ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಕೋಟ್ಯಧಿಪತಿ ಅಭ್ಯರ್ಥಿಗಳು, ಪ್ರಿಯಾಕೃಷ್ಣ ನಂ. 1

By Mahesh
|
Google Oneindia Kannada News

ಬೆಂಗಳೂರು, ಮೇ 06: ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಶಾಸಕರಾಗ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಶೇ91ರಷ್ಟು ಮಂದಿ ಕೋಟ್ಯಧಿಪತಿಗಳು ಎಂದು ಎಡಿಆರ್ ಸಂಸ್ಥೆ ಪ್ರಕಟಿಸಿದೆ.

ಕಾಂಗ್ರೆಸ್ ನಲ್ಲಿ ಸುಮಾರು 134 ಮಂದಿ, ಬಿಜೆಪಿಯಲ್ಲಿ 97 ಮಂದಿ, ಜೆಡಿಎಸ್ ನಲ್ಲಿ 46 ಮಂದಿ ಕೋಟ್ಯಧಿಪತಿಗಳಿದ್ದಾರೆ. ದೇಶದ ಶ್ರೀಮಂತ ರಾಜಕಾರಣಿಗಳ ಪಟ್ಟಿಯನ್ನು ನೋಡಿದರೆ ಅದರಲ್ಲಿ ಕಾಂಗ್ರೆಸ್ ಶಾಸಕ, ಗೋವಿಂದರಾಜನಗರ ಕ್ಷೇತ್ರದ ಅಭ್ಯರ್ಥಿ ಪ್ರಿಯಾಕೃಷ್ಣ ಅವರ ಹೆಸರು ಅಗ್ರಸ್ಥಾನದಲ್ಲಿರುತ್ತದೆ.

ಕರ್ನಾಟಕ ರಾಜಕಾರಣದ 'ಕುಬೇರ' ಪ್ರಿಯಾಕೃಷ್ಣ ಆಸ್ತಿ-ಸಾಲದ ಪಟ್ಟಿಕರ್ನಾಟಕ ರಾಜಕಾರಣದ 'ಕುಬೇರ' ಪ್ರಿಯಾಕೃಷ್ಣ ಆಸ್ತಿ-ಸಾಲದ ಪಟ್ಟಿ

2013ರಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ನಲವತ್ತು ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆಗ ಕೂಡ ಪ್ರಿಯಾಕೃಷ್ಣ ಸಲ್ಲಿಸಿದ್ದ ಅಫಿಡವಿಟ್ ಭಾರೀ ಚರ್ಚೆಗೆ ಒಳಗಾಗಿತ್ತು. ಆ ಸಲ ಅವರು 900 ಕೋಟಿ ರುಪಾಯಿ ಆಸ್ತಿ ಘೋಷಣೆ ಮಾಡಿದ್ದರು. ಗಾಲ್ಫ್ ಆಟಗಾರರಾದ ಪ್ರಿಯಾಕೃಷ್ಣ, 2001ರಲ್ಲಿ ಪಂಜಾಬ್ ನಲ್ಲಿ ನಡೆದ ನ್ಯಾಷನಲ್ ಗೇಮ್ಸ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು ಎಂಬುದು ವಿಶೇಷ.

1. ಪ್ರಿಯಾಕೃಷ್ಣ

1. ಪ್ರಿಯಾಕೃಷ್ಣ

ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಕೃಷ್ಣ ಅವರ ವಿರುದ್ಧ 1 ಕ್ರಿಮಿನಲ್ ಕೇಸ್ ಇನ್ನೂ ಬಾಕಿ ಇದೆ. ಸ್ನಾತಕೋತ್ತರ ಪದವಿಧರರಾದ ಪ್ರಿಯಾಕೃಷ್ಣ ಅವರು ಒಟ್ಟು 1020 ಕೋಟಿ ಆಸ್ತಿ ಹೊಂದಿದ್ದು, 802 ಕೋಟಿ ಸಾಲ ಹೊಂದಿದ್ದಾರೆ.

2. ಎನ್ ನಾಗರಾಜು(ಎಂ.ಟಿ.ಬಿ)

2. ಎನ್ ನಾಗರಾಜು(ಎಂ.ಟಿ.ಬಿ)

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜು ಅವರ ವಿರುದ್ಧ 1 ಕ್ರಿಮಿನಲ್ ಕೇಸ್ ಇನ್ನೂ ಬಾಕಿ ಇದೆ. 8ನೇ ತರಗತಿ ತನಕ ಮಾತ್ರ ಓದಿರುವ ನಾಗರಾಜು ಅವರು ಒಟ್ಟು 1015 ಕೋಟಿ ರು ಆಸ್ತಿ ಹೊಂದಿದ್ದು, 27 ಕೋಟಿ ಸಾಲ ಹೊಂದಿದ್ದಾರೆ.

3. ಡಿಕೆ ಶಿವಕುಮಾರ್

3. ಡಿಕೆ ಶಿವಕುಮಾರ್

ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ 4 ಕ್ರಿಮಿನಲ್ ಕೇಸ್ ಇನ್ನೂ ಬಾಕಿ ಇದೆ. ಸ್ನಾತಕೋತ್ತರ ಪದವಿ ನಾಗರಾಜು ಅವರು ಒಟ್ಟು 840 ಕೋಟಿ ರು ಆಸ್ತಿ ಹೊಂದಿದ್ದು, 228 ಕೋಟಿ ರು ಸಾಲ ಹೊಂದಿದ್ದಾರೆ.

4. ಸುರೇಶ್ ಬಿ.ಎಸ್

4. ಸುರೇಶ್ ಬಿ.ಎಸ್

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ,ಭೈರತಿ ಸುರೇಶ್ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ಇಲ್ಲ. 12ನೇ ತರಗತಿ ತನಕ ಓದಿರುವ ಬಿ.ಎಸ್ ಸುರೇಶ್ ಅವರು ಒಟ್ಟು 416 ಕೋಟಿ ರು ಆಸ್ತಿ ಹೊಂದಿದ್ದು, 41 ಕೋಟಿ ರು ಸಾಲ ಹೊಂದಿದ್ದಾರೆ.

English summary
Karnataka Assembly Elections 2018: Association of Democratic Reforms (ADR), Affidavits from Candidates reveal 91% Karnataka Congress candidates crorepatis. Total of 134 crorepatis from Congress, BJP has 97 and JD-S has 46.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X