ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನಗೇನನ್ನಿಸುತ್ತೆ ಗೊತ್ತಾ, ಪ್ರತೀ ಗಂಡಸು ಒಬ್ಬ ಹುಟ್ಟಾ ಬುದ್ಧ!

By Super
|
Google Oneindia Kannada News

Our attitude towards life determines life’s attitude towards us
'ನಿರಪರಾಧಿ ಗಂಡಿನ ಜೀವನ್ಮರಣದ ಪ್ರಶ್ನೆ'ಯನ್ನು ಹಾಕಿಕೊಂಡು ನಾಯಿ ತನ್ನ ಬಾಲ ಹಿಡಿಯಲು ತಾನೆ ಸುತ್ತುವಂತೆ ಸುತ್ತುತ್ತಿರುವವರನ್ನು ಕಂಡಾಗ, ಗಗನ ಸಖಿಗೆ ಹೊಳೆದದ್ದೇನು?

ಗಗನ ಸಖಿ

ಹೌದು ನನಗೂ ಅನ್ನಿಸುತ್ತೆ ''ಎಲ್ಲವೂ ಒಂದು ದಿನ ತಾರ್ಕಿಕ ಹಂತಕ್ಕೆ ಬರಲೇ ಬೇಕು''. ಅದೇನೂ ಅಸಾಧ್ಯವಲ್ಲ ಬಿಡಿ... ನಾನು ನನ್ನ ಅನಿಸಿಕೆಗಳನ್ನು ನನ್ನ ಡಿಸೆಕ್ಟಿವ್‌ ಬುದ್ದಿಗೆ ಕಂಡಂತೆ ನಿಮ್ಮೊಡನೆ ಹಂಚಿಕೊಳ್ಳುವಾಗ ನೀವುಗಳು ಅದರಲ್ಲಿ ಪರಸ್ಪರರ ಬಿಂಬಗಳನ್ನು ಕಾಣುತ್ತಿರುವವರೆಗೂ ಎಲ್ಲ ಇನ್‌ನ್ಸ್ಟಿಂಕ್ಟ್‌ಗಳಿಗೂ ಲಾಜಿಕಲ್‌ ಕೊನೆ ತೋರಿಸುವುದು ಅಸಾಧ್ಯವಲ್ಲ! ಈ ಯೋಚನೆಯಲ್ಲೆ ಈ ದಿನ ಈ ಘಳಿಗೆಯ ಒಂದಿಷ್ಟು ನನ್ನ ಒಲವು-ನಿಲುವುಗಳನ್ನು ನಿಮ್ಮ ಕಿವಿಗೆ ಹಾಕಿಯೇಬಿಡುತ್ತೇನೆ.

ನೆನಪುಗಳ ಸುರುಳಿ ಬಿಚ್ಚಿ ಕೂತಾಗ ಅನ್ನಿಸುತ್ತೆ ನಾನು ಯಾವತ್ತೂ ವ್ಯಕ್ತಿಯ ಪರ-ವಿರೋಧ ಆಗಲಾರೆ. ನನ್ನ ಪ್ರೀತಿ, ಸಿಟ್ಟು ಏನಿದ್ದರೂ ಅದು ವ್ಯಕ್ತಿತ್ವಕ್ಕೆ. ನಾನು ಯಾರನ್ನೂ ದ್ವೇಷಿಸಲು ಸಾಧ್ಯವೇಯಿಲ್ಲ. ನನ್ನ ಅಸಹಾಯಕತೆ ಪರಿಸ್ಥಿತಿಯ ಬಗ್ಗೆ ಮಾತ್ರ. ''ಏನಿದು ಇವಳು ಇಷ್ಟೊಂದು ಉದಾತ್ತವಾಗಿ ಬೀಗುತ್ತಿದ್ದಾಳಲ್ಲಾ ಹಿಮಾಲಯಕ್ಕೇನಾದರು ಹೋಗಿಬಿಡುತ್ತಾಳಾ?''! ಅಂತ ನೀವೆಲ್ಲಾ ಅಂದ್ಕೋತಿದ್ರೆ Just stop it ನಾನು ಬೀಗುತ್ತಿಲ್ಲ, ಈ ಅಲೋಚನೆಗಳೊಡನೆ ಮಾಗುತ್ತಿದ್ದೇನೆ!

ನನಗೇನನ್ನಿಸುತ್ತೆ ಗೊತ್ತಾ, ಪ್ರತೀ ಗಂಡಸು ಒಬ್ಬ ಹುಟ್ಟಾ ಬುದ್ದ! ಆದರೆ ಅವನ ದೃಷ್ಟಿಗೆ definition ತುಂಬುವವರು ನಾವು ಹೆಂಗಸರು! ಏನಂತೀರಾ? ಅಷ್ಟಿಲ್ಲದೆ ''ಕಾರ್ಯೇಷು ದಾಸಿ...'' ಇತ್ಯಾದಿ ಇತ್ಯಾದಿ ಉವಾಚಗಳೆಲ್ಲಾ ಹುಟ್ಟಿದವೇನು? ಆದರೆ ನಾವು ನಮ್ಮ ಅಂತಃಸತ್ವವನ್ನು ಜಾಗೃತಗೊಳಿಸಿಕೊಳ್ಳುವಲ್ಲಿ ಸೋಲುತ್ತಿದ್ದೇವಾ?!

ಸೃಷ್ಟಿಯೇ ಸುಳ್ಳಿನ ಮಾಲೆ ಎಂದುಕೊಳ್ಳುವ ಗಂಡು ಬುದ್ದಿಗೆ ಎಲ್ಲ ಸ್ತರದಲ್ಲೂ ಅದನ್ನು ಸುಂದರ ಸುಮ ಮಾಲೆ ಮಾಡಿಕೊಡುವ ಪ್ರಕೃತಿ ನಾವು ತಾನೆ? ನೋಡಿ, ನನಗಂತೂ ಹೀಗೇ ಅನ್ನಿಸುತ್ತೆ. ನಾನು ಅರ್ಧನಾರೀರ್ಶ್ವರ ಕಲ್ಪನೆಯನ್ನು ನಂಬುವವಳು. ಅದಕ್ಕೆ, ''Our attitude towards life determines life’s attitude towards us'' ಅನ್ನುವುದನ್ನು ನಾನು ಒಪ್ಪುತ್ತೀನಿ.

ಕುಟುಂಬಕ್ಕೆ ಕಂಟಕರಾಗುವ ಹೆಂಗಸರ ಬಗ್ಗೆ ನನ್ನ ಅಭಿಪ್ರಾಯ ಹೇಳಿ ಅಂತ ಕೇಳಿರುವ ನನ್ನ ಗೆಳೆಯರಿಗೆ ನನಗೆ ಏನು ಹೇಳಬೇಕು ಅನ್ನಿಸುತ್ತಿದೆ ಗೊತ್ತಾ? ''ನಾರಿ ಮುನಿದರೆ (ಸಂತೆಯಲ್ಲಿ) ಮಾರಿ'' ಅರೆ, ಇದೇನು ಇವಳು ಇಷ್ಟು ಉದ್ಧಟತನದಿಂದ ಹೀಗೆಲ್ಲಾ ಹೇಳ್ತಾಳಲ್ಲಾ ಅಂತ irritate ಆಗಬೇಡಿ, ನನಗನ್ನಿಸಿದ್ದು. ನಾನು ನಿಮಗೆ ಹೇಳಿದ್ದು ಅಷ್ಟೆ! ಅಂದಹಾಗೆ, ನಾನು ನಿಮಗಿತ್ತಿರುವ ಹೂಗುಚ್ಛವನ್ನು ಈಗ ಇನ್ನೊಮ್ಮೆ ನೋಡಿ. ಈ ದಿನ ಆ ದಿನಕ್ಕಿಂತ ಭಿನ್ನವಾಗಿ ಅನ್ನಿಸಬಹುದು...

ಅವಳು ಅವಳಾಗೇ ಉಳಿಯುವ ಅವಳ ಬಗ್ಗೆ ನಾನು compassionate ಆಗಿದ್ದೇನೆ ಅಂತ ಅನ್ನಿಸಿದರೆ ನಿಮಗೆ, ಅದು ಸತ್ಯಾತಿಸತ್ಯ. ಒಪ್ಪಿಕೊಳ್ಳದಿದ್ದರೆ ನನ್ನ ಒಂದು ಪ್ರಶ್ನೆಗೆ ಉತ್ತರ ಹೇಳಿ ಪ್ಲೀಸ್‌ ''ಅವನು ಇನ್ನೇನೇ ಆದರೂ ಅವಳು ಆಗಲು ಸಾಧ್ಯವೇ?'' confusion ಅಂತೀರಾ? ಅದನ್ನೇ ನಾನೂ ಹೇಳುತ್ತಿರುವುದು ಈ ಗೊಂದಲಗಳನ್ನೆಲ್ಲಾ ಮೀರಿದ ಗೆಳೆತನ ನಮ್ಮದಾಗಬೇಕೂಂತ.

'ನಿರಪರಾಧಿ ಗಂಡಿನ ಜೀವನ್ಮರಣದ ಪ್ರಶ್ನೆ'ಯನ್ನು ಹಾಕಿಕೊಂಡು ನಾಯಿ ತನ್ನ ಬಾಲ ಹಿಡಿಯಲು ತಾನೆ ಸುತ್ತುವಂತೆ ಸುತ್ತುತ್ತಿರುವವರನ್ನು ಕಂಡಾಗ ಒಂದು cause ಗೆ ಅಂಟಿಕೊಳ್ಳದೆ becauseಗಳಲ್ಲಿ ಆಧಾರ ಹುಡುಕುವವರು ಅವರು ಅನ್ನಿಸುತ್ತೆ! ಅವರು ಹೇಗೇ ಇರಲಿ, ನೋಡಿ ನಾನು ಮಾತ್ರ ನಿಮ್ಮ ಬಳಿ presentable ಆಗುವುದು ಹೇಗೇ ಎನ್ನುವುದರಿಂದ compatibility ವರೆಗೂ ಹರಟೆಕೊಚ್ಚುವವಳೇ!

ಓಹ್‌, ನಿಮಗೆ ಹೇಳಿದ್ನಾ ಹೋದವಾರ ನಾಗರಾಜ ಮಾವ ಹೋಗಿಬಿಟ್ಟರು ಪಾಪ. ಅಯ್ಯೋ ಅಳ್ಬೇಡಿ ಕಣ್ಣೊರೆಸಿಕೊಳ್ಳಿ. ಅದೇನಾಯ್ತು ಗೊತ್ತಾ?... ಓ ಈ ಕಾಲಿಂಗ್‌ ಬೆಲ್ಲು... ಒಂದೇ ನಿಮಿಷ ಮತ್ತೆ ಬಂದೆ. ಅಲ್ಲಿಯವರೆಗೂ ಕಾಯ್ತೀರಲ್ಲವಾ?!

English summary
Every thing must come to a logical end, it is just a question of time in a relationship. Our attitude towards life determines life’s attitude towards us ...Gagana on cozy corner.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X