ಕಾವೇರಿ ಮಡಿಲಲ್ಲಿ ಮಂಡ್ಯ ರಾಜಕೀಯ ಖದರೇ ಬೇರೆ

ಮಂಡ್ಯ, ಮೇ 1: ಕಾವೇರಿ ಮಡಿಲಲ್ಲಿರುವ ಮಂಡ್ಯದ ಖದರೇ ಬೇರೆ. ಈ ಸುದ್ದಿ ಬರೆಯುತ್ತಿರುವ ಹೊತ್ತಿನಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಮಂಡ್ಯದಲ್ಲಿ ಚುನಾವಣಾ ಪ್ರಚಾರ ಭಾಷಣಕ್ಕೆ ಬಂದಿದ್ದಾರೆ. ಆದರೆ ವೇದಿಕೆಯಲ್ಲಿ ಹಿರಿಯ ನಾಯಕ ಎಸ್ಎಂ ಕೃಷ್ಣ ಅವರು ಕುಳಿತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ/ ನಟ ಎಂಎಚ್ ಅಂಬರೀಷ್ ಅವರು ವೇದಿಕೆಯಿಂದ ಕೆಳಗಿಳಿದಿದ್ದಾರೆ. ಇದು ಮಂಡ್ಯದ ಅಪ್ಪಟ ರಾಜಕೀಯಕ್ಕೆ ಹಿಡಿದ ಕನ್ನಡಿ.

ಇದು ಬಿಟ್ಟರೆ ಅಂದರೆ ಕಾಂಗ್ರೆಸ್ ಬಿಟ್ಟರೆ ಜಿಲ್ಲೆಯ ಮಟ್ಟಿಗೆ ಜೆಡಿಎಸ್ ಹೆಸರು ಪ್ರಸ್ತಾಪವಾಗಲೇ ಬೇಕು. ಏಕೆಂದರೆ ಕಾವೇರಿ ನದಿ ನೀರು ಸಂಬಂಧ ರಾಜಕೀಯ ಹೋರಾಟಗಳನ್ನು ನಡೆಸುವುದರಲ್ಲಿ ಈ ಎರಡೂ ಪಕ್ಷಗಳು ಮುಂಚೂಣಿಯಲ್ಲಿರುತ್ತವೆ, ಮತ್ತು ಕಾವೇರಿ ನದಿ ನೀರಿನಲ್ಲೇ ತನ್ನ ಬೇಳೆ ಬೇಯಿಸಿಕೊಳ್ಳುತ್ತದೆ. ಈ ಬಾರಿ ಕಾವೇರಿ ತುಸು ಹೆಚ್ಚೇ ಕಾವೇರಿದೆ. ಇದರಲ್ಲಿ ಕಾಂಗ್ರೆಸ್ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]

Mandya district

ಕೇಂದ್ರದಲ್ಲಿ ತನ್ನದೆ ಸರಕಾರವಿದ್ದರೂ ಕಾವೇರಿ ರೈತರ ಹಿತಾಸಕ್ತಿಯನ್ನು ಕಾಂಗ್ರೆಸ್ ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ರೈತರು ಆಕ್ರೋಶಗೊಂಡಿದ್ದಾರೆ. ಇದರ ಹೊರತಾಗಿ ಕೆಜೆಪಿಯೂ ಇಲ್ಲಿ ತಳವೂರಲು ಯತ್ನಿಸಿದೆ. ಕಾವೇರಿ ಹೋರಾಟದ ವೇಳೆ ಯಡಿಯೂರಪ್ಪ ತಮ್ಮ ಇರುವನ್ನು ಸಾಬೀತುಪಡಿಸಲು ಒಂದಷ್ಟು ಪ್ರಯತ್ನಿಸಿದ್ದಾರೆ.

ಮಾಜಿ ಸ್ಪೀಕರ್, ಕೆಆರ್ ಪೇಟೆ ಕೃಷ್ಣ ಅವರು ಬಂಡಾಯವೆದ್ದಿರುವುದು ಕ್ಷೇತ್ರದಲ್ಲಿ ಭಾರು ಕುತೂಹಲ ಮೂಡಿಸಿದೆ. ನಾರಾಯಣ ಗೌಡರಿಗೇ ತಮ್ಮ ನಿಷ್ಠೆ ತೋರಿದ ಗೌಡರ ಕುಟುಂಬ ಕೊನೆಯ ಘಳಿಗೆಯಲ್ಲಿ ಕೆಆರ್ ಪೇಟೆ ಕೃಷ್ಣಗೆ ಟಿಕೆಟ್ ನೀಡದೇ ಹೋಯ್ತು. ಪಕ್ಷೇತರರಾಗಿ ಕಣದಲ್ಲಿ ಉಳಿದ ಕೃಷ್ಣಗೆ ಕೆಜೆಪಿ ಬೆಂಬಲ ಸೂಚಿಸಿದೆ.

ಕ್ಷೇತ್ರ ಸಂಖ್ಯೆ ಕ್ಷೇತ್ರದ ಹೆಸರು ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಕೆಜೆಪಿ ಬಿಎಸ್ಆರ್
ಪಕ್ಷೇತರರು
186 ಮಳವಳ್ಳಿ ಪ.ಜಾ ಕುಮಾರಸ್ವಾಮಿ
ಪಿಎಂ ನರೇಂದ್ರಸ್ವಾಮಿ ಡಾ. ಕೆ ಅನ್ನದಾನಿ ಮುನಿರಾಜು -
187 ಮದ್ದೂರು ಬಿಎಂ ವನಜಾಕ್ಷಿ
ಮಧು ಜಿಎಂ ಡಿಸಿ ತಮ್ಮಣ್ಣ - ಕಲ್ಪನಾ ಸಿದ್ದರಾಜು ಪಕ್ಷೇತರ
188 ಮೇಲುಕೋಟೆ ಬಿಎಂ ರವೀಂದ್ರ ರವಿ ಎಲ್ ಡಿ ಸಿಎಸ್ ಪುಟ್ಟರಾಜು - ಕೆಎಸ್ ಪುಟ್ಟಣ್ಣಯ್ಯ
189 ಮಂಡ್ಯ ಟಿಎಲ್ ರವಿಶಂಕರ್
ಎಂಎಚ್ ಅಂಬರೀಷ್ ಎಂ ಶ್ರೀನಿವಾಸ್ ವೆಂಕಟೇಶ್ ಆಚಾರ್ -
190 ಶ್ರೀರಂಗಪಟ್ಟಣ ಶ್ರೀಧರ್
ಲಿಂಗರಾಜು ರಮೇಶ್ ಬಾಬು ಬಂಡೀಸಿದ್ದೇಗೌಡ ಗಂಜಾಂ ಶಿವು ಬಿಎಸ್ಸಾರ್
191 ನಾಗಮಂಗಲ ಡಾ. ಪಾರ್ಥಸಾರಥಿ
ಕೆ ಸುರೇಶ್ ಗೌಡ ಚೆಲುವರಾಯಸ್ವಾಮಿ ಕೃಷ್ಣಪ್ಪ -
192 ಕೆಆರ್ ಪೇಟೆ ವರದರಾಜೇ ಗೌಡ
ಕೆಬಿ ಚಂದ್ರಶೇಖರ್ ನಾರಾಯಣ ಗೌಡ ಕೃಷ್ಣ -
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+