• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸದ್ಯ ನನಗೆ ನಿಮಗೆ, ಅಂತಹ ಗಂಡಂದಿರಿಲ್ಲವಲ್ಲ!

By Staff
|

ಅಬ್ಬ, ಯಾರಿಗೇನಾದ್ರೂ ಅನ್ನಿಸಲಿ, ಸದ್ಯ ನನಗೆ ನಿಮಗೆ, ಅಂತಹ ಗಂಡಂದಿರಿಲ್ಲವಲ್ಲ! ಒಂದು ಉಸಿರಾದ್ರೂ ನೆಮ್ಮದಿಯಾಗಿ ಬಿಡೋಣ. ದೃಷ್ಟಿಯಾಗುತ್ತೆ. ಬನ್ನಿ ತೀರ್ಥಹಳ್ಳಿಗೆ ಹೋಗಿ ನಾಗಮ್ಮತ್ತೆಯ ಹತ್ತಿರ ದೃಷ್ಟಿ ನೀವಾಳಿಸಿಕೊಂಡು ಬರೋಣ!

Color hides realityನಿಮಗೆ ಮಧುಬಾಲ ಗೊತ್ತಲ್ಲ? ಓಹೋ, ಅವಳಲ್ಲ. . . . ಕಾಲೇಜಿನಲ್ಲಿ ನಮ್ಮ ಜೊತೆ ಓದ್ತಿದ್‌ಳಲ್ಲ ಅವಳು! ನಿಜ ಹೇಳಿ ನಾವೆಲ್ಲರೂ ಅವಳತರಹಾನೇ ಇರ್ಬೇಕು ಅಂತ ಮನಸಿನಲ್ಲಿ ಎಷ್ಟ್ಸರ್ತಿ ಅಂದ್ಕೊಂಡಿದ್ದೀವಿ ಅಲ್ಲ್ವಾ?! ನಾನಂತೂ ಅವಳನ್ನು ಎಷ್ಟು ಆರಾಧಿಸ್ತಿದ್ದೆ ಅಂದರೆ ನಿದ್ದೆಯಲ್ಲೂ ಅವಳನ್ನೇ ಅನುಕರಿಸ್ತಿದ್ದೆ. ಅವಳನ್ನು ಎಲ್ಲಾರೂ ಪಾದರಸ ಅಂತ ಹೊಗಳ್ತಿದ್ದಾಗ ಒಮ್ಮೊಮ್ಮೆ ಹೊಟ್ಟೆಕಿಚ್ಚು ಪಟ್ಟಿದ್ದೀನಿ. ನನ್ನನ್ನು ಈವತ್ತೂ ಕಾಡುವ ಒಂದು ಪ್ರಶ್ನೆ ಏನು ಗೊತ್ತ, ಅದು ಹೇಗೆ ಒಂದು ವ್ಯಕ್ತಿ ನೋಟ, ಆಟ, ಪಾಠ, ನಡುವಳಿಕೆ ಎಲ್ಲದರಲ್ಲೂ ತೀರ ಪರ್ಫೆಕ್ಟ್‌ ಅನ್ನಿಸುವಷ್ಟರ ಮಟ್ಟಿಗೆ ಇರಲು ಸಾಧ್ಯಅಂತ!

ನಿಮಗೆ ನೆನಪಿದ್ಯಾ ಕಾಲೇಜಿನಲ್ಲಿ ಇರುವಾಗ ಅವಳ ಫೇವರೇಟ್‌ ಹಾಡು ‘ಅಂತಿಂತ ಹೆಣ್ಣು ನಾನಲ್ಲ. . . ನನ್ನಂತ ಹೆಣ್ಣು ಯಾರೂ ಇಲ್ಲ’ ಆ ಹಾಡು ಅವಳ ಪಾಲಿಗಂತೂ ನಿಜ ಅನ್ನಿಸ್ತಿತ್ತಲ್ಲ್ವಾ? ಇದೆಲ್ಲಾ ನಿಮಗೆ ಗೊತ್ತೇ ಇದೆ, ಆದರೆ ನಿಮಗೆ ಗೊತ್ತಿಲ್ಲದ ಒಂದು ವಿಷಯ ನಾನ್ಹೇಳ್ತೀನಿ.

ಏನು ಗೊತ್ತಾ. . . . ಅವಳು ಮದುವೆಯಾಗಿ ಎರಡು ಮಕ್ಕಳಾದಮೇಲೂ ಹಾಗೇ ಇದ್ದಾಳೆ. ಅವಳ ಜೀವನೋತ್ಸಾಹ ಒಂಚೂರೂ ಬದಲೇ ಆಗಿಲ್ಲ. ಅದೇ ತರಹ ಪಟ ಪಟ ಮಾತು, ನಗು, spontaneity ತುಂಟತನ, ಸಾಮಾಜಿಕ ಕಳಕಳಿ, ಭಾಷಣ, ಸಮಾಜ ಸೇವೆ, ಸಂಸಾರ, ಮಕ್ಕಳೊಡನೆ ಮಾತು, ಮುದ್ದು ಎಲ್ಲವೂ ಹಾಗೇ ಇದೆ. ಗಂಡ ಹೆಂಡತಿ ಇಬ್ಬರು made for each other ತರಹ. ಇನ್ನೊಂದು ಗುಟ್ಟು ಹೇಳಲಾ ಅವರ freshness ನೋಡಿದರೆ ಯಾವುದೇ mattress ಜಾಹೀರಾತಿಗೆ ಒಳ್ಳೆಯ ಮಾಡೆಲ್ಸ್‌ ಆಗಬಹುದು ಅವರಿಬ್ಬರು ಅನ್ನಿಸುತ್ತೆ! ಒಟ್ಟಿನಲ್ಲಿ ಏನೂ ಬದಲಾದಂತೆ ಅನ್ನಿಸುವುದಿಲ್ಲ, ಆದರೆ ಈಗ ಅವಳ ಫೇವರೇಟ್‌ ಹಾಡು ‘ಮೂಗನ ಕಾಡಿದರೇನು ಸವಿ ಮಾತನು ಆಡುವನೇನು. . . . .’ it doesnt matter ಬಿಟ್ಟ್‌ಹಾಕಿ.

ಯಾರ್ದಾದ್ರು ಸಂಸಾರ ತುಂಬಾ ಪಾರದರ್ಶಕವಾಗಿದೆ ಅನ್ನಿಸಿದರೆ ಅಲ್ಲೇನೋ ತಪ್ಪಾಗಿದೆ ಅಂತಾನೇ ನನ್ನ ಲೆಕ್ಕಾಚಾರ. ಗತಿರೋಧಕವರಿಯದ ಉತ್ಸಾಹಿ ಮಧುಬಾಲ ಎರಡ್ಮೂರು ತಿಂಗಳಿಗೊಂದ್ಸಲಿ ಅಜ್ಞಾತವಾಸಕ್ಕೆ ಜಾರ್ತಿದ್ಲು. ನನ್ನೊಳಗಿನ Sherlock Holmes ಬಿಡ್ಬೇಕಲ್ಲಾ?. . . . ಅವಳ ಗಂಡ ನಿಮಗೆಲ್ಲಾ ಗೊತ್ತಿರುವಷ್ಟು ಫೇಮಸ್‌ತಾನೆ? ಎಷ್ಟೊಂದು ಅವಾರ್ಡ್‌, ಎಷ್ಟೊಂದು ರೆಕಗ್ನಿಶನ್‌ etc., etc., ಅಲ್ಲ್ವಾ? ‘ಅತಿಥಿ ದೇವೋಭವ ’ ಅನ್ನುವುದನ್ನು ಅವರ ಮನೆಯಲ್ಲಿ ನೋಡಿ ಕಲಿಯಬೇಕು.

ಕೊನೆಗೂ ನಾನು ಗೊತ್ತ್ಮಾಡ್ಕೊಂಡಿದ್ದೇನು ಗೊತ್ತಾ? ಆಗೊಮ್ಮೆ ಈಗೊಮ್ಮೆ ಆತ ಅವಳ ಆತ್ಮವಿಶ್ವಾಸವನ್ನು ಬರ್ಭರವಾಗಿ ಹತ್ಯೆ ಮಾಡ್ತಿದ್ದ! ಆ ದಿನಗಳಲ್ಲಿ ಅವನದು ಸಾಂಕ್ರಾಮಿಕ ಮಾತು. ಆದರೆ ಅವಳು ಮೌನಕ್ಕೆ ಸಾಣೆ ಹಿಡಿಯುತ್ತಿರಬೇಕು. ಅವಳು ಯಾರೊಂದಿಗೂ ಮಾತನಾಡ ಬಾರದು, ಫೋನ್‌ ಕಟ್‌ ಆಗಬೇಕು, ಇಂಟೆರ್ನೆಟ್‌ ಕೆಲಸ ಮಾಡಬಾರದು, ಅವಳು ಟೀವಿ ನೋಡ ಬಾರದು, ಹಾಡು ಗುನುಗಬಾರದು, ಆಫೀಸಿಗೆ ಹೋಗಬಾರದು, ಅವನೆದುರು ಸುಳಿಯಬಾರದು. . . .ಹಾಗಂತ ಸಪ್ಪೆ ಮೋರೆ ಹಾಕ್ಕೊಂಡಿದ್ರೆ ಅದಕ್ಕೆ ಇನ್ನೊಂದು ರಾದ್ದಾಂತ. ಅಕಸ್ಮಾತ್‌ ಮನೆಗೆ ಬಂದವರನ್ನೂ ಸುಳಿವು ತೋರದೆ ನಗುನಗುತ್ತಲೇ ಸತ್ಕರಿಸಬೇಕು, ಆಮೇಲೆ ಅವನಿಂದ ಅದಕ್ಕೂ ಅವಮಾನಿತಗೊಳ್ಳಬೇಕು.

ಬೇನಜಿ‚ೕರ್‌ ಭುಟ್ಟೊ, ತಸ್ಲೀಮ ನಸ್ರೀನ್‌ಗೆ ಹೋಲುವ detention. ಆದರೆ ಇವಳು ಅವರಲ್ಲ! ಇಲ್ಲದ ಕಾರಣಕ್ಕೆ ನಿಂದನೆಗೊಳಗಾಗುತ್ತಾ ಈಕೆ ಮೌನವನ್ನು ಹೊತ್ತೊಯ್ಯುತ್ತಿರುವ ಸ್ತಬ್ದ ಗಾಳಿಯಲ್ಲಿ, ಆತ ಅಹಂನ ದಟ್ಟಿಯಲ್ಲಿ, ಇರುವುದಾದರೂ ಏನೂ ಅಂತ ಹುಡುಕುತ್ತಿರುತ್ತಾರೆ! ಒಟ್ಟಿನಲ್ಲಿ ಆ ಕಾಲ ವಿಲಕ್ಷಣವಾದ್ದರಿಂದ ದೀರ್ಘವೆನಿಸಿ ಆಕೆ ಕುಗ್ಗುತ್ತಾಳೆ. ಆ ಅಧ್ಯಾಯ ಮುಗಿಯತ್ತೆ. . . ಅವನು ನಗುತ್ತಾನೆ, ಹೆಂಡತಿಯನ್ನು ಮುದ್ದಿಸುತ್ತಾನೆ. . . . .ಮತ್ತೆ ಯಥಾ ಪ್ರಕಾರ, ನಮ್ಮ ಮಧುಬಾಲ ಆತ್ಮಿಕ ಸ್ನಾನ ಮಾಡಿ ನಗೆ ಬುಗ್ಗೆಯಾಗಿ, ಉತ್ಸಾಹದ ಕಾರಂಜಿಯಾಗಿ ಬದುಕಿನ ಬಗ್ಗೆ ನಮ್ಮ appetite ಅನ್ನು queen size ಮಾಡುತ್ತಾಳೆ!

ಅಯ್ಯೋ, ಯಾಕೆ ಹೀಗೆ? ಅವಳ್ಯಾಕೆ ಪ್ರತಿರೋಧಿಸೋಲ್ಲಾ? ಅದಕ್ಕವಳೇ ಏನು ಹೇಳಿದಳು ಗೊತ್ತಾ? ‘ಗಂಡಸಿಗೆ ಇರಬಹುದಾದ ದುರಭ್ಯಾಸಗಳು ಕುಡಿತ, ಸಿಗರೇಟು, ಜೂಜು, ಪರಸ್ತ್ರೀ ಸಂಗ, ಹಣ ಪೋಲು ಮಾಡುವುದು ಹೀಗೇ ಇನ್ನೂ ಏನೇನೋ, ಅವನಿಗೆ ಸದ್ಯ ಇದ್ಯಾವುದೂ ಇಲ್ಲವಲ್ಲ! ಅವನಿಗೆ ನಾನು ಒಂದು ventilator ಇದ್ದಹಾಗೆ. ಏನೋ ಆಗೊಮ್ಮೆ ಈಗೊಮ್ಮೆ ನನ್ನ ಮನಸ್ಸಿಗೆ ತಾನೆ ಆಘಾತ ಆಗೋದು. . . . .ಅಷ್ಟೇ ತಾನೆ?’

ಅಷ್ಟೇ ತಾನೆ?. . . . . ಅಷ್ಟೇ ತಾನೆ?. . . . . .ಯಾವುದು ಎಷ್ಟು? ನನ್ನ ಮನಸ್ಸು ‘ಅಷ್ಟೇ ತಾನೆ?’ಯನ್ನು ಒಪ್ಪುವುದಾದರೂ ಹೇಗೆ? ನಮ್ಮ ಲಾಯರಮ್ಮ ಕನಕೇಶ್ವರಿಗೆ ಕೂಡಲೇ ಫೋನ್‌ ಮಾಡಿ ‘ಏನ್ಮೇಡಂ, ಅವನಿಗೆ ನಿಮ್ಮ ಕಾನೂನಿನಲ್ಲಿ ಶಿಕ್ಷೆಯಿದೆ ಗೊತ್ತು. ಆದರೆ ನಮ್ಮ ಮಧುಬಾಲ ಅಂತವರಿಗೆ ಏನಾದ್ರೂ ಕಾನೂನಿದೆಯಾ?’ ಅಂತ ಕೇಳ್ಬೇಕು ಅನ್ನಿಸಿತು. ತಕ್ಷಣ ಇದೆಲ್ಲಾ ಕಾನೂನಿನಿಂದ ಪರಿಹಾರ ಆಗೋಲ್ಲ ಅಂತಾನೂ ಅನ್ನಿಸ್ತು.

ಅವನಿಗೆ ಸೈಕಿಯಾಟ್ರಿಕ್‌ ಒಬ್ಬರ ಸಲಹೆ ಸಹಾಯ ಬೇಕು ಅಂತ ಅನ್ನಿಸಿತು, ಹಿಂದೆಯೇ ಸೈಕಾಲಜಿ ಪೆಥಾಲಜಿ ಏನೂ ಇಲ್ಲ, ಗಂಡು ಮಕ್ಕಳನ್ನು ಬೆಳೆಸುವ ವಾತಾವರಣದಲ್ಲಿ ಅವರು ತಮ್ಮ ಹೆಂಡತಿಯ ಬಗ್ಗೆ ಮಾನವೀಯ ನೆಲೆಯಲ್ಲಿ ಹೇಗೆ ತಮ್ಮನ್ನು ತಾವು activate ಮಾಡಿಕೊಳ್ಳಬೇಕು ಅನ್ನುವ ಅಂಶವನ್ನು ಸೇರಿಸಿಯೇ ಇರುವುದಿಲ್ಲ ನಾವು. ಇದೇ ಸಣ್ಣ ದೊಡ್ದ ಸಮಸ್ಯೆಗಳ ಮೂಲ ಅನ್ನಿಸಿತು. ನಿಮಗೂ ಹಾಗೇ ಅನ್ನಿಸುತ್ತಿದೆಯಾ?

ಅಬ್ಬ, ಯಾರಿಗೇನಾದ್ರೂ ಅನ್ನಿಸಲಿ, ಸದ್ಯ ನನಗೆ ನಿಮಗೆ, ಅಂತಹ ಗಂಡಂದಿರಿಲ್ಲವಲ್ಲ! ಒಂದು ಉಸಿರಾದ್ರೂ ನೆಮ್ಮದಿಯಾಗಿ ಬಿಡೋಣ. ದೃಷ್ಟಿಯಾಗುತ್ತೆ. ಬನ್ನಿ ತೀರ್ಥಹಳ್ಳಿಗೆ ಹೋಗಿ ನಾಗಮ್ಮತ್ತೆಯ ಹತ್ತಿರ ದೃಷ್ಟಿ ನೀವಾಳಿಸಿಕೊಂಡು ಬರೋಣ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more