ಬೆಂಗಳೂರಿನಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲ ಪ್ರದರ್ಶನ!

ಬೆಂಗಳೂರು, ಮೇ 15: ಬೆಂಗಳೂರು ನಗರ ಜಿಲ್ಲೆಯಲ್ಲಿ 26 ವಿಧಾನಸಭಾ ಕ್ಷೇತ್ರಗಳ ಪೈಕಿ ರಲ್ಲಿ ಕಾಂಗ್ರೆಸ್ 12 ಜಯ ಸಾಧಿಸಿದ್ದರೆ ಬಿಜೆಪಿ 12 ಜೆಡಿಎಸ್‌ 2 ಸ್ಥಾನದಲ್ಲಿ ಜಯ ಗಳಿಸಿದೆ.

ಬೆಂಗಳೂರು ಹಾಗೂ ನಗರ ಗ್ರಾಮಾಂತರ ಜಿಲ್ಲೆಯಲ್ಲಿ 26 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 12 ಸ್ಥಾನಗಳನ್ನು ಗಳಿಸಿ ಮೊದಲ ಸ್ಥಾನದಲ್ಲಿದ್ದರೆ 12 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಎರಡನೇ ಸ್ಥಾನದಲ್ಲಿದೆ.

ಬೆಂಗಳೂರು ನಗರದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಬೇಕಾಗಿತ್ತು. ವಿಜಯನಗರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಕೊನೆಯ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ ಅತಿ ಹೆಚ್ಚು ಮತವನ್ನು ಗಳಿಸಿದ್ದರಿಂದ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಸಚಿವರಾದ ಕೃಷ್ಣಭೈರೇಗೌಡ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ ಕಾಂಗ್ರೆಸ್‌ನಿಂದ ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ.

Cong-Bjp equally dominants Capital city

ಬಿಜೆಪಿಯಿಂದ ಮಾಜಿ ಡಿಸಿಎಂ ಆರ್‌ ಅಶೋಕ್, ಮಾಜಿ ಸಚಿವ ಸುರೇಶ್‌ ಕುಮಾರ್ ಸೇರಿದಂತೆ ಪ್ರಮುಖರು ಮತ್ತೊಮ್ಮೆ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ನಿಂದ ಗೋಪಾಲಯ್ಯ ಎರಡನೇ ಬಾರಿ ಮಹಾಲಕ್ಷ್ಮೀ ಲೇಔಟ್‌ನಿಂದ ಆಯ್ಕೆಯಾಗಿದ್ದು, ದಾಸರಹಳ್ಳಿ ಕ್ಷೇತ್ರ ಈ ಬಾರಿ ಬಿಜೆಪಿ ಪಾಲಾಗಿದೆ.

ರಾಜ್ಯದಲ್ಲಿ ಅತೀ ಹೆಚ್ಚು ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಸಮಬಲ ಸಾಧಿಸಿವೆ. ಜೆಡಿಎಸ್ 2 ಸ್ಥಾನಗಳನ್ನು ಪಡೆದು ಸಾಧಾರಣ ಪ್ರದರ್ಶನ ತೋರಿದೆ.

ಬೆಂಗಳೂರು ಗ್ರಾಮಾಂತರ

ಕ್ಷೇತ್ರ ಗೆದ್ದವರು ಪಕ್ಷ
ನೆಲಮಂಗಲ ಡಾ. ಶ್ರೀನಿವಾಸ ಮೂರ್ತಿ ಜೆಡಿಎಸ್
ದೇವನಹಳ್ಳಿ ನಿಸರ್ಗ ನಾರಾಯಣ ಜೆಡಿಎಸ್
ದೊಡ್ಡಬಳ್ಳಾಪುರ ವೆಂಕಟರಮಣಯ್ಯ ಕಾಂಗ್ರೆಸ್
ಹೊಸಕೋಟೆ ಎಂಟಿಬಿ ನಾಗರಾಜ್ ಕಾಂಗ್ರೆಸ್

ಬೆಂಗಳೂರು ನಗರ

ಕ್ಷೇತ್ರ ಗೆದ್ದವರು ಪಕ್ಷ
ಯಲಹಂಕ ಎಸ್.ಆರ್. ವಿಶ್ವನಾಥ್ ಬಿಜೆಪಿ
ಬ್ಯಾಟರಾಯನಪುರ ಕೃಷ್ಣ ಬೈರೇಗೌಡ ಕಾಂಗ್ರೆಸ್
ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಬಿಜೆಪಿ
ಹೆಬ್ಬಾಳ ಬೈರತಿ ಸುರೇಶ್ ಕಾಂಗ್ರೆಸ್
ಗಾಂಧಿನಗರ ದಿನೇಶ್ ಗುಂಡೂರಾವ್ ಕಾಂಗ್ರೆಸ್
ಶಿವಾಜಿ ನಗರ ರೋಷನ್ ಬೇಗ್ ಕಾಂಗ್ರೆಸ್
ರಾಜಾಜಿನಗರ ಸುರೇಶ್ ಕುಮಾರ್ ಬಿಜೆಪಿ
ಮಲ್ಲೇಶ್ವರಂ ಅಶ್ವತ್ಥ್ ನಾರಾಯಣ್ ಬಿಜೆಪಿ
ಚಿಕ್ಕಪೇಟೆ ಉದಯ್ ಗುರುಡಾಚಾರ್ ಬಿಜೆಪಿ
ಬಿಟಿಎಂ ಬಡಾವಣೆ ರಾಮಲಿಂಗಾರೆಡ್ಡಿ ಕಾಂಗ್ರೆಸ್
ಪದ್ಮನಾಭನಗರ ಆರ್.ಅಶೋಕ್ ಬಿಜೆಪಿ
ಮಹಾಲಕ್ಷ್ಮಿ ಬಡಾವಣೆ ಗೋಪಾಲಯ್ಯ ಜೆಡಿಎಸ್
ಬಸವನಗುಡಿ ರವಿ ಸುಬ್ರಹ್ಮಣ್ಯ ಬಿಜೆಪಿ
ಚಾಮರಾಜಪೇಟೆ ಜಮೀರ್ ಅಹ್ಮದ್ ಕಾಂಗ್ರೆಸ್
ಪುಲಿಕೇಶಿ ನಗರ ಅಖಂಡ ಶ್ರೀನಿವಾಸ ಮೂರ್ತಿ ಕಾಂಗ್ರೆಸ್
ಸರ್ವಜ್ಞ ನಗರ ಕೆ.ಜೆ.ಜಾರ್ಜ್ ಕಾಂಗ್ರೆಸ್
ಶಾಂತಿ ನಗರ ಎನ್.ಎ. ಹ್ಯಾರಿಸ್ ಕಾಂಗ್ರೆಸ್
ಗೋವಿಂದರಾಜ ನಗರ ವಿ.ಸೋಮಣ್ಣ ಬಿಜೆಪಿ
ಮಹದೇವಪುರ ಅರವಿಂದ ಲಿಂಬಾವಳಿ ಬಿಜೆಪಿ
ಬೆಂಗಳೂರು ದಕ್ಷಿಣ ಎಂ.ಕೃಷ್ಣಪ್ಪ ಬಿಜೆಪಿ
ವಿಜಯ ನಗರ ಎಂ.ಕೃಷ್ಣಪ್ಪ ಕಾಂಗ್ರೆಸ್
ಕೆ.ಆರ್.ಪುರ ಬೈರತಿ ಬಸವರಾಜ್ ಕಾಂಗ್ರೆಸ್
ದಾಸರಹಳ್ಳಿ ಮಂಜುನಾಥ್‌ ಜೆಡಿಎಸ್
ಯಶವಂತಪುರ ಎಸ್‌ಟಿ ಸೋಮಶೇಖರ್‌ ಕಾಂಗ್ರೆಸ್‌
ಆನೇಕಲ್ ಶಿವಣ್ಣ ಕಾಂಗ್ರೆಸ್‌
ಸಿ.ವಿ.ರಾಮನ್ ನಗರ ಎಸ್‌.ರಘು ಬಿಜೆಪಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+