ನನ್ನ ಕರ್ನಾಟಕ ಜಾತ್ಯತೀತ, ಶಾಂತಿಯುತವಾಗಿರಬೇಕು: ಕೆ.ಬಿ. ಪ್ರಸನ್ನ ಕುಮಾರ್
Recommended Video

ಶಿವಮೊಗ್ಗ, ಮೇ 08 : 'ಜಾತ್ಯತೀತವಾಗಿ ರಾಜ್ಯ ಶಾಂತಿಯುತವಾಗಿ, ಸರ್ವಜನಾಂಗಳ ಶಾಂತಿಯ ತೋಟವೆಂದು ಹೇಳುತ್ತೇವೆ ಆ ರೀತಿಯಲ್ಲಿ ನಮ್ಮ ಕರ್ನಾಟಕ ಇರಬೇಕು' ಎಂದು ಶಿವಮೊಗ್ಗ ನಗರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಹೇಳಿದ್ದಾರೆ.
ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಒನ್ ಇಂಡಿಯಾ ಕನ್ನಡ ಎಲ್ಲಾ ಪಕ್ಷಗಳ ಅಭ್ಯರ್ಥಿಗಳ ಬಳಿ ನಿಮ್ಮ ಕನಸಿಕ ಕರ್ನಾಟಕ ಹೇಗಿರಬೇಕು? ಎಂದು ಅಭಿಪ್ರಾಯ ಸಂಗ್ರಹಣೆ ಮಾಡಿದೆ.
ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಆದ ಕೆ.ಬಿ. ಪ್ರಸನ್ನ ಕುಮಾರ್ ಅವರು ಒನ್ ಇಂಡಿಯಾ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಕರ್ನಾಟಕದಲ್ಲಿ ಮೊದಲು ಶಾಂತಿ ನೆಲಸಿರಬೇಕು' ಎಂದು ಹೇಳಿದರು.

'ನನ್ನ ಕನಸಿನ ಕರ್ನಾಟಕದಲ್ಲಿ ದೊಂಬಿ, ಗಲಾಟೆಗಳು ನಡೆಯಬಾರದು, ಜನರ ಮಧ್ಯೆ ಸಾಮರಸ್ಯವಿರಬೇಕು. ಜಾತ್ಯಾತೀತವಾಗಿರಬೇಕು. ಎಲ್ಲಾ ಧರ್ಮ, ಎಲ್ಲಾ ಜಾತಿಯವರು ಒಟ್ಟಿಗೆ ಸಂತೋಷದಿಂದ ಜೀವನ ಸಾಗಿಸಬೇಕು' ಎಂದು ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications