ಕಾಗವಾಡ ಕ್ಷೇತ್ರ ಪರಿಚಯ: ವಲಸಿಗರದ್ದೇ ಇಲ್ಲಿ ದರ್ಬಾರು!
ಬೆಳಗಾವಿ ಜಿಲ್ಲೆ ಕಾಗವಾಡ ಕ್ಷೇತ್ರದಲ್ಲಿ ವಲಸಿಗರದ್ದೇ ಮೊದಲಿನಿಂದಲೂ ದರ್ಬಾರು. ಜನತಾದಳದಲ್ಲಿದ್ದು ಬಿಜೆಪಿಗೆ ಬಂದಿರುವ ಕಾಗೆ ಅವರು ನಾಲ್ಕನೆ ಬಾರಿಗೆ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.
2000ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ರಾಜು ಕಾಗೆ ಅವರು ಕಾಂಗ್ರೆಸ್ಸಿನ ವಿಜಯಾ ಪಾಸಗೌಡ ವಿರುದ್ಧ 1019 ಮತಗಳಿಂದ ಅಚ್ಚರಿಯ ಜಯ ದಾಖಲಿಸಿದ್ದರು. 2004ರಲ್ಲಿ ಕಾಂಗ್ರೆಸ್ಸಿನ ಕಿರಣ್ ಕುಮಾರ್ ಪಾಟೀಲ್ ವಿರುದ್ಧ 9895 ಮತಗಳ ಅಂತರದಿಂದ ಜಯ ಗಳಿಸಿದ್ದರು. 2008ರಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಪವಾರ್ ದೇಸಾಯಿ ಅವರನ್ನು 8982 ಅಂತರದಿಂದ ಸೋಲಿಸಿ ಹ್ಯಾಟ್ರಿಕ್ ಸಾಧಿಸಿದರು.
ಸಮಸ್ಯೆಗಳ ಆಗರ: ಜೀವನದಿ ಕೃಷ್ಣೆ ಬತ್ತಿ ಹೋಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದೆ, ವಿದ್ಯುತ್ ಕ್ಷಾಮಕ್ಕೆ ಪರಿಹಾರ ಸಿಕ್ಕಿಲ್ಲ. ಭೀಕರ ಬರಗಾಲಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಗಳು ಮಂಜೂರಾದರೂ ಸಂಪೂರ್ಣ ಅನುಷ್ಠಾನಗೊಂಡಿಲ್ಲ. ಖಿಳೇಗಾಂವದ ಬಸವೇಶ್ವರ ಏತ ನೀರಾವರಿ, ಕೆರೆಗಳ ಅಭಿವೃದ್ಧಿ, ಉಚಿತ ವಿದ್ಯುತ್ ಯೋಜನೆ ಅನುಷ್ಠಾನ ಆಗದಿರುವುದು, ಅಕ್ಕ ಪಕ್ಕದ ತಾಲೂಕುಗಳ ಹಲವು ಗ್ರಾಮಗಳಿಗೆ ಸರಿಯಾದ ಸಾರಿಗೆ ಸಂಪರ್ಕ ಇಲ್ಲದಿರುವುದು ಕ್ಷೇತ್ರದ ಜನತೆಯನ್ನು ಕಾಡುತ್ತಿದೆ.

2013ರ ಫಲಿತಾಂಶ:
ಕಾಗವಾಡದಲ್ಲಿ 2013ರಲ್ಲಿ 14 ಮಂದಿ ನಾಮಪತ್ರ ಸಲ್ಲಿಸಿದ್ದರು. 3 ಮಂದಿ ನಾಮಪತ್ರ ಹಿಂಪಡೆದರು. 11 ಮಂದಿ ಸ್ಪರ್ಧಿಗಳ ಪೈಕಿ 8 ಮಂದಿ ಠೇವಣಿ ಕಳೆದುಕೊಂಡರು.
ಒಟ್ಟು 78.69 ಮತದಾನವಾಗಿದ್ದು, 129200 ಮತಗಳ ಪೈಕಿ ಬಿಜೆಪಿಯ ಅಭ್ಯರ್ಥಿ ಭರಮಗೌಡ ಅಳಗೌಡ ಕಾಗೆ ಅವರು 41784 ಮತಗಳನ್ನು ಗಳಿಸಿ ಜಯ ಸಾಧಿಸಿದರು. ಜೆಡಿಎಸ್ ನ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ ಅವರು 38897 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. ಕೇವಲ 2887 ಮತಗಳ (ಶೇ2.23) ಅಂತರದಿಂದ ಜಯ ದಾಖಲಿಸಿದ್ದರು.
ತ್ರಿಕೋನ ಸ್ಪರ್ಧೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದಿದ್ದ ತೀವ್ರ ಪೈಪೋಟಿ ಈ ಬಾರಿ ಕೂಡಾ ರಿಪೀಟ್ ಆಗುವ ಲಕ್ಷಣಗಳು ಕಂಡು ಬಂದಿದೆ. ಲಿಂಗಾಯತ, ಜೈನ, ಮರಾಠಾ ಅಭ್ಯರ್ಥಿಗಳ ಹಣೆಬರಹವನ್ನು ಕುರುಬ, ಮುಸ್ಲಿಮ್, ಪರಿಶಿಷ್ಟ ಜಾತಿ ಹಾಗೂ ಪಂಗಡವರು ನಿರ್ಧರಿಸಲಿದ್ದಾರೆ.
ಬಿಜೆಪಿಯ ಭರಮಗೌಡ ಕಾಗೆ 41784 ಮತಗಳು(ಶೇ 32.34), ಜೆಡಿಎಸ್ ನ ಶ್ರೀಮಂತ ಬಾಳಾಸಾಹೇಬ್ ಪಾಟೀಲ್ 38897 ಮತಗಳು (ಶೇ 30.11) ಹಾಗೂ ಕಾಂಗ್ರೆಸ್ಸಿನ ಕಿರಣ್ ಕುಮಾರ್ ತಾತ್ಯಾಗೌಡ ಪಾಟೀಲ್ 33057 (ಶೇ25.59) ಮತಗಳನ್ನು ಗಳಿಸಿದ್ದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications