ಬಿಜೆಪಿ ಅಂತಿಮ ಪಟ್ಟಿ : ಕಟ್ಟಾ, ಸಂಪಗಿಗೆ ಟಿಕೆಟ್ ಇಲ್ಲ

ಜೈಲು ಶಿಕ್ಷೆ ಅನುಭವಿಸಿ ಬಂದ ಕೆಜಿಎಫ್ ಶಾಸಕ ವೈ. ಸಂಪಂಗಿ, ಮಾಲೂರು ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಮತ್ತು ಹೆಬ್ಬಾಳ ಶಾಸಕ ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಟಿಕೆಟ್ ನೀಡಿಲ್ಲ. ಮೊದಲ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಸಹ ಮಾಡಿ ಅಂತಿಮ ಪಟ್ಟಿ ಸಿದ್ಧಗೊಳಸಿಸಲಾಗಿದೆ.
ಕೆಜಿಎಫ್ ಕ್ಷೇತ್ರದಲ್ಲಿ ಶಾಸಕ ಸಂಪಂಗಿ ಅವರ ತಾಯಿ ವೈ. ರಾಮಕ್ಕ, ಹೆಬ್ಬಾಳ ಕ್ಷೇತ್ರದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ಜಗದೀಶ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಾಲೂರು ಕ್ಷೇತ್ರದಲ್ಲಿ ಪಕ್ಷೇತ್ರರಾಗಿ ಸ್ಪರ್ಧಿಸಿರುವ ಕೃಷ್ಣಯ್ಯ ಶೆಟ್ಟಿ ವಿರುದ್ಧ ಡಿ.ವಿ. ವೆಂಕಟೇಶಗೌಡ ಅವರನ್ನು ಕಣಕ್ಕಿಳಿಸಲಾಗಿದೆ.
ಕಾರಜೋಳಗೆ ಮುಧೋಳ : ಹಿರಿಯ ಸಚಿವ ಗೋವಿಂದ ಎಂ. ಕಾರಜೋಳ ಅವರು ಮುಧೋಳ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ನಾಗಠಾಣಾ ಅಥವ ಮುಧೋಳ ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧಿಸುವುದು ಎಂದು ಅವರು ಗೊಂದಲ ಗೊಂಡಿದ್ದರು.
ನಾಗಠಾಣಾ ಕ್ಷೇತ್ರದಿಂದ ತಮ್ಮ ಪುತ್ರ ಗೋಪಾಲ ಕಾರಜೋಳ ಅವರಿಗೆ ಟಿಕೆಟ್ ದೊರಕಿಸುವ ಕಾರಜೋಳ ಪ್ರಯತ್ನ ವಿಫಲವಾಗಿದ್ದು, ಸಂಸದ ರಮೇಶ್ ಜಿಗಜಿಣಗಿ, ತಮ್ಮ ಸೋದರಳಿಯ ನಾಗೇಂದ್ರ ಮಾಯವಂಶಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ.
ಅಂತಿಮ ಅಭ್ಯರ್ಥಿಗಳ ಪಟ್ಟಿ ಹೀಗಿದೆ
ಮಳವಳ್ಳಿ - ಕುಮಾರಸ್ವಾಮಿ
ಕೆ.ಆರ್. ಪೇಟೆ - ವರದರಾಜೇಗೌಡ
ಹಾನಗಲ್ - ಬಸವರಾಜ ವೀರಪ್ಪ ಹಾದಿಮನಿ
ಕಲಘಟಗಿ - ವೀರೇಶ್ ಉರುಫ್ ಈರಪ್ಪ ಸಾಲಗಾರ್
ಯಮಕನಮರಡಿ - ಮಾರುತಿ ಮಲ್ಲಪ್ಪ ಅಸ್ಟಗಿ
ಮುಧೋಳ - ಗೋವಿಂದ ಎಂ. ಕಾರಜೋಳ
ನಾಗಠಾಣಾ- ನಾಗೇಂದ್ರ ಮಾಯವಂಶಿ
ಕಂಪ್ಲಿ - ಬಿ. ಶಿವಕುಮಾರ್
ದೇವನಹಳ್ಳಿ - ಜಿ. ಚಂದ್ರಣ್ಣ
ಕೆಜಿಎಫ್ - ವೈ. ರಾಮಕ್ಕ
ಮಾಲೂರು - ಡಿ.ವಿ. ವೆಂಕಟೇಶ್‌ಗೌಡ
ಹೆಬ್ಬಾಳ - ಜಗದೀಶ್ ಕುಮಾರ್
ಯಶವಂತಪುರ - ಎಚ್.ಎಲ್. ಕೃಷ್ಣಪ್ಪ
ಬಿಟಿಎಂ ಲೇಔಟ್ - ಎನ್. ಸುಧಾಕರ್
ಬದಲಾವಣೆಗಳು : ಕೆ.ಆರ್. ಪೇಟೆ ಕ್ಷೇತ್ರದಲ್ಲಿ ಶ್ರೀನಿವಾಸ್ ಬದಲು ವರದರಾಜೇಗೌಡ ಮತ್ತು ಮಳವಳ್ಳಿಯಲ್ಲಿ ಸೌಭಾಗ್ಯ ಮಹದೇವಯ್ಯ ಅವರ ಬದಲು ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದೆ.(ಎರಡನೇ ಪಟ್ಟಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications