keyboard_backspace

ಸಮೀಕ್ಷೆ: 10 ವರ್ಷಗಳಲ್ಲಿ ಭಾರತದ ಪೊಲೀಸ್ ಸಂಖ್ಯಾಬಲವು 30% ಹೆಚ್ಚಳ

Google Oneindia Kannada News

ಬೆಂಗಳೂರು, ಜುಲೈ 10: ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳು 2010 ಮತ್ತು 2020 ರ ನಡುವೆ 32% ರಷ್ಟು ಬೆಳೆದಿವೆ, ಆದರೆ ಮಹಿಳೆಯರ ಪಾಲು ಅಪೇಕ್ಷಿತ 33% ಗೆ ಹೋಲಿಸಿದರೆ ಕೇವಲ 10.5% ರಷ್ಟಿದೆ. ಯಾವುದೇ ಮಹಿಳೆ ಪೊಲೀಸ್ ಠಾಣೆಗೆ ಕಾಲಿಡುವ ಮೊದಲ ಮತ್ತು ಏಕೈಕ ಸಂಪರ್ಕ ಬಿಂದುವಾಗಿ ಗ್ರಹಿಸಲಾಗಿರುವ ಮಹಿಳಾ ಸಹಾಯ ಕೇಂದ್ರಗಳು, ಇನ್ನೂ ಭಾರತದಾದ್ಯಂತ 41% ಪೊಲೀಸ್ ಠಾಣೆಗಳಿಗೆ ದೊರೆತಿಲ್ಲ.

ಪರಿಶಿಷ್ಟ ಜಾತಿಗಳ (SC) ಪಾಲು 2010 ರಲ್ಲಿನ 12.6% ರಿಂದ 2020 ರಲ್ಲಿ 15.2% ಕ್ಕೆ ಸ್ವಲ್ಪ ಹೆಚ್ಚಿದೆ, ಆದರೆ ಪರಿಶಿಷ್ಟ ಪಂಗಡಗಳ (ST) 2010 ರಲ್ಲಿನ 10.6% ರಿಂದ 2020 ರಲ್ಲಿ 11.7% ಕ್ಕೆ ಸ್ವಲ್ಪಮಾತ್ರವೇ ಏರಿದೆ. ಇತರೆ ಹಿಂದುಳಿದ ವರ್ಗಗಳು (OBC) 2010 ರಲ್ಲಿನ 20.8% ರಿಂದ 2020 ರಲ್ಲಿ 28.8% ಕ್ಕೆ ಪ್ರಬಲ ಪ್ರಾತಿನಿಧ್ಯವನ್ನು ಪ್ರದರ್ಶಿಸಿವೆ.

ಜನವರಿ, 2021 ರವರೆಗಿನ ಡೇಟಾ ಸಂಗ್ರಹದ Data on Police Organisations (DoPO) Report 2021,ರ ಇಂಡಿಯಾ ಜಸ್ಟೀಸ್ ರಿಪೋರ್ಟ್‍ನ (IJR) ವಿಶ್ಲೇಷಣೆಯ (ಪೂರ್ಣ ವರದಿಯನ್ನು ನೋಡಿ) ಕೆಲವು ಸಂಶೋಧನೆಗಳು ಹೀಗಿವೆ. IJR 2007 ರ DoPO ವರದಿಯಿಂದ ಪೊಲೀಸ್ ಸಂಖ್ಯಾಬಲದ ಡೇಟಾವನ್ನು ವಿಶ್ಲೇಷಿಸಿದೆ. DoPO ಅನ್ನು ಭಾರತ ಸರ್ಕಾರದ ಘಟಕವಾದ ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಅಂಡ್ ಡೆವಲಪ್‍ಮೆಂಟ್‍ನಿಂದ ನಿಯತಕಾಲಿಕವಾಗಿ ಪ್ರಕಟಿಸಲಾಗುತ್ತದೆ.

ಖಾಲಿ ಹುದ್ದೆಗಳು

ಖಾಲಿ ಹುದ್ದೆಗಳು

2010 ಮತ್ತು 2020 ರ ನಡುವೆ, ಒಟ್ಟು ಪೋಲೀಸ್ ಸಂಖ್ಯೆಗಳು 32% ರಷ್ಟು ಏರಿದ್ದು, 15.6 ಲಕ್ಷದಿಂದ 20.7 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ, ಕಾನ್‍ಸ್ಟಾಬ್ಯುಲರಿ ಮತ್ತು ಅಧಿಕಾರಿ ಶ್ರೇಣಿಯಲ್ಲಿ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. 2010 ರಲ್ಲಿ, 24.1% ರಷ್ಟು ಅಧಿಕಾರಿ ಹುದ್ದೆಗಳು ಮತ್ತು 27.2% ಪೋಲೀಸ್ ಪಡೆ ಹುದ್ದೆಗಳೊಂದಿಗೆ ರಾಷ್ಟ್ರೀಯ ಒಟ್ಟಾರೆ ಖಾಲಿ ಹುದ್ದೆಗಳ ಮಟ್ಟವು 24.3% ರಷ್ಟಿತ್ತು;. 2020 ರಲ್ಲಿ, 32.2% ಅಧಿಕಾರಿ ಹುದ್ದೆಗಳು, ಮತ್ತು 20% ಕಾನ್‍ಸ್ಟಾಬ್ಯುಲರಿ ಹುದ್ದೆಗಳೊಂದಿಗೆ, ಒಟ್ಟಾರೆ ಖಾಲಿ ಹುದ್ದೆಗಳು 21.4% ರಷ್ಟಿವೆ;

(2010)
ಟೂತ್-ಟು-ಟೈಲ್ ಅನುಪಾತ (ಒಟ್ಟು)

  • ಮಂಜೂರು ಮಾಡಲಾದ ಪೊಲೀಸ್ ಸಂಖ್ಯಾಬಲ - 1:6.6
  • ವಾಸ್ತವಿಕ ಪೊಲೀಸ್ ಸಂಖ್ಯಾಬಲ - 1:6.7 (2020)
  • ಟೂತ್-ಟು-ಟೈಲ್ ಅನುಪಾತ (ಒಟ್ಟು)
  • ಮಂಜೂರಾದ ಪೊಲೀಸ್ ಸಂಖ್ಯಾಬಲ - 1:5
  • ವಾಸ್ತವಿಕ ಪೊಲೀಸ್ ಸಂಖ್ಯಾಬಲ - 1:6
ಕಾನ್‍ಸ್ಟೆಬಲ್ ಮತ್ತು ಅಧಿಕಾರಿ ಹುದ್ದೆಗಳು ಖಾಲಿ

ಕಾನ್‍ಸ್ಟೆಬಲ್ ಮತ್ತು ಅಧಿಕಾರಿ ಹುದ್ದೆಗಳು ಖಾಲಿ

ಕೋವಿಡ್-19 ಪೀಡಿತ ಪ್ರಥಮ ವರ್ಷ, 2020 ರಲ್ಲಿ, ಒಟ್ಟಾರೆ ಖಾಲಿ ಹುದ್ದೆಗಳು 20.3% ರಿಂದ 21.4% ಕ್ಕೆ ಹೆಚ್ಚಿವೆ. ಅನುಮೋದಿತ ಪೋಲೀಸ್ ಸಂಖ್ಯಾಬಲವು 8,665 ರಷ್ಟು ಹೆಚ್ಚಿದ್ದರೆ, ವಾಸ್ತವಿಕ ಸಂಖ್ಯಾಬಲವು 21,926 ರಷ್ಟು ಕಡಿಮೆಯಾಗಿದೆ. ರಾಷ್ಟ್ರೀಯವಾಗಿ, ಕಾನ್ಸ್‌ಟೇಬಲ್ ದರ್ಜೆಯ ಖಾಲಿಹುದ್ದೆಗಳು 2019 ರಲ್ಲಿನ 18% ರಿಂದ 20% ಕ್ಕೆ ಏರಿದೆ. ಅಂತೆಯೇ, ಅಧಿಕಾರಿಗಳ ದರ್ಜೆಯ ಖಾಲಿ ಹುದ್ದೆಗಳು 2019 ರಲ್ಲಿನ 29% ರಿಂದ 2020 ರಲ್ಲಿ 32% ಕ್ಕೆ ಏರಿದೆ. ಕೇವಲ 3 ರಾಜ್ಯಗಳು -- ತೆಲಂಗಾಣ, ಕರ್ನಾಟಕ ಮತ್ತು ಕೇರಳ -- ಕಾನ್‍ಸ್ಟಾಬ್ಯುಲರಿ (ಪೋಲೀಸ್ ಪಡೆ) ಮತ್ತು ಅಧಿಕಾರಿಗಳೆರಡೂ ದರ್ಜೆಯಲ್ಲಿ ಖಾಲಿ ಹುದ್ದೆಗಳನ್ನು ಕಡಿಮೆ ಮಾಡಬಹುದು. ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ¼ ಭಾಗದಷ್ಟು ಕಾನ್‍ಸ್ಟೆಬಲ್ ಮತ್ತು ಅಧಿಕಾರಿ ಹುದ್ದೆಗಳು ಖಾಲಿ ಇವೆ.


ಒಟ್ಟಾರೆ ಖಾಲಿ ಹುದ್ದೆಗಳು ಬಿಹಾರದಲ್ಲಿ ಅತ್ಯಧಿಕ (41.8%) ಮತ್ತು ಉತ್ತರಾಖಂಡದಲ್ಲಿ (6.8%) ಅತಿ ಕಡಿಮೆ ಇವೆ. ಬಿಹಾರ ಮತ್ತು ಮಹಾರಾಷ್ಟ್ರವು ಕ್ರಮವಾಗಿ 33.9% ರಿಂದ 41.8% ಮತ್ತು 11.7% ರಿಂದ 16.3% ಕ್ಕೆ ತೀವ್ರ ಏರಿಕೆ ಕಂಡರೆ, ತೆಲಂಗಾಣವು 38% ರಿಂದ 28% ಕ್ಕೆ ತೀವ್ರ ಕುಸಿತವನ್ನು ದಾಖಲಿಸಿದೆ.

ಅಧಿಕಾರಿಗಳು

ಅಧಿಕಾರಿಗಳು

ಅಧಿಕಾರಿಗಳು: ಅಧಿಕಾರಿಗಳ ಮಟ್ಟದಲ್ಲಿ, 2010 ರಲ್ಲಿ, 6 ರಾಜ್ಯಗಳು/UTಗಳು ತಮ್ಮ SC ಕೋಟಾವನ್ನು ತಲುಪುವಲ್ಲಿ ಅಥವಾ ಮೀರುವಲ್ಲಿ ಯಶಸ್ವಿಯಾದವು, ಒಂದು ದಶಕದ ನಂತರ, 2020 ರಲ್ಲಿ, ಕೇವಲ 5 ರಾಜ್ಯಗಳು/UTಗಳು -- ಗುಜರಾತ್, ಮಣಿಪುರ, ಕರ್ನಾಟಕ, ಗೋವಾ ಮತ್ತು ತಮಿಳುನಾಡು -- ತಮ್ಮದೇ ಆದ SC ಕೋಟಾಗಳನ್ನು ಪೂರೈಸಿದ್ದಾರೆ ಅಥವಾ ಅದನ್ನು ಮೀರಿದ್ದಾರೆ. 11 ರಾಜ್ಯಗಳು/UTಗಳು 2020 ರಲ್ಲಿ ಎಸ್‍ಸಿ ಅಧಿಕಾರಿ ದರ್ಜೆಯ ಖಾಲಿ ಹುದ್ದೆಗಳನ್ನು ಇಳಿಕೆ ಮಾಡಲು ಯಶಸ್ವಿಯಾಗಿವೆ ಮತ್ತು ಅಷ್ಟೇ ಸಂಖ್ಯೆಯ ರಾಜ್ಯಗಳಲ್ಲಿ (11) ಇದು ಹೆಚ್ಚಾಗಿದೆ. ದೃಷ್ಟಾಂತವಾಗಿ, ಉತ್ತರ ಪ್ರದೇಶ ಮತ್ತು ತ್ರಿಪುರದಲ್ಲಿ SC ಅಧಿಕಾರಿ ದರ್ಜೆಯ ಖಾಲಿಹುದ್ದೆಗಳು ಕ್ರಮವಾಗಿ 50% ರಿಂದ 64% ಮತ್ತು 6% ರಿಂದ 22% ಕ್ಕೆ ಏರಿವೆ, ತಮಿಳುನಾಡು ಮತ್ತು ಉತ್ತರಾಖಂಡದಲ್ಲಿ ಇದು 33% ರಿಂದ -4% ಕ್ಕೆ ಮತ್ತು 61% ರಿಂದ 44% ಕ್ಕೆ ಇಳಿಕೆಯಾಗಿವೆ.

ಕಾನ್‍ಸ್ಟಾಬ್ಯುಲರಿ

ಕಾನ್‍ಸ್ಟಾಬ್ಯುಲರಿ

ಕಾನ್‍ಸ್ಟಾಬ್ಯುಲರಿ: 2010 ರಲ್ಲಿ, 2 ರಾಜ್ಯಗಳು/UTಗಳು SC ಕಾನ್ಸ್‌ಟೇಬಲ್ ಕೋಟಾವನ್ನು ಪೂರೈಸಿದ್ದವು ಅಥವಾ ಮೀರಿದ್ದವು, 2020 ರಲ್ಲಿ ಈ ಸಂಖ್ಯೆಯು 7 ರಾಜ್ಯಗಳಿಗೆ ಏರಿಕೆಯಾಗಿದೆ. 12 ರಾಜ್ಯಗಳು/UTಗಳು 2020 ರಲ್ಲಿ SC ಕಾನ್ಸ್‌ಟೇಬಲ್ ಖಾಲಿ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಯಶಸ್ವಿಯಾಗಿವೆ ಆದರೆ 10 ರಾಜ್ಯಗಳು/UTಗಳಲ್ಲಿ ಇದು ಹೆಚ್ಚಾಗಿದೆ. ತಮಿಳುನಾಡು ಮತ್ತು ಚಂಡೀಗಢದಲ್ಲಿ ಖಾಲಿ ಹುದ್ದೆಗಳು ಕ್ರಮವಾಗಿ 34% ರಿಂದ -15% ಮತ್ತು 37% ರಿಂದ 22% ಕ್ಕೆ ಇಳಿದವು, ಇದು ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 7% ರಿಂದ 22% ಮತ್ತು 10% ರಿಂದ 23% ಕ್ಕೆ ಏರಿತು.

ಅಧಿಕಾರಿಯ ಶ್ರೇಣಿಗಳು

ಅಧಿಕಾರಿಯ ಶ್ರೇಣಿಗಳು

ಅಧಿಕಾರಿಯ ಶ್ರೇಣಿಗಳು: 2010 ರಲ್ಲಿ, 5 ರಾಜ್ಯಗಳು/UTಗಳು ತಮ್ಮ SC ಕೋಟಾಗಳನ್ನು ತುಂಬಿಸಿದವು. ಒಂದು ದಶಕದ ನಂತರ 2021 ರಲ್ಲಿ, 8 ರಾಜ್ಯಗಳು/UTಗಳು ತಮ್ಮ SC ಕೋಟಾವನ್ನು ತಲುಪಲು ಅಥವಾ ಮೀರಲು ಯಶಸ್ವಿಯಾದವು. ಕಾಯ್ದಿರಿಸಿದ ಸ್ಥಾನಗಳಲ್ಲಿನ ಖಾಲಿ ಹುದ್ದೆಗಳು 11 ರಾಜ್ಯಗಳು/UTಗಳಲ್ಲಿ ಹೆಚ್ಚಾದವು ಮತ್ತು 11 ರಾಜ್ಯಗಳು/UTಗಳಲ್ಲಿ ಇಳಿಕೆಯಾದವು. ಉತ್ತರಾಖಂಡ ಮತ್ತು ಅಸ್ಸಾಂನಲ್ಲಿ, ಖಾಲಿ ಹುದ್ದೆಗಳು ಕ್ರಮವಾಗಿ 61% ರಿಂದ 33% ಮತ್ತು 41% ರಿಂದ 26% ಕ್ಕೆ ಇಳಿದಿದೆ, ಉತ್ತರ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಇದು ಕ್ರಮವಾಗಿ 67% ರಿಂದ 89% ಕ್ಕೆ ಮತ್ತು 21% ರಿಂದ 33% ಕ್ಕೆ ಏರಿವೆ.

ಕಾನ್‍ಸ್ಟಾಬ್ಯುಲರಿ

ಕಾನ್‍ಸ್ಟಾಬ್ಯುಲರಿ

ಕಾನ್‍ಸ್ಟಾಬ್ಯುಲರಿ: 2010 ರಲ್ಲಿ, 7 ರಾಜ್ಯಗಳು/UTಗಳು SC ಕೋಟಾವನ್ನು ತುಂಬಿಸಿವೆ. 2020 ರಲ್ಲಿ, 9 ರಾಜ್ಯಗಳು/UTಗಳು ತಮ್ಮ ST ಕಾನ್ಸ್‌ಟೇಬಲ್ ಕೋಟಾವನ್ನು ತಲುಪಲು ಅಥವಾ ಮೀರಲು ಯಶಸ್ವಿಯಾದವು. ಕಾಯ್ದಿರಿಸಿದ ಸ್ಥಾನಗಳಲ್ಲಿನ ಖಾಲಿ ಹುದ್ದೆಗಳು 11 ರಾಜ್ಯಗಳು/UTಗಳಲ್ಲಿ ಹೆಚ್ಚಾದವು ಮತ್ತು 10 ರಾಜ್ಯಗಳು/UTಗಳಲ್ಲಿ ಇಳಿಕೆಯಾದವು. ಉತ್ತರಾಖಂಡ ಮತ್ತು ತಮಿಳುನಾಡಿನಲ್ಲಿ ಖಾಲಿ ಹುದ್ದೆಗಳು ಕ್ರಮವಾಗಿ 8% ರಿಂದ -33% ಮತ್ತು 54% ರಿಂದ 14% ಕ್ಕೆ ಇಳಿದಿದ್ದರೆ, ಮೇಘಾಲಯ ಮತ್ತು ತೆಲಂಗಾಣದಲ್ಲಿ ಕ್ರಮವಾಗಿ -17% ರಿಂದ 9% ಮತ್ತು -7% ರಿಂದ 14% ಕ್ಕೆ ಏರಿವೆ.

OBC ಅಧಿಕಾರಿ ಕೋಟಾ

OBC ಅಧಿಕಾರಿ ಕೋಟಾ

ಅಧಿಕಾರಿಯ ಶ್ರೇಣಿಗಳು: 2010 ರಲ್ಲಿ, 3 ರಾಜ್ಯಗಳು/UTಗಳು ತಮ್ಮ OBC ಕೋಟಾಗಳನ್ನು ಪೂರೈಸಿದವು. ಒಂದು ದಶಕದ ನಂತರ 2021 ರಲ್ಲಿ, 8 ರಾಜ್ಯಗಳು/UTಗಳು ತಮ್ಮ OBC ಅಧಿಕಾರಿ ಕೋಟಾವನ್ನು ತಲುಪಲು ಅಥವಾ ಮೀರಲು ಯಶಸ್ವಿಯಾದವು. ಕಾಯ್ದಿರಿಸಿದ ಸ್ಥಾನಗಳಲ್ಲಿನ ಖಾಲಿ ಹುದ್ದೆಗಳು 9 ರಾಜ್ಯಗಳು/UTಗಳಲ್ಲಿ ಹೆಚ್ಚಾದವು ಮತ್ತು 13 ರಾಜ್ಯಗಳು/UTಗಳಲ್ಲಿ ಇಳಿಕೆಯಾದವು. ತಮಿಳುನಾಡು ಮತ್ತು ಗುಜರಾತ್‍ನಲ್ಲಿ ಖಾಲಿ ಹುದ್ದೆಗಳು ಕ್ರಮವಾಗಿ 2% ರಿಂದ -50% ಮತ್ತು 44% ರಿಂದ 19% ಕ್ಕೆ ಇಳಿದಿದ್ದರೆ, ಸಿಕ್ಕಿಂ ಮತ್ತು ಉತ್ತರ ಪ್ರದೇಶದಲ್ಲಿ ಕ್ರಮವಾಗಿ 3% ರಿಂದ 18% ಕ್ಕೆ ಮತ್ತು 33% ರಿಂದ 48% ಕ್ಕೆ ಏರಿವೆ.


ಕಾನ್‍ಸ್ಟಾಬ್ಯುಲರಿ: 2010 ರಲ್ಲಿ, 6 ರಾಜ್ಯಗಳು/UTಗಳು OBC ಕೋಟಾವನ್ನು ತಲುಪಿವೆ ಅಥವಾ ಮೀರಿವೆ. 2020 ರಲ್ಲಿ, 14 ರಾಜ್ಯಗಳು/UTಗಳು ತಮ್ಮ OBC ಕಾನ್ಸ್‌ಟೇಬಲ್ ಕೋಟಾವನ್ನು ತಲುಪಿವೆ ಅಥವಾ ಮೀರಿವೆ. ಕಾಯ್ದಿರಿಸಿದ ಸ್ಥಾನಗಳಲ್ಲಿನ ಖಾಲಿ ಹುದ್ದೆಗಳು 5 ರಾಜ್ಯಗಳು/UTಗಳಲ್ಲಿ ಹೆಚ್ಚಾಗಿವೆ ಮತ್ತು 13 ರಾಜ್ಯಗಳು/UTಗಳಲ್ಲಿ ಕುಸಿದಿವೆ. ತಮಿಳುನಾಡು ಮತ್ತು ಗುಜರಾತ್‍ನಲ್ಲಿ ಖಾಲಿ ಹುದ್ದೆಗಳು ಕ್ರಮವಾಗಿ 33% ರಿಂದ -13% ಮತ್ತು 21% ರಿಂದ -20% ಕ್ಕೆ ಇಳಿದಿದ್ದರೆ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲಿ ಕ್ರಮವಾಗಿ 8% ರಿಂದ 16% ಮತ್ತು 38% ರಿಂದ 45% ಕ್ಕೆ ಏರಿವೆ.

ಪೊಲೀಸರಲ್ಲಿ ಮಹಿಳೆಯರು

ಪೊಲೀಸರಲ್ಲಿ ಮಹಿಳೆಯರು

ಪೊಲೀಸ್ ಪಡೆಯಲ್ಲಿ ಮಹಿಳೆಯರ ಶೇಕಡಾವಾರು ಪ್ರಮಾಣ 10.5. ಅದನ್ನು ಶೇ.33ಕ್ಕೆ ಕೊಂಡೊಯ್ಯುವ ಆಕಾಂಕ್ಷೆ ಇದೆ. 6 UTಗಳು ಮತ್ತು 11 ರಾಜ್ಯಗಳು 33% ಮೀಸಲಾತಿಯ ಗುರಿಯನ್ನು ಹೊಂದಿದ್ದರೆ, ಇತರೆಡೆ ಗುರಿಗಳು ಬಿಹಾರದ 38% ರಿಂದ ಅರುಣಾಚಲ ಪ್ರದೇಶ, ಮೇಘಾಲಯ ಮತ್ತು ತ್ರಿಪುರಾದಲ್ಲಿ 10% ವರೆಗೆ ಇವೆ. 7 ರಾಜ್ಯಗಳು/UTಗಳು ಯಾವುದೇ ಮೀಸಲಾತಿಯನ್ನು ಹೊಂದಿಲ್ಲ.

2020 ರ ಹೊತ್ತಿಗೆ, ಯಾವುದೇ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳು ತಮಗೆ ತಾವೇ ನಿಗದಿಪಡಿಸಿಕೊಂಡ ಗುರಿಯನ್ನು ತಲುಪಿಲ್ಲ. ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ, ತಮಿಳುನಾಡು 19.4%, ಬಿಹಾರ 17.4%, ಮತ್ತು ಗುಜರಾತ್ 16% ರೊಂದಿಗೆ ಮಹಿಳೆಯರ ಹೆಚ್ಚಿನ ಪಾಲನ್ನು ಹೊಂದಿವೆ ಆದರೆ ಅವರೂ ಸಹ ತಮ್ಮ ಮೀಸಲಾತಿಯಾದ ಕ್ರಮವಾಗಿ 30%, 38%, ಮತ್ತು 33% ಅನ್ನು ತಲುಪಿಲ್ಲ. 6.3% ಮಹಿಳೆಯರ ಪಾಲನ್ನು ಹೊಂದಿರುವ ಆಂಧ್ರಪ್ರದೇಶವು ಅತ್ಯಂತ ಕಡಿಮೆ ಪಾಲನ್ನು ಹೊಂದಿದ್ದು, ಜಾರ್ಖಂಡ್ ಮತ್ತು ಮಧ್ಯಪ್ರದೇಶಗಳು ತಲಾ 6.6% ನೊಂದಿಗೆ ನಂತರದ ಸ್ಥಾನದಲ್ಲಿವೆ.
ಮಹಿಳಾ ಅಧಿಕಾರಿಗಳು

ಮಹಿಳಾ ಅಧಿಕಾರಿಗಳು

ಮಹಿಳಾ ಅಧಿಕಾರಿಗಳು: ರಾಷ್ಟ್ರೀಯವಾಗಿ, ಮಹಿಳಾ ಅಧಿಕಾರಿಗಳ ಪಾಲು 8.2% ರಷ್ಟಿದೆ. 11 ರಾಜ್ಯಗಳು/UTಗಳಲ್ಲಿ, ಅಧಿಕಾರಿಗಳ ಮಟ್ಟದಲ್ಲಿನ ಮಹಿಳೆಯರ ಪಾಲು 5% ಅಥವಾ ಅದಕ್ಕಿಂತ ಕಡಿಮೆ. ಕೇರಳ ಪೊಲೀಸರು 3% ಮಹಿಳಾ ಅಧಿಕಾರಿಗಳನ್ನು ಹೊಂದಿದ್ದರೆ, ಪಶ್ಚಿಮ ಬಂಗಾಳದಲ್ಲಿ 4.2% ರಷ್ಟು ಮಹಿಳಾ ಅಧಿಕಾರಿಗಳು ಇದ್ದಾರೆ. ತಮಿಳುನಾಡು ಮತ್ತು ಮಿಜೋರಾಂ, ಇವೆರಡೂ ಅತ್ಯಧಿಕ ಪಾಲು ಅಂದರೆ 20.2% ರಷ್ಟು ಮಹಿಳಾ ಅಧಿಕಾರಿಗಳನ್ನು ಹೊಂದಿವೆ.


ಮಹಿಳೆಯರ ಪಾಲು ಕುಸಿದಿರುವ ರಾಜ್ಯಗಳು

ಬಿಹಾರ ಮತ್ತು ಹಿಮಾಚಲ ಪ್ರದೇಶ ಮಹಿಳೆಯರ ಪಾಲಿನಲ್ಲಿ ತೀವ್ರ ಕುಸಿತ ದಾಖಲಿಸಿದೆ. 2019 ರಲ್ಲಿ, ಬಿಹಾರವು 25.3% ಅನ್ನು ವರದಿ ಮಾಡಿದೆ, ಅದು 17.4% ಕ್ಕೆ ಇಳಿಯಿತು; ಮತ್ತು ಹಿಮಾಚಲ ಪ್ರದೇಶದಲ್ಲಿ, ಇದು 2019 ರಲ್ಲಿ 19.2% ರಿಂದ 2020 ರಲ್ಲಿ 13.5% ಕ್ಕೆ ಇಳಿದಿದೆ.

ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಲಾದ ಮಹಿಳಾ ಸಹಾಯ ಕೇಂದ್ರಗಳು

ಪೊಲೀಸ್ ಠಾಣೆಗಳಲ್ಲಿ ಸ್ಥಾಪಿಸಲಾದ ಮಹಿಳಾ ಸಹಾಯ ಕೇಂದ್ರಗಳು

10ನೇ ಜನವರಿ 2020 ರಂದು ತನ್ನ ಸಲಹೆಯಲ್ಲಿ, ಗೃಹ ವ್ಯವಹಾರಗಳ ಸಚಿವಾಲಯ, (ಮಹಿಳಾ ಸುರಕ್ಷತಾ ವಿಭಾಗ) ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಗಳು/UTಗಳಿಗೆ ಸಲಹೆ ನೀಡಿದೆ. ನಿರ್ಭಯಾ ನಿಧಿ ಯೋಜನೆಗಳ ಅಡಿಯಲ್ಲಿ ಪರಿಕಲ್ಪನೆ ಮಾಡಲಾದ ದೇಶದ 10,000 ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಸ್ಥಾಪಿಸುವ/ಬಲಪಡಿಸುವ ಹಿಂದಿನ ಪ್ರಾಯೋಗಿಕ ಉಪಕ್ರಮಕ್ಕೆ ಇದು ವಿಸ್ತರಣೆಯಾಗಿದೆ. ಮಹಿಳಾ ಸಹಾಯ ಕೇಂದ್ರವು ಪೊಲೀಸ್ ಠಾಣೆಗೆ ಕಾಲಿಡುವ ಯಾವುದೇ ಮಹಿಳೆಗೆ ಮೊದಲ ಮತ್ತು ಏಕೈಕ ಸಂಪರ್ಕ ಕೇಂದ್ರವಾಗಿದೆ. 1 ಜನವರಿ 2021 ರಂತೆ, 41% ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳಿಲ್ಲ. ತ್ರಿಪುರಾದಲ್ಲಿ ಮಾತ್ರ ಎಲ್ಲಾ 82 ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳಿವೆ. 9 ರಾಜ್ಯಗಳು/UTಗಳಲ್ಲಿ, 90% ಕ್ಕಿಂತ ಹೆಚ್ಚು ಪೊಲೀಸ್ ಠಾಣೆಗಳು ಮಹಿಳಾ ಸಹಾಯ ಕೇಂದ್ರಗಳನ್ನು ಹೊಂದಿವೆ. ಅರುಣಾಚಲ ಪ್ರದೇಶದಲ್ಲಿ ಒಂದೂ ಇಲ್ಲ. ಬಿಹಾರದ ಒಟ್ಟು 1053 ಪೊಲೀಸ್ ಠಾಣೆಗಳ ಪೈಕಿ ಕೇವಲ 14% ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳಿವೆ.

CCTV ಕ್ಯಾಮೆರಾಗಳು

CCTV ಕ್ಯಾಮೆರಾಗಳು

ತನ್ನ 2021 ರ ವರದಿಯಲ್ಲಿ, ಭಾರತದಲ್ಲಿನ ಒಟ್ಟು 17,233 ಪೊಲೀಸ್ ಠಾಣೆಗಳ ಪೈಕಿ 5,396 ಪೊಲೀಸ್ ಠಾಣೆಗಳಲ್ಲಿ ಒಂದೇ ಒಂದೂ CCTV ಕ್ಯಾಮೆರಾ ಇಲ್ಲ ಎಂದು Data on Police Organisation ತೋರಿಸುತ್ತದೆ. ಕೇವಲ 3 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು -- ಒಡಿಶಾ, ತೆಲಂಗಾಣ ಮತ್ತು ಪುದುಚೇರಿ - ಗಳ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕನಿಷ್ಠ ಒಂದು CCTV ಇದೆ. 4 ರಾಜ್ಯ/UTಗಳು -- ರಾಜಸ್ಥಾನ, ಮಣಿಪುರ, ಲಡಾಖ್, ಲಕ್ಷದ್ವೀಪ -ಗಳಲ್ಲಿ 1% ಕ್ಕಿಂತ ಕಡಿಮೆ ಪೊಲೀಸ್ ಠಾಣೆಗಳು CCTV ಕ್ಯಾಮೆರಾಗಳನ್ನು ಹೊಂದಿವೆ ಎಂದು ವರದಿಯಾಗಿದೆ. ಒಟ್ಟು 894 ಪೊಲೀಸ್ ಠಾಣೆಗಳನ್ನು ಹೊಂದಿರುವ, ಜನಸಂಖ್ಯೆಯ ಪ್ರಕಾರ ಏಳನೇ ಅತಿದೊಡ್ಡ ರಾಜ್ಯವಾಗಿರುವ ರಾಜಸ್ಥಾನವು ಕೇವಲ ಒಂದು ಪೊಲೀಸ್ ಠಾಣೆಯಲ್ಲಿCCTV ಕ್ಯಾಮೆರಾ ಹೊಂದಿರುವುದಾಗಿ ವರದಿಯಾಗಿದೆ. ಮಣಿಪುರ, ಲಡಾಖ್ ಮತ್ತು ಲಕ್ಷದ್ವೀಪಗಳಲ್ಲಿ ಒಂದೂ ವರದಿಯಾಗಿಲ್ಲ.


ಡಿಸೆಂಬರ್ 2020 ರಲ್ಲಿ ಕೆಲವು ಪೊಲೀಸ್ ಸಿಬ್ಬಂದಿಗಳ ಅಧಿಕಾರ ದುರುಪಯೋಗವನ್ನು ಗ್ರಹಿಕೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಎಲ್ಲಾ ಪೊಲೀಸ್ ಠಾಣೆಗಳಲ್ಲಿ CCTV ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು. ಸುಪ್ರೀಂ ಕೋರ್ಟ್‍ನ ಆದೇಶದ ಅನುಷ್ಠಾನದ ವಸ್ತುಸ್ಥಿತಿಯನ್ನು ಕಂಡುಹಿಡಿಯಲು ಇಂಡಿಯಾ ಜಸ್ಟೀಸ್ ರಿಪೋರ್ಟ್ ಕಲೆಕ್ಟಿವ್ ಎಲ್ಲಾ 36 ರಾಜ್ಯಗಳು ಮತ್ತು ಯುಟಿಗಳಿಗೆ RTIಗಳನ್ನು ಸಲ್ಲಿಸಿದೆ.

ಮಾಹಿತಿ ಕೃಪೆ: ಇಂಡಿಯಾ ಜಸ್ಟಿಸ್ ರಿಪೋರ್ಟ್

English summary
Data on Police Organisations: 10.5% of cops in India are women, only 1 in 3 police stations has CCTV: Study
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X