ಮೋದಿಯಿಂದ ಅಭ್ಯರ್ಥಿಗಳಿಗೆ ಕನ್ನಡ ಅಸ್ಮಿತೆ ಪಾಠ, ಎಷ್ಟು ಸರಿ?
'ಒಂದು ದೇಶ, ಒಂದು ಧ್ವಜ' ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಮೋ ಅಪ್ಲಿಕೇಷನ್ ಮೂಲಕ ಬಿಜೆಪಿಯ 224 ಅಭ್ಯರ್ಥಿಗಳಿಗೆ ಕಿವಿಪಾಠ ಮಾಡಿದ್ದಾರೆ. ಈ ಸಂದರ್ಭದಲ್ಲಿ 'ನಾನೂ ಕನ್ನಡಿಗ' ಎಂಬ ಅಜೆಂಡಾ ಇಟ್ಟುಕೊಂಡು ಮನೆ ಮನೆಗೆ ತೆರಳಿ ಎಂದು ಕರೆ ನೀಡಿರುವುದು ಚರ್ಚೆಯ ವಿಷಯವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ 2018ಯ ಹೊಸ್ತಿಲಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜವನ್ನು ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರವು ಅಂಗೀಕರಿಸಿತ್ತು.
ಜತೆಗೆ ಕನ್ನಡ ಅಸ್ಮಿತೆಯನ್ನು ಮುಂದಿಟ್ಟು ಚುನಾವಣೆ ಎದುರಿಸುವುದಾಗಿ ಹೇಳಿದ್ದರು. ಇತ್ತೀಚೆಗೆ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್ ಅವರಿಗೆ ಕನ್ನಡದಲ್ಲಿ ಟ್ವೀಟ್ ಮಾಡುವಂತೆ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಭಾರಿ ಬೆಂಬಲ ಸಿಗುವಂತೆ ಮಾಡಿತ್ತು.
ಚುನಾವಣೆ ಸಮಯದಲ್ಲಿ ಕನ್ನಡ ಪರ ಸರ್ಕಾರ ಎಂದು ತೋರಿಸಿಕೊಳ್ಳಲು ಸಿದ್ದರಾಮಯ್ಯ ಅವರು ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದರು. ಆದರೆ, ಈಗ ಯಾವ ಮುಖ ಇಟ್ಟುಕೊಂಡು ಕನ್ನಡ ಅಸ್ಮಿತೆ, ಕನ್ನಡಿಗ ಎಂದು ಮತಯಾಚಿಸುತ್ತಾರೆ.

ಯಡಿಯೂರಪ್ಪ ಅವರು ಅಪ್ಪಟ್ಟ ಕನ್ನಡ ಮಣ್ಣಿನ ಹೋರಾಟಗಾರ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡ ಪಾಠ ಮಾಡಲು ಪ್ರಧಾನಿ ಮೋದಿ ಅವರು ಬರಬೇಕಿತ್ತಾ?
ಮೋದಿ ಸರ್ಕಾರವು ಒಂದು ರಾಷ್ಟ್ರ, ಒಂದು ಧ್ವಜ ಎಂದು ಐಕ್ಯತೆಯ ಮಂತ್ರ ಹಾಡುವಾಗ, ಕರ್ನಾಟಕಕ್ಕೆ ಪ್ರತ್ಯೇಕ ನಾಡಧ್ವಜ ಹೊಂದಲು ಅನುಮತಿ ನೀಡುವುದೇ? ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಗೆ ಮೋದಿ ಅವರು ಉತ್ತರಿಸಿದ್ದರೆ, ಗೆಲುವು ಸಿದ್ದರಾಮಯ್ಯ ಹಾಗೂ ಮೋದಿ ಕಮ್ ಬಿಜೆಪಿಗೂ ಸಿಗುತ್ತಿತ್ತು. ಆದರೆ, ಈಗ ಕನ್ನಡಿಗರ ಭಾವನೆಗೆ ಧಕ್ಕೆ ತರುತ್ತಿರುವ ಬಿಜೆಪಿ ಎಂದು ಅಸ್ತ್ರವಾಗಿ ಕಾಂಗ್ರೆಸ್ ಬಳಸಬಹುದಾಗಿದೆ. ಈ ಬಗ್ಗೆ ನೀವೆಂನತೀರಾ? ಇಮೇಲ್[[email protected]] ಮಾಡಿ












Click it and Unblock the Notifications