ಕ್ಷೇತ್ರ ಪರಿಚಯ : ಯಲಹಂಕದಲ್ಲಿ ವಿಶ್ವನಾಥ್ ಕಟ್ಟಿ ಹಾಕುವವರು ಯಾರು?

Posted By: Gururaj
Subscribe to Oneindia Kannada

ಬೆಂಗಳೂರು ನಗರದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಯಲಹಂಕ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಒಡಲಲ್ಲಿ ಹೊಂದಿರುವ ಕ್ಷೇತ್ರವಿದು. ಇಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ರಿಯಲ್ ಎಸ್ಟೇಟ್ ಉದ್ಯಮ ಸದಾ ಸಕ್ರಿಯ.

ಹತ್ತಾರು ಉದ್ಯಮಗಳು, ಹಲವಾರು ವಿದೇಶಿ ಕಂಪನಿಗಳು ಯಲಹಂಕದಲ್ಲಿವೆ. ವಿಮಾನ ನಿಲ್ದಾಣಕ್ಕೆ ಸಾಗುವ ರಸ್ತೆ ಒಡಲಿಲ್ಲಿ ಹೊಂದಿರುವುದರಿಂದ ವಾಹನಗಳ ಸಂಚಾರ ನಿರಂತರವಾಗಿರುತ್ತದೆ. ಶ್ರಮಿಕರು, ವ್ಯಾಪಾರಿಗಳು, ಮೇಲ್ವರ್ಗದವರು ಎಲ್ಲಾ ವಾಸಿಸುವ ಕ್ಷೇತ್ರವಿದು.

ಬೆಂಗಳೂರಿನ ಪುರಾತನ ಬಡಾವಣೆ ಚಿಕ್ಕಪೇಟೆ ಪರಿಚಯ

ವಾರ್ಡ್‌ಗಳು : ಬೆಂಗಳೂರು ಉತ್ತರದ ತುತ್ತ ತುದಿಯಲ್ಲಿದೆ ಯಲಹಂಕ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕೆಂಪೇಗೌಡ, ಚೌಡೇಶ್ವರಿ, ಅಟ್ಟೂರು, ಯಲಹಂಕ ಸ್ಯಾಟಲೈಟ್ ಟೌನ್ ವಾರ್ಡ್‌ ಸೇರಿ 4 ವಾರ್ಡ್‌ಗಳನ್ನು ಮಾತ್ರ ಕ್ಷೇತ್ರ ಒಳಗೊಂಡಿದೆ.

Karnataka assembly election 2018 : Yelahanka constituency profile

ರಾಜಕೀಯವಾಗಿ ಯಲಹಂಕ ಬಿಜೆಪಿಯ ವಶದಲ್ಲಿದೆ 2008, 2013ರ ಚುನಾವಣೆಯಲ್ಲಿ ಬಿಜೆಪಿಯ ಎಸ್.ಆರ್.ವಿಶ್ವನಾಥ್ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ.

ರಾಜರಾಜೇಶ್ವರಿ ನಗರ : ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಪರಿಚಯ

ಲೋಕಸಭೆ ಚುನಾವಣೆಯಲ್ಲಿ ಯಲಹಂಕ ಚಿಕ್ಕಬಳ್ಳಾಪುರ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಈ ಬಾರಿಯ ಕ್ಷೇತ್ರದ ಚುನಾವಣೆ ಕದನ ಕುತೂಹಲ ಮೂಡಿಸಿದೆ. ಬಿಜೆಪಿ ಈಗಾಗಲೇ ಹಾಲಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು 2018ರ ಚುನಾವಣೆ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

2013ರ ಚುನಾವಣೆಯಲ್ಲಿ ಎಸ್.ಆರ್.ವಿಶ್ವನಾಥ್ 75,507 ಮತಗಳನ್ನು ಪಡೆದು ಜಯಗಳಿಸಿದ್ದರು. ಜೆಡಿಎಸ್‌ನ ಬಿ.ಚಂದ್ರಪ್ಪ 57,110 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಎಂ.ಎನ್.ಗೋಪಾಲಕೃಷ್ಣ ಅವರು 52,372 ಮತ ಪಡೆದಿದ್ದರು.

ವಿಶ್ವನಾಥ್ ಅವರ ಗೆಲುವಿನ ನಾಗಲೋಟಕ್ಕೆ ತಡೆ ಹಾಕುವವರು ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018 : Read all about Yelahanka assembly constituency of Bengaluru. Get election news from Yelahanka. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ