ಕ್ಷೇತ್ರ ಪರಿಚಯ: ಕಡೂರು- ಎಂದಿಗೆ ಸಿಗುವುದು ನೀರಿನ ಸೆಲೆ

Posted By:
Subscribe to Oneindia Kannada

ಚಿಕ್ಕಮಗಳೂರು ಜಿಲ್ಲೆ ಈ ಮೊದಲು ಕಡೂರು ಜಿಲ್ಲೆಯಾಗಿ ಅರೆಮಲೆನಾಡು ಕ್ಷೇತ್ರವಾಗಿ ಉಳಿದುಕೊಂಡಿತ್ತು. ಕಡೂರು ವಿಧಾನಸಭಾ ಕ್ಷೇತ್ರ ಮೂಲ ಸೌಕರ್ಯ ಕೊರತೆ, ಮಳೆಯಿಲ್ಲದೆ ಬೆಳೆ ಹಾನಿ, ದೀಪದ ಕೆಳಗೆ ಕತ್ತಲು ಎಂಬಂತೆ ಹತ್ತಾರು ಕಿಲೋ ಮೀಟರ್ ದೂರದಲ್ಲಿ ಕಾಡು ಮೇಡು, ಜೀವ ಜಲ ಆಗರ ಹೊಂದಿದ್ದರೂ ಕುಡಿಯುವ ನೀರಿನ ಕೊರತೆಯನ್ನು ನಗರ ಪ್ರದೇಶ ಇಂದಿಗೂ ಅನುಭವಿಸುತ್ತಿದೆ.

ಕುರುಬರು, ಲಿಂಗಾಯತರಲ್ಲದೆ, ಮುಸ್ಲಿಮರು, ಉಪ್ಪಾರರು, ಅಲ್ಪಸಂಖ್ಯಾತರು ಈ ಕ್ಷೇತ್ರದಲ್ಲಿದ್ದಾರೆ. ಕಡೂರಿನ ಪಟ್ಟಣ ಪುರಸಭೆ ಜೆಡಿಎಸ್ ವಶದಲ್ಲಿದ್ದರೆ, ತಾಲೂಕು ಪಂಚಾಯಿತಿ ಮೇಲೆ ಕಾಂಗ್ರೆಸ್ ಪ್ರಭುತ್ವ ಹೊಂದಿದೆ.

ಕ್ಷೇತ್ರ ಪರಿಚಯ: ಚಿಕ್ಕಮಗಳೂರು- ನೈಸರ್ಗಿಕ ಸಿರಿ ಜಿಲ್ಲೆಯ ಬಡ ಕ್ಷೇತ್ರ

2010ರ ತನಕ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತವಲಯದ ಕೆ.ಎಂ ಕೃಷ್ಣಮೂರ್ತಿ ಅವರದ್ದೇ ಪಾರುಪತ್ಯವಾಗಿತ್ತು. ಕೆಎಂಕೆ ಅವರ ನಿಧನದ ನಂತರ ಬಿಜೆಪಿಯ ವಿಶ್ವನಾಥ್ ವೈ.ಸಿ ಗೆಲುವು ಸಾಧಿಸಿದರೂ 2013ರ ನಂತರ ಜೆಡಿಎಸ್ ನ ವೈ ಎಸ್ ವಿ ದತ್ತಾ ಅವರು ಇಲ್ಲಿನ ಜನನಾಯಕರಾಗಿಬಿಟ್ಟರು. ಆದರೆ, 2014ರ ಲೋಕಸಭೆ ಚುನಾವಣೆ ನಂತರ ಚಿತ್ರಣ ಬದಲಾಗಿದ್ದು, ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಹೆಚ್ಚಿದೆ.

Karnataka Assembly Election 2018: Kadur Constituency Profile

ಜೆಡಿಎಸ್ ನಿಂದ ದೇವೇಗೌಡರ ಮಾನಸ ಪುತ್ರ ದತ್ತಾ ಅವರು ಸ್ಪರ್ಧಿಸುವುದು ಖಚಿತ. ಕಾಂಗ್ರೆಸ್ ನಿಂದ ಕೆ.ಬಿ ಮಲ್ಲಿಕಾರ್ಜುನ ಅವರು ಟಿಕೆಟ್ ಪಡೆಯಬಹುದು. ಬಿಜೆಪಿಯಲ್ಲಿ ಮಾತ್ರ ಅಭ್ಯರ್ಥಿ ಆಯ್ಕೆ ತಲೆ ನೋವಾಗಿದೆ. ಬೆಳ್ಳಿ ಪ್ರಕಾಶ್ ಹಾಗೂ ರೇಖಾ ಹುಲಿಯಪ್ಪ ಗೌಡ ಅವರು ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದಾರೆ. ಈಶ್ವರಪ್ಪ ಅವರ ಕಡೆ ಅಭ್ಯರ್ಥಿಯಾಗಿ ರೇಖಾ ಅವರಿಗೆ ಟಿಕೆಟ್ ನೀಡಿ ಕುರುಬ, ಅಹಿಂದ ಮತ ಸೆಳೆಯಲು ಬಿಜೆಪಿ ತಂತ್ರ ರೂಪಿಸಬಹುದು. ಮಹಿಳೆಗೆ ಟಿಕೆಟ್ ನೀಡಿದ್ದೇವೆ ಎಂದು ಬಿಜೆಪಿ ಬೀಗಬಹುದಾದರೂ ಜಾತ್ಯಾತೀತ ದತ್ತಾ ಅವರ ವಿರುದ್ಧ ಗೆಲುವು ಸುಲಭದ ಮಾತಲ್ಲ.

ವ್ಯಕ್ತಿಚಿತ್ರ: ಸಂಸದೀಯ ಪಟು, ಜೆಡಿಎಸ್ ಕಟ್ಚಾಳು ! ವೈಎಸ್ವಿ ದತ್ತ

ಸಮಸ್ಯೆ ಇನ್ನೂ ಬಗೆಹರಿದಿಲ್ಲ: ನೀರಾವರಿ ಹಾಗೂ ವಿದ್ಯುತ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಲಕ್ಕವಳ್ಳಿಯಿಂದ ನೀರು ಹರಿಸುವ ಯೋಜನೆ ಅನುಷ್ಠಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ವೇದಾವತಿ ನದಿ ನೀರು ಏನಕ್ಕೂ ಸಾಲುತ್ತಿಲ್ಲ. ಸಖರಾಯಪಟ್ಟಣದ ಅಯ್ಯನ ಕೆರೆ ಚಿತ್ರೀಕರಣಕ್ಕೆ ಸೀಮಿತವಾಗಿದೆ. ಕಡೂರಿನ ಸುತ್ತಮುತ್ತ ನೀರಿನ ಸೆಲೆ ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಭತ್ತ, ರಾಗಿ, ಜೋಳ, ಗೋಧಿ ಬೆಳೆಗಳಲ್ಲದೆ, ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಕಿತ್ತಳೆ ಬೆಳೆಗೆ ನೀರು ಒದಗಿಸಬಲ್ಲ ಅಭ್ಯರ್ಥಿಗೆ ಇಲ್ಲಿ ಗೆಲುವು ನಿಶ್ಚಿತ.

ತರೀಕೆರೆ ವಿಧಾನಸಭಾ ಕ್ಷೇತ್ರದ ಪರಿಚಯ

ಕಡೂರಿನಿಂದ -ಸಕಲೇಶಪುರ ರೈಲು ಮಾರ್ಗ ಸಂಪರ್ಕ ಒದಗಿಸುವ ಕನಸು ಉಭಯ ಜಿಲ್ಲೆಗಳ ಸಂಸದ (ಶೋಭಾ ಕರಂದ್ಲಾಜೆ ಹಾಗೂ ದೇವೇಗೌಡ) ರಿಂದ ಸಾಧ್ಯವಾಗುವುದಾ ಎಂದು ಇಲ್ಲಿನ ಜನತೆ ಕಾದು ನೋಡುತ್ತಿದ್ದಾರೆ. ಕಡೂರು-ಮಂಗಳೂರು ರಸ್ತೆ, ಬೆಂಗಳೂರು- ಹೊನ್ನಾವರ ರಸ್ತೆಗಳು ಪ್ರಮುಖ ಹೆದ್ದಾರಿಗಳಾಗಿವೆ. ಕಡೂರು ಕ್ಷೇತ್ರದ ಸಣ್ಣಪುಟ್ಟದಾರಿಗಳ ಅಭಿವೃದ್ಧಿಯಾಗಿಲ್ಲ.

ಪ್ರವಾಸಿ ತಾಣಗಳ ಬಗ್ಗೆ ನಿರ್ಲಕ್ಷ್ಯ: ರಾಮಾಯಣ ಕಾಲದ್ದು ಎನ್ನುವ ಐತಿಹ್ಯವಿರುವ ಕುಂತಿಹೊಳೆ, ಶಂಖತೀರ್ಥ, ಚಾಲುಕ್ಯರ ಕಾಲದ ಬಿಸಿಲೇಹಳಿ, ಜೈಮಿನಿ ಭಾರತ ಬರೆದ ಲಕ್ಷ್ಮೀಶನ ದೇವನೂರು, ನಿರ್ವಾಣಸ್ವಾಮಿ ಗುಡ್ಡ ಪ್ರವಾಸಿ ತಾಣಗಳಿದ್ದು, ಅಭಿವೃದ್ಧಿ ಕಾಣದೆ ಸೊರಗಿವೆ.

ಮಲ್ಲೇಶ್ವರದಮ್ಮ, ದಂಡಿಗೆಕಲ್ಲು ರಂಗನಾಥಸ್ವಾಮಿ, ಕನಕರಾಯನ ಗುಡ್ಡ ವೆಂಕಟೇಶ್ವರ, ಹುರುಕನಹಳ್ಳಿ ಹಾಗೂ ಯಗಟಿ ಮಲ್ಲಿಕಾರ್ಜುನ, ಸಿಂಗಟಗೆರೆ ಕಲ್ಲೇಶ್ವರ ದೇಗುಲಗಳು ಸಾಕಷ್ಟು ಭಕ್ತರನ್ನು ಸೆಳೆದರೂ ಮೂಲ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018: Read all about Kadur assembly constituency of Chikkamagaluru district. Get election news from Kadur. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ