ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ಪರಿಚಯ

By Mahesh
|
Google Oneindia Kannada News

ಮಲೆನಾಡು, ಅರೆ ಮಲೆನಾಡು, ಹಾಗೂ ಬಯಲು ಸೀಮೆಗಳನ್ನೊಳಗೊಂಡ ವೈವಿಧ್ಯಮಯ ಜಿಲ್ಲೆ. ಹಲವು ಜೀವ ನದಿಗಳ ಉಗಮ ಸ್ಥಾನ. ಆದರೆ, ದೀಪದ ಕೆಳಗೆ ಕತ್ತಲು ಎನ್ನುವಂತೆ ಚಿಕ್ಕಮಗಳೂರು ನಗರದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. 1942 ರಲ್ಲಿ ಈ ಜಿಲ್ಲೆಯು ಚಿಕ್ಕಮಗಳೂರು ಜಿಲ್ಲೆ ಎಂದು ನಾಮಾಂತರಗೊಳ್ಳುವವರೆಗೆ 82 ವರ್ಷಗಳ ಕಾಲ ಕಡೂರು ಜಿಲ್ಲೆ ಎಂದೇ ಕರೆಯಲ್ಪಡುತ್ತಿತ್ತು.

ಸಾಹಿತ್ಯಕವಾಗಿಯೂ ಈ ನಾಡು ಹೆಚ್ಚು ಪ್ರಸಿದ್ಧಿ ಪಡೆದಿದೆ. ಶ್ರೇಷ್ಠಕವಿಗಳಾದ ಲಕ್ಷ್ಮೀಶನ ದೇವನೂರು, ಡಾ. ಎ.ಆರ್. ಕೃಷ್ಣಶಾಸ್ತ್ರಿಗಳ ಅಂಬಳೆ, ಕೂದವಳ್ಳಿಯ ಕಥೆಗಾರ ಅಶ್ವತ್ಥ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ರಾಷ್ಟ್ರಕವಿ ಕುವೆಂಪುರವರ ಜನ್ಮಸ್ಥಳ ಹಿರೇಕೊಡಿಗೆ ಇದೇ ಜಿಲ್ಲೆಯಲ್ಲಿರುವುದು ಮತ್ತೊಂದು ಹೆಮ್ಮೆಯ ವಿಷಯ. ಆದರೆ, ಮೂಡಿಗೆರೆಯಲ್ಲಿ ನೆಲೆಸಿದ್ದ ಮಾನವತಾವಾದಿ ಪೂರ್ಣಚಂದ್ರ ತೇಜಸ್ವಿ ಹೇಳುವಂತೆ 'ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಒಬ್ಬ ಸಾಹಿತಿಯಾಗಲಿ, ರಾಜಕಾರಣಿ ಹುಟ್ಟದಿರುವುದು ಜಿಲ್ಲೆಗೆ ಅಂಟಿದ ಶಾಪ'

ಪ್ರಮುಖ ಧಾರ್ಮಿಕ ಸ್ಥಳಗಳಾದ ಶೃಂಗೇರಿ ಅದ್ವೈತ ಪೀಠ ಶಾರದಾ ದೇಗುಲ, ಹೊರನಾಡು ಶ್ರೀಅನ್ನಪೂರ್ಣೇಶ್ವರಿ, ಐತಿಹಾಸಿಕವಾಗಿ ಮೂಡಿಗೆರೆಯ ಅಂಗಡಿ ಗ್ರಾಮ ಹೊಯ್ಸಳ ಸಂಸ್ಥಾನ ಆರಂಭವಾದ ತಾಣ, ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ಗಿರಿ ಪ್ರಮುಖ ಧಾರ್ಮಿಕ ಹಾಗೂ ವಿವಾದಿತ ತಾಣ. ಯಕ್ಷಗಾನ, ಹುಲಿವೇಷ ಮುಂತಾದ ಜನಪದ ಕಲೆಗಳ ತವರೂರು.

Karnataka assembly Election 2013

ಪ್ರವಾಸಿ ತಾಣಗಳು: ಕೆಮ್ಮಣ್ಣುಗುಂಡಿ ಗಿರಿಧಾಮ, ಮುಳ್ಳಯನ ಗಿರಿ, ಬಾಬಾ ಬುಡನ್ ಗಿರಿ, ಶೃಂಗೇರಿ, ಭದ್ರಾ ಅಭಯಾರಣ್ಯ, ಮೂಡಿಗೆರೆ ಚಾರ್ಮಾಡಿ ಘಾಟ್ ನ ಅನೇಕ ಚಾರಣ ತಾಣಗಳು, ದೇವರಮನೆ, ಹೊರನಾಡು,

ತಾಲೂಕುಗಳು: ಶೃಂಗೇರಿ, ಬೀರೂರು, ಕಡೂರು, ನರಸಿಂಹರಾಜಪುರ, ಕೊಪ್ಪ, ಮೂಡಿಗೆರೆ, ತರೀಕೆರೆ. ಚಿಕ್ಕಮಗಳೂರು

ವಿಧಾನಸಭಾ ಕ್ಷೇತ್ರಗಳು: ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ತರೀಕೆರೆ. ಕಡೂರು,

ಪ್ರಮುಖ ಭಾಷೆ: ಕನ್ನಡ, ತುಳು,

ಪ್ರಮುಖ ಜನಾಂಗ: ಹಾಲಕ್ಕಿ ಒಕ್ಕಲಿಗ, ಲಿಂಗಾಯತ, ಬ್ರಾಹ್ಮಣರು, ವೈಶ್ಯ, ಮುಸ್ಲಿಂ, ಕ್ರೈಸ್ತ, ಹಿಂದುಳಿದ ಜನಾಂಗ,

ಜನಸಂಖ್ಯೆ: 11,40,905| ಪುರುಷರು 5,74,911, ಮಹಿಳೆಯರು 5,65,994

ಈ ಜಿಲ್ಲೆಯಲ್ಲಿ 07 ತಾಲ್ಲೂಕುಗಳಿದ್ದು, 08 ಶೈಕ್ಷಣಿಕ ವಲಯಗಳಿವೆ. ಲಕ್ಕವಳ್ಳಿಯ ಬಳಿ ಕುವೆಂಪು ವಿಶ್ವ ವಿಶ್ವವಿದ್ಯಾಲಯವು ಇದೆ. ಈ ಜಿಲ್ಲೆಯು 12.54 ಮತ್ತು 13.54 ಡಿಗ್ರಿಗಳ ಉತ್ತರ ಅಕ್ಷಾಂಶದ ಮಧ್ಯದಲ್ಲಿಯೂ 75.7ಡಿಗ್ರಿ ಮತ್ತು 76.22 ಡಿಗ್ರಿಗಳ ಪೂರ್ವ ರೇಖಾಂಶಗಳ ಮಧ್ಯದಲ್ಲಿಯೂ ಇದೆ.

ಸಾರಿಗೆ: 2 ರಾಷ್ಟೀಯ ಹೆದ್ದಾರಿಗಳಿದೆ. ರೈಲ್ವೆ ಹಾದಿ ನಿರ್ಮಾಣವಾಗಿದ್ದು ಈ ವರ್ಷದಲ್ಲಿ ರೈಲು ಓಡುವುದು ಗ್ಯಾರಂಟಿ. ಖಾಸಗಿ ವಿಮಾನ ನಿಲ್ದಾಣ ಜೊತೆ ಸಣ್ಣ ವಿಮಾನ ನಿಲ್ದಾಣ ಇದೆ. ಪೂರ್ಣ ಪ್ರಮಾಣದ ವಿಮಾನ ನಿಲ್ದಾಣದ ಅಗತ್ಯವಿದೆ.

ನೀರಿನ ಆಸರೆ: ತುಂಗಾ, ಭದ್ರಾ, ಹೇಮಾವತಿ, ವೇದಾವತಿ, ಯಗಚಿ ಮುಂತಾದ ನದಿಗಳು ಹುಟ್ಟಿ ಹರಿಯುತ್ತಿವೆ. ಆದರೆ, ಒಂದು ನದಿ ಕೂಡಾ ಚಿಕ್ಕಮಗಳೂರಿನ ಕಡೆಗೆ ಹರಿಯುವುದಿಲ್ಲ. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಎಂಬಂತೆ ಅಕ್ಕ ಪಕ್ಕದ ಜಿಲ್ಲೆಗಳಿಗೆ ಆಸರೆಯಾಗಿರುವುದೇ ಹೆಚ್ಚು. ಉಳಿದಂತೆ ಜಿಲ್ಲೆಯ ಬಯಲು ಸೀಮೆಗೆ ಇತಿಹಾಸ ಪ್ರಸಿದ್ಧ ಅಯ್ಯನ ಕೆರೆ ಮತ್ತು ಮದಗದ ಕೆರೆಗಳು ಕಡೂರು ತಾಲ್ಲೂಕಿನಲ್ಲಿ ಆಸರೆಯಾಗಿದೆ.

ನೈಸರ್ಗಿಕ/ಖನಿಜ, ಪ್ರಾಣಿ ಸಂಪತ್ತು: ಕಬ್ಬಿಣದ ಅದಿರು ಹೆಚ್ಚಿನ ಪ್ರದೇಶದಲ್ಲಿ ದೊರೆಯುತ್ತದೆ. ತೇಗ, ನಂದಿ, ಬೀಟೆ, ಹೊನ್ನೆ ಮುಂತಾದ ಮರಗಳು ಶ್ರೀಗಂಧದ ಮರಗಳು ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ, ತೋಳ, ನರಿ, ಕಾಡುಹಂದಿಗಳು, ನಾನಾ ವಿಧದ ಮಂಗಗಳು, ಅಪರೂಪದ ಕಪ್ಪೆ, ಅಳಿಲುಗಳು ಪಶ್ಚಿಮಘಟ್ಟದ ಶ್ರೇಣಿಯಲ್ಲಿ ಉಳಿದಿವೆ. ಭದ್ರಾ ಅಭಯಾರಣ್ಯ ಮತ್ತು ಮುತ್ತೋಡಿ ಅಭಯಾರಣ್ಯಗಳು ಇವುಗಳೊಂದಿಗೆ ಕುದುರೆಮುಖದಲ್ಲಿ ರಾಷ್ಟ್ರೀಯ ಉದ್ಯಾನವನ ಜಿಲ್ಲೆಯ ಅರಣ್ಯ ಸಂಪತ್ತಿನ ಹೆಗ್ಗುರುತು.

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಒಕ್ಕಲಿಗ ಹಾಗೂ ಬಿಲ್ಲವ ಸಮುದಾಯ ಮತ ಒಲಿಸಿಕೊಂಡರೆ ಎರಡೂ ಜಿಲ್ಲಯಲ್ಲಿ ಪಾರುಪತ್ಯ ನಡೆಸಬಹುದು ಎಂಬ ಎಣಿಕೆ ಎಲ್ಲಾ ಪಕ್ಷಗಳನ್ನು ಇದೆ.

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ: ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆ ರೋಗ ಮತ್ತು ಕುಸಿದ ಕಾಫಿ ದರ,
* ಕಾಫಿ ಬೆಳೆಗಾರರ ಆಗಣಿತ ಸಮಸ್ಯೆಗಳು.
* ಕುದುರೆಮುಖ ರಾಷ್ಟ್ರೀಯ ಉದ್ಯಾನವನದೊಳಗೆ ಜನರ ಒಕ್ಕಲೆಬ್ಬಿಸುವಿಕೆ. ಗಣಿಗಾರಿಕೆ
* ಅರಣ್ಯ ಒತ್ತುವರಿ
* ನಕ್ಸಲರ ಸಮಸ್ಯೆ
* ಕುಸಿಯುತ್ತಿರುವ ಭತ್ತದ ಕೃಷಿ ಸಮಸ್ಯೆ.
* ಪಟ್ಟಣಗಳಲ್ಲಿ ರಸ್ತೆ, ವಸತಿ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ
* ಕುಡಿಯುವ ನೀರಿನ ಬಗೆ ಹರಿಯದ ಸಮಸ್ಯೆ
* ಧಾರ್ಮಿಕ ಪ್ರವಾಸಿ ತಾಣಗಳಿಗೆ ಸಿಗದ ರೈಲು ಸಂಪರ್ಕ
* ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು, ಅರಣ್ಯ ಪಾಲಕರ ಕೊರತೆ, ಕಳ್ಳನಾಟ ಸಾಗಣಿಕೆ
* ಆಂಧ್ರದ ರೆಡ್ಡಿಗಳು, ಕೇರಳದ ಬ್ಯಾರಿಗಳು ಭೂ ಒತ್ತುವರಿ

ಚಿಕ್ಕಮಗಳೂರು: ಸಿ.ಟಿ ರವಿ (ಬಿಜೆಪಿ) 1,19,248 ಮತಗಳು
ಮೂಡಿಗೆರೆ: ಎಂಪಿ ಕುಮಾರಸ್ವಾಮಿ (ಬಿಜೆಪಿ) 99,813 ಮತಗಳು (ಎಸ್ ಸಿ)
ಶೃಂಗೇರಿ: ಡಿ.ಎನ್ ಜೀವರಾಜ (ಬಿಜೆಪಿ) 1,08,145 ಮತಗಳು
ಕಡೂರು: ಕೆ ಎಂ ಕೃಷ್ಣಮೂರ್ತಿ(ಕಾಂಗ್ರೆಸ್) 1,22,004 ಮತಗಳು
ತರೀಕೆರೆ: ಡಿ.ಎಸ್ ಸುರೇಶ್(ಬಿಜೆಪಿ) 1,10,096 ಮತಗಳು

English summary
Karnataka assembly Election 2013 : Chikmagalur District Assembly Constituency Profiles.Chikmagalur district consists 5 Assembly constituencies: Chikmagalur, Sringeri, Mudigere, Tarikere, Kadur
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X