ಬಿಜೆಪಿ 2ನೇ ಪಟ್ಟಿಯಲ್ಲಿ ಕಾಣಿಸಿಕೊಂಡ ಹೊಸ ಮುಖಗಳು

Posted By:
Subscribe to Oneindia Kannada
   Karnataka Elections 2018 : ಬಿಜೆಪಿಯ 82 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ | ಇದರಲ್ಲಿ 22 ಹೊಸ ಮುಖಗಳಿವೆ

   ಬೆಂಗಳೂರು, ಏಪ್ರಿಲ್ 16 : ಕರ್ನಾಟಕ ವಿಧಾನಸಭೆ ಚುನಾವಣೆಗೆ 82 ಅಭ್ಯರ್ಥಿಗಳ ಹೆಸರುಳ್ಳ 2ನೇ ಪಟ್ಟಿಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ (ಏಪ್ರಿಲ್ 16) ದಂದು ಪ್ರಕಟಿಸಿದೆ.

   ಕರ್ನಾಟಕ ವಿಧಾನಸಭೆ ಚುನಾವಣೆ 2018ಗಾಗಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಹೊಸ ಮಾದರಿ ತಂತ್ರ ಬಳಸುತ್ತಿರುವುದು ಎರಡನೇ ಪಟ್ಟಿಯಲ್ಲಿ ಸ್ಪಷ್ಟವಾಗಿದೆ.

   ಬಿಜೆಪಿ 2ನೇ ಪಟ್ಟಿ ಬಿಡುಗಡೆ : 82 ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ

   ಕೇಂದ್ರ ಚುನಾವಣಾ ಸಮಿತಿಯಲ್ಲಿ ಬಿ.ಎಸ್ ಯಡಿಯೂರಪ್ಪ, ಪ್ರಕಾಶ್ ಜಾವಡೇಕರ್, ಮುರಳಿಧರ್ ರಾವ್ ಸೇರಿದಂತೆ ಅನೇಕ ನಾಯಕರು, ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಚರ್ಚೆ ನಡೆಸಿ, ಹೊಸ ಮುಖಗಳಿಗೆ ಆದ್ಯತೆ ನೀಡಿದ್ದಾರೆ.

   Assembly Elections 2018: BJP 2nd list of 82 candidates 22 new faces

   ಗುಜರಾತ್ ಮಾದರಿಯಲ್ಲಿ ಹೊಸ ಮುಖಗಳಿಗೆ ಅವಕಾಶ ಕಲ್ಪಿಸಲಿದೆ. ಹೊಸಬರ ಪೈಕಿ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಅವಕಾಶ ನೀಡಲಾಗಿದೆ. ಉಡುಪಿಯಲ್ಲಿ ಹೊಸಬರಿಗೆ ಅವಕಾಶ ನೀಡಬಹುದೇ ಎಂಬ ಕುತೂಹಲವೂ ಇದೆ.

   1. ಭಟ್ಕಳ : ಸುನೀಲ್ ನಾಯ್ಕ್

   2. ಪುತ್ತೂರು : ಸಂಜೀವ್ ಮಠಂದೂರು

   3. ಬಂಟ್ವಾಳ : ರಾಜೇಶ್ ನಾಯ್ಕ

   4.- ಮೂಡಬಿದ್ರೆ : ಉಮಾನಾಥ್ ಕೋಟ್ಯಾನ್

   5. ಬೆಳ್ತಂಗಡಿ : ಹರೀಶ್ ಪೂಂಜ

   6. ಅರಕಲಗೂಡು : ಯೋಗಾ ರಮೇಶ್

   7. ಮಾಗಡಿ : ಹನುಮಂತ ರಾಜು

   8. ಶಾಂತಿನಗರ : ವಾಸುದೇವ ಮೂರ್ತಿ

   9. ಕೋಲಾರ : ಓಂ ಶಕ್ತಿ ಚಲಪತಿ

   10. ಚಿಕ್ಕಬಳ್ಳಾಪುರ : ಡಾ. ಮಂಜುನಾಥ್

   11. ಶಿರಾ : ಬಿ.ಕೆ ಮಂಜುನಾಥ್

   12. ಕೊರಟಗೆರೆ : ವೈ ಹುಚ್ಚಯ್ಯ

   13. ಕಡೂರು : ಬೆಳ್ಳಿ ಪ್ರಕಾಶ್

   14. ಬೈಂದೂರು : ಬಿ ಸುಕುಮಾರ್ ಶೆಟ್ಟಿ

   15. ಶಿವಮೊಗ್ಗ ಗ್ರಾಮೀಣ : ಅಶೋಕ್ ನಾಯಕ್

   16. ಬೀದರ್ : ಸೂರ್ಯಕಾಂತ್ ನಾಗಮಾರಪಲ್ಲಿ

   17. ಸೇಡಂ : ರಾಜಕುಮಾರ್ ಪಾಟೀಲ್ ತೆಲ್ಕೂರ್

   18. ಗುರುಮಿಠಕಲ್ : ಸಾಯಿಬಣ್ಣ ಬೋರ್ ಬಂಡ

   19. ಇಂಡಿ : ದಯಾಸಾಗರ್ ಪಾಟೀಲ್

   20. ಯಮಕನಮರಡಿ : ಮಾರುತಿ ಅಷ್ಟಗಿ

   21. ಚಿಕ್ಕೋಡಿ ಸದಲಗ : ಅಣ್ಣಾ ಸಾಹೇಬ್ ಜೊಲ್ಲೆ

   22. ಹನೂರು : ಪ್ರೀತಮ್ ನಾಗಪ್ಪ

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Elections 2018: BJP has announced 2nd list of 82 candidates for upcoming assembly elections. The list has 22 new faces including Harish Poonja.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ