ಕ್ಷೇತ್ರ ಪರಿಚಯ : ಆನೇಕಲ್ -ಬಿಜೆಪಿ 'ಕೈ' ವಶವಾಗುವುದೇ?

ಬೆಂಗಳೂರಿಗೆ ಹೊರಗಿನ ಕ್ಷೇತ್ರ ಎಂಬ ಟ್ಯಾಗ್ ಹೊತ್ತುಕೊಂಡಿರುವ ಆನೇಕಲ್ ಮೀಸಲು ಕ್ಷೇತ್ರ ಇನ್ನೂ ಅಭಿವೃದ್ಧಿ ಪಥದತ್ತ ಸಾಗಿಲ್ಲ. ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಒಳಪಟ್ಟು, ನಗರ ಜಿಲ್ಲೆಯ ತಾಲೂಕು ಕೇಂದ್ರವಾದರೂ ಇನ್ನೂ ತನ್ನ ಹಳ್ಳಿಸೊಗಡನ್ನು ಬದಲಾಯಿಸಿಕೊಂಡಿಲ್ಲ. ಒಂದು ಕಾಲದಲ್ಲಿ ಉತ್ತಮ ಜಲಾನಯನ ಪ್ರದೇಶ, ಕಾಡು, ಕಣಿವೆಗಳನ್ನು ಹೊಂದಿದ್ದ ಆನೇಕಲ್ ಇಂದು ತನ್ನ ಸೊಬಗನ್ನು ಕಳೆದುಕೊಂಡಿದೆ. ಆನೇಕಲ್ ಈ ಹಿಂದೆ ರಾಗಿಯ ಕಣಜವಾಗಿತ್ತು ಎಂದು ಅಜ್ಜಿಯರು ಕಥೆ ಹೇಳಿದ್ದಂತಿದೆ.

ಆನೇಕಲ್ ನಲ್ಲಿ ಕೈಮಗ್ಗಗಳ ಸದ್ದು ಕಡಿಮೆಯಾಗಿವೆ, ಕೈಗಾರಿಕೆಗಳ ಸದ್ದು ಜೋರಾಗುತ್ತಿವೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಇಂಜಿನಿಯರಿಂಗ್ ಸೇರಿದಂತೆ ಉತ್ತಮ ವಿದ್ಯಾಸಂಸ್ಥೆಗಳಿದ್ದರೂ ಹೆಚ್ಚು ಮಂದಿ ಸಿಟಿಯಲ್ಲಿರೋ ಕಾಲೇಜ್ ಬೆಸ್ಟ್ ಎನ್ನುವಂಥ ಪರಿಸ್ಥಿತಿ ಇದೆ.

ಕರ್ನಾಟಕ ಹಾಗೂ ತಮಿಳುನಾಡು ಗಡಿಭಾಗದ ಆನೇಕಲ್ ವ್ಯಾಪ್ತಿಯಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮುತ್ಯಾಲಮಡುವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ, ಮೂಲ ಸೌಕರ್ಯಗಳ ಕೊರತೆ ನಿವಾರಣೆಯಾಗದೆ ಪ್ರವಾಸಿ ತಾಣಗಳು ಸೊರಗಿವೆ.

ಆನೇಕಲ್ ಸಮಸ್ಯೆಗಳ ಆಗರ

ಆನೇಕಲ್ ಸಮಸ್ಯೆಗಳ ಆಗರ

ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಕಾನೂನು ಸುವ್ಯವಸ್ಥೆ ಸಮಸ್ಯೆಗಳಾಗಿ ಕಾಡುತ್ತಿವೆ. ಕಂಬದ ಗಣಪತಿ, ತಿಮ್ಮರಾಯಸ್ವಾಮಿ ದೇಗುಲ, ಚನ್ನಕೇಶವ ದೇಗುಲ, ನಾರಾಯಣಘಟ್ಟದ ರಾಮರ ದೇವಸ್ಥಾನ, ಹುಸ್ಕೂರಿನ ಮದ್ದೂರಮ್ಮ ಜನಪ್ರಿಯ ದೇಗುಲಗಳು, ಬೆಂಗಳೂರಿನ ಕರಗದಂತೆ ಆನೇಕಲ್ ಕರಗವೂ ಜನಾಕರ್ಷಣೆ ಪಡೆದುಕೊಂಡಿದೆ. ದೇಗುಲಗಳಿಗೆ ಸಂಪರ್ಕ ಸಾರಿಗೆ ವ್ಯವಸ್ಥೆ ಇರುವುದು ಬಿಟ್ಟರೆ, ಹೆಚ್ಚಿನ ಸೌಕರ್ಯಗಳು ಸಿಕ್ಕಿಲ್ಲ. ಆನೇಕಲ್ ನಲ್ಲಿ ರೈಲು ನಿಲ್ದಾಣ ಇದೆ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.

 ಎ ನಾರಾಯಣ ಸ್ವಾಮಿಗೆ ಸವಾಲಿನ ವಿಷಯ

ಎ ನಾರಾಯಣ ಸ್ವಾಮಿಗೆ ಸವಾಲಿನ ವಿಷಯ

ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಹುಸ್ಕೂರು ಮುಂತಾದೆಡೆ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ಆನೇಕಲ್ ನಲ್ಲಿ ಖಾಸಗಿ ಉದ್ಯಮಿಗಳು, ಉದ್ಯೋಗಿಗಳು ಮತ್ತು ರೈತಾಪಿ ವರ್ಗ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆಡಳಿತ ವಿರೋಧಿ ಅಲೆ ಸದ್ಯಕ್ಕೆ ಇಲ್ಲದ ಕಾರಣ ಕಾಂಗ್ರೆಸ್ ಪರ ಅಭ್ಯರ್ಥಿಯನ್ನು ಸೋಲಿಸುವುದು ಎ ನಾರಾಯಣ ಸ್ವಾಮಿಗೆ ಸವಾಲಿನ ವಿಷಯವಾಗಿದೆ. ಮತ್ತೊಮ್ಮೆ ಮೋದಿ ಅಲೆ, ಹಿಂದೂತ್ವ, ಉದ್ಯೋಗ ಭರವಸೆ, ಕುಡಿಯುವ ನೀರಿನ ಯೋಜನೆ ಮುಂತಾದ ಟ್ರಂಪ್ ಕಾರ್ಡ್ ಹಿಡಿದು ಜನರ ಬಳಿಗೆ ಹೋಗಬೇಕಿದೆ.

ಕಾಂಗ್ರೆಸ್ಸಿನ ಬಿ ಶಿವಣ್ಣ

ಕಾಂಗ್ರೆಸ್ಸಿನ ಬಿ ಶಿವಣ್ಣ

ಸತತ 4 ಬಾರಿ ಶಾಸಕರಾದವರು. ಪ್ರಸ್ತುತ ಬಂದೀಖಾನೆ ಸಚಿವರಾಗಿ, ಜನಾನುರಾಗಿಯಾಗಿದ್ದ ನಾರಾಯಣ ಸ್ವಾಮಿ ಅವರನ್ನು ಕಾಂಗ್ರೆಸ್ಸಿನ ಬಿ ಶಿವಣ್ಣ ಉತ್ತಮ ಅಂತರದಿಂದ ಸೋಲಿಸಿದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು. ಸೂರ್ಯನಗರದ ನಾಲ್ಕು ಹಂತಗಳು, ಆನೇಕಲ್ ಪಟ್ಟಣ ಹಾಗೂ 17 ಗ್ರಾಮಗಳಿಗೆ ಕುಡಿಯಲು ಕಾವೇರಿ ನೀರು, 60 ಕೆರೆಗಳಿಗೆ ನೀರು ತುಂಬುವ 190ಕೋಟಿ ರೂ. ಏತ ನೀರಾವರಿ ಯೋಜನೆ,ತಾಲೂಕಿನಲ್ಲಿ 25 ಸಾವಿರ ನಿವೇಶನಗಳ ಹಕ್ಕು ಪತ್ರ ವಿತರಣೆ ಸೇರಿದಂತೆ ಕೆಲವು ಯೋಜನೆಗಳು ಮತ್ತೆ ಇವರ ಕೈಹಿಡಿಯುವ ಸಾಧ್ಯತೆಯಿದೆ. ಆದರೆ, ಜಿಗಣಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶಗಳಲ್ಲಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ.

2013ರ ಫಲಿತಾಂಶ

2013ರ ಫಲಿತಾಂಶ

* ವಿಧಾನಸಭಾ ಕ್ಷೇತ್ರ ಸಂಖ್ಯೆ 177:
* ಹಾಲಿ ಶಾಸಕ- ಬಿ ಶಿವಣ್ಣ (ಕಾಂಗ್ರೆಸ್)- ಸೋತ ಅಭ್ಯರ್ಥಿ ಎ ನಾರಾಯಣ ಸ್ವಾಮಿ-(ಬಿಜೆಪಿ)

* ಮತದಾರರ ಸಂಖ್ಯೆ: 2,98,962. ಪಟ್ಟಣದಲ್ಲಿ ಸುಮಾರು 34,000
* ಕಳೆದ ಬಾರಿ ವೋಟ್ ಮಾಡಿದವರು ಶೇ. 68.89ರಷ್ಟು ಮಂದಿ. ಅದರಲ್ಲಿ ವಿಜೇತ ಅಭ್ಯರ್ಥಿ ಗಳಿಸಿದ್ದು ಶೇ 21.55ರಷ್ಟು, ಗೆಲುವಿನ ಅಂತರ 40,182 ಮತಗಳು.
* ಗೆದ್ದ ಅಭ್ಯರ್ಥಿ ಕಾಂಗ್ರೆಸ್ಸಿನ ಬಿ ಶಿವಣ್ಣ ಗಳಿಸಿದ ಮತಗಳು 1,05,464
* ಸೋತ ಅಭ್ಯರ್ಥಿ ಎ ನಾರಾಯಣ ಸ್ವಾಮಿ 65,282

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+