ಶ್ವೇತಭವನದಲ್ಲಿ ಆ male ಏನಾಯ್ತೆಂದರೆ...
ಮೊನ್ನೆ ಮುಂಗಾರುಮಳೆ ಚಿತ್ರವನ್ನು ನೋಡುವ ವಿಷಯದಲ್ಲಿ ನಡೆದ ಬುಷ್-ಬುಷಿಣಿಯರ 'ಸರಸ ಸಲ್ಲಾಪ’ವನ್ನು ವಿಚಿತ್ರಾನ್ನದಲ್ಲಿ ನೀವೆಲ್ಲ ಓದಿರಬೇಕು. ಅದರ ನಂತರ, ಅದಕ್ಕೆ ಸಂಬಂಧಿಸಿದಂತೆ ನಡೆದ 2 ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ ನೋಡಿ.
ಬುಷ್ ನೋಡಿದ ಇನ್ನೊಂದು ಸಿನಿಮಾ!
- ವಿಕ್ರಮ ಕವಲಿ, ಮೈಸೂರು
ತನ್ನ ಬಗ್ಗೆ ಬರೆದ ಈ ವಿಚಿತ್ರಾನ್ನಭಟ್ಟನನ್ನು ವ್ಹೈಟ್‌ಹೌಸ್‌ಗೆ summonಸಿದರು ಬುಷ್! ಬಯ್ಯಲಿಕ್ಕಲ್ಲ, ಸಮ್ಮನಿಸಿದ್ದು ಹೀಗೇ ಸುಮ್ಮನೆ... ಭೇಷ್ ಹೇಳಲಿಕ್ಕೆ!
ಈ ವಿಚಿಭಟ್ಟನಾದರೋ, ಅಲ್ಲಿಗೆ ಹೋಗುವಾಗ ಇನ್ನೊಂದು ಹಳೆಯ ಕನ್ನಡ ಚಲನಚಿತ್ರದ (ಸಾಕಷ್ಟು ಹೆಸರು ಮಾಡಿರುವ) ಸಿ.ಡಿ ಯನ್ನು ಹಿಡಿದುಕೊಂಡು ಹೋಗಿದ್ದರು. ಬುಷ್ ದಂಪತಿಗಳು ಆರಾಮವಾಗಿ ಕುಳಿತಿದ್ದರು. ಸಿಡಿ ಯನ್ನು ಕಂಡ ಕೂಡಲೆ ಎಂದಿನಂತೆ ಬುಷ್ ಮಹಾಶಯರು ಕನ್ನಡಚಿತ್ರದ ಇಂಗ್ಲಿಷ್ ಶೀರ್ಷಿಕೆಯನ್ನು ಓದುವ ಪ್ರಯತ್ನ ಮಾಡಿದರು. ಅಲ್ಲಿದ್ದ ಎಲ್ಲರ ಕೆಂಪು ಮುಖಗಳು ನಾಚಿ, ಇನ್ನಷ್ಟು ಕೆಂಪಾದುವು!
ಬುಷ್ ಮಹಾಶಯರು “ಅವೇಲ್ ನನ್ನ ಹೆಂಡತಿ” ಎಂದು ಉದ್ಗರಿಸಿದ್ದರು! (ಆ ಚಿತ್ರದ ಹೆಸರು “ಅವಳೇ ನನ್ನ ಹೆಂಡತಿ”)
ಅಷ್ಟಕ್ಕೆ ಮುಗಿಯಲಿಲ್ಲ. ಕನ್ನಡದಲ್ಲಿ ಇಷ್ಟು ಒಳ್ಳೊಳ್ಳೆ ಚಿತ್ರಗಳು ಬರುತ್ತಿರುವುದನ್ನು ನೋಡಿ, ಹೊಸತಾಗಿ ಕನ್ನಡ ಕಲಿಯುವ ಪ್ರಯತ್ನ ಮಾಡುತ್ತಿದ್ದಾರಂತೆ ಬುಷ್ ಅವರು. ಒತ್ತಕ್ಷರ ಇನ್ನೂ ಸರಿಯಾಗಿ ಬರುತ್ತಿಲ್ಲ. ಹೊರಡುವ ಮುನ್ನ ವಿಚಿಭಟ್ಟರು ಆಟೋಗ್ರಾಫ್ ಪುಸ್ತಕದಲ್ಲಿ ಸಹಿ ಮಾಡುವಂತೆ ಕೇಳಿದಾಗ ಬುಷ್ ಮಹೋದಯ ತನ್ನ ಹೆಸರನ್ನು ಕನ್ನಡ ಅಕ್ಷರಗಳಲ್ಲಿ ಬರೆದುಬಿಟ್ಟರಂತೆ, "ಜಾರಜ ಬುಷ್" ಎಂದು.
“ಇರಾಕ್‌ನ ಜನ ಬರೀ ಬಾಯಿಂದ ಹೇಳುತ್ತಿರುವದನ್ನು ಇವರು ಲಿಖಿತದಲ್ಲಿ ಕೊಟ್ಟರೇ!” ಎಂದುಕೊಳ್ಳುತ್ತ ಅಲ್ಲಿಂದ ಹೊರಬಿದ್ದರು ವಿಚಿಭಟ್ಟರು.
* * *
ಬುಷ್ಷನ ಖುಷಿಗೆ ಮಿತಿಯೇ ಇಲ್ಲ
"ಬಾರೋ ಬಾರೋ ಕನ್ನಡ ಚಿತ್ರಕೆ"
ಎನ್ನುತ ಕರೆದಳು ಲಾರೆ.
"ಸಿನಿಮಾ ನೋಡಲು ಎಲ್ಲಿದೆ ಹೊತ್ತು?"
ಎಲ್ಲಿಗು ನಾ ಬರಲಾರೆ
ಕಾಂಡಿಯು ಕರೆವಳು
ನಿದ್ರೆಯ ಕೆಡಿಪಳು
ಸುಮ್ಮನೆ ಮಲಗಲು ಬಾರೆ
ಎನ್ನುತ ಎದ್ದನು
ಮಂಚಕೆ ಬಿದ್ದನು
ರಿಮೋಟನು ಒತ್ತುತ ಉರುಳಿದನು
ಬುಷ್ಷನ ಖುಷಿಗೆ ಮಿತಿಯೇ ಇಲ್ಲ
ಉದಯ ಠೀವಿಯೆ ಕಾಣಿಸಿತಲ್ಲ
ಬುಷ್ಷನು ಲಾರೆಯ ತಬ್ಬಿದನು
ಮುಂಗಾರುಮಳೆಯಲಿ ನೆನೆಸಿದನು!












Click it and Unblock the Notifications