ಹಾವೇರಿ ಜಿಲ್ಲೆ ಅಧಿಕೃತ ಅಭ್ಯರ್ಥಿಗಳ ಪಟ್ಟಿ

ಬಿಜೆಪಿ ತೊರೆದವರನ್ನು ಟೀಕಿಸುತ್ತಾ ಬಸವರಾಜ ಬೊಮ್ಮಾಯಿ ಸಾರಥ್ಯದಲ್ಲಿ ಜಿಲ್ಲೆಯನ್ನು ಉಳಿಸಿಕೊಳ್ಳಲು ಬಿಜೆಪಿ ಹರ ಸಾಹಸ ಪಡಲಿದೆ. ಬಿಜೆಪಿ-ಕೆಜೆಪಿ ಕದನದ ನಡುವೆ ಲಾಭ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ. ಜಿಲ್ಲೆಯಲ್ಲಿ ಹಾನಗಲ್, ಶಿಗ್ಗಂವ್, ಹಾವೇರಿ, ಬ್ಯಾಡಗಿ, ಹಿರೇಕೆರೂರು, ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವೊಬ್ಬ ಪ್ರಮುಖ ಪಕ್ಷೇತರರು ಕಣಕ್ಕಿಳಿದಿಲ್ಲ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಬಿಜೆಪಿ-ಕೆಜೆಪಿ ಹಾಗೂ ಕಾಂಗ್ರೆಸ್ ಅಲ್ಲದೆ, ಜೆಡಿಎಸ್ ಹಾಗೂ ಬಿಎಸ್ ಆರ್ ಕಾಂಗ್ರೆಸ್ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಮೂಲಭೂತವಾಗಿ ಕಾಡುತ್ತಿರುವ ಒಳನಾಡು ರಸ್ತೆ ವ್ಯವಸ್ಥೆ, ಪ್ರಮುಖ ಯಾತ್ರಾ ಸ್ಥಳಗಳಲ್ಲಿ ವಸತಿ ವ್ಯವಸ್ಥೆ, ರೈತರೇ ಜಿಲ್ಲೆಯ ಆಧಾರವಾಗಿದ್ದರೂ ಸರಿಯಾದ ಸಿಗದ ಸೌಲಭ್ಯಗಳು, ವ್ಯಾಪರಕ್ಕೆ ದಾವಣಗೆರೆ, ಹುಬ್ಬಳ್ಳಿಗೆ ಹೋಗುವುದನ್ನು ತಪ್ಪಿಸಲು ರಾಜಕಾರಣಿಗಳು ಪಣ ತೊಟ್ಟಿದ್ದಾರಂತೆ. ಪ್ರಮುಖ ಕೈಗಾರಿಕಾ ನೆಲೆಯಾಗುವ ಎಲ್ಲಾ ಸಾಧ್ಯತೆಯಿದೆ ಇರುವ ಹಾವೇರಿಯ ಮೂಲ ಸೌಕರ್ಯ ಕೊರತೆ ಯಾರು ನೀಗಿಸಬಲ್ಲರೋ ಯಾರ ಬಾಯಿಗೆ ಮೆಣಸಿನ ಕಾಯಿ ಘಾಟು ತಗುಲುವುದೋ ಕಾದು ನೋಡಬೇಕಿದೆ.
2008 ರ ಫ್ಲ್ಯಾಶ್ ಬ್ಲಾಕ್ : ಉರಿ ಮೆಣಸಿನ ಕಾಯಿ ಹಾವೇರಿ ಜಿಲ್ಲಾ ದರ್ಶನ
ಬ್ಯಾಡಗಿ: ಪಾಟೀಲ್ ಸುರೇಶ್ ಗೌಡ ಬಸವಲಿಂಗಗೌಡ್ರ (ಬಿಜೆಪಿ) 1,20,443 ಮತಗಳು
ಹಾನಗಲ್: ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ (ಬಿಜೆಪಿ) 1,23,242 ಮತಗಳು
ಹಾವೇರಿ: ನೆಹರೂ ಓಲೇಕಾರ(ಬಿಜೆಪಿ) 1,13,543 ಮತಗಳು
ಹಿರೇಕೆರೂರು: ಬಿ.ಸಿ ಪಾಟೀಲ್ (ಕಾಂಗ್ರೆಸ್, 1,14,060 ಮತಗಳು
ರಾಣೇಬೆನ್ನೂರು: ಜಿ. ಶಿವಣ್ಣ (ಬಿಜೆಪಿ) 1,25,603 ಮತಗಳು
ಶಿಗ್ಗಾಂವ್ : ಬಸವರಾಜ ಬೊಮ್ಮಾಯಿ (ಬಿಜೆಪಿ) 1,23,229 ಮತಗಳು
2014 ರ ಕರ್ನಾಟಕ ವಿಧಾನಸಭಾ ಚುನಾವಣೆ ಹಾವೇರಿ ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ /ಪಕ್ಷೇತರರು/ಇತರೆ |
| 82 | ಹಾನಗಲ್ | ಬಸವರಾಜ್ ವೀರಪ್ಪ ಹಾದಿಮನಿ | ಮನೋಹರ್ ತಹಸೀಲ್ದಾರ್ | ಬಿ.ಕೆ ಮೋಹನ್ ಕುಮಾರ್ | ಸಿ.ಎಂ. ಉದಾಸಿ | ಸೋಮಶೇಖರ ಎಂ. ಕೋತಂಬ್ರಿ (ಬಿಎಸ್ ಆರ್ಸಿ) + 10 |
| 83 | ಶಿಗ್ಗಾಂವ್ | ಬಸವರಾಜ್ ಬೊಮ್ಮಾಯಿ | ಸೈಯದ್ ಅಜ್ಜಂಪೀರ್ ಖಾದ್ರಿ | ಡಾ.ಸುಮಂಗಲ ಕಡಪ ಮೈಸೂರು | ಬಾಪೂಗೌಡ ಕಾಶೀನಾಥ್ ಪಾಟೀಲ್ | +11 |
| 84 | ಹಾವೇರಿ (ಎಸ್ ಸಿ) | ಡಾ. ಮಲ್ಲೇಶಪ್ಪ ಹರಿಜನ್ | ರುದ್ರಪ್ಪ ಮಾನಪ್ಪ ಲಮಾಣಿ | ಪರಮೇಶ್ವರಪ್ಪ ಮೇಗಳಮನಿ | ನೆಹರೂ ಓಲೇಕಾರ್ | ಬಜಂತ್ರಿ(ಬಿಎಸ್ ಆರ್ಸಿ) + 10 |
| 85 | ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ | ಬಸವರಾಜ್ ಶಿವಣ್ಣನವರ್ | ಚಂದ್ರಪ್ಪ ಕಾರಗಿ | ಶಿವರಾಜ್ ಸಜ್ಜನ್ | ದಾದಪೀರ |
| 86 | ಹಿರೇಕೆರೂರು | ಪಾಲಾಕ್ಷಗೌಡ ಪಾಟೀಲ್ | ಬಿ.ಸಿ ಪಾಟೀಲ್ | ಡಿ.ಎಂ ಸಾಲಿ | ಯು.ಬಿ ಬಣಕಾರ್ | ಎಚ್.ಎಂ ಅಶೋಕ |
| 87 | ರಾಣೆಬೆನ್ನೂರು | ಅರುಣ್ ಕುಮಾರ್ ಪೂಜಾರ್ | ಕೆ.ಬಿ ಕೋಳಿವಾಡ | ಮಂಜುನಾಥ್ ಶಿವಣ್ಣವರ | ಜಿ. ಶಿವಣ್ಣ | ಕೊಟ್ಟಪ್ಪ ಕೋರಿ |












Click it and Unblock the Notifications