ನಟಿ ಪೂಜಾಗಾಂಧಿಗೆ ಎರಡೂ ಕೈಕೊಟ್ಟ ಮತದಾರ
ರಾಯಚೂರಿನ ಬಿಸಿಲನ್ನೂ ಲೆಕ್ಕಿಸದೆ ಸಾಕಷ್ಟು ಬೆವರು ಹರಿಸಿದ್ದ ನಟಿ ಪೂಜಾಗಾಂಧಿ ಅವರಿಗೆ ಮತದಾರಪ್ರಭು ಕೈ ಕೊಟ್ಟಿದ್ದಾನೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪೂಜಾಗಾಂಧಿ ಅವರು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅವರು ಇದೇ ಮೊದಲ ಬಾರಿಗೆ ರಾಜಕೀಯ ಪರೀಕ್ಷೆಗೆ ಮುಂದಾಗಿದ್ದರು. ಆದರೆ ಮೊದಲ ಹೆಜ್ಜೆಯಲ್ಲೇ ಮುಗ್ಗರಿಸಿದ್ದಾರೆ.
ಜೆಡಿಎಸ್ ನ ಡಾ. ಎಸ್. ಶಿವರಾಜ್ ಪಾಟೀಲ್ ಗೆದ್ದಿದ್ದಾರೆ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ನ ಸೈಯದ್ ಯಾಸಿನ್ ಅವರಿದ್ದರೆ ಮೂರನೇ ಸ್ಥಾನದಲ್ಲಿ ಬಿಜೆಪಿಯ ತ್ರಿವಿಕ್ರಮ್ ಜೋಶಿ ಇದ್ದಾರೆ. ಪೂಜಾಗಾಂಧಿ ಅವರು ಗೆದ್ದೇ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿದ್ದರು. ಆದರೆ ಮತದಾರರು ಅವರ ಉತ್ಸಾಹಕ್ಕೆ ತಣ್ಣೀರೆರಚಿದ್ದಾರೆ.

ಪ್ರಚಾರ ಸಂದರ್ಭದಲ್ಲಿ ಪೂಜಾಗಾಂಧಿ ಅವರು ತಾನೂ ಸೋತರು ಅಷ್ಟೇ ಗೆದ್ದರೂ ಅಷ್ಟೇ ರಾಯಚೂರು ಜನರ ಸೇವೆ ಮಾಡುತ್ತೇನೆ ಎಂದಿದ್ದರು. ಈಗ ಅವರು ರಾಯಚೂರಿನಲ್ಲೇ ಉಳಿಯುತ್ತಾರೋ ಅಥವಾ ಬೆಂಗಳೂರಿಗೆ ಮರಳುತ್ತಾರೋ ಕಾದುನೋಡಬೇಕು.
ಡಾ.ಎಸ್.ಶಿವರಾಜ್ ಪಾಟೀಲ್ ಮತಗಳು 17759
ಸೈಯದ್ ಯಾಸಿನ್ ಮತಗಳು 14010
ತ್ರಿವಿಕ್ರಮ್ ಜೋಶಿ ಮತಗಳು 1884












Click it and Unblock the Notifications