ಕ್ಷೇತ್ರ ಪರಿಚಯ : ಬೈಲಹೊಂಗಲ ಕ್ಷೇತ್ರದಲ್ಲಿ ಯಾರಿಗೆ ಗೆಲುವು?

Posted By: ಬೆಳಗಾವಿ ಪ್ರತಿನಿಧಿ
Subscribe to Oneindia Kannada

ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಬೈಲಹೊಂಗಲ. ಒಮ್ಮೆ ಚುನಾವಣೆಯಲ್ಲಿ ಶಾಸಕರು ಸೋತರೆ ಮತ್ತೆ ಈ ಕ್ಷೇತ್ರದಲ್ಲಿ ಗೆದ್ದ ಉದಾಹರಣೆಗಳಿಲ್ಲ, ಇದು ಕ್ಷೇತ್ರದ ವಿಶೇಷ. ಮತ್ತೊಂದು ಚುನಾವಣೆಗೆ ಕ್ಷೇತ್ರ ಸಿದ್ಧವಾಗುತ್ತಿದೆ.

ಜನರ ಸೇವೆ ಮಾಡುವ ಜನ ಪ್ರತಿನಿಧಿಗಳನ್ನು ಜನರು ಆರಿಸುತ್ತಲೇ ಬಂದಿದ್ದಾರೆ. ಒಂದು ವೇಳೆ ಜನರ ಆಶೋತ್ತರಗಳಿಗೆ ಸ್ಪಂದಿಸದಿದ್ದರೆ ಸೋಲು ಕಟ್ಟಿಟ್ಟ ಬುತ್ತಿಯಾಗಿದೆ. ಸ್ವಾತಂತ್ರ್ಯ ನಂತರ ನಡೆದ 14 ಚುನಾವಣೆ ಮತ್ತು ಒಂದು ಉಪ ಚುನಾವಣೆಯಲ್ಲಿ ಒಮ್ಮೆ ಸೋತವರು ಮತ್ತೆ ಆಯ್ಕೆಯಾಗಿಲ್ಲ.

ಕ್ಷೇತ್ರ ಪರಿಚಯ : ಗೋಕಾಕ್‌ನಲ್ಲಿ ಯಾರಿಗೆ ಗೆಲುವಿನ ಕರದಂಟು?

2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಪಾಟೀಲ್ 40,709 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಬಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದು, ಟಿಕೆಟ್ ಘೋಷಣೆ ಮಾಡಲಾಗಿದೆ.

Karnataka assembly election 2018 : Bailahongal constituency profile

ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೇ ನೇರ ಪೈಪೋಟಿ ಇದ್ದಂತೆ ಕಾಣುತ್ತದೆ. ಎರಡು ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ನಾಯಕರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದು ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ? ಕಾದು ನೋಡಬೇಕು.

ಕ್ಷೇತ್ರ ಪರಿಚಯ : ಕಿತ್ತೂರಿನಲ್ಲಿ ಯಾರಿಗೆ ಒಲಿಯಲಿದೆ ಜಯ?

ಜೆಡಿಎಸ್ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಪ್ರಯತ್ನ ನಡೆಸುತ್ತಿದೆ. ಎಚ್.ಡಿ.ದೇವೇಗೌಡ ಅವರ ಪರಮಾಪ್ತರಾದ ಶಂಕರ ಮಾಳಗಿ ಅವರು ಅಭ್ಯರ್ಥಿ ಎಂದು ಜೆಡಿಎಸ್ ಪಕ್ಷ ಘೋಷಣೆ ಮಾಡಿದೆ.

ಕ್ಷೇತ್ರದಲ್ಲಿ ಯಾರು ಎಷ್ಟು ಮತ ಪಡೆಯುತ್ತಾರೆ ಎನ್ನುವುದಕ್ಕಿಂತ, ಯಾರು ಎಷ್ಟು ಮತ ಕಸಿಯುತ್ತಾರೆ? ಎಂಬ ಲೆಕ್ಕಾಚಾರವೇ ಪ್ರಮುಖವಾಗಿದೆ. ಈ ಬಾರಿ ಗೆಲುವು ಯಾರಿಗೆ? ಕಾದು ನೋಡಬೇಕು.

2013ರ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದ ವಿಶ್ವನಾಥ್ ಐ ಪಾಟೀಲ್ 40,709 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಜಗದೀಶ ಮೆಟಗುಡಿ 37,088, ಜೆಡಿಎಸ್‌ನ ಶಂಕರ ಮಾಡಲಗಿ 9,475 ಮತಗಳನ್ನು ಪಡೆದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Election 2018 : Read all about Bailahongal assembly constituency of Belagavi district. Get election news from Bailahongal. Know about candidates list, election results during Karnataka elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ