• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅನರ್ಹ ಶಾಸಕರ ಕ್ಷೇತ್ರ ಪರಿಚಯ: ಕೆಆರ್ ಪುರನಲ್ಲಿ ಯಾರು ಅಭ್ಯರ್ಥಿ?

|

ಸಿದ್ದರಾಮಯ್ಯ ಅವರ ಆಪ್ತರ ವಲಯದಲ್ಲಿ ಗುರುತಿಸಿಕೊಂಡಿದ್ದ ಶಾಸಕರಲ್ಲಿ ಕೃಷ್ಣರಾಜಪುರದ ಬೈರತಿ ಬಸವರಾಜ್ ಒಬ್ಬರು. ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನ ಸ್ಫೋಟಗೊಂಡು ಸಾಮೂಹಿಕವಾಗಿ ಶಾಸಕರು ರಾಜೀನಾಮೆ ನೀಡಲು ವಿಧಾನಸೌಧಕ್ಕೆ ತೆರಳಿದ್ದ ಸಂದರ್ಭದಲ್ಲಿ ಬೈರತಿ ಅವರು ಕೂಡ ಇದ್ದರು. ನಂತರದ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆಯನ್ನೇ ಉಂಟುಮಾಡಿತು.

ಈಗ ಅನರ್ಹರಾದ ಶಾಸಕರಲ್ಲಿ ಬೈರತಿ ಬಸವರಾಜ್ ಕೂಡ ಒಬ್ಬರು. ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದ ಕೆಆರ್ ಪುರ ಕ್ಷೇತ್ರಕ್ಕೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಅನರ್ಹತೆ ಎದುರಿಸುತ್ತಿರುವ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎನ್ನುವುದು ಚುನಾವಣಾ ಆಯೋಗದ ಹೇಳಿಕೆ. ಆದರೆ ಅವರ ಭವಿಷ್ಯ ಸುಪ್ರೀಂಕೋರ್ಟ್ ಆದೇಶವನ್ನು ಅವಲಂಬಿಸಿದೆ.

ಮಾಜಿ ಶಾಸಕ ನಂದೀಶ್ ರೆಡ್ಡಿ ಈಗಾಗಲೇ ಚುನಾವಣೆಯ ಅಖಾಡಕ್ಕೆ ಇಳಿಯಲು ಸಿದ್ಧತೆ ನಡೆಸಿದ್ದಾರೆ. ಇದು ಬಿಜೆಪಿ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬೈರತಿ ಅವರಿಗೆ ಅವಕಾಶ ಸಿಗದೆ ಹೋದರೆ ಬಿಜೆಪಿಯಿಂದ ನಂದೀಶ್ ರೆಡ್ಡಿ ಕಣಕ್ಕಿಳಿಯುವುದು ಖಚಿತ. ಒಂದು ವೇಳೆ ಬೈರತಿ ಅವರೇ ಬಿಜೆಪಿಯ ಅಭ್ಯರ್ಥಿಯಾಗುವ ಸನ್ನಿವೇಶ ಬಂದರೆ ಬಂಡಾಯದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಕೆಆರ್ ಪುರ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಹಲವು ಅವಕಾಶಗಳಿವೆ. ನಾರಾಯಣಸ್ವಾಮಿ, ಉದಯ್ ಕುಮಾರ್ ರೆಡ್ಡಿ ಮತ್ತು ಧನಂಜಯ ಅವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಇದೆ. ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವುದರಿಂದ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಡಿ.ಎ ಗೋಪಾಲ್ ಅವರು ಈ ಬಾರಿ ಕೂಡ ಕಣಕ್ಕಿಳಿಯಬಹುದು.

ಆದರೆ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನೇರ ಹಣಾಹಣಿ ಇದೆ. 2008ರ ಚುನಾವಣೆಯಲ್ಲಿ ಬಿಜೆಪಿಯ ನಂದೀಶ್ ರೆಡ್ಡಿ ಇಲ್ಲಿ ಜಯಗಳಿಸಿದ್ದರು. 2013 ಮತ್ತು 2018ರ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಬೈರತಿ ಬಸವರಾಜ್ ಈಗ ಅನರ್ಹರಾಗಿರುವುದರಿಂದ ಯಾವ ಬೆಳವಣಿಗೆಗಳು ಆಗಬಹುದು ಎಂಬ ಕುತೂಹಲವಿದೆ.

ವಿಧಾನಸಭಾ ಕ್ಷೇತ್ರ ಸಂಖ್ಯೆ 151

ಕಳೆದ ಚುನಾವಣೆಯಲ್ಲಿ ಗೆದ್ದ ಶಾಸಕ- ಬಿ.ಎ ಬಸವರಾಜ (ಕಾಂಗ್ರೆಸ್)

ಸೋತ ಅಭ್ಯರ್ಥಿ ಎನ್. ಎಸ್ ನಂದೀಶ ರೆಡ್ಡಿ (ಬಿಜೆಪಿ)

ಸಮಸ್ಯೆಗಳು: ಬೆಂಗಳೂರು ದಕ್ಷಿಣ ಕ್ಷೇತ್ರದ ನಂತರ ಅತ್ಯಧಿಕ ಮತದಾರರನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಕ್ಷೇತ್ರ ಪುನರ್ವಿಂಗಡಣೆ ಮಾಡಲು ಮನವಿ ಕೂಡಾ ಇದೆ. ಮತದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಸಮಸ್ಯೆಗಳೂ ಹಾಗಿಯೇ ಇವೆ. ಹೊಸಕೋಟೆ ಮಾರ್ಗವಾಗಿ ಹೆದ್ದಾರಿ ಇರುವುದರಿಂದ ಸಂಚಾರ ಸಮಸ್ಯೆ ಇದೆ. ಪೊಲೀಸ್ ವ್ಯವಸ್ಥೆ ಸುಧಾರಿಸಬೇಕಾಗಿದೆ. ಇನ್ನು ಕುಡಿಯುವ ನೀರು ಸಮಸ್ಯೆ ಹಾಗೆಯೇ ಇದೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮಾಡಿಸಲು ಜನ ಪರದಾಡುತ್ತಿದ್ದಾರೆ. ನಕಲಿ ಕಾರ್ಡ್ ಬಳಕೆ ಬಗ್ಗೆ ಇತ್ತೀಚೆಗೆ ಭಾರಿ ಗದ್ದಲ ಏರ್ಪಟ್ಟಿತ್ತು.

ವಾರ್ಡ್: ಹೊರಮಾವು, ರಾಮಮೂರ್ತಿ ನಗರ, ವಿಜ್ಞಾನ ಪುರ, ಕೆಆರ್ ಪುರಂ, ಬಸವನ ಪುರ, ದೇವಸಂದ್ರ, ಎ ನಾರಾಯಣ ಪುರ, ವಿಜ್ಞಾನನಗರ, ಎಚ್ಎಎಲ್ ಏರ್ ಪೋರ್ಟ್

* ಮತದಾರರ ಸಂಖ್ಯೆ: 4,38,156. ಕಳೆದ ಬಾರಿ 22 ಮಂದಿ ಸ್ಪರ್ಧಿಸಿದ್ದರು.

* 2018ರ ವಿಧಾನಸಭೆ ಚುನಾವಣೆ

ಬೈರತಿ ಬಸವರಾಜ್ 135404 ಮತಗಳು.

ನಂದೀಶ್ ರೆಡ್ಡಿ 102675 ಮತಗಳು.

ಜೆಡಿಎಸ್ ಅಭ್ಯರ್ಥಿ ಗೋಪಾಲ್ 6,578 ಮತಗಳು.

English summary
KR Pura witnessing by elections in October 21 after Congress MLA Byrathi Basavaraj got disqualifed. Here is the profile of KR Puram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X