ಚಳ್ಳಕೆರೆ: ಪರಿಶಿಷ್ಟ ಪಂಗಡದವರ ಮತಗಳೇ ನಿರ್ಣಾಯಕ!
ಒಂದು ಕಾಲದಲ್ಲಿ ಈ ಕ್ಷೇತದ ಕಾಂಗ್ರೆಸ್ ನ ಜಯಣ್ಣ ಅವರ ಪ್ರಾಬಲ್ಯವಿದ್ದ ಕ್ಷೇತ್ರವಿದು. ರಾಜ್ಯದಲ್ಲಿ ಜನತಾ ಪರಿವಾರದ ಅಲೆ ಇದ್ದಾಗಲೂ ಅಲ್ಲಿ ಜಯಣ್ಣ ಅವರ ವರ್ಚಸ್ಸೇ ಗೆಲ್ಲುತ್ತಿದ್ದ ಕಾಲವದು. ಈ ಕ್ಷೇತ್ರದಲ್ಲಿ ಈಗ ವಾಲ್ಮೀಕಿ ಜನಾಂಗದವರ ಸಂಖ್ಯೆ ಹೆಚ್ಚಿದೆ.
ಕಾಂಗ್ರೆಸ್ಸಿನ ರಘು ಮೂರ್ತಿ ಅವರು ಇಲ್ಲಿನ ಹಾಲಿ ಶಾಸಕರು. ವಾಲ್ಮೀಕಿ, ಲಿಂಗಾಯತ ಅಲ್ಲದೆ ಎಲ್ಲಾ ಜನಾಂಗಕ್ಕೂ ಬೇಕಾದವರು. ಸಧ್ಯದ ಪರಿಸ್ಥಿತಿಯಲ್ಲಿ ರಘುಮೂರ್ತಿಯವರೇ ಚುನಾವಣೆ ಗೆಲ್ಲುವ ಪ್ರಭಾವಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಜಯಣ್ಣ ಅವರು ಪ್ರಬಲ ಶಾಸಕರಾಗಿ ಮಾತ್ರವಲ್ಲ, ರಾಜ್ಯ ಸರ್ಕಾರದ ಮುಖ್ಯ ಸಚೇತಕರೂ ಆಗಿ ಅಧಿಕಾರದಲ್ಲಿದ್ದರು. ಆಗಿನಿಂದಲೂ ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷಕ್ಕೇ ಜನರು ಜೈ ಎಂದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇನ್ನು, ಜಾತಿವಾರು ಲೆಕ್ಕಕ್ಕೆ ಬರುವುದಾದರೆ, ಈ ಕ್ಷೇತ್ರದಲ್ಲಿ ಈಗ ವಾಲ್ಮೀಕಿ ಜನಾಂಗದವರ ಸಂಖ್ಯೆ ಹೆಚ್ಚಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಅವರ ಪಾತ್ರವೇ ನಿರ್ಣಾಯಕ. ಈಗಲೂ ಅದೇ ಸಮುದಾಯದ ರಘುಮೂರ್ತಿ (ಕಾಂಗ್ರೆಸ್) ಅವರೇ ಶಾಸಕರು. ಭೂಸೇನೆಯಲ್ಲಿ ಇಂಜಿನಿಯರ್ ಆಗಿದ್ದ ಅನುಭವ ಹೊಂದಿರುವ ಅವರಿಂದ ಕ್ಷೇತ್ರದಲ್ಲಿ ಉತ್ತಮ ಕೆಲಸಗಳಿರುವ ಮಾತುಗಳೂ ಕೇಳಿಬರುತ್ತವೆ. ಹಾಗಾಗಿ, ಅವರ ಬಗ್ಗೆ ಇತರ ಕೋಮಿನ ಜನರೂ ಸಹಾನುಭೂತಿ ಹೊಂದಿದ್ದಾರೆ.

ಲಿಂಗಾಯತ ಜಾತಿಯವರು ಎರಡನೇ ಸ್ಥಾನ
ಇನ್ನು, ಜಾತಿವಾರು ಲೆಕ್ಕಕ್ಕೆ ಬರುವುದಾದರೆ, ಈ ಕ್ಷೇತ್ರದಲ್ಲಿ ಈಗ ವಾಲ್ಮೀಕಿ ಜನಾಂಗದವರ ಸಂಖ್ಯೆ ಹೆಚ್ಚಿದೆ. ಅಭ್ಯರ್ಥಿ ಆಯ್ಕೆಯಲ್ಲಿ ಅವರ ಪಾತ್ರವೇ ನಿರ್ಣಾಯಕ. ಪರಿಶಿಷ್ಟ ಪಂಗಡ ಮತಗಳೇ ನಿರ್ಣಾಯಕವಾಗಿರುವ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆಯಿದೆ. ಈಗ ಪ್ರತ್ಯೇಕ ಲಿಂಗಯತ ಧರ್ಮ ಸ್ಥಾಪನೆಯ ಬೆನ್ನಲ್ಲಿ ಇಲ್ಲಿನ ಮತ ಬ್ಯಾಂಕ್ ಒಡೆದು ಹಂಚಿ ಹೋಗುವ ಸಾಧ್ಯತೆ ಹೆಚ್ಚಿದೆ.

ಲಿಂಗಾಯತ ಜಾತಿಯವರು ಎರಡನೇ ಸ್ಥಾನ
ಇನ್ನು, ಅಂಕಿ-ಸಂಖ್ಯೆಯಲ್ಲಿ ಲಿಂಗಾಯತ ಜಾತಿಯವರು ಎರಡನೇ ಸ್ಥಾನದಲ್ಲಿದ್ದಾರೆ. ಆದರೆ, ಈ ವರ್ಗದಿಂದ ಯಾವುದೇ ಪ್ರಭಾವಿ ನಾಯಕ ಹೊಮ್ಮಿಲ್ಲ. ಅಷ್ಟೇ ಅಲ್ಲ, ರಘುಮೂರ್ತಿ ಬಗ್ಗೆ ಈ ಸಮುದಾಯಕ್ಕೂ ಉತ್ತಮ ಅಭಿಪ್ರಾಯವಿರುವುದರಿಂದ, ಲಿಂಗಾಯತರ ಬಹುಪಾಲು ಮಂದಿ ರಘುಮೂರ್ತಿ ಅವರ ಕಡೆಗೇ ಒಲವು ಹೊಂದಿದೆ ಎಂದು ಹೇಳಲಾಗುತ್ತದೆ.

ಈಗ ಬಿಜೆಪಿಗೆ ತಲೆನೋವಾಗಿರುವ ವಿಚಾರ
ಇದೇ ಈಗ ಬಿಜೆಪಿಗೆ ತಲೆನೋವಾಗಿರುವ ವಿಚಾರ. ಹಾಗಾಗಿ, ವಾಲ್ಮೀಕಿ ಜನಾಂಗದಿಂದ ಪ್ರಬಲವಾದ ನಾಯಕರೊಬ್ಬರನ್ನು ಕಣಕ್ಕಿಳಿಸಿದರೆ ಮಾತ್ರ ರಘುಮೂರ್ತಿಗೆ ಸವಾಲೆಸೆಯಬಹುದು. ಜೆಡಿಎಸ್ ಮುಂದಿನ ಸಮಸ್ಯೆಯೂ ಇದೇ ತೆರನಾದದ್ದು.
ಈ ಮೂರು ಪಕ್ಷಗಳನ್ನು ಬಿಟ್ಟರೆ, ರೈತಸಂಘದಿಂದ ಪ್ರಬಲ ಅಭ್ಯರ್ಥಿಯೊಬ್ಬರು ಕಣಕ್ಕಿಳಿಯಬಹುದು ಎಂಬ ಸುದ್ದಿಯಿದೆ. ಅದು ಯಾರೆಂದು ಈಗಲೇ ಸ್ಪಷ್ಟವಾಗಿಲ್ಲ. ಆದರೆ, ಸಧ್ಯದ ಪರಿಸ್ಥಿತಿಯಲ್ಲಿ ರಘುಮೂರ್ತಿಯವರೇ ಚುನಾವಣೆ ಗೆಲ್ಲುವ ಪ್ರಭಾವಿ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

2013ರ ಚುನಾವಣೆ ಫಲಿತಾಂಶ
2013ರ ಚುನಾವಣೆ ಫಲಿತಾಂಶ : 2013ರಲ್ಲಿ ಶೇ 78.39ರಷ್ಟು ಮತದಾನವಾಗಿತ್ತು. ಕಾಂಗ್ರೆಸ್ಸಿನ ಟಿ ರಘುಮೂರ್ತಿ ಅವರು 60, 197 ಮತಗಳನ್ನು ಗಳಿಸಿ ಜಯ ಗಳಿಸಿದ್ದರು. ಕೆಜೆಪಿಯ ಕೆ.ಟಿ ಕುಮಾರಸ್ವಾಮಿ ಅವರು 37,074 ಮತಗಳನ್ನು ಗಳಿಸಿ ಸೋಲು ಕಂಡರು. 23,123ಮತಗಳು (ಶೇ 15.65ರಷ್ಟು) ಮತಗಳ ಅಂತರದಿಂದ ರಘುಮೂರ್ತಿ ಅವರು ವಿಜಯಿಯಾಗಿದ್ದರು.
-
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ












Click it and Unblock the Notifications