keyboard_backspace

ನಾಲ್ವರು ಸಂಗಾತಿಗಳನ್ನು ಕೊಂದ 'ಬ್ಲಾಕ್ ವಿಡೋ' ಸೈನೈಡ್ ಕಿಲ್ಲಿಂಗ್ ಸ್ಟೋರಿ

Google Oneindia Kannada News

ಬೆಂಗಳೂರು, ಸೆ. 27: ಜಪಾನಿನಲ್ಲಿ ಮುದುಕಿಯೊಬ್ಬಳು ತಾನು ಪ್ರೀತಿಸಿದ ನಾಲ್ವರಿಗೂ ಸೈನೈಡ್ ಕೊಟ್ಟು ಕೊಂದಿರುವ ಭಯಾನಕ ಸಂಗತಿ ಹೊರ ಬಿದ್ದಿದೆ. ಗಲ್ಲು ಶಿಕ್ಷೆಗೆ ಗುರಿಯಾಗಿರುವ ಈ ಮುದುಕಿ ಬ್ಲಾಕ್ ವಿಡೋ ಅಂತಲೇ ಕುಖ್ಯಾತಿ ಪಡೆದಿದ್ದಾಳೆ. ಪ್ರೀತಿಯ ನಾಟಕವಾಡಿ ಕೈ ಹಿಡಿದವರಿಗೆ ಸೈನೈಡ್ ಕೊಟ್ಟು ಕೊಲೆ ಮಾಡುವ ಪಾತಕಿ ಇಳಿ ವಯಸ್ಸಿನಲ್ಲೂ ಕೊನೆ ಗಂಡನನ್ನು ಸೈನೈಡ್‌ನಿಂದಲೇ ಕೊಂದಿದ್ದಾಳೆ. ಕಾಡಿಗೆ ಹೋಗುವ ವಯಸ್ಸಿನಲ್ಲಿ ಲವ್ ಹೆಸರಿನಲ್ಲಿ ಸಂಗಾತಿಯನ್ನು ಹುಡುಕಿ ಕೊಂಡು ಹೋಗಿ ನಾಲ್ವರಿಗೆ ತಿಥಿಯೂಟ ಹಾಕಿದ ಅಂತಾರಾಷ್ಟ್ರೀಯ ಮಟ್ಟದ ಅಪರಾಧ ಸುದ್ದಿಯ ಸಮಗ್ರ ಚಿತ್ರಣ ಇಲ್ಲಿದೆ.

ಆತನ ಹೆಸರು ಇಸಾಹೋ ಕಕೇಹಿ, ಜಪಾನಿನ ನಿವಾಸಿ. ವಯಸ್ಸು 74 ವರ್ಷ ಆಗಿತ್ತು. ಉತ್ತಮ ಆರೋಗ್ಯ, ನೆಮ್ಮದಿ ಜೀವನ ರೂಢಿಸಿಕೊಂಡಿದ್ದರು. 2013 ರಲ್ಲಿ ಇದ್ದಕ್ಕಿದ್ದಂತೆ ಒಂದು ಸಂದೇಶ ಬಂದಿತ್ತು. ಆ ಸಂದೇಶ ನೋಡಿ ಇಸಾಹೋ ಖುಷಿಯಲ್ಲಿ ಮುಳಗಿ ತೇಲಾಡುತ್ತಿದ್ದ. ಹೌದು. ಇಳಿ ವಯಸ್ಸಿನ ಒಂಟಿತನ ಹೋಗಲಾಡಿಸುವ ಲವ್ ಸಂದೇಶವದು. ಚಿಸಾಕಿ ಕಕೇಹಿ ಎಂಬ 67 ವರ್ಷ ವಯಸ್ಸಿನ ವಿಧವೆ ಕಳಿಸಿದ್ದ ಪ್ರೇಮ ನಿವೇದನೆ. ಇಳಿ ವಯಸ್ಸಿನಲ್ಲಿ ಒಂಟಿತನದಿಂದ ದೂರವಿರಲು ಸಂಬಂಧ ಹುಡುಕಿ ಕೊಡುವ ಏಜೆನ್ಸಿಯ ಮೂಲಕ ಚಿಸಾಕಿ ಕಕೇಹಿ ಇಬ್ಬರೂ ಒಂದಾಗಿ ಬಾಳುವ ಸಂದೇಶ ಕಳುಹಿಸಿದ್ದಳು.

ಆತ್ಮಹತ್ಯೆ ಹೆಚ್ಚಳ: ಜಪಾನ್‌ನಲ್ಲಿ ಒಂಟಿತನ ನಿವಾರಣೆಗೆ ಸಚಿವರ ನೇಮಕಆತ್ಮಹತ್ಯೆ ಹೆಚ್ಚಳ: ಜಪಾನ್‌ನಲ್ಲಿ ಒಂಟಿತನ ನಿವಾರಣೆಗೆ ಸಚಿವರ ನೇಮಕ

ಒಂಟಿತನದಿಂದ ಬೇಸತ್ತಿದ್ದ ಇಸಾಹೋ ಕಕೇಹಿ ತನ್ನ ಸಂಗಾತಿ ಚಿಸಾಕಿಯನ್ನು ಭೇಟಿ ಮಾಡಿದರು. ಎರಡು ತಿಂಗಳಲ್ಲಿ ಪರಸ್ಪರ ಮಾತುಕತೆ ಮಾಡಿ ಜತೆಗೂಡಿದರು. ಇಬ್ಬರು ಮದುವೆಯನ್ನು ಮಾಡಿಕೊಂಡರು. ಸುಖಕರ ದಾಂಪತ್ಯ ಜೀವನ ಸವಿಯುತ್ತಿದ್ದರು. 2014 ರ ನವೆಂಬರ್ 24 ರ ರಾತ್ರಿ.ಹೊಸ ವರ್ಷ ಭರ ಮಾಡಿಕೊಳ್ಳುವ ಸಂಭ್ರಮ ಈ ವೃದ್ಧ ಇಸಾಯೋ ಕಕೇಹಿಗೆ. ಈ ಸಂಭ್ರಮಾಚರಣೆಗಾಗಿ ಚಿಸಾಕಿ ಕೂಡ ಕೇಕ್ ತಯಾರಿಸಿದ್ದಳು. ಇಳಿ ವಯಸ್ಸಿನಲ್ಲಿ ಈ ಪರಿಯ ಏಕಾಂತ ಜೀವನ ಸಿಗುತ್ತೆ ಅಂತ ಇಸಾಹೋ ಭಾವಿಸಿಯೂ ಇರಲಿಲ್ಲ. ಆದರೆ, ಅದರ ಅಸಲಿ ಕಥೆ ಬೇರೆಯದ್ದೇ ಇತ್ತು. ಇಸಾಹೋ 2015 ರ ಹೊಸ ವರ್ಷದ ಸಂಭ್ರಮದ ಸೂರ್ಯನ ಬೆಳಕು ನೋಡಲು ಇರಲಿಲ್ಲ!

ಜಪಾನಿನಲ್ಲಿ 'ಬ್ಲಾಕ್ ವಿಡೋ'

ಜಪಾನಿನಲ್ಲಿ 'ಬ್ಲಾಕ್ ವಿಡೋ'

ಜಪಾನಿನಲ್ಲಿ 'ಬ್ಲಾಕ್ ವಿಡೋ' ಎಂಬ ಸೈನೈಡ್ ಹಂತಕಿಯ ಕೈಗೆ ಸಿಕ್ಕಿ ಸತ್ತು ಹೋಗಿದ್ದ. ಪ್ರೇಮದ ಅಮಲಿನಲ್ಲಿ ಬೆರೆಸಿದ್ದ ಸೈನೈಡ್ ದೇಹಕ್ಕೆ ಸೇರಿ ಆತ ಜೀವ ಬಿಟ್ಟಿದ್ದ. ಆ ಬ್ಲಾಕ್ ವಿಡೋ ಸೈನೈಡ್ ಕಿಲ್ಲರ್ ಬೇರೆ ಯಾರೂ ಅಲ್ಲ. ಪ್ರೀತಿಸಿ ನಾಟಕವಾಡಿ ಅಂಗಳ ಸೇರಿದ್ದ ಸ್ವಂತ ಸಂಗಾತಿ ಚಿಸಾಕಿ. ಬರೋಬ್ಬರಿ ನಾಲ್ಕು ಮಂದಿಯನ್ನು ಇದೇ ರೀತಿ ಮದುವೆ ಮಾಡಿಕೊಂಡು ದಾಂಪತ್ಯ ಜೀವನ ನಡೆಸುತ್ತಲೇ ಗಂಡಂದಿರಿಗೆ ಸೈನೈಡ್ ಕೊಟ್ಟು ಮೂವರನ್ನು ಕೊಲೆ ಮಾಡಿದ್ದಾಳೆ. ಸದ್ಯ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿ ದಿನಗಳು ಎಣಿಸುತ್ತಿರುವ ಈಕೆಯ ಸೈನೈಡ್ ಮರ್ಡರ್ ಮಿಸ್ಟರಿ ಬೆಚ್ಚಿ ಬೀಳಿಸುತ್ತದೆ. 74 ವರ್ಷ ವಯಸ್ಸಿನ ಈ ವೃದ್ದೆಯ ಕಿಲ್ಲಿಂಗ್ ಹಿಸ್ಟರಿ 2007 ರಿಂದಲೇ ಆರಂಭವಾಗುತ್ತದೆ. ಆದರೆ ಯಾರಿಗೂ ಗೊತ್ತಿರಲಿಲ್ಲ. 2014 ರಲ್ಲಿ ತನ್ನ ಸಂಗಾತಿ ಇಸಾಹೋ ಕಕೇಹಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುತ್ತಾಳೆ. ಈ ವೇಳೆ ಸೈನೈಡ್ ಸರಣಿ ಹತ್ಯೆಗಳ ವಿಷಯವನ್ನು ಬಾಯಿ ಬಿಟ್ಟಿದ್ದಾಳೆ. 2017 ರಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಈಕೆಯ ಸೈನೈಡ್ ಹತ್ಯೆ ಪ್ರಕರಣ ಸುದೀರ್ಘ ವಿಚಾರಣೆಗೆ ಒಳಪಟ್ಟ ಪ್ರಕರಣವೂ ಆಗಿದೆ.

ಸೈನೈಡ್ ಕಿಲ್ಲಿಂಗ್ ಯತ್ನ

ಸೈನೈಡ್ ಕಿಲ್ಲಿಂಗ್ ಯತ್ನ

ಆಗ್ನೇಯ ಜಪಾನಿನನಲ್ಲಿ ಜನಿಸಿದ್ದ ಚಿಸಾಕಿ ಕಕೇಹಿ ಪ್ರಿಂಟಿಂಗ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಆಕೆಗೆ 23 ವರ್ಷ ವಯಸ್ಸಾಗಿತ್ತು. 1969 ರಲ್ಲಿ ಈಕೆಯ ಗಂಡ ಅನಾರೋಗ್ಯಕ್ಕೆ ತುತ್ತಾಗಿ 1994 ರಲ್ಲಿ ಮೃತಪಟ್ಟಿದ್ದ. ಆ ನಂತರ ಒಂಟಿಯಾಗಿದ್ದ ಚಿಸಾಕಿ ಕಕೇಹಿ, 2007 ರಲ್ಲಿ ತನ್ನ ಜೀವನಕ್ಕೆ ಪಾರ್ಟರ್ ಹುಡುಕಲು ಆರಂಭಿಸುತ್ತಾಳೆ. 2007 ರಲ್ಲಿ ಸುಹಿರೋ ಎಂಬ 78 ವರ್ಷ ವಯಸ್ಸಿನ ಅಜ್ಜನೊಂದಿಗೆ ಸಂಬಂಧ ಬೆಳೆಸುತ್ತಾಳೆ. ಡಿಸೆಂಬರ್ 18, 2007 ರ ಮಧ್ಯಾಹ್ನ ಗಂಡ ಮತ್ತು ಆತನ ಮಕ್ಕಳೊಂದಿಗೆ ಊಟ ಮುಗಿಸಿ ಚಿಸಾಹೋ, ಜೀರ್ಣವಾಗಲೆಂದು ಮಾತ್ರೆಯನ್ನು ಕೊಡುತ್ತಾಳೆ. ಮಾತ್ರೆ ನುಂಗಿದ ಹದಿನೈದು ನಿಮಿಷಕ್ಕೆ ಸುಹಿರೋ ಪ್ರಜ್ಞೆ ತಪ್ಪಿ ಕೆಳಗೆ ಬೀಳುತ್ತಾನೆ. ವೃದ್ಧ ಅಜ್ಜನನ್ನು ಚಿಸಾಕಿ ಆಸ್ಪತ್ರೆಗೆ ಸಾಗಿಸುತ್ತಾಳೆ. ತಪಾಸಣೆ ನಡೆಸಿದ ವೈದ್ಯರಿಗೆ ಸಾವಿನ ಮೂಲ ಕಾರಣ ಗೊತ್ತಾಗದೇ ಆಂತರಿಕವಾಗಿ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳುತ್ತಾರೆ. ಅಂತಿಮವಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿ ಜೀವ ರಕ್ಷಿಸಿಕೊಳ್ಳುತ್ತಾನೆ. ಇದಾಗಿ ಒಂದೂವರೆ ವರ್ಷದ ಬಳಿಕ ಬೇರೆ ಕಾಯಿಲೆಯಿಂದ ಆತ ತೀರಿಕೊಳ್ಳುತ್ತಾನೆ.

ಸೈನೈಡ್ ಡೆತ್

ಸೈನೈಡ್ ಡೆತ್

ಚಿಸಾಕಿ ಜತೆ ಸ್ನೇಹ ಬೆಳೆಸಿದ್ದ ಮಸನೋರಿ ಇಬ್ಬೂರೂ ಡೇಟಿಂಗ್ ಮಾಡುತ್ತಿದ್ದರು. ಒಂದು ವರ್ಷ ಬಿಟ್ಟು ಮದುವೆಯಾಗಲು ತೀರ್ಮಾನಿಸಿದ್ದರು. ಒಂದು ವರ್ಷದಲ್ಲಿ ಮದುವೆಯಾಗುವ ವಿಚಾರ ಸ್ನೇಹಿತರ ಬಳಿಯೂ ಹೇಳಿಕೊಂಡಿದ್ದರು. 2012 ಮಾರ್ಚ್ 9 ರಂದು ಮಸನೋರಿ ಹಾಗೂ ಚಿಸಾಕಿ ಭೇಟಿ ಮಾಡಿ ಹೊರ ಬಂದ ಎರಡೇ ತಾಸಿನಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿದಿರಲಿಲ್ಲ. ಕಾಲಾಂತರದಲ್ಲಿ ಗೊತ್ತಾಗಿದ್ದು ಚಿಸಾಕಿ ಈ ಮಸನೋರಿ ಜತೆ ಸಂಬಂಧ ಉಳಿಸಿಕೊಳ್ಳಲು ಇಷ್ಟವಿರಲಿಲ್ಲ. ಅದಾಗಲೆ ಡೇಟಿಂಗ್ ಏಜೆನ್ಸಿ ಮೂಲಕ ಬೇರೊಬ್ಬನ ಜತೆ ಬದುಕಲಿಕ್ಕೆ ಪ್ಲಾನ್ ಮಾಡಿದ್ದಳು. ಹೀಗಾಗಿ ಸೈನೈಡ್ ಬೆರೆಸಿ ಹತ್ಯೆ ಮಾಡಿದ್ದಳು ಎಂಬ ಸಂಗತಿ ಕಾಲಾಂತರದಲ್ಲಿ ಗೊತ್ತಾಗುತ್ತದೆ.

ಸರಣಿ ಹತ್ಯೆ

ಸರಣಿ ಹತ್ಯೆ

ಇದಾಗಿ ಕೆಲವೇ ದಿನಗಳ ಬಳಿಕ ಮಿನೊರು ಹಿಯೋಕಿ ಎಂಬ ವ್ಯಕ್ತಿ ಜತೆ ಸಂಪರ್ಕ ಬೆಳೆಸುತ್ತಾಳೆ. ಕ್ಯಾನ್ಸರ್ ಗೆದ್ದಿದ್ದ ಈತನೊಂದಿಗೆ 2013 ಆಗಸ್ಟ್ ನಲ್ಲಿ ಪ್ರೇಮ ಪ್ರಣಯ ಆರಂಭಿಸಿ ಸೆಪ್ಟೆಂಬರ್ ವೇಳೆಗೆ ಕಥೆ ಮುಗಿಸುತ್ತಾಳೆ. ಹೀಗೆ ಮೂರು ಜನರನ್ನು ಸೈನೈಡ್ ಕೊಟ್ಟು ಕೊಲ್ಲಿಸಿರುವ ಚಿಸಾಕಿ ಕಕೇಹಿ ಕೊನೆಯದಾಗಿ ಕೊಂದಿದ್ದ ಇಸಾಹೋ ಕಕೇಹಿಯ ಮೃತದೇಹ ಮರಣೋತ್ತರ ಪರೀಕ್ಷೆ ವೇಳೆ ಕೊಲೆಯ ಸುಳಿವು ಸಿಕ್ಕಿತ್ತು. ಇದರ ಮಾಹಿತಿ ಆಧರಿಸಿ ಜಪಾನಿನ ಪೊಲೀಸರು ತನಖೆ ನಡೆಸಿದಾಗ ಚಿಸಾಕಿ ಕಕೇಹಿ ಸೈನೈಡ್ ಮಿಸ್ಟರಿ ಹೊರಗೆ ಬಂದಿದೆ. ಈಕೆ ಇಳಿ ವಯಸ್ಸಿನಲ್ಲಿ ಸಂಬಂಧ ಬೆಳೆಸಿ ಕೈತುಂಬಾ ಸಾಲ ಮಾಡುತ್ತಿದ್ದಳು. ಅದ್ನನು ಕೇಳಿದಾಗ ಸೈನೈಡ್ ತಿನ್ನಿಸಿ ಜೀವ ತೆಗೆದು ತನಗೇನೂ ಗೊತ್ತಿಲ್ಲದವಳಂತೆ ಫೋಸ್ ಕೊಡುತ್ತಿದ್ದಳು. ಈಕೆಯ ಕೈಯಲ್ಲಿ ಕೊನೆಯದಾಗಿ ಕೊಲೆಯಾದ ಇಸಾಹೋ ಕಕೇಹಿಯ ಸಾವಿನ ಬಗ್ಗೆ ಪರೀಕ್ಷೆ ನಡೆಸಿದಾಗ ಈಕೆಯ ಸರಣಿ ಕೊಲೆಗಳ ವೃತ್ತಾಂತ ಬಯಲಿಗೆ ಬಂದಿದೆ. ಈಕೆಯ ಎಲ್ಲಾ ಅಪರಾಧಗಳನ್ನು ಪರಿಗಣಿಸಿ ಜಪಾನಿನ ನ್ಯಾಯಾಲಯ ಮರಣದಂಡನೆ ಶಿಕ್ಷೆ ನೀಡಿದೆ. ಈ ಭಯಾನಕ ಸೈನೈಡ್ ಕಿಲ್ಲರ್ ಕಥೆ ಕೇಳಿದರೇ ಮೈ ಜುಮ್ಮೆನ್ನುತ್ತದೆ.

English summary
Cyanide Story of a 74-year-old granny who killed her four lovers : Black widow four lovers and cyanide deaths know more
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X