ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ ಜಿಲ್ಲೆ ಕದನ : 6 ಕ್ಷೇತ್ರದಲ್ಲಿ ನಾಲ್ಕು ಕೈ ಪಾಲು?

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 6 ವಿಧಾನಸಭಾ ಕ್ಷೇತ್ರಗಳಿವೆ. 3 ಸಾಮಾನ್ಯ, 2 ಪರಿಶಿಷ್ಟ ಪಂಗಡ ಹಾಗೂ 1 ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಗಳು. ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅಂಕಿ ಅಂಶ, ಕ್ಷೇತ್ರದ ಚಿತ್ರಣ, ಟಿಕೆಟ್ ಆಕಾಂಕ್ಷಿಗಳ ಚಿತ್ರಣ ಇಲ್ಲಿದೆ. ಮೊದಲಿಗೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಸ್ಥೂಲ ಪರಿಚಯ ಇಲ್ಲಿದೆ. ನಂತರ ಮಿಕ್ಕ ಕ್ಷೇತ್ರಗಳ ಪರಿಚಯ ಕಾಣಬಹುದು

ಹೊಸದುರ್ಗ, ಹೊಳೆಲ್ಕೆರೆ, ಮೊಳಕಾಲ್ಮೂರು, ಹಿರಿಯೂರು, ಚಳ್ಳಕೆರೆ ಕ್ಷೇತ್ರಗಳ ಪರಿಚಯ ಮುಂದಿನ ಸ್ಲೈಡ್ ಗಳಲ್ಲಿ ಓದಿ...

ಚಿತ್ರದುರ್ಗ : ಬೆಳವಣಿಗೆ, ಅಭಿವೃದ್ಧಿ ಕಾಣದ ಕ್ಷೇತ್ರಚಿತ್ರದುರ್ಗ : ಬೆಳವಣಿಗೆ, ಅಭಿವೃದ್ಧಿ ಕಾಣದ ಕ್ಷೇತ್ರ

ಕ್ಷೇತ್ರದ ಚಿತ್ರಣ : ತಿಪ್ಪಾರೆಡ್ಡಿ ನಾಲ್ಕು ಬಾರಿ ಶಾಸಕ ಮತ್ತು ಒಮ್ಮೆ ಎಂ.ಎಲ್.ಸಿ ಆದರೂ ಇದುವರೆಗೂ ಯಾವುದೇ ಹಗರಣಗಳಲ್ಲಿ ಭಾಗಿಯಾಗಿಲ್ಲವಾದರೂ ಸಹ ಶಾಸಕ ತಿಪ್ಪಾರೆಡ್ಡಿಗೆ ನಗರ ಅಭಿವೃದ್ದಿ ಮಾಡದೆ ಇರುವುದರಿಂದ ನಗರದಲ್ಲಿ ಭಾರಿ ಹಿನ್ನಡೆ ಸಾಧ್ಯತೆ. ಅಭಿವೃದ್ದಿ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರ ಅಡ್ಡಗಾಲು.

ಚಿತ್ರದುರ್ಗ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ನೀರಿನ ಸಮಸ್ಯೆ ರಾಜಕೀಯ ಚಾಣಕ್ಷ್ಯ ತನದಿಂದ ಗೆಲುವು ಸಾಧಿಸುತ್ತಲೇ ಬರುತ್ತಿರುವ ಇವರು ಕಾರ್ಯಕರ್ತರು ಜನಸಾಮಾನ್ಯರ ಒಡನಾಡಿಯಾಗಿದ್ದಾರೆ. ಆದರೂ ಈ ಭಾರಿ ಬಿಜೆಪಿ ಟಿಕೆಟ್ ದೊರೆಯುವುದೇ ಅಸಾಧ್ಯ ಮುಖಂಡರ ಸಂಪೂರ್ಣ ವಿರೋಧ ಇದಕ್ಕೆ ಕಾರಣ. ಕಾಂಗ್ರೆಸ್ ನಿಂದ ಯಾರನ್ನು ನಿಲ್ಲಿಸಿದರೂ ಗೆಲ್ಲುವ ಪರಿಸ್ಥಿತಿ ಇದೆ.

ಟಿಕೆಟ್ ಆಕಾಂಕ್ಷಿಗಳು

ಟಿಕೆಟ್ ಆಕಾಂಕ್ಷಿಗಳು

ಟಿಕೆಟ್ ಆಕಾಂಕ್ಷಿಗಳು
ಕಾಂಗ್ರೆಸ್ : ಎಸ್.ಕೆ ಬಸವರಾಜನ್, ಜಿ.ಎಸ್ ಮಂಜುನಾಥ್, ಹನುಮಲಿ ಶಷ್ಣುಗಪ್ಪ, ಭಾಷಾ, ಭಾವನಾ ಸೇರಿದಂತೆ 20 ಕ್ಕೂ ಹೆಚ್ಚು ಜನ.
ಬಿಜೆಪಿ : ಜಿ.ಎಚ್. ತಿಪ್ಪಾರೆಡ್ಡಿ, ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ ಪುತ್ರ ಅಮಿತ್ , ಕೆ.ಎಸ್ ನವೀನ್
ಜೆಡಿಎಸ್ : ಹಿರಿಯ ನಟ ದೊಡ್ಡಣ್ಣ ಅಳಿಯ, ಉದ್ಯಮಿ ಕೆ.ಸಿ ವೀರೇಂದ್ರ ಅಲಿಯಾಸ್ ಪಪ್ಪಿ ಜೆಡಿಎಸ್ ಆಭ್ಯರ್ಥಿ ರಾಜ್ಯದಲ್ಲಿ ಘೋಷಣೆ ಆಗಿರುವ ಏಕೈಕ ಅಭ್ಯರ್ಥಿ.
*****
ಜಿ.ಎಚ್. ತಿಪ್ಪಾರೆಡ್ಡಿ, ಹಾಲಿ ಶಾಸಕ
2013ರ ಫಲಿತಾಂಶ
ಬಿಜೆಪಿ : ತಿಪ್ಪಾರೆಡ್ಡಿ​ ಪಡೆದ ಮತಗಳು 62228 ಮತಗಳು
ಕಾಂಗ್ರೆಸ್ : ಜಿ.ಎಸ್ ಮಂಜುನಾಥ್ 30729
ಜೆಡಿಎಸ್ : ಎಸ್.ಕೆ ಬಸವರಾಜನ್ 35510
ಪಕ್ಷೇತರ ಅಭ್ಯರ್ಥಿ ಫಯಾಸ್ ಪಡೆದ ಮತಗಳು 23382.

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪರಿಚಯ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪರಿಚಯ

ಚಳ್ಳಕೆರೆ - ಎಸ್.​ಟಿ ಮೀಸಲು
ಕ್ಷೇತ್ರ ಹಾಲಿ ಶಾಸಕರು - ರಘುಮೂರ್ತಿ - ಕಾಂಗ್ರೆಸ್​
2013 ಫಲಿತಾಂಶ
ಕಾಂಗ್ರೆಸ್ : ರಘುಮೂರ್ತಿ 60197
ಕೆಜೆಪಿ : ಕೆ.ಟಿ ಕುಮಾರಸ್ವಾಮಿ 37 074
ಜೆಡಿಎಸ್ : ಪಿ.ತಿಪ್ಪೇಸ್ವಾಮಿ 27373
ಬಿಜೆಪಿ : 12981

ಕ್ಷೇತ್ರದ ಚಿತ್ರಣ : ಹಾಲಿ ಕಾಂಗ್ರೆಸ್ ಶಾಸಕ ಟಿ. ರಘುಮೂರ್ತಿ ಮೊದಲ ಬಾರಿಗೆ ಗೆದ್ದು ಅಭೂತಪೂರ್ವ ಸಾಧನೆ ಮಾಡಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿ, ಬರಗಾಲದಲ್ಲಿಯೂ ಚಳ್ಳಕೆರೆ ನಗರಕ್ಕೆ ವಾಣಿವಿಲಾಸ ಡ್ಯಾಂನಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಸಂಪರ್ಕ ವ್ಯವಸ್ಥೆ ಮಾಡಿ, ಸೇರಿದಂತೆ ಅನೇಕ ಅಭಿವೃದ್ಧಿ ಮಾಡಿದ್ದಾರೆ.

ಮೂಲತಃ ಇಂಜಿನಿಯರ್ ಆದ ಕಾರಣ ಕ್ಷೇತ್ರದ ಕಾಮಗಾರಿ ಪ್ರತಿಸ್ಪರ್ಧಿಯೇ ಇಲ್ಲದೆ ಗೆಲುವು ಖಚಿತ ಎಂದೇ ಚಳ್ಳಕೆರೆಯಲ್ಲಿ ವಾತಾವರಣ ನಿರ್ಮಾಣವಾಗಿದೆ.ಟಿಕೆಟ್ ಆಕಾಂಕ್ಷಿಗಳು :
ಕಾಂಗ್ರೆಸ್ : ಟಿ.ರಘುಮೂರ್ತಿ
ಬಿಜೆಪಿ : ಕೆ.ಟಿ ಕುಮಾರಸ್ವಾಮಿ
ಜೆಡಿಎಸ್ : ರವೀಶ್

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ

3) ಮೊಳಕಾಲ್ಮೂರು - ಎಸ್​ಟಿ ಮೀಸಲು
ಹಾಲಿ ಶಾಸಕರು - ಎಸ್. ತಿಪ್ಪೇಸ್ವಾಮಿ​ - ಬಿ.ಎಸ್ ಆರ್ ಕಾಂಗ್ರೆಸ್​ ಪಕ್ಷದಿಂದ ಗೆದ್ದು ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

2013 ಮತಗಳಿಕೆ:
ಬಿಎಸ್ಆರ್ ಕಾಂಗ್ರೆಸ್ : ಎಸ್ ತಿಪ್ಪೇಸ್ವಾಮಿ 76827
ಕಾಂಗ್ರೆಸ್ ಎನ್.ವೈ ಗೋಪಾಲಕೃಷ್ಣ 69658
ಬಿಜೆಪಿ :​ ಸ್ಪರ್ಧೆ ಮಾಡಿಲ್ಲ
***

ಕ್ಷೇತ್ರದ ಚಿತ್ರಣ : ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ಬಿಎಸ್ಆರ್ ಕಾಂಗ್ರಸ್ ನ ಎಸ್. ತಿಪ್ಪೇಸ್ವಾಮಿ ಬಿಜೆಪಿ ಸೇರಿದ್ದರೂ ಈ ಬಾರಿ ಟಿಕೆಟ್ ಪಡೆಯುವುದೇ ಅನುಮಾನ ಬಳ್ಳಾರಿ ಮಾಜಿ ಸಂಸದೆ ಜೆ. ಶಾಂತ ಬಿಜೆಪಿಯಿಂದ ಸ್ಪರ್ಧೆ ಸಾಧ್ಯತೆ ಇದ್ದರೂ ಕಾಂಗ್ರೆಸ್ ಪರವೇ ಒಲವು ಹೆಚ್ಚು ಇದೆ.

ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಲಾಬಿ ನಡೆಯುತ್ತಿದ್ದು ಎನ್.ವೈ ಗೋಪಾಲಲೃಷ್ಣ ಮೊಳಕಾಲ್ಮೂರು ಕ್ಷೇತ್ರದಿಂದ ಸೋತ ಕಾರಣ ಅವರಿಗೆ ಬಳ್ಳಾರಿ ಗ್ರಾಮಾಂತರವೇ ಸೇಫ್ ಎನ್ನಲಾಗುತ್ತಿದ್ದು, ಹಿರಿಯ ನಟ ಶಶಿಕುಮಾರ್ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಗೆಲುವು ಸುಲಭ ಎಂಬ ಮಾತುಗಳು ಕೇಳಿ ಬರುತ್ತಿವೆ.
***
ಟಿಕೆಟ್ ಆಕಾಂಕ್ಷಿಗಳು :
ಕಾಂಗ್ರೆಸ್ : ಎನ್.ವೈ ಗೋಪಾಲಲೃಷ್ಣ , ಶಶಿಕುಮಾರ್, ಯೋಗೀಶ್ ಬಾಬು, ಕರಣ್ ಬೋರಯ್ಯ
ಬಿಜೆಪಿ : ಎಸ್, ತಿಪ್ಪೇಸ್ವಾಮಿ, ಜೆ.ಶಾಂತ, ಪ್ರಭಾಕರ ಮ್ಯಾಸನಾಯಕ
ಜೆಡಿಎಸ್ : ಪಟೇಲ್ ಜಿ.ಎಂ ತಿಪ್ಪೇಸ್ವಾಮಿ

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ

ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ

4) ಹೊಳಲ್ಕೆರೆ - ಎಸ್​.ಸಿ ಮೀಸಲು ಕ್ಷೇತ್ರ
ಹಾಲಿ ಶಾಸಕ - ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ -ಕಾಂಗ್ರೆಸ್ ​ ಪಕ್ಷ
2013 ರಲ್ಲಿ ಹಣಾಹಣಿ
ಕಾಂಗ್ರೆಸ್ : ಎಚ್. ಆಂಜನೇಯ : 76856
ಬಿಜೆಪಿ : ಚಂದ್ರಪ್ಪ , 63992
ಜೆಡಿಎಸ್ : ರೇವಣ್ಣ : 7595
****

ಕ್ಷೇತ್ರದ ಚಿತ್ರಣ : ಸಾವಿರ ಕೋಟಿಗಳ ಕೆಲಸ ಮಾಡಿಸಿದರೂ ಸಮಾಜ ಕಲ್ಯಾಣ ಸಚಿವ ಆಂಜನೇಯ ಈ ಬಾರಿ ಗೆಲ್ಲುವುದು ಕಷ್ಟಸಾಧ್ಯ ಎಂಬ ಗುಪ್ತಚರ ವರದಿಯೇ ಹೊಳಲ್ಕೆರೆಯಲ್ಲಿ ಜನರ ಬಾಯಲ್ಲಿ ಹರಿದಾಡುತ್ತಿದೆ. ಬಿಜೆಪಿಯ ಅಮಿತ್ ಶಾ ಬಂದು ಹೋದ ನಂತರ ಸಂಚಲನ ಮೂಡಿದ್ದು ಪ್ರಬಲ ಸ್ಫರ್ಧೆ ಕಾಂಗ್ರೆಸ್ ಬಿಜೆಪಿ ನಡುವೆ ಏರ್ಪಡುವ ಸಾಧ್ಯತೆ ಇದ್ದರೂ ಗೆಲುವು ಕೈ ಪಕ್ಷಕ್ಕೆ ಒಲಿಯುವ ಸಾಧ್ಯತೆ ಕಾಣುತ್ತಿದೆ.

ಆದರೂ ಆಂಜನೇಯ ಆಡಳಿತ ವಿರೋಧಿ ಅಲೆಯಲ್ಲಿ ತೇಲಿ ಹೋದರೂ ಆಶ್ಚರ್ಯವಿಲ್ಲ.
****
ಟಿಕೆಟ್ ಆಕಾಂಕ್ಷಿಗಳು:

ಕಾಂಗ್ರೆಸ್ : ಎಚ್. ಆಂಜನೇಯ
ಬಿಜೆಪಿ : ಎಂ. ಚಂದ್ರಪ್ಪ
ಜೆಡಿಎಸ್ :-

ಹಿರಿಯೂರು ವಿಧಾನಸಭಾ ಕ್ಷೇತ್ರ

ಹಿರಿಯೂರು ವಿಧಾನಸಭಾ ಕ್ಷೇತ್ರ

5) ಹಿರಿಯೂರು - ಸಾಮಾನ್ಯ ಹಾಲಿ ಶಾಸಕ - ಡಿ ಸುಧಾಕರ್ ​ಕಾಂಗ್ರೆಸ್​ ಮಾಜಿ ಸಚಿವ
2013 ರಲ್ಲಿ ಗಳಿಸಿದ ಮತಗಳು
ಕಾಂಗ್ರೆಸ್ : ಡಿ.ಸುಧಾಕರ್ : 71661
ಜೆಡಿಎಸ್ : ಎ. ಕೃಷ್ಣಪ್ಪ : 70456
ಬಿಜೆಪಿ : ಸಿದ್ದೇಶ್ : 2880

***

ಕ್ಷೇತ್ರದ ಚಿತ್ರಣ : ಮೊದಲ ಬಾರಿ ಪಕ್ಷೇತರ ಆಭ್ಯರ್ಥಿಯಾಗಿ ಗೆಲುವು ಸಾಧಿಸಿ ಸಚಿವ ಸ್ಥಾನ ಗಿಟ್ಟಿಸಿಕೊಂಡ ಡಿ.ಸುಧಾಕರ್ ಗೆ ಈ ಭಾರಿ ಕ್ಷೇತ್ರದಲ್ಲಿ ರೈತರ ಹಾಗೂ ಕೆಲವು ವರ್ಗಗಳ ಸಂಪೂರ್ಣ ವಿರೋಧ ವಿದ್ದು ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿದೆ. ಸೋಲು ಖಚಿತ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ.

ಆದರೆ ಪ್ರಬಲ ಪ್ರತಿಸ್ಪರ್ಧಿ ಇಲ್ಲದ ಕಾರಣ ಯಾರು ಸುಧಾಕರ್ ವಿರುದ್ಧ ಕಣದಲ್ಲಿ ನಿಲ್ಲುತ್ತಾರೆ ಎನ್ನುವುದು ಕುತೂಹಲ ಬಿಜೆಪಿಯಿಂದ ದಿ ಮಾಜಿ ಸಚಿವ ಎ.ಕೃಷ್ಣಪ್ಪ ಮಗಳು ಬೆಂಗಳೂರಿನ ಆರ್.ಆರ್. ನಗರ ಕಾರ್ಪೋರೇಟರ್ ಪೂರ್ಣಿಮಾ ಶ್ರೀನಿವಾಸ್ ಸ್ಪರ್ಧಿಸಿದರೆ ಅನುಕಂಪದ ಮೇರೆಗೆ ಕಾಂಗ್ರೆಸ್ ಸೋಲಿಸುವ ಸಾಧ್ಯತೆ ಇದೆ.

ಆದರೆ ಜೆಡಿಎಸ್ ಸಹಾ ಪ್ರಾಬಲ್ಯ ಹೊಂದಿರುವ ಹಿರಿಯೂರಿನಲ್ಲಿ ಬಿಜೆಪಿ ಜೆಡಿಎಸ್ ಒಂದಾದರೆ ಮಾತ್ರ ಗೆಲುವು ಸಾಧ್ಯ ಇಲ್ಲವಾದರೆ ಕಾಂಗ್ರೆಸ್ ಗೆ ವಿಜಯಮಾಲೆ
***
ಟಿಕೆಟ್ ಆಕಾಂಕ್ಷಿಗಳು :
ಕಾಂಗ್ರೆಸ್ : ಡಿ. ಸುಧಾಕರ್
ಬಿಜೆಪಿ : ಪೂರ್ಣಿಮಾ ಶ್ರೀನಿವಾಸ್, ಶ್ರೀನಿವಾಸ್,

ಜೆಡಿಎಸ್ : ಯಶೋಧರ

ಹೊಸದುರ್ಗ ವಿಧಾನಸಭಾ ಕ್ಷೇತ್ರ

ಹೊಸದುರ್ಗ ವಿಧಾನಸಭಾ ಕ್ಷೇತ್ರ

6) ಹೊಸದುರ್ಗ -
ಸಾಮಾನ್ಯ ಹಾಲಿ ಶಾಸಕ - ಬಿ.ಜಿ ಗೋವಿಂದಪ್ಪ ಕಾಂಗ್ರೆಸ್
2013 ಮತ ವಿವರ
ಕಾಂಗ್ರೆಸ್ : ಬಿ.ಜಿ. ಗೋವಿಂದಪ್ಪ : 58010
ಬಿಜೆಪಿ : ಲಿಂಗಮೂರ್ತಿ : 37717
ಪಕ್ಷೇತರ : ಗೂಳಿಹಟ್ಟಿ ಶೇಖರ್ : 37 993

***

ಕ್ಷೇತ್ರದ ಚಿತ್ರಣ : ಕಾಂಗ್ರೆಸ್ ಪಕ್ಷದ ಶಾಸಕ ಬಿ.ಜಿ ಗೋವಿಂದಪ್ಪ ವಿರುದ್ಧ ಆಡಳಿತ ವಿರೋಧಿ ಅಲೆ ಇಡೀ ಕ್ಷೇತ್ರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದು ಇತ್ತೀಚೆಗೆ ಬಿಜೆಪಿ ಸೇರಿರುವ ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಗೆಲುವು ಸುಲಭ ಎನ್ನುವಂತೆ ಗೋಚರಿಸುತ್ತಿದೆ.

ಹೊಸದುರ್ಗ ಕ್ಷೇತ್ರದಲ್ಲಿ ಗೂಳಿಹಟ್ಟಿ .ಡಿ ಶೇಖರ್ ಬಿಜೆಪಿ ಸೇರ್ಪಡೆ ಕಾಂಗ್ರೆಸ್ ವಲಯದಲ್ಲಿ ತಲ್ಲಣ ಉಂಟು ಮಾಡಿದೆ. ಹೊಸದುರ್ಗದಲ್ಲಿ ಗೋವು ಹಾಗೂ ಗೂಳಿ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರೂ ಗೆಲುವು ಗೂಳಿಯದ್ದೇ ಎನ್ನುವುದು ವೈರಲ್ ಆಗಿದೆ.
****
ಟಿಕೆಟ್ ಆಕಾಂಕ್ಷಿಗಳು :
ಕಾಂಗ್ರೆಸ್ : ಬಿ.ಜಿ ಗೋವಿಂದಪ್ಪ
ಬಿಜೆಪಿ : ಗೂಳಿಹಟ್ಟಿ ಡಿ. ಶೇಖರ್
ಜೆಡಿಎಸ್ : ಮೀನಾಕ್ಷಿ ನಂದೀಶ್

English summary
Karnataka Assembly Election 2018: Read all about Chitradurga district 6 assembly constituencies Hiriyuru, Molakalmur, Hosadurga, Challakere Holelkere and Chitradurga. Get election news from Chitradurga district. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X