ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ರಾಜ್ಯಗಳಲ್ಲಿ ಲೋಕಸಭೆ, ವಿಧಾನಸಭೆ ಉಪಚುನಾವಣೆ ಫಲಿತಾಂಶ 2018 LIVE

By Prasad
|
Google Oneindia Kannada News

ನವದೆಹಲಿ, ಮೇ 31 : ಕರ್ನಾಟಕದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆ ಮತ್ತು ದೇಶದ ಇತರ ರಾಜ್ಯಗಳಲ್ಲಿ 4 ಲೋಕಸಭೆ ಮತ್ತು 9 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ.

ರಾಜರಾಜೇಶ್ವರಿ ನಗರದಲ್ಲಿ ಮೈತ್ರಿಕೂಟದ ಅಂಗಪಕ್ಷಗಳಾದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟುಕೊಂಡು ಜಿದ್ದಾಜಿದ್ದಿ ಕಣಕ್ಕಿಳಿದಿದ್ದರು. ಕರ್ನಾಟಕದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಪ್ರಮುಖವಾಗಿದೆ. ಇಬ್ಬರಲ್ಲೊಬ್ಬರು ಗೆದ್ದರೂ ಅಷ್ಟೇ ಸೋತರೂ ಅಷ್ಟೆ, ಗೆಲುವು-ಸೋಲು ಮೈತ್ರಿಕೂಟಕ್ಕೇ.

ಈ ಎಲ್ಲ ಕ್ಷೇತ್ರಗಳಿಗೆ ಮೇ 28ರಂದು ಸೋಮವಾರ ಮತದಾನ ನಡೆದಿತ್ತು. ಲೋಕಸಭೆ ಚುನಾವಣೆಯಲ್ಲಿ ಮತ್ತು ಇತ್ತೀಚೆಗೆ ಹಲವಾರು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ್ದ ಭಾರತೀಯ ಜನತಾ ಪಕ್ಷ ಉಪಚುನಾವಣೆಗಳಲ್ಲಿ ಮುಗ್ಗರಿಸಿ ಬಿದ್ದಿದೆ.

ನಡೆದ 4 ಲೋಕಸಭೆ, 9 ವಿಧಾನಸಭೆ ಉಪಚುನಾವಣೆ ಮತ್ತು ಕರ್ನಾಟಕದಲ್ಲಿ ನಡೆದ ಒಂದು ವಿಧಾನಸಭೆ ಚುನಾವಣೆಗಳಲ್ಲಿ, ಕೇವಲ 1 ಲೋಕಸಭೆ ಮತ್ತು 1 ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಭಾರತೀಯ ಜನತಾ ಪಕ್ಷ ಗೆದ್ದಿದ್ದು, ಉಳಿದರಲ್ಲಿ ಸೋತು ಸುಣ್ಣವಾಗಿದೆ. ಮೈತ್ರಿಕೂಟಗಳು ಬಿಜೆಪಿಯನ್ನು ಸದೆಬಡಿದಿವೆ.

By Election Results 2018 LIVE | By Poll Results 2018 LIVE Updates

Newest FirstOldest First
5:36 PM, 31 May

ಇವಿಎಂ ಮತಎಣಿಕೆಯ ಬಗ್ಗೆ ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ತಕರಾರು ತೆಗೆದಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೆ ಫಲಿತಾಂಶ ಪ್ರಕಟಿಸಬಾರದು. ಅವಶ್ಯಕತೆ ಬಿದ್ದರೆ ಕೋರ್ಟಿಗೂ ಹೋಗಲು ರೆಡಿ ಅಂದಿದ್ದಾರೆ.
2:17 PM, 31 May

ಉತ್ತರ ಪ್ರದೇಶದ ಕೈರಾನಾ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನು ಆರ್‌ಎಲ್‌ಡಿ-ಎಸ್‌ಪಿ ಅಭ್ಯರ್ಥಿ ತಬಸುಮ್ ಹಸನ್ ಸೋಲಿಸಿದ್ದಾರೆ.
2:13 PM, 31 May

ಪಾಲಘರ್ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯ ರಾಜೇಂದ್ರ ಗಾವಿತ್ ಅವರು ಶಿವಸೇನಾದ ಶ್ರೀನಿವಾಸ್ ವಾನಗಾ ಅವರನ್ನು ಸೋಲಿಸಿದ್ದಾರೆ.
1:52 PM, 31 May

ಪಂಜಾಬ್‌ನ ಶಹಕೋಟ್ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರದೇವ್ ಸಿಂಗ್ ಲಾದಿ ಅವರು 38,802 ಮತಗಳಿಂದ ಗೆಲುವು ಸಾಧಿಸಿದ್ದಾರೆ.
1:51 PM, 31 May

ಪಶ್ಚಿಮ ಬಂಗಾಳದ ಮಹೇಶ್ತಲ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಸುಜಿತ್ ಘೋಶ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ದುಲಾಲ್ ಚಂದ್ರ ದಾಸ್ ಮಣಿಸಿದ್ದಾರೆ.
1:48 PM, 31 May

ಉತ್ತರಾಖಂಡದ ಥರಾಲಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಥರಾಲಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಮಗನ್ ಲಾಲ್ ಶಾ ಅವರು ಫೆಬ್ರುವರಿಯಲ್ಲಿ ನಿಧನರಾಗಿದ್ದರು.
1:43 PM, 31 May

ಆರ್‌ಆರ್ ನಗರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ 1,08,064 ಮತ, ಬಿಜೆಪಿಯ ತುಳಸಿ ಮುನಿರಾಜು 85,572 ಮತ್ತು ಜೆಡಿಎಸ್‌ನ ರಾಮಚಂದ್ರ 60,360 ಮತ ಪಡೆದುಕೊಂಡಿದ್ದಾರೆ.
Advertisement
1:43 PM, 31 May

ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ 25,492 ಮತಗಳಿಂದ ಗೆಲುವು ಸಾಧಿಸಿದ್ದಾರೆ.
1:31 PM, 31 May

ಆರ್ ಜೆಡಿಯ ಗೆಲುವಿನ ಅಂತರಕ್ಕಿಂತ (ಆಡಳಿತಾರೂಢ) ಜೆಡಿಯು ಕಡಿಮೆ ಮತ ಪಡೆದಿದೆ. ನಿತಿಶ್ ಕುಮಾರ್ ಯುಟರ್ನ್ ತೆಗೆದುಕೊಂಡಿದ್ದಕ್ಕೆ ಬಿಹಾರದ ಜನತೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ - ಜೋಕಿಹಾಟ್ ಗೆಲುವಿನ ನಂತರ ತೇಜಸ್ವಿ ಯಾದವ್ ಪ್ರತಿಕ್ರಿಯೆ.
12:53 PM, 31 May

ರಾಜರಾಜೇಶ್ವರಿ ನಗರದಲ್ಲಿ 16ನೇ ಸುತ್ತಿನ ನಂತರ ಮುನಿರತ್ನ 1,03,195, ಮುನಿರಾಜು ಗೌಡ 69,769, ಜಿಎಚ್ ರಾಮಚಂದ್ರ 54,289 ಮತ ಗಳಿಸಿದ್ದಾರೆ. ಇನ್ನೇನು ಮುನಿರತ್ನ ಜಯ ಘೋಷಣೆ ಮಾಡುವುದು ಬಾಕಿಯಿದೆ.
12:49 PM, 31 May

ಉತ್ತರ ಪ್ರದೇಶದ ನೂಪುರ ವಿಧಾನಸಭೆ ಕ್ಷೇತ್ರವನ್ನು ಸಮಾಜವಾದಿ ಪಕ್ಷದ ನಯೀಮ್ ಉಲ್ ಹಸನ್ ಅವರು ಬಿಜೆಪಿಯ ಪ್ರತಿಸ್ಪರ್ಧಿ ಅವಿನಾಶ್ ಸಿಂಗ್ ಅವರನ್ನು 6,211 ಮತಗಳಿಂದ ಸೋಲಿಸಿ ಜಯಭೇರಿ ಬಾರಿಸಿದ್ದಾರೆ.
12:36 PM, 31 May

ಕೇರಳದ ಚೆಂಗನ್ನೂರು ವಿಧಾನಸಭೆ ಚುನಾವಣೆಯನ್ನು ಸಿಪಿಐ(ಎಂ)ನ ಸಜಿ ಚೆರಿಯನ್ ಅವರು ಗೆದ್ದುಕೊಂಡಿದ್ದಾರೆ. ಸಿಪಿಐ(ಎಂ)ನ ಶಾಸಕ ಕೆಕೆ ರಾಮಚಂದ್ರನ್ ನಾಯರ್ ಅವರು ಅಸುನೀಗಿದ್ದರಿಂದ ಉಪಚುನಾವಣೆ ನಡೆಸಲಾಗಿತ್ತು.
Advertisement
12:13 PM, 31 May

ರಾಜರಾಜೇಶ್ವರಿ ನಗರದಲ್ಲಿ 14ನೇ ಸುತ್ತಿನ ಮತಎಣಿಕೆಯ ನಂತರ ಬಂದಿರುವ ಮತಗಳು ಹೀಗಿವೆ : ಮುನಿರತ್ನ 97,440, ಮುನಿರಾಜು ಗೌಡ 56,278, ಜಿಎಚ್ ರಾಮಚಂದ್ರ 45,345
11:56 AM, 31 May

ಉತ್ತರ ಪ್ರದೇಶದ ಕೈರಾನಾ ಲೋಕಸಭೆ ಕ್ಷೇತ್ರದಲ್ಲಿ 13ನೇ ಸುತ್ತಿನ ಮತಎಣಿಕೆಯ ನಂತರ ಕಾಂಗ್ರೆಸ್ ನ ತಬಸ್ಸುಮ್ ಅವರು ಬಿಜೆಪಿಯ ಮೃಗಾಂಕಾ ಅವರಿಂತ 41,391 ಮತಗಳಿಂದ ಮುಂದಿದ್ದಾರೆ.
11:46 AM, 31 May

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಮ್ಮಟೆಯ ಸದ್ದು, ಶಿಳ್ಳೆಗಳು, ಆಬುಲಿ ಮುಡಿದು ಬಂದಿರುವ ಕಾರ್ಯಕರ್ತೆಯರ ನರ್ತನ, ಗುಲಾಲ್ ಎರಚಾಟ, ಅಭಿಮಾನಿಗಳ ಕಿರುಚಾಟ ನಿಲ್ಲುತ್ತಲೇ ಇಲ್ಲ.
11:42 AM, 31 May

ರಾಜರಾಜೇಶ್ವರಿ ನಗರದಲ್ಲಿ 13ನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 92,625, ಮುನಿರಾಜು ಗೌಡ 49,216, ಜಿಎಚ್ ರಾಮಚಂದ್ರ 40,469 ಮತ ಪಡೆದಿದ್ದಾರೆ. ಈಗಾಗಲೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸಾಹದಲ್ಲಿದ್ದಾರೆ.
11:27 AM, 31 May

ನಾಗಾಲ್ಯಾಂಡ್ ಲೋಕಸಭೆ ಕ್ಷೇತ್ರದಲ್ಲಿ ನಾಗಾ ಪೀಪಲ್ಸ್ ಫ್ರಂಟ್ ನ ಅಭ್ಯರ್ಥಿ ನ್ಯಾಷನಲಿಸ್ಟ್ ಡೆಮಾಕ್ರೆಟಿಕ್ ಪ್ರೊಗ್ರೆಸಿವ್ ಪಾರ್ಟಿಯ ಅಭ್ಯರ್ಥಿಗಿಂತ 11 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
11:19 AM, 31 May

ಮಹಾರಾಷ್ಟ್ರದ ಪಾಲ್ಘರ್ ಲೋಕಸಭೆ ಕ್ಷೇತ್ರದ ಮತಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗವಿತ್ ರಾಜೇಂದ್ರ ಧೇಡ್ಯಾ ಅವರು 17,417 ಮತಗಳಿಂದ ಮುಂದಿದ್ದಾರೆ.
11:18 AM, 31 May

ಜಾರ್ಖಂಡ್ ನ ಸಿಲ್ಲಿ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಫಲಿತಾಂಶ : ಜೆಎಂಎಂನ ಸೀಮಾ ದೇವಿ ಅವರು 6ನೇ ಸುತ್ತಿನ ಮತಎಣಿಕೆಯ ನಂತರ 296 ಮತಗಳ ಮುನ್ನಡೆ ಸಾಧಿಸಿದ್ದಾರೆ.
11:04 AM, 31 May

ರಾಜರಾಜೇಶ್ವರಿ ನಗರದಲ್ಲಿ 10ನೇ ಸುತ್ತಿನ ಮತಎಣಿಕೆಯ ನಂತರ ಮುನಿರತ್ನ 80,282 ಮುನಿರಾಜು ಗೌಡ 34,064 ಜಿಎಚ್ ರಾಮಚಂದ್ರ 23,526 ಮತಗಳನ್ನು ಪಡೆದಿದ್ದಾರೆ.
11:02 AM, 31 May

ಭಂಡಾರ-ಗೋಂಡಿಯಾ ಲೋಕಸಭೆ ಕ್ಷೇತ್ರದಲ್ಲಿ ಎನ್‌ಸಿಪಿ, ಪಶ್ಚಿಮ ಬಂಗಾಳದ ಮಹೇಶ್ತಲದಲ್ಲಿ ಟಿಎಂಸಿ, ಮೇಘಾಲಯದ ಅಂಪಾಟಿಯಲ್ಲಿ ಕಾಂಗ್ರೆಸ್, ಉತ್ತರ ಪ್ರದೇಶದ ನೂರಪುರದಲ್ಲಿ ಸಮಾಜವಾದಿ ಪಕ್ಷ, ಕೇರಳದ ಚೆಂಗನ್ನೂರುನಲ್ಲಿ ಸಿಪಿಐ(ಎಂ) ಮುನ್ನಡೆ ಸಾಧಿಸಿವೆ.
10:45 AM, 31 May

ಜಾರ್ಖಂಡ್ ನ ಗೋಮಿಯಾ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಮಾಧವ ಲಾಲ್ ಸಿಂಗ್ 7,174 ಮತಗಳ ಅಂತರದಿಂದ ಮುಂದಿದ್ದಾರೆ.
10:41 AM, 31 May

ರಾಜರಾಜೇಶ್ವರಿ ನಗರದಲ್ಲಿ 8ನೇ ಸುತ್ತಿನ ಮತಎಣಿಕೆಯ ನಂತರ - ಮುನಿರತ್ನ 70,224 (ಕಾಂಗ್ರೆಸ್), ಮುನಿರಾಜು ಗೌಡ 27,946 (ಬಿಜೆಪಿ), ಜಿಎಚ್ ರಾಮಚಂದ್ರ 15,450 (ಜೆಡಿಎಸ್)
10:28 AM, 31 May

ಪಂಜಾಬ್ ನ ಶಾಹ್ ಕೋಟ್ ನಲ್ಲಿ 6ನೇ ಸುತ್ತಿ ಮತಎಣಿಕೆಯ ನಂತರ ಕಾಂಗ್ರೆಸ್ ಅಭ್ಯರ್ಥಿ ಲಡ್ಡಿ ಶೇರೋವಾಲಿಯಾ ಅವರು 12 ಸಾವಿರ ಮತಗಳ ಅಂತರದಿಂದ ಮುಂದಿದ್ದಾರೆ.
10:19 AM, 31 May

ರಾಜರಾಜೇಶ್ವರಿ ನಗರದಲ್ಲಿ 6ನೇ ಸುತ್ತಿನ ನಂತರ - ಮುನಿರತ್ನ 52,285 (ಕಾಂಗ್ರೆಸ್), ಮುನಿರಾಜು ಗೌಡ 20,858 (ಬಿಜೆಪಿ), ಜಿಎಚ್ ರಾಮಚಂದ್ರ 10,123 (ಜೆಡಿಎಸ್)
10:18 AM, 31 May

ಕೈರಾನಾ ಉಪಚುನಾವಣೆ : ಬಿಜೆಪಿಯ ಮೃಗಾಂಕಾ ಸಿಂಗ್ - 45,368 ಮತಗಳು; ಆರ್ ಎಲ್ ಡಿ - ತಬಸ್ಸುಮ್ ಹಸನ್ - 55,082 ಮತಗಳು
10:07 AM, 31 May

ಮಹಾರಾಷ್ಟ್ರದ ಭಂಡಾರ-ಗೋಂಡಿಯಾ ಕ್ಷೇತ್ರದಲ್ಲಿ ಎನ್‌ಸಿಪಿಯ ಅಭ್ಯರ್ಥಿ 3,100 ಮತಗಳಿಂದ ಮುಂದಿದ್ದು, ಬಿಜೆಪಿ ಅಭ್ಯರ್ಥಿ ಹಿಂದಿದ್ದಾರೆ.
9:56 AM, 31 May

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ನ ಮುನಿರತ್ನ 41,625, ಬಿಜೆಪಿಯ ಮುನಿರಾಜು ಗೌಡ 17,948, ಜೆಡಿಎಸ್ ನ ಜಿಎಚ್ ರಾಮಚಂದ್ರ 8,470 ಮತ ಗಳಿಸಿದ್ದು, ಕಾಂಗ್ರೆಸ್ ಗೆಲುವು ಖಚಿತವಾಗಿದೆ.
9:53 AM, 31 May

ಮಹಾರಾಷ್ಟ್ರದ ಪಾಲ್ಘರ್ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಗವಿತ್ ರಾಜೇಂದ್ರ ಘೇಡ್ಯಾ ಅವರು 6 ಸಾವಿರ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
9:29 AM, 31 May

ಉತ್ತರ ಪ್ರದೇಶದ ಕೈರಾನಾದಲ್ಲಿ ಮೊದಲ ಸುತ್ತಿನ ನಂತರ ಆರ್ಎಲ್ಡಿ ಅಭ್ಯರ್ಥಿ ತಬಸ್ಸುಮ್ ಹಸನ್ 3,700 ಮತಗಳು ಮತ್ತು ಬಿಜೆಪಿಯ ಮೃಗಾಂಕಾ ಸಿಂಗ್ 3,746 ಮತ ಗಳಿಸಿದ್ದಾರೆ. ಬಿಜೆಪಿ ಸೋತರೆ ಮತ್ತು ಮುಖಭಂಗ ಅನುಭವಿಸಿದಂತಾಗುತ್ತದೆ.
READ MORE

English summary
Lok sabha and Assembly By poll Results 2018 Live Updates in Kannada. Rajarajeshwari Nagar assembly election results 2018 LIVE updates in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X