• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು-ನೀನು ಒಂದಾದ ಹಾಗೆ!

By Staff
|

ಇಂತಹ ಸಂಬಂಧಗಳನ್ನು ಅಷ್ಟು ಗಂಭೀರವಾಗಿ, ಲಘುವಾಗಿ, ಆಕಾಶ ಕೆಳಗೆ ಬಿದ್ದಂತೆ ನೋಡಬೇಕಾದ ಅಗತ್ಯವಿಲ್ಲ! ನೀ ನನಗಾದರೆ, ನಾ ನಿನಗೆ... -ಈ ಸ್ಥಿತಿ ಪ್ರೀತಿ, ಪ್ರೇಮ ಮತ್ತು ಕಾಮವನ್ನು ಮೀರಿದ್ದು. ಒಂದು ಹಂತದಲ್ಲಿ ಒಂಟಿ ಬದುಕಿಗೆ ಆಸರೆ ಬೇಕು ಅನ್ನಿಸಿದರೆ, ಅವರು ಪಡೆಯಲಿ ಬಿಡಿ...

Two is company‘ಏನ್ರೀ ಅದು ಎಷ್ಟು ಹಳೇ topic ಆಗ್ಹೋಗಿದೆ. ಎಲ್ಲಾರೂ ಥೀಸೀಸ್‌ ಬರೆದು, ಭಾಷಣ ಕೊರೆದು ಎಲ್ಲಾ ಆಗಿದೆ. ಮತ್ತದೇ ವಿಷಯ ಮಾತಾಡ್ತೀರೇನ್ರೀ. . . .’ ಅಂತ ಅವರು ಕೇಳ್ತಾನೆ ಇದ್ರು. ನಾನು ಸುಮ್ಮನೆ ಇದ್ದೆ. ಅವರಿಗ್ಯಾಕೆ ಹೆಳ್ಳೀ? ನಾವಿಬ್ಬರು ಈಗ ಮಾತ್ನಾಡೋದು widow re-marriage ಬಗ್ಗೆ ಅಲ್ಲ ರಾಗಿಣಿ mother-in-law ಮದುವೆ ಬಗ್ಗೆ ಅಂತ!

ಆಕೆಗೀಗ ನಲವತ್ತೆಂಟು. ಮದುವೆ ಆದಾಗಿನಿಂದಾ ಒಂತರಹಾ ವಿಧವೇನೆ! ಒಬ್ಬನೇ ಮಗ ಪರದೇಶಿ I mean ವಿದೇಶದಲ್ಲಿದ್ದಾನೆ. ಈಕೆ ಒಂಟಿತನದ ಜೊತೆಗಾಗಿ ವೃದ್ಧಾಶ್ರಮ, ಅನಾಥ ಮಕ್ಕಳ ಆಶ್ರಮ ಅಲ್ಲೆಲ್ಲಾ ಸೇವೆ ಮಾಡ್ತಿರ್ತಾರೆ. ಆತ ಇಪ್ಪತ್ತು ವರ್ಷಗಳಿಂದ ಸಂಸಾರದ ಸಹವಾಸವಿಲ್ಲದೆ ಬದುಕಿದ್ದಾರೆ. ಈಗ ಇಬ್ಬರಿಗೂ ಜೊತೆ ಸಿಕ್ಕಂತಾಗಿದೆ. ಒಟ್ಟಿಗೆ ಇರಬೇಕು ಅಂತ ಬಯಸ್ತಿದ್ದಾರೆ. ತಪ್ಪೇನಿದೆಯೋ ನನಗಂತೂ ಗೊತ್ತಾಗ್ತಿಲ್ಲ! ಇದು ಗೊತ್ತಾಗಿದ್ದೇ ಸರಿ ಮೂರು ವರ್ಷಗಳ ಮೇಲೆ ರಾಗಿಣಿ ಸಂಸಾರ ಸಮೇತ ಅತ್ತೆಮ್ಮನ್ನ ವಿಚಾರಿಸೋಕ್ಕೆ ಬಂದೇ ಬಿಟ್ಟಳು ನೋಡಿ. . ..

ಒಳಕ್ಕೆ ಬಂದವಳೇ ಫ್ಯಾನ್‌ ಹಾಕಕ್ಕೂ ಬಿಡದೆ ಜೋರಾಗಿ ಶುರು ಮಾಡ್ಬಿಟ್ಟಳು ‘ಅಲ್ಲ ಕಣೆ, ಅವರು ಒಬ್ಬರೇ ಇರ್ತಾರೆ. ನಾವಂತೂ ಕರ್ಕೊಂಡ್ಹೋಗಕ್ಕಾಗಲ್ಲ. ಅದೆಲ್ಲ ಸರಿ. . . ನಾನೇನು ಅವರ ಹೊಸ ಸಂಬಂಧದ ಬಗ್ಗೆ ಆಕ್ಷೇಪ ಎತ್‌ತ್ತಿಲ್ಲ. ಮದುವೆ ಮಾಡಿಕೊಳ್ಳಿ ಅಂತ ಹೇಳ್ತಿದ್ದೀನಿ ಕಣೆ. ಯಾವ ಸೊಸೆ ತಾನೆ ಹೀಗ್‌ ಹೇಳ್ತಾಳೆ. . . . .’ ಅಬ್ಬ, ಅವಳೆಷ್ಟು ಕುದೀತಿದ್ದಳು ಅಂದ್ರೆ ಫ್ಯಾನು, ಎಸಿ ಯಾವ ಖರ್ಚು ಮಾಡಿಸದೆ ಬಂದಷ್ಟೇ ವೇಗವಾಗಿ ಹೊರಟ್ಹೋದಳು!

ನನಗೆ ಕೂತಲ್ಲಿಂದ ಏಳಕ್ಕೇ ಆಗ್ಲಿಲ್ಲ! ಅವಳನ್ನು ದರದರ ವಾಪಸ್ಸು ಎಳೆದ್ಕೊಂಡ್ಬಂದು ಅವಳಿಗಿಂತ fast ಆಗಿ ಏನೇನೋ ಹೇಳಬೇಕು ಅಂತ ಅನ್ನಿಸ್ತಿತ್ತು. ಅವಳು ಯಾವುದನ್ನು ಅರ್ಥ ಮಾಡಿಕೊಳ್ಳುವುದಿರಲಿ ಕೇಳಿಸಿಕೊಳ್ಳುವ ಸ್ಥಿತಿಯಲ್ಲೇ ಇಲ್ಲ. ಏನ್ಮಾಡೋದು ಬಿಟ್ಹಾಕಿ. ನನಗೇನನ್ನಿಸುತ್ತೆ ಅಂತ ನಿಮಗೇ ಹೇಳಿಬಿಡ್ತೀನಿ. ಅವರನ್ನು ಅವರ ಪಾಡಿಗೆ ಬಿಟ್ಟು ಬಿಡಬೇಕು ಅನ್ನಿಸಿತು.

ಅವರಿಗೀಗ ಬೇಕಿರುವುದು ಮದುವೆ ಅದರಿಂದ ಒಂದೆರಡು ಮಕ್ಕಳಲ್ಲ! companionshipಅಲ್ಲವಾ? ಹಾಗೆಂದರೇನು ಅಂತ ಕೇಳ್ತಿದ್ದೀರಾ? ಓಹ್‌, ನಿಮಗೆ ಗೊತ್ತಿಲ್ಲದ್ದು ಏನಿದೆ ಹೇಳಿ? ನನ್ನ ಅನಿಸಿಕೆಯಲ್ಲಿ ಹಾಗಂದ್ರೆ . . . ಊಂ. . . . .ಅಂದ್ರೆ. . . . .ಹೇಗ್ಹೇಳ್ಳೀ? ಯಾವ ಪುಸ್ತಕದ ಯಾವ ಭಾಗವೂ ನೆನಪಾಗುತ್ತಿಲ್ಲ, ಯಾವ ಮಹಾನುಭಾವರ quotes ಕೂಡ ಹೊಳೀತಿಲ್ಲ. . . .ನೋಡಿ, ನೀವೇನಾದ್ರೂ ತಿಳ್ಕೋಳಿ ನನಗನ್ನಿಸುತ್ತೆ ; ನೀವು ಕಮಲ್‌ ಹಾಸನ್‌ ನಟನೆ ನೋಡಿದ್ದೀರಲ್ಲ? ಅವನು ಎರಡು dialogues ಮಧ್ಯೆ ಒಂದು pause ಕೊಡ್ತಾನಲ್ಲಾ ಅದಕ್ಕೆ ಮೈಮನಸ್ಸುಗಳ ಅರ್ಥ ಕಲ್ಪಿಸಿ ಸ್ಪಂದಿಸುವುದೇ companionship.

ಈಗೇನಾದ್ರು ರಾಗಿಣಿ ಬಂದು ನನ್ನನ್ನು ‘ನಿಮ್ಮ ಅತ್ತೆಗೂ ಇದೇ theory ನಾ?’ ಅಂತ ಕೇಳಿದ್ರೆ ನಾನು ಏನ್‌ ಹೇಳ್ತೀನಿ ಗೊತ್ತಾ ‘ಬರೀ ಅತ್ತೆ ಮಾವನಿಗಲ್ಲ ನನ್ನ ಅಪ್ಪ ಅಮ್ಮನ ಬಗ್ಗೆನೂ ನಾನು ಹೀಗೇ ಯೋಚಿಸ್ತೀನಿ. ಒಂದ್ಹೆಜ್ಜೆ ಮುಂದೆ ಹೋಗಿ ನನ್ನ ಗಂಡನಿಗೂ ನಾನು ಇದನ್ನೇ ಹೇಳ್ತೀನಿ’ ಅಂತ. ನನ್ನ ಕೊನೆ ವಾಕ್ಯ Live in companionship ಮಾತ್ರ!

ನೋಡಿ... ನೋಡಿ ನಾನು ಹೀಗೇನಾದ್ರು unconventional ಮಾತಾಡಿದ್ರೆ ಸಿನಿಕತನದ ಪರಮಾವಧಿ ಅಂತ ನೀವೇ ಅಂತೀರ, ಆದ್ರೆ ಏನ್ಮಾಡ್ಲೀ ಅಪ್ಪ ಹಾಕಿದ ಆಲದ ಮರ ಅಂತ ನೇಣು ಹಾಕಿಕೊಳ್ಳಲ್ಲ ಅಂತ ಚಂಡಿ ಹಿಡಿಯುತ್ತೆ ನನ್ನ ಮನಸ್ಸು! ತಪ್ಪೋ ಸರೀನೋ ನೀವೇ ಹೇಳಿ.

ಹೇ, ಒಂದು ನಿಮಿಷ ಇರಿ. ನೀವೂ ರಾಗಿಣಿ ತರಹಾನೇ ಸಿಟ್ಟು ಮಾಡ್ಕೊಂಡು ಹೋಗ್ಬೇಡಿ. ನನಗೆ ಅಪರಿಚಿತರೊಬ್ಬರ ಪರಿಚಯವಿದೆ ಅಂತ ನಿಮಗೆ ಹೇಳಿದ್ನಾ?! ಕೇಳೋ ಆಸಕ್ತಿ ಇದ್ರೆ companionship ಬಗ್ಗೆ ನಿಮ್ಮ definition ತೊಗೊಂಡು ಮತ್ತೆ ಬನ್ನಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more