿ ನಡುವೆ ವಸತಿ ಸಚಿವ ಎಂ.ಕೃಷ್ಣಪ್ಪ ಪ್ರಯಾಸದ ಗೆಲುವು ಕಂಡಿದ್ದಾರೆ.
ಹಾಲಿ ಶಾಸಕ ಎಂ.ಕೃಷ್ಣಪ್ಪ ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರಗಳಲ್ಲಿ ಪ್ರಭಾವಿ ರಾಜಕಾರಣಿ. ಈ ಎರಡೂ ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ ಓಟಕ್ಕೆ ಬ್ರೇಕ್ ಹಾಕಿದವರು ಇವರೇ.!
ವಿಜಯನಗರದಲ್ಲಿರುವ ಅನೇಕ ಸಮಸ್ಯೆಗಳಿಗೆ ಮುಕ್ತಿ ಹಾಡಿರುವ ಎಂ.ಕೃಷ್ಣಪ್ಪ ಜನರ ಮನ ಗೆದ್ದಿದ್ದರು. ಅದರ ಪರಿಣಾಮ ಇಂದಿನ ಜನಾದೇಶ. ಮತ್ತೊಂದು ಬಾರಿಗೆ ವಿಜಯನಗರ ಕ್ಷೇತ್ರದಿಂದ ಶಾಸಕರಾಗಿ ಎಂ.ಕೃಷ್ಣಪ್ಪ ಆಯ್ಕೆ ಆಗಿದ್ದಾರೆ. ಬಿಜೆಪಿ ಅಭ್ಯರ್ಥಿ ರವೀಂದ್ರ ಸೋಲು ಕಂಡಿದ್ದಾರೆ.

ಹಾಗ್ನೋಡಿದ್ರೆ, ಎಂ.ಕೃಷ್ಣಪ್ಪ ರವರಿಗಿದು ಹ್ಯಾಟ್ರಿಕ್ ಗೆಲುವು. ತಾವು ಗೆದ್ದ ಸಂಭ್ರಮದಲ್ಲಿ ಎಂ.ಕೃಷ್ಣಪ್ಪ ಇದ್ದರೆ, ಅತ್ತ ಪುತ್ರ ಪ್ರಿಯಾ ಕೃಷ್ಣ ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿ.ಜೆ.ಪಿಯ ವಿ.ಸೋಮಣ್ಣ ಎದುರು ಸೋತಿರುವ ಬೇಸರ ಕೂಡ ಅವರನ್ನು ಕಾಡುತ್ತಿದೆ.












Click it and Unblock the Notifications