ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟು ಜನ ರಾಧೆಯರೋ? ಎಷ್ಟೊಂದು ಬೃಂದಾವನಗಳೋ?

By Staff
|
Google Oneindia Kannada News


ಗಂಡ-ಹೆಂಡಿರ ಮಧ್ಯೆ ‘ಅವಳು’ ಬಂದಾಗ ಎಂಥದ್ದೋ ತಳಮಳ! ಆದರೆ ಒಂದು ಕ್ಷಣ ಯೋಚನೆ ಮಾಡಿ; ‘ಅವಳು’ ಮಾಡಿದ ಯಾವ ಪಾಪಕ್ಕೆ ಈ ಶಿಕ್ಷೆ? ಈ ಮಾತು ಕೇಳುತ್ತಿದ್ದಂತೆಯೇ, ನಿಮ್ಮಲ್ಲಿ ಕೆಲವರು, ನನ್ನ ಮೇಲೆ ಮುನಿಸಿಕೊಳ್ಳಬಹುದು. ನಾನು ‘ಅವಳ ’ಪರ ನಿಂತಿಲ್ಲ. ನಿಮ್ಮ ಪರವೂ ನಿಂತಿಲ್ಲ. ನಿಂತಲ್ಲೆ ನಿಂತಿದ್ದೇನೆ.

Extra Platonic........ಈ ದಿನ ಈ ಕ್ಷಣ ನನ್ನ ಮನಸ್ಸನ್ನು ಸುತ್ತುವರೆದಿದ್ದಾಳೆ ಅವಳು. ನಿಮ್ಮ ಜೊತೆ ಪೂರ್ತೀ ಅವಳ ಮಾತೇ ಆಡೋಣ ಅನ್ನಿಸುತ್ತಿದೆ. ಅರೆ, ಅವಳು ಯಾರು? ಅಂತ ಕೇಳ್ತಿದ್ದೀರ.. . . .. ಏನೇ ಆಗಿದ್ದರೂ, ಮುಂದೇನೇ ಆದರು ‘ಅವಳು’ ಆಗೇ ಉಳಿಯುವ ಅವಳು ನಿಮಗೆ ಗೊತ್ತಿಲ್ಲವಾ?!

ನಾನು ಹೊಳೆಯಬೇಕಿತ್ತು ಹೊಳೆಯಾಗಿಬಿಟ್ಟೆ; ನಾನು ಬದುಕಬೇಕಿತ್ತು ಬಯಲಾಗಿ ಬಿಟ್ಟೆ ; ನಾನು ನಾನಾಗಬೇಕಿತ್ತು ನಗ್ನಳಾಗಿಬಿಟ್ಟೆ ; ನಾನು ಹೂವಾಗಿ ಅರಳಬೇಕಿತ್ತು ಹರಳಾಗಿಬಿಟ್ಟೆ. ಅಂತ ಪ್ರತೀ ಉಸಿರಿನೊಂದಿಗೂ ಹಪಹಪಿಸುತ್ತಾಳಲ್ಲ ಅವಳು ನಿಮಗೆ ಗೊತ್ತಿಲ್ಲವಾ?!

ಅವಳು ಇರುವ ಎಷ್ಟು ಮನೆಗಳನ್ನು ನೀವೂ ನೋಡಿದ್ದೀರ. ಎಷ್ಟು ಸಿನೆಮಾಗಳಿಗೆ, ಕಥೆ- ಕಾದಂಬರಿಗಳಿಗೆ, ಕವಿತೆ-ಪದ್ಯಗಳಿಗೆ ಅವಳು ಸರಕಾಗಿದ್ದಾಳೆ. ಆ ಸಿನೆಮಾದಲ್ಲಿ ನಮ್ಮ ಲೋಕಲ್‌ ಸೋಫಿಯ ಲಾರೆನ್‌, I mean ರೇಖಾ ನಾಯಕಿ. ನಾಯಕನಿಗೆ ರೇಖಾಳೇ ಹೆಂಡತಿಯಾದರೂ ಅವನಿಗೆ ಒಬ್ಬ ‘ಅವಳು’ ಇರುತ್ತಾಳೆ!

ನಿಜ ಹೇಳಬೇಕೆಂದರೆ ಅವಳು ನಾಯಕಿಗಿಂತಾ ತುಂಬಾ ಕ್ಯೂಟ್‌, alive and kicking. ಆ ಸಿನೆಮಾ ನೋಡ್ತಾ ನೋಡ್ತಾ ನಾನು ನನ್ನನ್ನು ಅವಳಿಗೆ ಅವಳ ಸ್ವಭಾವಕ್ಕೆ ರಿಲೇಟ್‌ ಮಾಡಿಕೊಳ್ಳ್ತಿದ್ದೆ. ಆದರೆ ಒಂದರೆ ಕ್ಷಣದಲ್ಲೇ ಒಲ್ಲದೆಯೂ ‘ರೇಖಾ’ಳಿಗೆ ನನ್ನನ್ನು ಒಗ್ಗಿಸಿಕೊಳ್ಳುತ್ತಿದ್ದೆ. ಕಾರಣ, ನಾನು ಹುಟ್ಟುವ ಒಂದಷ್ಟು ಶತಮಾನಗಳ ಮೊದಲಿನಿಂದಲೇ ನಾನು ಹೆಂಡತಿಯೇ ಆಗಬೇಕು ಎನ್ನುವ ಬೀಜವನ್ನು ನನ್ನಲ್ಲಿ ಬಿತ್ತಿದ್ದಾರಲ್ಲ ಅದಕ್ಕೆ.

‘ಅವಳು’ ಎಂದೂ ಎಲ್ಲರ ತಾತ್ಸಾರದ ರಾಡಿ ಎರಚಾಟಕ್ಕೆ ತಾನೆ. . . . . . . ಒಂದು personality ಇಲ್ಲದೆ ಸಮಾಜದ ಸಾಗುವಳಿಯಲ್ಲಿ ಕಾಲ ಖಂಡಗಳನ್ನು ದಾಟಿ ಬಂದಿದ್ದಾಳೆ. ನಮ್ಮೆಲ್ಲ Blog Buster ಅನ್ನು ಸಹಿಸಿಕೊಂಡೂ ನನ್ನ ನಿಮ್ಮಂತೇ ಕಣ್ಣಲ್ಲಿ ಸಮುದ್ರ ಹಿಡಿದಿಟ್ಟುಕೊಳ್ಳಬಲ್ಲಳು, ಬೊಗಸೆಯಲ್ಲಿ ಮಳೆ ತುಂಬಿಸಿಕೊಳ್ಳಬಲ್ಲಳು, ಆದರೂ ಅವಳು ‘ಅವಳು’ ಆಗೇ ಉಳಿತಾಳೆ; ನಾವೆಂದೂ ಅವಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ ಅಂದಮೇಲೆ ಅವಳನ್ನು ಗೌರವಿಸುವುದು ತಾನೆ ಎಲ್ಲಿಂದ?

ಹಾಗೆ ನೋಡಿದರೆ ಆ ಮೇಘಶ್ಯಾಮನ ರಾಧೆ, ಗಿರಿಧಾರಿಯ ಮೀರ ಕೂಡ other woman ತಾನೆ?! ಅಯ್ಯಯ್ಯೊ, ನಾನೇನಾದರು ಹಾಗೆ ಅಂದರೆ ನನ್ನನ್ನು ಮಂಗಳ ಗ್ರ್ರಹಕ್ಕೆ ವರ್ಗಾಯಿಸಿಬಿಡುತ್ತಾರೆ ಅಷ್ಟೆ. . . . ಅವರೆಲ್ಲ ಭಕ್ತಿಯ ಪರಾಕಾಷ್ಠೆ ತಲುಪಿದ unconditional love ವ್ಯಕ್ತ ಪಡಿಸಿದ ಪ್ರೇಮಿಕೆಯರು. . . . . . .ಅವಳಿಗಿರುವ ಮರ್ಯಾದೆಯ ಆಕಾಂಕ್ಷಿಗಳಾದ ನಾವು ರಾಧೆಯೊಡನೆ ನಮ್ಮನ್ನು identify ಮಾಡಿಕೊಳ್ತೀವಿ. ಆದರೆ ‘ಅವಳ’ ಜೊತೆಗಲ್ಲ. ಅವಳು ನಮ್ಮ ಅಂತರಂಗಕ್ಕೆ ಎಷ್ಟೆ ತಾಗಿದರೂ, ಅವಳ ರೂಪ ಗುಣಗಳು ನಮ್ಮಲ್ಲಿ ಎಷ್ಟೇ similarities ಕಂಡರೂ ನಾವು ಬಹಿರಂಗವಾಗಿ ಅವಳ ಮನೋಸ್ಥಿತಿಗೆ ಸ್ಪಂದಿಸುವುದೇ ಇಲ್ಲ.. . . . . .

ಯಾಕೆ ಹೀಗೆ? ಮಾತು ಮಾತುಗಳಲ್ಲೂ ಸಿಗಿದು ತೋರಣ ಮಾಡಿಸಿಕೊಳ್ಳವಷ್ಟು ಭರ್ಜರಿ ಅಪರಾಧಿಯೇ ಅವಳು? ನನಗೆ ಒಮ್ಮೊಮ್ಮೆ ಅನ್ನಿಸುತ್ತೆ, ನಮಗೆ ಅವಳನ್ನು ವಿರೋಧಿಸುವುದೇ ಬೇಡ ಆದರೆ ಹಾಗೆ ಮಾಡದಿದ್ದರೆ ನಮ್ಮ ಬಗ್ಗೆ ಸಮಾಜ ಏನು ಅಂದ್ಕೊಳ್ಳತ್ತೋ ಅಂತ ಭಯ ಅಷ್ಟೆ! ಹಾಗಂತ ‘ಅವಳು’ ನಮ್ಮ ರಾಧೆಯಷ್ಟು, ಮೀರಾಳಷ್ಟು flawless ಅಂತ ನಾನು ಹೇಳ್ತಿಲ್ಲ. ಆದರೆ ಎಲ್ಲೋ ಒಂದು ಕಡೆ ಅವಳ character ನಮ್ಮಲ್ಲೂ ಇದೆ ಅಲ್ಲವಾ, ಅದನ್ನು ನಾವು ಒಪ್ಪಿಕೊಳ್ಳಬೇಡವಾ?

‘ಹೆಣ್ಣು ತುಂಬಾ possessive ಏನೇ ಹಂಚಿಕೊಂಡರೂ ತನ್ನ ಸಂಸಾರ ಮಾತ್ರ ಹಂಚಿಕೊಳ್ಳಲಾರಳು’ ಅಂತ ಕೇಳಿಕೊಂಡೋ, ಓದಿಕೊಂಡೋ ಅದೇ ನಂಬಿಕೆಗೆ ನಿಜವೋ ಸುಳ್ಳೋ ಗೊತ್ತಿಲ್ಲದೆ ಜೋತು ಬಿದ್ದಿರುತ್ತೇವೆ. ಕರ್ಣನನ್ನು ಮನಸಿನಲ್ಲಿ ಆರಾಧ್ಯ ದೈವವಾಗಿಸಿಕೊಂಡು ಪಂಚ ಪಾಂಡವರಿಗೂ better half ಆದ ಪಾಂಚಾಲಿಯನ್ನು ಮಾತ್ರ‘ಅವಳು’ ಅನ್ನದೆ ಪ್ರಾತಃಸ್ಮರಣೀಯ ಪತಿವ್ರತೆ ಅಂತೀವಿ! ಯಾಕೆ ಹೀಗ್ಮಾಡ್ತೀವಿ. . . . hypocracy ಅಂತ ಚೀರಬೇಕು ಅನ್ನಿಸುತ್ತೆ ಅಲ್ಲವಾ? ಓಹ್‌, ಹಾಗೇನು ಅಲ್ಲ ಬಿಡಿ. ನಾನು ಕಂಡ್ಕೊಂಡಿರೋ ಒಂದು ಸರಳ ಸತ್ಯ ಅಂದರೆ ನಾವು ನಮ್ಮನ್ನು charactersಗಳಿಗಿಂತ imageಗಳಿಗೆ ಹೊಂದಿಸಿಕೊಳ್ಳುವುದರಲ್ಲಿ ಸುಖಿಸುತ್ತೇವೆ.

ಹೌದು, ನಾವು ಹೆಂಗಸರೇ ಹೀಗೆ!

ನೀವು ‘ಅವಳು’ ಆದರೂ ಸರಿ, ಅವಳನ್ನು ಒಪ್ಪುವವರಾದರೂ ಸರಿ, ನನ್ನೊಂದಿಗೆ ಜಗಳವಾಡಲಾದರೂ ಸರಿ ನನಗೆ ಬರೆಯಿರಿ. . . . . . ನಾನು ನನ್ನೊಡನೆ womanhood share ಮಾಡಿಕೊಳ್ಳುತ್ತಿರುವ ಎಲ್ಲಾ ಹೆಂಗಸರನ್ನೂ ಗೌರವಿಸುತ್ತೇನೆ. ನಿಮ್ಮ ಮನಸ್ಸು ಅನಾವರಣಗೊಳ್ಳುವುದನ್ನು ನಾನು ಎದುರು ನೋಡುತ್ತಿರುತ್ತೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X