Exit Poll : ಇಂಡಿಯಾ ಟಿವಿ ಸಮೀಕ್ಷೆ: ಕಾಂಗ್ರೆಸ್ ದೊಡ್ಡ ಪಕ್ಷ
ಬೆಂಗಳೂರು, ಮೇ 12: ಕರ್ನಾಟಕ ವಿಧಾನಸಭೆಯ 222 ಸ್ಥಾನಕ್ಕಾಗಿ ಮೇ.12 ರಂದು ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು. ಈಗ ಚುನಾವಣೋತ್ತರ ಸಮೀಕ್ಷೆ, ಫಲಿತಾಂಶದ ಹೊರಬೀಳತೊಡಗಿದೆ.
ಹಿಂದಿ ವಾಹಿನಿ ಇಂಡಿಯಾ ಟಿವಿ ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ. ಯಾವ ಪಕ್ಷವೂ ನಿಚ್ಚಳ ಬಹುಮತ ಪಡೆದುಕೊಳ್ಳುವುದರಲ್ಲಿ ಸಫಲವಾಗುವುದಿಲ್ಲ ಎಂದು ಅದು ಹೇಳಿದೆ.
ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಅಧಿಕಾರಾರೂಢ ಕಾಂಗ್ರೆಸ್ 97 ಸ್ಥಾನಗಳನ್ನು ಪಡೆದುಕೊಳ್ಳಲಿದೆ. ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಕೂಡ ಮ್ಯಾಜಿಕ್ ಅಂಕಿಯನ್ನು ಮುಟ್ಟುವಲ್ಲಿ ವಿಫಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಪ್ರಚಾರದ ನಡುವೆಯೂ ಬಿಜೆಪಿ 87 ಸೀಟುಗಳನ್ನು ಮಾತ್ರ ಪಡೆದುಕೊಳ್ಳಲಿದೆ.

ಈ ಎರಡೂ ಪಕ್ಷಗಳು ಅಧಿಕಾರಕ್ಕೆ ಬರಲು ಜೆಡಿಎಸ್‌ನ ನೆರವು ಪಡೆಯುವುದು ಅನಿವಾರ್ಯವಾಗಲಿದೆ. ಜೆಡಿಎಸ್ 35 ಕ್ಷೇತ್ರಗಳಲ್ಲಿ ಗೆಲುವು ಕಾಣಲಿದ್ದು, ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇನ್ನು ಇತರೆ ಪಕ್ಷಗಳು ಹಾಗೂ ಪಕ್ಷೇತರರು 3 ಸೀಟು ಪಡೆದುಕೊಳ್ಳಲಿದ್ದಾರೆ ಎಂದು ಇಂಡಿಯಾ ಟಿವಿ ಸಮೀಕ್ಷೆ ಹೇಳಿದೆ
ಸಮೀಕ್ಷೆ ವರದಿ ವಿವರ
* ಕಾಂಗ್ರೆಸ್ 97
* ಬಿಜೆಪಿ 87
* ಜೆಡಿಎಸ್ 35
* ಇತರೆ 3
ಪ್ರದೇಶವಾರು ಸೀಟು ಗಳಿಕೆ ವಿವರ
ಮುಂಬೈ ಕರ್ನಾಟಕ
* ಒಟ್ಟು ಸ್ಥಾನ 50
* ಬಿಜೆಪಿ 20-26
* ಕಾಂಗ್ರೆಸ್ 23-29
* ಜೆಡಿಎಸ್ 00-01
* ಇತರೆ 00
ಹೈದರಾಬಾದ್ ಕರ್ನಾಟಕ
* ಒಟ್ಟು ಸ್ಥಾನ 31
* ಬಿಜೆಪಿ 17-21
* ಕಾಂಗ್ರೆಸ್ 10-14
* ಜೆಡಿಎಸ್ 00
* ಇತರೆ 00
ಬೆಂಗಳೂರು
* ಒಟ್ಟು ಸ್ಥಾನ 32
* ಬಿಜೆಪಿ 13-15
* ಕಾಂಗ್ರೆಸ್ 11-15
* ಜೆಡಿಎಸ್ 00
* ಇತರೆ 00
ಕರಾವಳಿ ಪ್ರದೇಶ
* ಒಟ್ಟು ಸ್ಥಾನ 21
* ಬಿಜೆಪಿ 06-10
* ಕಾಂಗ್ರೆಸ್ 11-15
* ಜೆಡಿಎಸ್ 00
* ಇತರೆ 00
ದಕ್ಷಿಣ ಕರ್ನಾಟಕ
* ಒಟ್ಟು ಸ್ಥಾನ 55
* ಬಿಜೆಪಿ 4-10
* ಕಾಂಗ್ರೆಸ್ 15-21
* ಜೆಡಿಎಸ್ 22-28
* ಇತರೆ 01-03
ಮಧ್ಯ ಕರ್ನಾಟಕ
* ಒಟ್ಟು ಸ್ಥಾನ 35
* ಬಿಜೆಪಿ 15-19
* ಕಾಂಗ್ರೆಸ್ 10-14
* ಜೆಡಿಎಸ್ 03-07
* ಇತರೆ 00-02












Click it and Unblock the Notifications