ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರ ಮುಡಿಗೇರಲಿದೆ ಶಿರಹಟ್ಟಿಯ ಕಿರೀಟ?

|
Google Oneindia Kannada News

ಇತಿಹಾಸದಲ್ಲಿ ಶರಹಪೂರ ಎಂದು ದಾಖಲಾಗಿರುವ ಶಿರಹಟ್ಟಿ ಹಲವು ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಗದಗ ಜಿಲ್ಲೆಯ ಪ್ರಮುಖ ತಾಲೂಕುಗಳಲ್ಲೊಂದಾದ ಶಿರಹಟ್ಟಿಯಲ್ಲಿರುವ ಜಗದ್ಗುರು ಫಕೀರೇಶ್ವರ ಮಠ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಹಿಂದು ಮತ್ತು ಮುಸ್ಲಿಮರೂ ತಮ್ಮ ಇಷ್ಟಾರ್ಥ ಪೂರೈಕೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ.

ಖ್ಯಾತ ಹಳಗನ್ನಡ ಕವಿ ಆದಯ್ಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು. ಇಲ್ಲಿಯ ಸೋಮನಾಥ ದೇವಸ್ಥಾನ ಹೆಸರುವಾಸಿ.ಆಗಿನ ಪುಲಿಗೆರೆಯೇ ಈಗಿನ ಲಕ್ಷ್ಮೇಶ್ವರ.

ಗದುಗಿನ ಗದ್ದುಗೆಗೆ ಯಾರಾಗಲಿದ್ದಾರೆ ವಾರಸುದಾರ?ಗದುಗಿನ ಗದ್ದುಗೆಗೆ ಯಾರಾಗಲಿದ್ದಾರೆ ವಾರಸುದಾರ?

ಬರಿಯ ಮಠಗಳು ದೇವಾಲಯಗಳು ಅಲ್ಲದೆ ಕಣ್ಣಿಗೆ ತಂಪನ್ನೀವ ಮಾಗಡಿ ಕೆರೆ-ಪಕ್ಷಿವಲಸೆಧಾಮ ಶಿರಹಟ್ಟಿಯಿಂದ 8 ಕಿ.ಮೀ ದೂರದಲ್ಲಿದೆ.

Karnataka Assembly Election 2018: Shirahatti Constituency Profile

ಶಿರಹಟ್ಟಿ ಕ್ಷೇತ್ರದ ಜನಸಂಖ್ಯೆ 16500. ಇಲ್ಲಿನ ಆಡುಭಾಷೆ ಉತ್ತರ ಕರ್ನಾಟಕ ಶೈಲಿಯ ಕನ್ನಡ.

ಇನ್ನು ಇಲ್ಲಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಯೋಚಿಸಿದರೆ, ಶಿರಹಟ್ಟಿಯಲ್ಲಿ ಬಹುಸಂಖ್ಯಾತ ಲಂಬಾಣಿ ಮತ್ತು ಲಿಂಗಾಯತರು ಬಿಜೆಪಿ ಕಡೆ ವಾಲುವುದು ನಿಚ್ಚಳವಾಗಿದೆ. ಮೀಸಲು ಕ್ಷೇತ್ರದಲ್ಲಿ ಈ ಸಾರಿಯೂ ರಾಮಣ್ಣ ಲಮಾಣಿಯವರಿಗೆ ಟಿಕೆಟ್ ಕೊಟ್ಟರೆ ಬಿಜೆಪಿ ಈ ಕ್ಷೇತ್ರವನ್ನು ಕಾಂಗ್ರೆಸ್ ನಿಂದ ಸೆಳೆಯುವುದು ಸುಲಭ. 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ, ಕೇವಲ 315 ಮತಗಳ ಅಂತರದಿಂದ ಬಿಜೆಪಿ ವಿರುದ್ಧ ಗೆಲುವು ಸಾಧಿಸಿದರು.

ರಾಮಕೃಷ್ಣ ಸಿದ್ದಲಿಂಗಪ್ಪ ಪಡೆದ ಮತಗಳು 44738, ರಾಮಣ್ಣ ಲಮಾಣಿ ಪಡೆದ ಮತಗಳು 44423

English summary
Karnataka Assembly Election 2018: Read all about Shirahatti assembly constituency of Gadag district. Get election news from Shirahatti . Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X