ನಾಗಮಂಗಲ ಕ್ಷೇತ್ರ : ಜೆಡಿಎಸ್ ವಿರುದ್ಧ ಜೆಡಿಎಸ್ ರೆಬೆಲ್
ಮಂಡ್ಯ ಜಿಲ್ಲೆಯ ಅತ್ಯಂತ ದೊಡ್ಡ ತಾಲೂಕು ಕೇಂದ್ರವಾಗಿರುವ ನಾಗಮಂಗಲದ ಮೇಲೆ ಹಾಸನ, ಮೈಸೂರು ಜಿಲ್ಲೆ ಪ್ರಭಾವ ಹೆಚ್ಚಾಗಿದೆ. ಬಯಲು, ಬೆಟ್ಟಗುಡ್ಡ ಪ್ರದೇಶ ಹೊಂದಿರುವ ಕ್ಷೇತ್ರದಲ್ಲಿ ಶಿಂಷಾ,ಲೋಕಪಾವನಿ ನದಿಗಳು ಹರಿಯುತ್ತಿವೆ.
ರಾಗಿ, ಜೋಳ, ಹುರುಳಿ, ತೊಗರಿ ಬೆಳೆಗಳಿಗೆ ಎರಡು ನದಿಗಳಲ್ಲದೆ ಕೆರೆಗಳು ಆಸರೆಯಾಗಿವೆ. ಇದಲ್ಲದೆ, ತೆಂಗು, ಕಬ್ಬು, ಬಾಳೆ, ಮೆಣಸಿನಕಾಯಿ, ತರಕಾರಿ ಕೂಡಾ ಬೆಳೆಯಲಾಗುತ್ತದೆ. ಹೈನುಗಾರಿಕೆ, ಕುರಿ ಸಾಕಾಣಿಕೆ ಕೂಡಾ ಹೆಚ್ಚಾಗಿದೆ.
ತಾಲೂಕು ಕೇಂದ್ರದಲ್ಲಿ ಹೊಯ್ಸಳರ ಕಾಲದ ದೇಗುಲಗಳು, ಆದಿ ಚುಂಚನಗಿರಿ ಕ್ಷೇತ್ರ, ಗಂಗರ ಕಾಲದ ಕಂಬದಹಳ್ಳಿ, ದ್ರಾವಿಡ ಶೈಲಿಯ ಬಸದಿ ಹೀಗೆ, ಗುಡಿ, ದೇಗುಲಗಳಿಂದ ತಾಲೂಕು ತುಂಬಿಕೊಂಡಿದೆ.
ಆದರೆ, ಯಾವುದಕ್ಕೂ ಹೆಚ್ಚಿನ ಪ್ರವಾಸೋದ್ಯಮ ದೃಷ್ಟಿಯಿಂದ ಪ್ರಾಮುಖ್ಯತೆ ಸಿಕ್ಕಿಲ್ಲ. ರಸ್ತೆ ಸಂಪರ್ಕ ತಕ್ಕಮಟ್ಟಿಗೆ ಸುಧಾರಿಸಿದೆ. ಆದರೆ, ರೈತರ ಶ್ರಮಕ್ಕೆ ತಕ್ಕಂತೆ ಫಲ ಸಿಗುತ್ತಿಲ್ಲ ಎಂಬ ಕೊರಗು ಕ್ಷೇತ್ರದ ಜನತೆಯಲ್ಲಿದೆ.

ಮಂಡ್ಯ ಜಿಲ್ಲೆಯ ಅತ್ಯಂತ ದೊಡ್ಡ ತಾಲೂಕು ಕೇಂದ್ರ
ಮಂಡ್ಯ ಜಿಲ್ಲೆಯ ಅತ್ಯಂತ ದೊಡ್ಡ ತಾಲೂಕು ಕೇಂದ್ರವಾಗಿರುವ ನಾಗಮಂಗಲದ ಮೇಲೆ ಹಾಸನ, ಮೈಸೂರು ಜಿಲ್ಲೆ ಪ್ರಭಾವ ಹೆಚ್ಚಾಗಿದೆ. ಬಯಲು, ಬೆಟ್ಟಗುಡ್ಡ ಪ್ರದೇಶ ಹೊಂದಿರುವ ಕ್ಷೇತ್ರದಲ್ಲಿ ಶಿಂಷಾ,ಲೋಕಪಾವನಿ ನದಿಗಳು ಹರಿಯುತ್ತಿವೆ.
ರಾಗಿ, ಜೋಳ, ಹುರುಳಿ, ತೊಗರಿ ಬೆಳೆಗಳಿಗೆ ಎರಡು ನದಿಗಳಲ್ಲದೆ ಕೆರೆಗಳು ಆಸರೆಯಾಗಿವೆ. ಇದಲ್ಲದೆ, ತೆಂಗು, ಕಬ್ಬು, ಬಾಳೆ, ಮೆಣಸಿನಕಾಯಿ, ತರಕಾರಿ ಕೂಡಾ ಬೆಳೆಯಲಾಗುತ್ತದೆ. ಹೈನುಗಾರಿಕೆ, ಕುರಿ ಸಾಕಾಣಿಕೆ ಕೂಡಾ ಹೆಚ್ಚಾಗಿದೆ.

ಚುನಾವಣೆಯಲ್ಲಿ ಗೆದ್ದಿದ್ದು ಚೆಲುವರಾಯ ಸ್ವಾಮಿ
ಈ ಕ್ಷೇತ್ರದಲ್ಲಿ ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದು ಚೆಲುವರಾಯ ಸ್ವಾಮಿ. ಜೆಡಿಎಸ್ ಮೂಲಕ ಜಯ ಸಾಧಿಸಿದ್ದ ಅವರು ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಂತರ ಕಾಂಗ್ರೆಸ್ ಬಲದಿಂದ ಕಣಕ್ಕಿಳಿಯುತ್ತಿದ್ದಾರೆ.
ಇದೇ ರೀತಿ ಜೆಡಿಎಸ್ ನಿಂದ ಬಂಡಾಯವೆದ್ದಿರುವ ಜಮೀರ್ ಅಹ್ಮದ್ ಸೇರಿದಂತೆ ಉಳಿದ 6 ಮಂದಿ ಜತೆಗೂಡಿ ಅವರೀಗ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಇವರಲ್ಲಿ ಯಾರಿಗೂ ತಮ್ಮ ಕ್ಷೇತ್ರಗಳಲ್ಲಿ ಜೆಡಿಎಸ್ ಆಶ್ರಯವಿಲ್ಲದೆ, ಸ್ವಂತ ವರ್ಚಸ್ಸಿನಿಂದ ಗೆಲುವು ಸಾಧಿಸುವುದು ಸಾಧ್ಯವಿಲ್ಲ ಎಂದು ಜೆಡಿಎಸ್ ನಾಯಕ ದೇವೇಗೌಡರೇ ಹೇಳಿದ್ದಾರೆ. ಹಾಗಾಗಿ, ಈ ಬಾರಿಯ ಚುನಾವಣೆಯು ಚೆಲುವರಾಯ ಸ್ವಾಮಿಗೂ, ಜೆಡಿಎಸ್ ಗೂ ಸವಾಲು.
ಕಳೆದ ಬಾರಿ ಸೋಲು ಕಂಡಿದ್ದ ಸುರೇಶ್ ಗೌಡ ಅವರು ಈ ಬಾರಿ ಜೆಡಿಎಸ್ ನಿಂದ ಸ್ಪರ್ಧಿಸುತ್ತಿದ್ದು, ಪೈಪೋಟಿ ಜೋರಾಗಿದೆ.

ನಾಗಮಂಗಲ ಕ್ಷೇತ್ರದ ಮತದಾರರು
ಮಂಡ್ಯ ಜಿಲ್ಲೆ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.
ಏಳು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 14,61,031 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದಾರೆ. ನಾಗಮಂಗಲದಲ್ಲಿ ಒಟ್ಟು 2,03,209 (1,02,776 ಪುರುಷ, 1,00,433 ಮಹಿಳೆ) ಮತದಾರರಿದ್ದಾರೆ.

2013ರ ಫಲಿತಾಂಶ
2013ರಲ್ಲಿ ಒಟ್ಟು 14 ಮಂದಿ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 3 ಮಂದಿ ನಾಮಪತ್ರ ಹಿಂಪಡೆದರು. 11 ಮಂದಿ ಸ್ಪರ್ಧಿಗಳ ಪೈಕಿ 9 ಮಂದಿ ಠೇವಣಿ ಕಳೆದುಕೊಂಡರು.
ಒಟ್ಟು ಶೇ 81.64ರಷ್ಟು ಮತದಾನವಾಗಿತ್ತು. 163624 ಮತಗಳ ಪೈಕಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎನ್ ಚೆಲುವರಾಯಸ್ವಾಮಿ (ಸ್ವಾಮಿ ಗೌಡ) ಅವರು 89203 ಮತಗಳನ್ನು ಗಳಿಸಿ ಜಯ ದಾಖಲಿಸಿದ್ದರು. ಕಾಂಗ್ರೆಸ್ಸಿನ ಸುರೇಶ್ ಗೌಡ ಅವರು 68840 ಮತಗಳಿಸಿ ಸೋಲು ಕಂಡಿದ್ದರು. 20363 ಮತಗಳ (ಶೇ 12.44) ಅಂತರದಿಂದ ಚಲುವರಾಯಸ್ವಾಮಿ ಗೆಲುವಿನ ನಗೆ ಬೀರಿದ್ದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications