Debate: ಒಂದೇ ಹಂತದ ಚುನಾವಣೆ ಬಿಜೆಪಿ ಮತ್ತು ಜೆಡಿಎಸ್‌ಗೆ ಸವಾಲಾಗಲಿದೆಯೇ?
ಬೆಂಗಳೂರು, ಮಾರ್ಚ್. 30: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು 2013 ಮತ್ತು 2018 ರಲ್ಲಿ ಮಾಡಿದಂತೆ ಒಂದೇ ಹಂತದಲ್ಲಿ ನಡೆಸಲಾಗುವುದು ಎಂದು ಭಾರತ ಚುನಾವಣಾ ಆಯೋಗ (ಇಸಿಐ) ಬುಧವಾರ ಪ್ರಕಟಿಸಿದೆ. ಇದು ರಾಜ್ಯದ ಬಿಜೆಪಿ ಮತ್ತು ಜಾತ್ಯಾತೀತ ಜನತಾದಳಕ್ಕೆ ಸವಾಲಾಗಬಹುದು ಎಂದು ಅಂದಾಜಿಸಲಾಗಿದೆ.

ಎರಡು ಹಂತಗಳಲ್ಲಿ ಮತದಾನ ನಡೆದಿದ್ದರೆ ಮೋದಿ ಅವರು ವ್ಯಾಪಕ ಪ್ರಚಾರ ನಡೆಸುತ್ತಿದ್ದರು ಮತ್ತು ಅದು ಮತದಾನದ ಮೇಲೆ ಪರಿಣಾಮ ಬೀರುತ್ತಿತ್ತು. ಅದೇ ರೀತಿ, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇಬ್ಬರು ಸ್ಟಾರ್ ಪ್ರಚಾರಕರನ್ನು ಹೊಂದಿರುವ ಪ್ರಾದೇಶಿಕ ಜೆಡಿ (ಎಸ್) ಪಕ್ಷಕ್ಕೆ ಒಂದೇ ಹಂತದ ಮತದಾನವು ಪ್ರತಿಕೂಲವಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಂದು ಚರ್ಚೆ.












Click it and Unblock the Notifications