ಯೋಗ : ಹೋಮಿಯೋಪತಿಕ್ ವೈದ್ಯರ ಅಭಿಪ್ರಾಯ

Posted By: ಡಾ. ವಿಜಯಕುಮಾರ ಎಸ್.ವಿ., ಹೋಮಿಯೋಪಥಿಕ್ ವೈದ್ಯ
Subscribe to Oneindia Kannada

ಉತ್ತಮ ಆರೋಗ್ಯಕ್ಕೆ ಯೋಗಾಭ್ಯಾಸ ಒಳ್ಳೆಯದೆಂದು ಪುರಾತನ ಕಾಲದಿಂದಲೂ ನಾವು ಭಾರತೀಯರು ಅರಿತಿದ್ದೇವೆ. ಆದರೆ ಅದಕ್ಕೆ ಜೂ.21ರ ವಿಶ್ವ ಯೋಗ ದಿನಾಚರಣೆಯಷ್ಟು ಚಾಲನೆ ಸಿಕ್ಕಿರಲಿಲ್ಲ.

ನಮ್ಮ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿಯವರು ಭಾರತೀಯ ವೈದ್ಯ ಪದ್ಧತಿಗಳ ಜೊತೆಗೆ ಯೋಗವನ್ನೂ ಸೇರಿಸಿ ಆಯುಷ್ ಎಂದು ಯಾವಾಗ ಚಾಲನೆ ನೀಡಿದರೋ ಅಂದಿನಿಂದ ಇಂದಿನವರೆಗೆ ಅದಕ್ಕೆ ಹೆಚ್ಚಿನ ಮಹತ್ವ ಪಡೆಯುತ್ತಾ ಬಂದಿದೆ.

ಯೋಗ ಭಾರತೀಯ, ಸಾಂಸ್ಕೃತಿಕ ಹಾಗೂ ವೈದ್ಯಕೀಯದ ಪರಂಪರೆಯ ಭಾಗವಾಗಿದ್ದು, ಜನತೆಗೆ ತೃಪ್ತಿಯ ಭಾವವನ್ನು ಒದಗಿಸಿ ಕೊಡುತ್ತದೆಯೇ ಹೊರತು ಜನರಿಗೆ ಬೇರಾವ ದುಷ್ಪರಿಣಾಮಗಳನ್ನೂ ತೋರುವುದಿಲ್ಲ. [ಯೋಗದ ಬಗ್ಗೆ ಖ್ಯಾತ ಮಾನಸಿಕ ತಜ್ಞರು ಹೀಗಂತಾರೆ]

What famous homeopathy doctor says about yoga

ಇತ್ತೀಚಿನ ದಿನಗಳಲ್ಲಿ ಯೋಗ ಬಹಳ ವಿಶಿಷ್ಟ ಸದೃಢ ಹಾಗೂ ಸಮತೋಲನ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಮನುಕುಲದ ದೇಹ, ಮನಸ್ಸು ಮತ್ತು ಆತ್ಮದ ಸ್ವಾಸ್ಥ್ಯ ಕಾಪಾಡುವ ಈ ಯೋಗಾಸನ, ಸೂರ್ಯ ನಮಸ್ಕಾರ, ಪ್ರಾಣಾಯಾಮ ಇವೆಲ್ಲವೂ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆಯೇ ಹೊರತು ಬೇರೆ ದೇಶದಿಂದಲ್ಲ. [ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]

ಯೋಗದಿಂದ ದೀರ್ಘಕಾಲೀನ ರೋಗಗಳಿಗೆ ಉತ್ತಮ ಪರಿಣಾಮಗಳಲ್ಲದೇ ಯಾವುದೇ ತೊಂದರೆ ಇಲ್ಲದೇ ಮಕ್ಕಳು, ಅಬಾಲವೃದ್ಧರು ಹಾಗೂ ಗರ್ಭಿಣಿ ಸ್ತ್ರೀಯರೂ ಸಹ ಯೋಗ ಗುರುಗಳ ಮಾರ್ಗದರ್ಶನದಲ್ಲಿ ದಿನನಿತ್ಯ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಯಾವುದೇ ನಿರ್ಬಂಧವಿಲ್ಲ.

ಇದೊಂದು ಔಷಧಿರಹಿತ ಚಿಕಿತ್ಸೆಯಾಗಿದ್ದು ಇದರ ಸರ್ವತೋಮುಖ ಬೆಳವಣಿಗೆಗೆ ಸರಕಾರ ಹೆಚ್ಚಿನ ಅನುಕೂಲತೆ ಮಾಡಬೇಕು. ಶಾಲಾ, ಕಾಲೇಜುಗಳಲ್ಲಿ, ಪಠ್ಯಪುಸ್ತಕದ ರೂಪದಲ್ಲಿ ಕಲ್ಪಿಸಬೇಕು. ಅಲ್ಲದೇ ಹೆಚ್ಚಿನ ಮಹಾವಿದ್ಯಾಲಯಗಳನ್ನು ಅಧಿಕೃತವಾಗಿ ಸರಕಾರದಿಂದ ಮನ್ನಣೆ ನೀಡಿ ಜನರ ಆರೋಗ್ಯದ ಕಾಳಜಿ ವಹಿಸಬೇಕೆಂದು ನನ್ನ ವಿಜ್ಞಾಪನೆ.

ಲೇಖಕರು:
ಖ್ಯಾತ ಹಿರಿಯ ಹೋಮಿಯೋಪತಿಕ್ ವೈದ್ಯರು,
ಉಪಾಧ್ಯಕ್ಷರು, ಹೋಮಿಯೋಪತಿಕ್ ಮೆಡಿಕಲ್ ಅಸೋಸಿಯೇಷನ್, ಕರ್ನಾಟಕ.
ಕಾರ್ಯಕಾರಿ ಮಂಡಳಿ ಅಧ್ಯಕ್ಷರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಹುಬ್ಬಳ್ಳಿ.
ಸದಸ್ಯರು, ಕರ್ನಾಟಕ ರಾಜ್ಯ ಹೋಮಿಯೋಪತಿಕ್ ಮಂಡಳಿ, ಹುಬ್ಬಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Famous homeopathy doctor Dr Vinod Kumar from Hubballi yoga can be practiced by anyone of any age for overall health benefit. He says, yoga should be introduced in schools and colleges as curriculum.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ