ಗೌರಿಬಿದನೂರು: ಎಚ್ಚೆನ್ ಹುಟ್ಟಿದ ತಾಲೂಕಿನಲ್ಲಿ 'ಕೈ' ಮೇಲು
ಶೈಕ್ಷಣಿಕ ಮತ್ತು ಬುದ್ಧಿವಂತರ ತಾಲೂಕು ಎಂಬುದು ಗೌರಿಬಿದನೂರಿಗೆ ಇರುವ ಅಗ್ಗಳಿಕೆ. ವೈಜ್ಞಾನಿಕ ಚಿಂತಕ ಡಾ. ಎಚ್. ನರಸಿಂಹಯ್ಯ ಅವರು ಇಲ್ಲಿನ ಹೊಸೂರು ಭಾಗದವರು. ಜಲಿಯನ್ ವಾಲಾ ಬಾಗ್ ಖ್ಯಾತಿಯ ವಿದುರಾಶ್ವತ್ಥ ಗ್ರಾಮ, ಸ್ಮಾರಕ ಕೇಂದ್ರ, ಅತ್ಯಾಧುನಿಕ ಮಾದರಿಯ ಹವಾನಿಯಂತ್ರಿತ ಸಭಾಂಗಣಗಳು ಇಲ್ಲಿವೆ.
ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ ನದಿಗಳ ಪುನರುಜ್ಜೀವನಕ್ಕೆ ಪ್ರಕ್ರಿಯೆ ಆರಂಭವಾಗಿದೆ. ಸಂಗೀತಕ್ಕೆ ಮೀಸಲಾದ ಚಿಂತಲಪಲ್ಲಿ ಗ್ರಾಮ ಮತ್ತು ಚಿಂತಲಪಲ್ಲಿ ಸಂಗೀತ ಪರಂಪರೆ ಇಲ್ಲಿನದೇ. ಬಹುತೇಕ ಮಂದಿ ಪಕ್ಕದ ಆಂಧ್ರಪ್ರದೇಶದ ಪಟ್ಟಣ ಪ್ರದೇಶದಲ್ಲಿ ಕೆಲಸಕ್ಕೆ ಹೋಗುತ್ತಾರೆ.
ಒಂದೇ ಕುಟುಂಬವು ಬೇರೆ ಬೇರೆ ಪಕ್ಷಗಳಲ್ಲಿ ಚದುರಿ ಹೋಗಿ, ರಾಜಕಾರಣ ನಡೆಸುತ್ತಿವೆ. ಕಾಂಗ್ರೆಸ್ ನ ಶಿವಶಂಕರರೆಡ್ಡಿ ಸತತ ಶಾಸಕರಾಗಿ ಆಯ್ಕೆಯಾಗಿದ್ದು, ಬಿಜೆಪಿಯ ರವಿನಾರಾಯಣರೆಡ್ಡಿ, ಜ್ಯೋತಿರೆಡ್ಡಿ ನಿರಂತರ ಪೈಪೋಟಿ ನೀಡುತ್ತಿದ್ದಾರೆ.

ಅಲೀಪುರ ಎಂಬ ಗ್ರಾಮದಲ್ಲಿ ಮುಸ್ಲಿಮರು ಹೆಚ್ಚಿದ್ದು, ಅಲ್ಲಿನ ಬಹುತೇಕ ಮಂದಿ ದುಬೈ, ಅರಬ್ ದೇಶಗಳಲ್ಲಿ ವಾಸವಿದ್ದಾರೆ. ಚಿಂತಕರಾದ ಪ್ರೊ. ಎಂ.ಗಂಗಾಧರಮೂರ್ತಿ, ಜಲತಜ್ಞ ಕೆ.ನಾರಾಯಣಸ್ವಾಮಿ ಮುಂತಾದ ಮಹನೀಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಇಲ್ಲಿ ಅರಣ್ಯ ಪ್ರದೇಶ ಹೆಚ್ಚಿದ್ದು, ಇಡೀ ನಗರ, ಗ್ರಾಮೀಣ ಪ್ರದೇಶ ಅಭಿವೃದ್ಧಿಯಾಗಬೇಕಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಲ್ಲಿ ಸಿಮೆಂಟ್ ಕಂಪನಿ ಆರಂಭವಾದ ಮೇಲೆ ರಸ್ತೆಗಳು ನುಣುಪಾದವು. ಇಲ್ಲಿನ ಜನರ ಊಟದ ತಟ್ಟೆಗಳು ದೂಳಾದವು ಅಂತ ಮಾತುಗಳು ಕೇಳಿಬರುತ್ತವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡಿದ ನಂತರ ಸ್ಥಳೀಯವಾಗಿ ಜೆಡಿಎಸ್ ನಲ್ಲಿ ಒಂದಿಷ್ಟು ಬದಲಾವಣೆಗಳಾಗಿವೆ.
ಕಾಂಗ್ರೆಸ್ ಸರಕಾರದಲ್ಲಿ ಶಿವಶಂಕರ ರೆಡ್ಡಿ ಅವರು ಸಚಿವರಾಗಬೇಕು ಎಂಬುದು ನಿರೀಕ್ಷೆಯಾಗಿತ್ತು. ಆದರೆ ಹಾಗಾಗಲಿಲ್ಲ. ಇನ್ನು ತಾಲೂಕಿನ ವಿಚಾರಕ್ಕೆ ಬಂದರೆ ವಾಣಿಜ್ಯ ಚಟುವಟಿಕೆಗೇನೂ ಕಡಿಮೆ ಇಲ್ಲ.












Click it and Unblock the Notifications