• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಡಿಯುವ ಹೆಂಗಸರು, ಅವರ ಹಣೆ ಮೇಲಿನ ಬೆವರೂ...

By Staff
|

ಅಂದು ಹೊಸ್ತಿಲು ದಾಟದ ಮಹಿಳೆ, ಇಂದು ಎಲ್ಲೆಡೆಯೂ ಇರುವ ಎಲ್ಲೆಗಳನ್ನು ದಾಟಿದ್ದಾಳೆ.. ತನ್ನ ಗುರುತುಗಳನ್ನು ಮೂಡಿಸಿದ್ದಾಳೆ! ಇಕ್ಕಟ್ಟೋ, ಬಿಕ್ಕಟ್ಟೋ.. ಬೆವರ ಹನಿಗಳು ಹಣೆ ಮೇಲೆ ಕಾಣಿಸದಂತೆ ಮರೆಮಾಚಿದ್ದಾಳೆ.. ಗಂಡಸರ ಸರಿಸಮವಾಗಿ ದುಡಿಯಲು ನಿಂತಿದ್ದಾಳೆ! ಆ ಮಹಿಳೆಯರ ಮುಖಗಳು ನನಗೆ ಅಪರಿಚಿತ... ಆದರೆ ಅಂತರಾಳದಲ್ಲಿ?

Working Indian Women and their woes...ಅವಳಿಗೆ ಮೂವತ್ತಾಗಿದೆ. ಸಾಫ್ಟ್‌ವೇರ್‌ ತಂತ್ರಜ್ಞೆ. ಹೊತ್ತುಗೊತ್ತಿಲ್ಲದ ಕೆಲಸ. ಕಣ್ಣಿಗೆ ರಾಚುತ್ತಿರುವ ಆಕಾಂಕ್ಷೆ-ಗುರಿ, ಆದರೆ ಬಸಿರಾಗಬೇಕೆನ್ನುವ ಬಯಕೆ. ಸಂಸಾರವೋ? ಉದ್ಯೋಗವೋ? ಯಾವುದನ್ನು ಹೇಗೆ balance ಮಾಡುವುದು ಎನ್ನುವ ಗೊಂದಲದಲ್ಲಿ stress up ಆಗಿಬಿಟ್ಟಿದ್ದಾಳೆ. ನನಗವಳು ಅಪರಿಚಿತೆ. ಆದರೆ ಅವಳ ಪರಿಚಯವಿದೆ ಅನ್ನಿಸುತ್ತಿದೆಯಾ?!

ಅವಳು teacher. ಪಬ್ಲಿಕ್‌ ಪರೀಕ್ಷೆಯಲ್ಲಿ ಮೇಲಧಿಕಾರಿಯಿಂದಲೇ ಮಾಸ್‌ ಕಾಪಿ ಮಾಡಿಸಲು green signal ದೊರಕಿದೆ. ಅವಳ ಆಂತರ್ಯ ಒಪ್ಪುತ್ತಿಲ್ಲ. ವಿರೋಧಿಸಿದರೆ ಎದುರಿಸಬೇಕಾದ ಆಪಾದನೆಗಳ ಕಳವಳದಿಂದ ಕುಗ್ಗಿದ್ದಾಳೆ. ನಾನು ಅವಳನ್ನು ನೋಡಿಯೇ ಇಲ್ಲದ ಅಪರಿಚಿತೆ. ಆದರೂ ಪರಿಚಿತಳಂತೆನಿಸುತ್ತಿದ್ದಾಳೆ ಏಕೆ?!

ಅದೊಂದು ಬ್ಯಾಂಕ್‌. ಆ ಬ್ರ್ಯಾಂಚ್ನಲ್ಲಿ ಇಬ್ಬರೇ ಮಹಿಳಾ ಉದ್ಯೋಗಿಗಳು. ಆಕೆ ವಿಪರೀತ ಸಿನ್ಸಿಯರ್‌. ತನ್ನ ಪುರುಷ ಸಹೋದ್ಯೋಗಿಯ ಯಾವುದೋ ಬೇಡಿಕೆಗೆ ಸೊಪ್ಪು ಹಾಕಲಿಲ್ಲ ಎನ್ನುವ ಕಾರಣಕ್ಕೆ ಈಗ ಇಲ್ಲದ ಆಪಾದನೆ ಹೊತ್ತು 22 ವರ್ಷಗಳ ಕೆಲಸಾವಧಿಯ enquiry ಎದುರಿಸುತ್ತಿದ್ದಾಳೆ. ಉಹೂಂ, ಇವಳೂ ನನಗೆ ಗೊತ್ತಿಲ್ಲ. ಅಪರಿಚಿತೆ? ಅಥವಾ ಪರಿಚಿತಳಾ?!

ಇವಳೂ ದೊಡ್ಡ ಕಂಪನಿಯಲ್ಲೇ ಉದ್ಯೋಗಸ್ಥೆ. ಅವಳ ಬುದ್ಧಿಮತ್ತೆಗೆ, hard work ಸಿಕ್ಕ ಪ್ರತಿಫಲ ಒಂದೇವರ್ಷದಲ್ಲಿ ಎರಡು promotion. ಜೊತೆಗೆ ‘ಓ, ಅವಳಾ. . . ಅವಳ್ಬಿಡೀಪ್ಪ. . . .’ ಅನ್ನುವ ಉದ್ಗಾರ ಬೇರೆ. ಬಿಸಿ ತುಪ್ಪ ಅವಳ ಗಂಟಲಲ್ಲಿ. ನನಗಿವಳು ಅಪರಿಚಿತಳೋ? ಪರಿಚಿತಳೋ?!

ಗಂಡ ಮಕ್ಕಳು ಅತ್ತೆ ಮಾವ ಇವರ ನಡುವೆ ಪಿ.ಹೆಚ್‌.ಡಿ. ಬಯಕೆ. ಥೀಸೀಸ್‌ ಕೊಟ್ಟು ನಾಲ್ಕು ವರ್ಷವಾಗುತ್ತಾ ಬಂತು. Guide ಯಾಕೋ ಬರೀ ಥೀಸೀಸ್‌ನಿಂದ ಸಮಾಧಾನವಿಲ್ಲ. ಅವಳಿಗೆ ಬೇರೇನೂ ಬೇಕಿಲ್ಲ! ಡಾಕ್ಟರೇಟು ಯಾವಾಗ ಸಿಕ್ಕುವುದೋ ಎನ್ನುವ ಯೋಚನೆಯಲ್ಲೇ antacid ನುಂಗುತ್ತಿದ್ದಾಳೆ. ಇಂತಹ ಅಪರಿಚಿತಳ ಪರಿಚಯವೂ ನನಗಿದೆಯಾ?!

ಅವಳ ಒಂದು ಕಾಲು ಪೋಲಿಯೋಗೆ ಬಲಿ. ಅಷ್ಟೆ ಅದರಲ್ಲೇನು ಪ್ರಾಣ ಹೋಗೋಂಥಾದ್ದು ಇದೆ?! ತನ್ನ ಕಾಲ ಮೆಲೆ ತಾನು ನಿಲ್ಲ ಬೇಕು ಅನ್ನುವ ಛಲ. ಕೆಲಸಕ್ಕೆ ಸೇರಿದ್ದಾಳೆ. ದುಡಿಯುತ್ತಾಳೆ. ಹೊರಗಡೆ ಎಲ್ಲರ sympathy. ಮನೆಯೊಳಗೆ ನಿನಗೇನು ದುಡಿತೀಯಲ್ಲಾ ನಮ್ಮನ್ನೂ ಸಾಕು ಎನ್ನುವ ಬರಿದಾದವರು. ಖಂಡಿತಾ ಇವಳು ನನಗೆ ಗೊತ್ತಿಲ್ಲ. ಈ ಅಪರಿಚಿತೆಯ ಪರಿಚಯ ನನಗೆ ಯಾಕಾರೂ ಇದ್ದೀತು?!

ತನ್ನದಲ್ಲದ ತಪ್ಪಿನಿಂದ ಅವಳೀಗ ಆ ಖಾಯಿಲೆಯ ಬಲೆಗೆ ಬಿದ್ದಿದ್ದಾಳೆ. ಸಾವು ನಿರ್ಧಾರವಾಗಿದೆ. ಆದರೆ ಮುದ್ದಾದ ಮಗುವಿನ ಬದುಕನ್ನು ಖಚಿತಗೊಳಿಸುವುದು ಹೇಗೆ ಎನ್ನುವ ಚಿಂತೆಯಲ್ಲಿ ಚಿತೆಗೆ ಹತ್ತಿರವಾಗುತ್ತಿರುವ ಆ ಅಪರಿಚಿತೆಯ ಪರಿಚಯ ನನಗೆ ಇದ್ದಿರಬಹುದಾ?!

ಅವಳಿಗೆ ಆಫೀಸ್‌ನಿಂದಲೆ ಕಾರು ಬಂಗ್ಲೆ ಎಲ್ಲಾ ದೊರೆತಿರುವ ಉದ್ಯೋಗ. ಸ್ಪ್ಯಾಸ್ಟಿಕ್‌ ಮಗ. ಆ ಕಾರಣಕ್ಕೇ ದೂರಾದ ಗಂಡ! ಇವಳಿಗೆ ಹೊರಗೆ ಹೋಗಿ ದುಡಿಯಲು ಮನಸ್ಸು ಇಲ್ಲ. ಈ ನಡುವೆ ದೇಹವೂ ಆಗಾಗ್ಗೇ strike ಮಾಡುತಿರುತ್ತೆ. ಆದರೆ ತಾನು ಮಗ ಇಬ್ಬರೂ ಬದುಕಿರುವವರೆಗೂ ಬದುಕಿರಲೇಬೇಕಲ್ಲಾ! ಓಹ್‌, ಈಗಿರುವಂತೆ ಅವಳು ಅಪರಿಚಿತಳಾಗೇ ಇದ್ದುಬಿಡಲೀ ಅಂತ ಅಂದುಕೊಳ್ಳುತ್ತಿದ್ದೇನೆ ಈ ಪರಿಚಿತಳ ಬಗ್ಗೆ!

ಈ ಜಿಟಿಜಿಟಿ ಮಳೆಯಲ್ಲಿ ಇಂತಹ ಪರಿಚಯ-ಅಪರಿಚಯಗಳ ದ್ವಂದ್ವಕ್ಕೆ ಅಪರಿಚಿತ estateನ ಪರಿಚಿತ ಕಾಫೀ ಹಿತವಾಗಿರುತ್ತೆ ಅಂತ ಲೋಟ ಹಿಡಿದು ಕಿಟಕಿ ಬಳಿ ನಿಂತೆ. ಹೂವಿನವಳು ಬುಟ್ಟಿ ಹೊತ್ತು ಹೋಗುತ್ತಿದ್ದಳು. ಮಳೆಯಲ್ಲಿ ಅವಳ ಸೀರೆ ತೋಯುತ್ತಿತ್ತು. ತಲೆ ಕೂದಲು ತುದಿಯಲ್ಲಿ ಮಳೆ ನೀರು ಹನಿಸುತ್ತಿತ್ತು. ಅವಳಿಗೆ ಅದರ ಪರಿವೆಯೇ ಇಲ್ಲವೋ ಅಥವಾ ಅವಳಿಗದು ಬೇಕಾಗಿಲ್ಲವೋ, ಅವಳಂತೂ ಹೂವು ಮಾರುತ್ತಿದ್ದಳು. ಬಾಯಿ ಸ್ವಲ್ಪ ಒರಟು ಆದರೆ ಅವಳ ಮುಖ ಹೂವಿನ ಘಮದಂತೆ ಎಂದೂ!

ಮತ್ತದೇ ಕಡೆ ಓಟ ಈ ಮನಸ್ಸಿನದು. ಇವಳು ಅಪರಿಚಿತಳೋ? ಪರಿಚಿತಳೋ? ಅಕ್ಕ-ತಂಗಿ, ತಾಯಿ-ಮಗಳು, ಅತ್ತೆ-ಸೊಸೆ, ಅತ್ತಿಗೆ-ನಾದಿನಿ ಹೀಗೆ ಸಬಂಧಗಳ headingನಲ್ಲಿ ಪರಿಚಿತರಾದರೂ ಉಸಿರಿರುವವರೆಗೂ ಅಪರಿಚಿತರಾಗೇ ಉಳಿದುಬಿಡುವವರ ಬಗ್ಗೆ ಏಳುವ ಪ್ರಶ್ನೆಗಳಿಗೆ ನನ್ನ ಉತ್ತರದ ಹುಡುಕಾಟದ ಮಧ್ಯೆ ಹೂವಿನವಳ ಚಪ್ಪಲಿ ಕಿತ್ತುಹೋಯಿತು. ಅಲ್ಲೆ ಮೋರಿ ಮೇಲೆ ಕುಳಿತು ಅವಳು ಅದಕ್ಕೆ saftey pin ಹಾಕೋಳ್ತಾಇದ್ಲು. . . . . .ಒಳಗೆ ಫೋನ್‌ ರಿಂಗಾಯ್ತು.

ಯಾರ ಫೋನ್‌ ಅಂದ್ರಾ? ಡೆಟ್ರಾಯಿಟ್ನಿಂದ ನನ್ನ cousin ಸುಮಾ ಮಾತಾಡಿದ್ದು. ಏನಂದ್ಲೂ ಅಂದ್ರಾ? ಅಯ್ಯೋ, ನನ್ನದೇನೋ ಮರದ ಬಾಯಿ ಆಲ್ಲ ಆದರೆ ನಿಮ್ಮ ಕಿವಿ ಗತಿ ಏನಾಗ್ಬೇಕು? ನೀವೂ ಒಂದ್ಕ್ಷಣ ಯೋಚನೆ ಮಾಡಿ ನಾನು ನಿಮಗೆ ಅಪರಿಚಿತಳೋ ಪರಿಚಿತಳೋ ಅಂತ. ನೀವು ಏನೇ ಹೇಳಿದರೂ ನಾನು ಮತ್ತೆ ಬರುವವಳೇ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more