ಮೀಸಲಾತಿ ಮಂತ್ರದೊಂದಿಗೆ ಜೆಡಿಯು ಪಟ್ಟಿ ಔಟ್

JDU Karnataka official releases candidates list
ಬೆಂಗಳೂರು, ಏ.11: ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಯು ಪಕ್ಷವು ಮೊದಲ ಹಂತದ ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. 42 ಅಸೆಂಬ್ಲಿ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಯು ರಾಜ್ಯಾಧ್ಯಕ್ಷ ಡಾ. ಮಲ್ಲನಗೌಡ ನಾಡಗೌಡ ಬುಧವಾರ ಬಿಡುಗಡೆ ಮಾಡಿದರು.

ಮೀಸಲಾತಿ ಮಂತ್ರ ಜಪಿಸುತ್ತಿರುವ ಜನತಾದಳ ಯುನೈಟೆಡ್ ಪಕ್ಷ 'ನನ್ನ ನಡಿಗೆ ಹಳ್ಳಿಯೆಡೆಗೆ' ಎಂದು ಘೋಷಿಸಿದೆ. ಶೇ 50 ರಷ್ಟು ಮೀಸಲಾತಿಯಲ್ಲಿ ಗ್ರಾಮೀಣ ಭಾಗದವರಿಗೆ ಸಮಾನಾಂತರ ಒಳಮೀಸಲಾತಿ ಕಳ್ಪಿಸುವ ಭರವಸೆ ಹಾಗೂ ನಗರ ಪ್ರದೇಶಗಳತ್ತ ವಲಸೆ ತಡೆಯಲು ಹಳ್ಳಿಗಳ ಅಭಿವೃದ್ಧಿ ಮಂತ್ರ ನಮ್ಮ ಗುರಿ. ಪರ್ಯಾಯ ಮತದಾರರನ್ನು ಗುರುತಿಸಿ ಜಾಗೃತಿಗೊಳಿಸಲಾಗುತ್ತ್ತದೆ ಎಂದು ಮಲ್ಲನಗೌಡ ಹೇಳಿದರು.

ಸ್ಟಾರ್ ಪ್ರಚಾರಕರು: ಎನ್ ಡಿಎ ಮಿತ್ರಪಕ್ಷ ಬಿಜೆಪಿ ಗುಜರಾತ್ ಅನ್ನು ರಾಜ್ಯದ ಅಭಿವೃದ್ಧಿಗೆ ಮಾದರಿ ಎಂದರೆ, ಜೆಡಿಯು ಮಾತ್ರ ಬಿಹಾರವನ್ನು ಮಾದರಿಯನ್ನಾಗಿಸಿ ಪ್ರಚಾರ ಮಾಡಲು ನಿರ್ಧರಿಸಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಶರದ್ ಯಾದವ್, ಶಿವಾನಂದ್ ತಿವಾರಿ, ಜಾವೇದ್ ರಾಜಾ ಮುಂತಾದವರು ಕರ್ನಾಟಕದಲ್ಲಿ ಪ್ರಚಾರಕ್ಕೆ ಆಗಮಿಸಲಿದ್ದಾರೆ.

ಸುಮಾರು 180 ರಿಂದ 200 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಉಳಿದ ಕ್ಷೇತ್ರಗಳಲ್ಲಿ ಬಿಎಸ್ ಪಿ, ರೈತ ಸಂಘ ಮುಂತಾದ ಸಮಾನ ಮನಸ್ಕ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ.

ಕ್ಷೇತ್ರ : ಅಭ್ಯರ್ಥಿ ಹೆಸರು
* ಮಳವಳ್ಳಿ(ಎಸ್‌ಸಿ) : ಬಿ.ಸೋಮಶೇಖರ್‌
* ರಾಮದುರ್ಗ :ಅರವಿಂದ್‌ದಳವಾಯಿ
* ಕೆ.ಆರ್‌. ಪುರ: ಎಂ.ಎಲ್‌.ಅನುಪಮ ರೆಡ್ಡಿ
* ಚಾಮರಾಜ(ಮೈಸೂರು) : ಅಕ್ರಂಪಾಷಾ
* ಹಗರಿಬೊಮ್ಮನಹಳ್ಳಿ(ಎಸ್‌ಸಿ) : ಆರೋಗ್ಯಸ್ವಾಮಿ
* ನಾಗಠಾಣ(ಎಸ್‌ಸಿ) :ಬಂಡಿ ವಡ್ಡರ್‌
* ಬಬಲೇಶ್ವರ :ಬಸಯ್ಯ
* ಶ್ರವಣಬೆಳಗೋಳ : ಚೆಲುವೇಗೌಡ
* ಗುಲ್ಬರ್ಗ(ಉತ್ತರ) : ದತ್ತಾತ್ರೇಯ
* ರಾಜರಾಜೇಶ್ವರಿನಗರ : ಡಾ.ಪ್ರಿಯದರ್ಶಿನಿ ಅಯ್ಯರ್‌
* ಹನೂರು : ಗಂಗಾಧರ್‌
* ಬಸವನಗುಡಿ :ಎನ್‌. ಹೇಮಂತ್‌ ಕುಮಾರ್‌ ಗೌಡ
* ಮಾಯಕೊಂಡ : ಕಿರಣ್‌ ಕುಮಾರ್‌
* ನವಲಗುಂದ :ಮೇಟಿಗೌಡರ್‌
* ಕೊಳ್ಳೇಗಾಲ(ಎಸ್‌ಸಿ) :ಆರ್‌. ನಂಜಯ್ಯ
* ತೀರ್ಥಹಳ್ಳಿ : ನಾಗರಾಜ್‌ ಬೇಹಳ್ಳಿ
* ಸಿ.ವಿ. ರಾಮನ್‌ ನಗರ (ಎಸ್‌ಸಿ): ಪಿ. ನಾಗೇಂದ್ರ
* ರಾಯಚೂರು : ನೂರ್‌ ಮಹಮದ್‌
* ಚಿಕ್ಕನಾಯಕನಹಳ್ಳಿ : ಜಿ. ಪ್ರಕಾಶ್‌
* ಸಿಂಧಗಿ : ಡಿ.ಎನ್‌. ಪಾಟೀಲ್‌
* ಕೃಷ್ಣರಾಜ(ಮೈಸೂರು) : ಎನ್‌.ಆರ್‌. ರಘು
* ಮಾಗಡಿ : ರಮೇಶ್‌ ಕೆ.ಚಿಕ್ಕಲ್ಯ
* ನಾಗಮಂಗಲ : ಜಿ.ಎಂ. ರಮೇಶ್‌
* ಚಿತ್ತಾಪುರ(ಎಸ್‌ಸಿ) : ರವಿ ಕಾಂಬ್ಳೆ
* ಸುರಪುರ : ರಾಮುನಾಯಕ್‌
* ಬೆಳಗಾವಿ : ಸಿದ್ದನಗೌಡ ಪಾಟೀಲ್‌
* ಹೊಳಲ್ಕೆರೆ(ಎಸ್‌ಸಿ) :ಶಶಿಧರ್‌
* ಹೊಳೆನರಸೀಪುರ : ಡಿ.ಎಚ್‌. ಸತೀಶ್‌
* ಬೆಂಗಳೂರು ದಕ್ಷಿಣ : ಸುಂದರಪ್ಪ
* ಸಿಂಧನೂರು : ಶಾಂತನಗೌಡ ಜಾಗೀರ್‌ದಾರ್‌
* ಚಿಕ್ಕಪೇಟೆ : ಸೈಯದ್‌ ಮಹಬೂಬ್‌
* ಸಕಲೇಶಪುರ(ಎಸ್‌ಸಿ) : ವೆಂಕಟೇಶ್‌
* ಶಿರಸಿ : ವಸಂತ ಗಣಪತಿ ಹೆಗಡೆ
* ಕನಕಗಿರಿ(ಎಸ್‌ಸಿ) : ಮೋತಿಲಾಲ್‌ ನಾಯಕ್‌
* ದೇವದುರ್ಗ(ಎಸ್‌ಟಿ) : ಚನ್ನಬಸಪ್ಪ
* ಪದ್ಮನಾಭನಗರ : ಜಿ. ಸಂತೋಷ
* ಶಿರಹಟ್ಟಿ(ಎಸ್‌ಸಿ) : ಬೆನಕಪ್ಪ ಪೂಜಾರಿ
* ಗದಗ :ಅಬ್ದುಲ್‌ ರೆಹಮಾನ್‌
* ಮಂಗಳೂರು :ಹರೀಶ್‌ ಆಳ್ವ
* ಹೊನ್ನಾಳಿ :ಅಭಯ್‌ ರಂಗನಾಥ್‌
* ನಂಜನಗೂಡು (ಎಸ್‌ಸಿ) :ಕೆ.ಸಿ. ಶಿವಾನಂದ್‌
* ಕಾಗವಾಡ : ರಾಜು ಅನ್ನಪ್ಪ ಪಾಟೀಲ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+