• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತ್ಮಜನೊಳಗೆ ಇರೋ ಸುಖ

By Staff
|


ಸ್ನೇಹವೆಂದರೆ ನೀವೇನು ಅಂದುಕೊಂಡಿದ್ದಿರೋ ನಾನರಿಯೆ : ಸಂಬಂಧಗಳ ಸೋಂಕಿಲ್ಲದ ಗೆಳೆತನ ಎಲ್ಲಿದೆಯೋ ಅಲ್ಲಿ ನಾನಿರುವೆ ; ಕಾಯುತ್ತಾ, ನಗುತ್ತಾ, ಅಳುತ್ತಾ... ಅವನ ಜತೆ...

Friedship for friendship sake!ಆ ದಿನ ಏನೊ ಓದುತ್ತಿರುವಾಗ ಸಿಕ್ಕಿದ್ದು ಪು.ತಿ.ನ. ಅವರ ಮಾತುಗಳು-‘ವಯಸ್ಸಿನ ಆಘಾತವನ್ನು ಗೆಲ್ಲುವ ಉಪಾಯ ಗೆಳೆತನ ’. ಒಂದುಕ್ಷಣ ಮೌನದ ಏಕಾಂತ ನನ್ನನ್ನು ಆತುಕೊಂಡಿತು. ಅಪರಿಚಿತ ಬದುಕಿನಲ್ಲಿ ಅಪರಿಚಿತ ಘಳಿಗೆಗಳನ್ನು ಪರಿಚಿತದಷ್ಟೇ ಸಹ್ಯ ಮಾಡುವುದು ಗೆಳೆತನ ಮಾತ್ರ ಎಂದು ನನಗೂ ಅನ್ನಿಸತೊಡಗಿತು. ಅದಕ್ಕೇ ನಾನು ಹೇಳಿದ್ದು ಗೆಳೆತನಕ್ಕೆ ಲಿಂಗಬೇಧವಿಲ್ಲ, ಯುೌವನದ ಗುಂಗಿಲ್ಲ, ಮುದಿತನದ ಹಂಗಿಲ್ಲ. ಬೇಕಾದ್ದು ಗೆಳೆತನವಷ್ಟೆ ಅಂತ.

ನನ್ನ ದೊಡ್ದಪ್ಪನ ಗೆಳೆಯರ ಬಳಗ ಬಲು ದೊಡ್ದದು. ಅವರೆಲ್ಲರೂ ದೊಡ್ದಮ್ಮನ ಪರಿಚಿತರು. ಅವರಲ್ಲೊಬ್ಬರು ಮಾತ್ರ ದೊಡ್ದಮ್ಮನ ಆಪ್ತರು. ಹಾಗಂತ ಆತ ನಿತ್ಯವೂ ಅವರನ್ನು ಭೇಟಿಯಾಗುತ್ತಿರಲ್ಲಿಲ್ಲ. ಫೋನ್‌ ಕೂಡ ಇಲ್ಲ. ಪತ್ರವ್ಯವಹಾರವಂತು ಇಲ್ಲವೇ ಇಲ್ಲ. ಈ-ಮೈಲ್ಸ್‌ ಇನ್ನು ಹುಟ್ಟೇ ಇರಲಿಲ್ಲ. ಅವರಿಬ್ಬರ ಮಧ್ಯೆ ಕಷ್ಟ-ಸುಖಗಳ ವಿನಿಮಯ ನಡೆಯುತ್ತಿತ್ತೇ? ಅದು ಆಗ ನನಗೆ ಗೊತ್ತಾಗುತ್ತಿರಲಿಲ್ಲ. . .

ಎಷ್ಟೋ ಬಾರಿ ನಮ್ಮ ಮನೆಯ ಸಾವು ನೋವುಗಳಿಗೆ ಆತ ಬರಲಾಗದೇ ಇದ್ದದ್ದು ಇದೆ. ಮದುವೆಯೊಂದಕ್ಕೂ ಆತನ ಗೈರುಹಾಜರಿಯಾಗಿತ್ತು. ಆದರೂ, ಆತ ಬಂದ ದಿನ ಆಕೆಯ ಉತ್ಸಾಹ ತುಂಬ visibleಆಗಿರುತ್ತಿತ್ತು. ಲವಲವಿಕೆಯಲ್ಲಿ ಮಿಂದೇಳುತ್ತಿದ್ದರು. ಅವರಿಬ್ಬರ ಸಂಭಾಷಣೆ ಮನೆಯ ಮೂಲೆ ಮೂಲೆಯಲ್ಲೂ ಪ್ರತಿಧ್ವನಿಸುತ್ತಿತ್ತು. ಅವರಿಬ್ಬರ ನಡುವಿನ ಚರ್ಚಾ ವಿಷಯ ಮನೆಯನ್ನೆಲ್ಲಾ ಅವರಿಸಿಕೊಂಡಿರುತ್ತಿತ್ತು.

ಈಗ ದೊಡ್ಡಮ್ಮನಿಗೆ ನನ್ನ ವಯಸ್ಸಿನ ನಾಲ್ಕು ಮೊಮ್ಮಕ್ಕಳು. ಆದರೂ ಅವರಿಬ್ಬರ ಸ್ನೇಹ ಅದೇ ರೀತಿ ಮುಂದುವರೆದಿದೆ. ಈಗಲೂ ಅವರಿಬ್ಬರು ಭೇಟಿಯಾಗುವುದನ್ನು ನೋಡುವುದು ನಿಜಕ್ಕೂ ಕಣ್ಣಿಗೆ ಹಬ್ಬ, ನನ್ನ ಮನಸ್ಸಿಗೊಂದು ದಿಬ್ಬಣ! ಒಂದು ಹೆಣ್ಣು, ಗಂಡಸಿನ ನಡುವೆ ಅಸಭ್ಯತೆ, ಅಶ್ಲೀಲತೆಗಳನ್ನು ಮೀರಿದ, ಯಾವುದೇ ಸಂಬಂಧದ ಹಣೆ ಪಟ್ಟಿ ಅಂಟಿಸಿಕೊಳ್ಳದೆ ಕೇವಲ ಸ್ನೇಹ ತನ್ನ ಮೂಲ ರೂಪದಲ್ಲೇ ಇರಲು ಸಾಧ್ಯ ಎಂದು ನನಗೆ ಅರ್ಥವಾಗಿಸಿದ್ದೇ ಅವರಿಬ್ಬರ ಗೆಳೆತನ !

ಈಗ ನಿಮಗನ್ನಿಸುತ್ತಿಲ್ಲವಾ ನಿಮಗೂ ಆ ರೀತಿಯ ಒಬ್ಬ ಗೆಳೆಯನಿದ್ದಾನೆ ಅಂತ?! ಆದರೆ ?. . . . . .ಹೌದು, ಮದುವೆಯಾದ ಮೇಲೆ ಅವನೊಡನೆ ಸಂಪರ್ಕವಿರಿಸಿಕೊಂಡಿಲ್ಲಾ ಅಲ್ಲವಾ? ಛೆ, ನಾವೆಲ್ಲ ಯಾಕೆ ಹಾಗ್ಮಾಡ್ತೀವಿ. ಮದುವೆ ಆದ ಕೂಡಲೇ ಮುಂಚಿನ ನಮ್ಮ ಜೀವನ ಜೀವನವೇ ಅಲ್ಲ ಅನ್ನುವ ಹಾಗೆ ವರ್ತಿಸಲು ಶುರು ಮಾಡಿಬಿಡುತ್ತೇವೆ. ಗಂಡಾನೇ ನನ್ನ Best Friend ಅಂತ ನಮ್ಮ ಮನಸ್ಸನ್ನು ಪುಸಲಾಯಿಸಿಕೊಂಡು ಊರಲೆಲ್ಲಾ ಟಾಂ ಟಾಂ ಮಾಡ್ತೀವಿ.

ಗಂಡ ಹೆಂಡತಿ ನಡುವೆ ಇರುವ ಸಾಮರಸ್ಯವನ್ನೇ ಸ್ನೇಹ ಅಂತ, ತಪ್ಪಾದರೂ ಸರಿ ಬಲವಾಗಿ ನಂಬಿಕೊಳ್ಳಲು ಪ್ರಯತ್ನ ಮಾಡ್ತೀವಿ. ಮುಂಚಿನ ನಮ್ಮ ಒಡನಾಡಿಗಳೊಡನೆ ಸಂಪರ್ಕ ಇಟ್ಟುಕೊಳ್ಳೋದಿರಲಿ, ಅವರ ನೆನಪು ಮಾಡಿಕೊಂಡು ಅವರ ಬಗ್ಗೆ ಮಾತನಾಡುವುದೇ ನಮ್ಮ ‘ಪತಿವ್ರತಾ ಧರ್ಮ ’ಕ್ಕೆ ಅಪಚಾರ ಅಂದ್ಕೊಂಡಿರ್ತೀವಿ! ಪ್ರತಿಯೊಬ್ಬರಿಗೂ ನಮ್ಮ ಜೀವನದಲ್ಲಿ ಇರುವ ಪ್ರತ್ಯೇಕ Role ಗಳನ್ನು ಗೊತ್ತಿದ್ದೂ ಗೊತ್ತಿದ್ದೂ Confuse ಮಾಡಿಕೊಂಡು ಒಮ್ಮೆಯಾದರೂ ಒಂಟಿತನದ ಬೇಗೆಯ ಬಾಗಿಲಲ್ಲಿ ಸ್ನೇಹವನ್ನು ರದ್ದಿಯಂತೆ ಬಿಸಾಡಿರುತ್ತೀವಿ.

ಅಯ್ಯೋ! ಗೆಳೆಯ- ಅವನೊಡನೆ ಸಾಮೀಪ್ಯ-ಸಂಪರ್ಕ ಎಲ್ಲವೂ ಹಾಗಿರಲಿ, ಪುರುಷ ಸಹೋದ್ಯೋಗಿ ಅಥವಾ ನಮ್ಮ ಯಜಮಾನರ Friend ಒಬ್ಬ ಹಾಕಿಕೊಂಡಿರುವ shirt ಚೆನ್ನಾಗಿದೆ ಅಂತಾನಾದ್ರೂ ಬಾಯಿಬಿಟ್ಟು ನಮ್ಮ ಮನಸ್ಸಿಗೇ ನಾವು ಹೇಳಿಕೊಂಡಿರುತ್ತೇವಾ? ‘ಹುಡುಗ ಹುಡುಗ, ಓ ನನ್ನ ಮುದ್ದಿನ ಹುಡುಗ. . . .ಮುದ್ದ್‌ ಮಾಡೋಕೂ ಕಂಜೂಸು ಬುದ್ಧಿ ಬೇಕಾ?’ ಈ ಹಾಡು ನಮಗೆ ಈಗಲೂ ಇಷ್ಟವಾಗುತ್ತೆ ಅಂತ ನಮ್ಮನ್ನು ಯಾವುದೇ estimation ಇಲ್ಲದೆ ಅರ್ಥ ಮಾಡಿಕೊಳ್ಳುವ ಸ್ನೇಹಿತರೊಂದಿಗೆ ಹೇಳಿದ್ದೇವಾ?!

ನನಗೊಬ್ಬ ಗೆಳೆಯನಿದ್ದಾನೆ. ಒಮ್ಮೊಮ್ಮೆ ನನ್ನಲ್ಲಿನ ತಾಯ್ತನದ ಸೆರಗನ್ನು ಹಿಡಿದು ಬಿಡದೆಯೇ ಜಗ್ಗುತ್ತಾನೆ. ನನ್ನ ಕಿರಿ ಬೆರಳನ್ನು ಹಿಡಿದು ಅಪ್ಪನಂತೆ ಪ್ರಪಂಚ ಜ್ಞಾನವನ್ನು ನೀಡುವ ಪ್ರೌಢತೆ ಹೊಂದಿದ್ದಾನೆ. Romantic ಕವನಗಳ ಸಾಲುಗಳನ್ನು ನನಗಾಗೇ ಬರೆದು ನನ್ನಲ್ಲಿನ ಹುಡುಗಿಯ ಕೆನ್ನೆ ಕೆಂಪಾಗಿಸುತ್ತಾನೆ. ನನ್ನ ಸ್ನೇಹಿತ ನನ್ನನ್ನು ಇನ್ಸ್ಟಿಂಕ್ಟ್ಸ್‌ ಮತ್ತು ಲಾಜಿಕ್‌ಗಳ Blend ಮಾಡಿ ಜೀವನ್ಮುಖಿಯಾಗಿಸಿದ್ದಾನೆ ! ನಿಮ್ಮ ಪಾಲಿಗೂ ಹಾಗಿರುವ ಸ್ನೇಹಿತನಿಗೆ ಈ ದಿನವೇ ಒಂದು ಫೋನ್‌ ಮಾಡಿ, ಈ-ಮೈಲ್‌ ಮಾಡಿ ಸಾಧ್ಯವಿದ್ದರೆ ಭೇಟಿ ಮಾಡಿಬನ್ನಿ. ಹೇಗನಿಸುತ್ತೆ ನೋಡಿ. . . . ನಿಮ್ಮ ದೃಷ್ಟಿಯಲ್ಲೊಂದು ಆತ್ಮವಿಶ್ವಾಸದ ಕಳೆ ಮೂಡಿ ಆಲೋಚನೆ ಇನ್ನೂ ಉದಾರವಾಗದಿದ್ದರೆ, ನನ್ನೊಡನೆ ಮಾತನಾಡುವುದೇ ಬಿಡಿ ಆಯ್ತಾ?! ನನ್ನ ಈ ಮಾತುಗಳು, ಭಾಷೆ ಬಹಳ ಭಾರವಾಯ್ತು ಅಲ್ಲವಾ? ಈ ಪ್ರಶ್ನೆಯನ್ನು ನನ್ನ ಗೆಳೆಯನಿಗೆ ಕೇಳಿದ್ದರೆ ಏನು ಹೇಳಿ ನಗಿಸಿ ಭಾರ ಇಳಿಸುತ್ತಿದ್ದ ಗೊತ್ತಾ? ‘ನೀನೇನು ತೂಕ ಮಾಡಿ ನೋಡಿದೆಯಾ. . . .?! ’ ನಾವು ಮನಸ್ಸಾರೆ ನಗುವುದರಲ್ಲಿ ಜಿಪುಣಾಗ್ರೇಸರರು ಅಂತ ಅವನಿಗೆ ಚೆನ್ನಾಗಿ ಗೊತ್ತು!

ಗಂಡನಿಗೆ ಹಿಡಿಸೋಲ್ಲ, ಮಕ್ಕಳಿಗೆ ಹಿತವಾಗೋಲ್ಲಾ, ಅತ್ತೆ ಮಾವನಿಗೆ ಸಹಿಸೋಕಾಗಲ್ಲಾ, ಸಮಾಜಕ್ಕೆ ಸಹ್ಯವಾಗೋಲ್ಲಾ ಹೀಗೆ ಏನೇನೋ ಗೋಣು ಹಾಕಿಕೊಂಡು, ಮಾತು ನೂರಾಡುತ್ತಲೇ ಎಲ್ಲದರಿಂದಲೂ ವಿಮುಖರಾಗಿಬಿಡುತ್ತೇವೆ. ಹೌದು, Once again ನಾವು ಹೆಂಗಸರೇ ಹೀಗೆ!

ಅರೆ, ಈಗಲೆ ಹೋಗಿ ನಿಮ್ಮ ಸ್ನೇಹಿತನನ್ನು ಭೇಟಿ ಮಾಡಿ, ಸಾಧ್ಯವಾದರೆ ಜೊತೆಯಲ್ಲಿ ಒಂದು ಕಪ್‌ ಕಾಫಿ ಕುಡಿದು ಬನ್ನಿ ಅಂತ ಹೇಳಿದೆ ನಿಜ. ಆದರೆ ಅವನ ಹೆಸರು ಕೇಳದೆ ಹೊರಟೇ ಬಿಟ್ಟರೆ ಹೇಗೆ? ಆತ ನಿಮಗೂ ಪರಿಚಿತನಾಗಿದ್ದರೆ? ಆತನೇ ನಿಮ್ಮ ಸ್ನೇಹಿತನೂ ಆಗಿದ್ದರೆ?. . . . ಅವನ ಹೆಸರು ‘ಮನುಜ’. ಅವನಿಗಾಗಿ, ನಮ್ಮ ಗೆಳೆತನಕ್ಕಾಗಿ ‘‘ಗೆಳೆಯರಿರಲಿ ಈ ಬಾಳಿನಲಿ; ಗೆಳೆಯರಿರಲಿ ಕೊನೆತನಕ. . . .’’ ಕವನದ ಸಾಲುಗಳ ಭಾವಾರ್ಪಣೆ. ಸ್ನೇಹದ ಕಡಲಲ್ಲಿ ನೆನಪಿನ ಹಾಯಿದೋಣಿಯಲ್ಲಿ ನಿಮ್ಮ ಪಯಣ ಹೇಗಿತ್ತು ಅಂತ ನನಗೆ ನಾಲ್ಕು ಸಾಲು ಬರೆಯಿರಿ. ನಾನೂ ನಿಮ್ಮ ಸ್ನೇಹದಲ್ಲಿ ಭಾಗವಹಿಸುತ್ತೇನೆ !

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more