ಕ್ಷೇತ್ರ ಪರಿಚಯ : ರಾಣೆಬೆನ್ನೂರಿನಲ್ಲಿ ಗೆಲುವಿನ ಸಿಹಿ ಯಾರಿಗೆ?

ಬೆಂಗಳೂರು ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಕ್ಷೇತ್ರ ಹಾವೇರಿ ಜಿಲ್ಲೆಯ ರಾಣೆಬೆನ್ನೂರು. ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಕ್ಷೇತ್ರ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಹುಬ್ಬಳ್ಳಿ ಹತ್ತಿರದಲ್ಲಿದ್ದು, ವಿಮಾನ ಸಂಪರ್ಕವೂ ಇದೆ.

ಉತ್ತರ ಕರ್ನಾಟಕ ಮತ್ತು ಬೆಂಗಳೂರು ನಡುವೆ ಸಂಚಾರ ನಡೆಸುವ ಎಲ್ಲಾ ಕೆಎಸ್ಆರ್‌ಟಿಸಿ ಬಸ್ಸುಗಳು ರಾಣೆಬೆನ್ನೂರು ಮೂಲಕ ಸಾಗುತ್ತವೆ. 2011ರ ಜನಗಣತಿ ಪ್ರಕಾರ ಕ್ಷೇತ್ರದ ಜನಸಂಖ್ಯೆ 106,365.

ಕ್ಷೇತ್ರದ ಜನರು ಹೆಚ್ಚಾಗಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹತ್ತಿ ಮತ್ತು ಜೋಳವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ತೆಂಗು, ಬದನೆಕಾಯಿ, ಟೊಮೆಟೋವನ್ನು ಹಲವು ಪ್ರದೇಶದಲ್ಲಿ ಬೆಳೆಯುತ್ತಾರೆ.

 Karnataka Assembly Election 2018 : Ranebennur constituency profile

ಎಣ್ಣೆಕಾಳುಗಳ ಬೀಜಗಳ ಉತ್ಪಾದನೆಗೂ ರಾಣೆಬೆನ್ನೂರು ಪ್ರಸಿದ್ಧಿ ಪಡೆದಿದೆ. ಹತ್ತಿ, ಮೆಣಸಿನಕಾಯಿ ಮುಂತಾದ ಬೀಜಗಳಿಗೆ ಇದು ಪ್ರಮಖ ಮಾರುಕಟ್ಟೆಯಾಗಿದೆ. ಹಲವಾರು ಬೀಜದ ಕಂಪನಿಗಳು ಇಲ್ಲಿ ಕಚೇರಿ ತೆರೆದಿವೆ.

ರಾಜಕೀಯವಾಗಿ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ತವರು ಕ್ಷೇತ್ರ ರಾಣೆಬೆನ್ನೂರು. ಸಚಿವರಾಗಲು ಕೋಳಿವಾಡ ಅವರು ಸತತ ಪ್ರಯತ್ನ ನಡೆಸಿದ್ದರು, ಕೊನೆಗೆ ಸ್ಪೀಕರ್ ಸ್ಥಾನ ಸಿಕ್ಕಿತು.

2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆರ್.ಶಂಕರ್‌ ಅವರನ್ನು ಸುಮಾರು 6 ಸಾವಿರ ಮತಗಳ ಅಂತರದಿಂದ ಸೋಲಿಸಿ ಕೋಳಿವಾಡ ಅವರು ಗೆಲುವು ಸಾಧಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಮತ ವಿಭಜನೆಯಿಂದಾಗಿ ಕೋಳಿವಾಡ ಅವರು ಜಯಗಳಿಸಿದ್ದರು. ಕೆಜೆಪಿಯಿಂದ ಸ್ಪರ್ಧಿಸಿದ್ದ ಜಿ.ಶಿವಣ್ಣ, ಬಿಜೆಪಿಯಿಂದ ಸ್ಪರ್ಧಿಸಿದ್ದ ಅರುಣ್ ಕುಮಾರ್ ಗುಟ್ಟೂರ್ ಸೋಲು ಅನುಭವಿಸಿದ್ದರು.

ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಅವರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಯಡಿಯೂರಪ್ಪ ಆಪ್ತರಾದ ಸಿ.ಎಂ.ಉದಾಸಿ ಕ್ಷೇತ್ರದಲ್ಲಿ ತಮ್ಮ ಮಗಳಿಗೆ ಟಿಕೆಟ್ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.

2013ರ ಚುನಾವಣೆಯಲ್ಲಿ ಕೆ.ಬಿ.ಕೋಳಿವಾಡ ಅವರು 53,780 ಮತಗಳನ್ನು ಪಡೆದಿದ್ದರು. ಬಿಜೆಪಿಯ ಅರುಣ್ ಕುಮಾರ್ ಪೂಜಾರ್ 9,476, ಜೆಡಿಎಸ್‌ನ ಮಂಜುನಾಥ್ ಅವರು 14,146 ಮತಗಳನ್ನು ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+