ಟೈಮ್ಸ್ ನೌ ಸಮೀಕ್ಷೆ: ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ
ಕರ್ನಾಟಕ ವಿಧಾನಸಭೆ ಚುನಾವಣೆ 2018 ರಲ್ಲಿ ರಾಜ್ಯದಲ್ಲಿ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಆಗಲಿದೆಯಾದರೂ ಅತಂತ್ರ ಸರ್ಕಾರ ನಿರ್ಮಾಣವಾಗುತ್ತದೆ ಎಂದು ಟೌಮ್ಸ್ ನೌ ವಾಹಿನಿಯ ನಡೆಸಿರುವ ಸಮೀಕ್ಷೆ ಹೇಳುತ್ತಿದೆ.
ಟೈಮ್ಸ್ ನೌ ಸುದ್ದಿ ವಾಹಿನಿಯು ಕರ್ನಾಟಕ ಚುನಾವಣೆಯ ಕುರಿತು ಮಾಡಿರುವ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ 91 ಸೀಟುಗಳು ದೊರಕುತ್ತಿದ್ದರೆ, ಬಿಜೆಪಿ 89 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಹಾಗೂ 4 ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ.
ಇಂದೇ ಎಬಿಪಿ ನ್ಯೂಸ್ ಸಿಎಸ್‌ಡಿಎಸ್ ಸಮೀಕ್ಷೆ ಸಹ ಹೊರಬಿದ್ದಿದ್ದು ಆ ಸಮೀಕ್ಷೆಯ ಪ್ರಕಾರವೂ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಿದೆ.
ಟೈಮ್ಸ್ ನೌ ಸಂಸ್ಥೆಯು ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ, ಹಳೆ ಮೈಸೂರು ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಬೆಂಗಳೂರು ವಿಭಾಗಗಳಲ್ಲಿ ಸಮೀಕ್ಷೆ ನಡೆಸಿದ್ದು ಪ್ರತಿಯೊಂದು ಭಾಗದಲ್ಲಿ ಯಾವ ಪಕ್ಷ ಹೆಚ್ಚು ಸೀಟು ಗಳಿಸಲಿದೆ ಎಂಬುದನ್ನು ಊಹಿಸಿದೆ.\

ಹೈ-ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಎರಡನೇ ಸ್ಥಾನ
ಹೈದರಾಬಾದ್ ಕರ್ನಾಟಕ ಕಾಂಗ್ರೆಸ್ ಕೋಟೆ ಎನ್ನಲಾಗುತ್ತದೆಯಾದರೂ ಸಮೀಕ್ಷೆ ಪ್ರಕಾರ ಅಲ್ಲಿ ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಹೈ-ಕರ್ನಾಟಕದಲ್ಲಿ ಬಿಜೆಪಿಗೆ 15 ಸೀಟು ಪ್ರಾಪ್ತವಾದರೆ, ಕಾಂಗ್ರೆಸ್‌ಗೆ 12, ಜೆಡಿಎಸ್‌ಗೆ 3 ಹಾಗೂ ಜೆಡಿಎಸ್‌ಗೆ 1 ಸೀಟು ದೊರಕಲಿದೆ.

ಬಿಜೆಪಿಯ ಬಿಟ್ಟು ಕೈ ಹಿಡಿದ ಕರಾವಳಿ
ಬಿಜೆಪಿಯ ಬೆಲ್ಟ್ ಎನ್ನಲಾಗುವ ಕರಾವಳಿ ಕರ್ನಾಟಕ ಕಾಂಗ್ರೆಸ್ ಅನ್ನು ಒಪ್ಪಿಕೊಂಡಿದೆ ಎನ್ನುತ್ತಿದೆ ಟೈಮ್ಸ್ ನೌ ಸಮೀಕ್ಷೆ. ಈ ಭಾಗದಲ್ಲಿ ಕಾಂಗ್ರೆಸ್‌ಗೆ 11 ಸೀಟು ದೊರಕಲಿದರೆ ಬಿಜೆಪಿಗೆ 8 ಹಾಗೂ ಜೆಡಿಎಸ್ ಎರಡು ಸೀಟು ಗೆಲ್ಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಬಿಜೆಪಿಗೆ ಹೆಚ್ಚಿನ ಮುನ್ನಡೆ ಕೊಡುವ ಮುಂಬೈ ಕರ್ನಾಟಕ
ಬಿಜೆಪಿಗೆ ಹೆಚ್ಚಿನ ಮುನ್ನಡೆ ದೊರಕಿಸಿಕೊಡುವುದು ಮುಂಬೈ ಕರ್ನಾಟಕ. ಸಮೀಕ್ಷೆ ಪ್ರಕಾರ ಮುಂಬೈ ಕರ್ನಾಟಕ ಭಾಗದಲ್ಲಿ ಬಿಜೆಪಿ 32 ಸ್ಥಾನ ಗೆದ್ದರೆ ಕಾಂಗ್ರೆಸ್ 21 ಸ್ಥಾನ ಹಾಗೂ ಜೆಡಿಎಸ್ 5, ಪಕ್ಷೇತರ ಅಭ್ಯರ್ಥಿ 1 ಸ್ಥಾನ ಜಯಿಸಲಿದ್ದಾರೆ.

ಬೆಂಗಳೂರಿಗರ ಪ್ರೀತಿ ಕಾಂಗ್ರೆಸ್ ಮೇಲೆ
ಪ್ರಮುಖ ರಾಜಕೀಯ ಕ್ಷೇತ್ರ ಬೆಂಗಳೂರಿನಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ ಎನ್ನುತ್ತಿದೆ ಟೌಮ್ಸ್ ನೌ ಸಮೀಕ್ಷೆ. ಕಾಂಗ್ರೆಸ್ 17 ಸೀಟು ಗೆದ್ದರೆ, ಬಿಜೆಪಿ 13, ಜೆಡಿಎಸ್ 2 ಸ್ಥಾನ ಗೆಲ್ಲಲಿದೆ ಎನ್ನುತ್ತಿದೆ ಸಮೀಕ್ಷೆ ವರದಿ.

ಹಳೆ ಮೈಸೂರು ಭಾಗ ಜೆಡಿಎಸ್ ಕೋಟೆ
ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದ್ದೇ ಪಾರುಪತ್ಯ. ಇಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಲಿದೆ ಬಿಜೆಪಿ 8 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಲಿದೆ ಹಾಗೂ ಜೆಡಿಎಸ್ ಪಕ್ಷವು ಅತಿ ಹೆಚ್ಚು ಅಂದರೆ 25 ಸ್ಥಾನವನ್ನು ಈ ಭಾಗದಲ್ಲಿ ಗೆದ್ದುಕೊಳ್ಳಲಿದೆ. ಇಬ್ಬರು ಪಕ್ಷೇತರರು ಹಳೆ ಮೈಸೂರು ಭಾಗದಲ್ಲಿ ಗೆಲ್ಲಲಿದ್ದಾರೆ.

ಬಿಜೆಪಿ ಭಾರಿ ಮುನ್ನಡೆ
ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಭಾರಿ ಮುನ್ನಡೆ ಗಳಿಸಲಿದೆ. ಬಿಜೆಪಿಯು ಇಲ್ಲಿ 22 ಸ್ಥಾನಗಳಲ್ಲಿ ಜಯ ಸಾಧಿಸಲಿದೆ. ಕಾಂಗ್ರೆಸ್ ಪಕ್ಷವು 10 ಸೀಟು ಗೆಲ್ಲಲ್ಲಿದ್ದು, ಜೆಡಿಎಸ್ 3 ಕ್ಕೆ ತೃಪ್ತಿಪಟ್ಟುಕೊಳ್ಳಲಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications