ಕಾಂಗ್ರೆಸ್ ಪಕ್ಷದ 15 ಮಹಿಳಾ ಅಭ್ಯರ್ಥಿಗಳು ಯಾರು ಯಾರು?

ಬೆಂಗಳೂರು, ಏಪ್ರಿಲ್ 24: 15ನೇ ವಿಧಾನಸಭಾ ಚುನಾವಣೆಯ ಕಣದಲ್ಲಿ 134 ಮಂದಿ ಮಹಿಳಾ ಸ್ಪರ್ಧಿಗಳು ಕಣದಲ್ಲಿದ್ದಾರೆ. 14ನೇ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 170 ಅಭ್ಯರ್ಥಿಗಳು ಕಣದಲ್ಲಿದ್ದರು.

ಈ ಬಾರಿ ಪಕ್ಷವಾರು ಟಿಕೆಟ್ ಹಂಚಿಕೆ ಗಮನಿಸಿದರೆ, ಕಾಂಗ್ರೆಸ್ಸಿನಿಂದ 15, ಬಿಜೆಪಿಯಿಂದ 13, ಜೆಡಿಎಸ್ ನಿಂದ 11 ಹಾಗೂ ಎಂಇಪಿಯಿಂದ 12 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 134 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

2008ರ ಚುನಾವಣೆಯಲ್ಲಿ 107 ಮಹಿಳೆಯರು ಕಣದಲ್ಲಿದ್ದರು, ಇವರಲ್ಲಿ ಮೂವರು ಮಾತ್ರ ಗೆಲುವು ಸಾಧಿಸಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಮತ್ತು ಕಲ್ಪನಾ ಸಿದ್ದರಾಜು ಗೆಲುವು ಸಾಧಿಸಿದ್ದರು.

Karnataka Assembly Elections 2018 : 15 Women Candidates from Congress

ಕಳೆದ ಬಾರಿ ಕಾಂಗ್ರೆಸ್ಸಿನಿಂದ ಮೂವರು, ಬಿಜೆಪಿಯಿಂದ ಇಬ್ಬರು ಮತ್ತು ಜೆಡಿಎಸ್ ನಿಂದ ಒಬ್ಬರು ಗೆದ್ದು ಶಾಸಕಿಯರಾಗಿದ್ದರು. ನಂತರ ಸಚಿವ ಮಹದೇವ ಪ್ರಸಾದ್ ಅವರ ನಿಧನದಿಂದ ತೆರವಾದ ನಂಜನಗೂಡು ಉಪ ಚುನಾವಣೆಯಲ್ಲಿ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರು ಸ್ಪರ್ಧಿಸಿ ಗೆಲುವು ಸಾಧಿಸಿ, ಪ್ರಥಮ ಬಾರಿಗೆ ಶಾಸಕಿ, ಸಚಿವೆಯಾದರು. ಒಟ್ಟಾರೆ 6+1 ಶಾಸಕರಿಯನ್ನು 14ನೇ ವಿಧಾನಸಭೆ ಕಂಡಿತ್ತು.

ಈ ಬಾರಿ ಕಣದಲ್ಲಿರುವ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳು ಹಾಗೂ ಕ್ಷೇತ್ರ:

  1. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ರವೀಂದ್ರ ಹೆಬ್ಬಾಳ್ಕರ್
  2. ಖಾನಾಪುರ : ಅಂಜಲಿ ನಿಂಬಾಳ್ಕರ್
  3. ತೇರದಾಳ : ಉಮಾಶ್ರೀ
  4. ಕುಮಟಾ : ಶಾರದಾ ಮೋಹನ್ ಶೆಟ್ಟಿ
  5. ಜಗಳೂರು (ಎಸ್ಟಿ): ಎ.ಎಲ್.ಪುಷ್ಪಾ
  6. ರಾಜಾಜಿನಗರ : ಜಿ. ಪದ್ಮಾವತಿ
  7. ಜಯನಗರ : ಸೌಮ್ಯ.ಆರ್
  8. ಬೊಮ್ಮನಹಳ್ಳಿ : ಸುಷ್ಮಾ ರಾಜ್ ಗೋಪಾಲ್ ರೆಡ್ಡಿ
  9. ಬೇಲೂರು : ಕೀರ್ತನಾ ರುದ್ರೇಶ್ ಗೌಡ
  10. ಪುತ್ತೂರು : ಶಕುಂತಲಾ ಟಿ.ಶೆಟ್ಟಿ
  11. ಗುಲ್ಬರ್ಗಾ : ಫಾತಿಮಾ ಖಮರುಲ್ ಇಸ್ಲಾಂ
  12. ಗುಂಡ್ಲುಪೇಟೆ : ಗೀತಾ ಮಹದೇವಪ್ರಸಾದ್
  13. ಕೋಲಾರ (ಕೆಜಿಎಫ್) : ರೂಪಾ ಶಶಿಧರ್
  14. ಮೂಡಿಗೆರೆ : ಶ್ರೀಮತಿ ಮೋಟಮ್ಮ
  15. ಚಿಂತಾಮಣಿ : ವಾಣಿ ಕೃಷ್ಣಾರೆಡ್ಡಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+