ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ಪ್ರವಾಸಕಥನ : ಭಾಮಿನಿ ಸ್ಟೈಲ್!

By Staff
|
Google Oneindia Kannada News


ಆಧುನಿಕ ನಾರಣಪ್ಪನವರ ಅಮೆರಿಕಾ ಪ್ರವಾಸಕಥನದ ಒಂದು ಪಕ್ಷಿನೋಟ, ಸ್ಪೆಷಲ್ ಪ್ರಿವ್ಯೂ ನಿಮಗೀಗ ಸಿಕ್ಕಿದೆ! ಇದು ವಿಚಿತ್ರಾನ್ನದಲ್ಲಿ ಮಾತ್ರ! ಓದಿ ಮಜಾ ಮಾಡಿ! ನಕ್ಕು ಹಗುರಾಗಿ!

  • ಶ್ರೀವತ್ಸ ಜೋಶಿ
America travelogue in Bhamini styleಕೊಲಂಬಸನ ಅಮೆರಿಕಯಾತ್ರೆಯ ಕುರಿತು ನೀವು ಓದಿರುತ್ತೀರಿ, ಕೇಳಿರುತ್ತೀರಿ. ಆದರೆ ಕುಮಾರವ್ಯಾಸನ ಅಮೆರಿಕಯಾತ್ರೆಯ ಬಗ್ಗೆ ನಿಮಗೆ ಗೊತ್ತಾ ಎಂದು ಕೇಳಿದರೆ!? ಅವರಿಬ್ಬರೂ ಸರಿಸುಮಾರು 15ನೇ ಶತಮಾನದ ಸಮಕಾಲೀನರು ಎನ್ನುವುದನ್ನು ಬಿಟ್ಟರೆ ಎಲ್ಲಿಯ ಕೊಲಂಬಸ ಎಲ್ಲಿಯ ಕುಮಾರವ್ಯಾಸ! ಎತ್ತಣಿಂದೆತ್ತ ಸಂಬಂಧವಯ್ಯ!?

ಇದೊಂದು ತಮಾಷೆಯ ಕಲ್ಪನೆ. ಆದರೆ ಗಾಬರಿಯಾಗಬೇಡಿ, ಇದು ಕುಮಾರವ್ಯಾಸ ಅಮೆರಿಕೆಗೆ ಬಂದಿದ್ದನೆಂದಾಗಲೀ ಬಂದಿದ್ದರೆ ಹೇಗೆ ಬರೆಯುತ್ತಿದ್ದನೆಂದಾಗಲೀ ಅಸಂಬದ್ಧ ಅರ್ಥಹೀನ ಕಲ್ಪನೆಯಲ್ಲ. ಅಥವಾ ಬಸವಣ್ಣ ಹೊರಗಣವನೋ ಅಲ್ಲವೋ ಎಂದು ಹುಟ್ಟಿಕೊಂಡಿರುವ ವಿವಾದದಂತೆ ಕುಮಾರವ್ಯಾಸನಿಗೊಂದು ಅಮೆರಿಕ ಕನೆಕ್ಷನ್ ಕೊಡುವ ಹುಚ್ಚುಪ್ರಯೋಗವೂ ಅಲ್ಲ. ಬದಲಿಗೆ, ಈಗಿನ ಕಾಲದ ಯಾರಾದರೊಬ್ಬ ಕನ್ನಡ ಕವಿಪುಂಗವರು ಅಮೆರಿಕದ ಪ್ರವಾಸಮಾಡಿ ಒಂದು ಪ್ರವಾಸಕಥನವನ್ನು ಬರೆದರೆ ಮತ್ತು ಅದು ಕುಮಾರವ್ಯಾಸನ ಸಿಗ್ನೇಚರ್‍ಸ್ಟೈಲ್ ಆದ ಭಾಮಿನಿ ಷಟ್ಪದಿ ಶೈಲಿಯಲ್ಲಿದ್ದರೆ ಹೇಗಿರುತ್ತದೆಯೆಂಬ ಒಂದು ಸರಳ ಸುಂದರ ಹಾಸ್ಯದ ಕಲ್ಪನೆ!

ಬೇಕಿದ್ದರೆ ವಿವರಣೆಯ ಅನುಕೂಲಕ್ಕೋಸ್ಕರ, ಅಮೆರಿಕೆಗೆ ಬಂದು ಹೋದ ಈ ಕವಿಪುಂಗವರ ಹೆಸರು ನಾರಣಪ್ಪ ಎಂದೇ ಇರಲಿ, ಮತ್ತು ಮೂಲತಃ ಅವರು ಗದಗದವರು ಎಂದೇ ಇರಲಿ. ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜನಿಯ‍ರ್ ಆಗಿರುವ ಮಗ-ಸೊಸೆ/ ಮಗಳು-ಅಳಿಯಂದಿರ ಮನೆಗಳಿಗೆ ಬಂದು ಅಮೆರಿಕದ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲ ನೋಡಿಕೊಂಡು ಹೋಗುವ ಎಷ್ಟೋ ಜನ ಹಿರಿಯರಂತೆ ನಾರಣಪ್ಪನವರೂ ಪತ್ನೀಸಮೇತ ಬಂದುಹೋಗಿದ್ದಾರೆ. ಮೊಮ್ಮಕ್ಕಳೊಂದಿಗೆ ಸಂತಸದ ಕ್ಷಣಗಳನ್ನು ಕಳೆದಿದ್ದಾರೆ, ಇಲ್ಲಿನ ಶಿಸ್ತು-ಸ್ವಚ್ಛತೆ-ಸಮಯಪ್ರಜ್ಞೆಗಳನ್ನು ಮೆಚ್ಚಿದ್ದಾರೆ, ಜೀವನಶೈಲಿಯ ಒಳಿತುಕೆಡುಕುಗಳ ಸೂಕ್ಷ್ಮಗಳನ್ನು ದಾಖಲಿಸಿಕೊಂಡಿದ್ದಾರೆ.

ಅಷ್ಟಕ್ಕೂ ಈ ನವ್ಯ ನಾರಣಪ್ಪ ಯಾರು ಎಂಬುದು ಇಲ್ಲಿ ಮುಖ್ಯವಲ್ಲ, ಭಾಮಿನಿಷಟ್ಪದಿ ಛಂದೋಬದ್ಧವಾದ ಅವರ ಪ್ರವಾಸಕಥನವಷ್ಟೇ ನಮಗೆ ಮುಖ್ಯ. ಇದನ್ನವರು ಈ ಶೈಲಿಯಲ್ಲಿಯೇ ಬರೆಯುವುದಕ್ಕೆ ಕಾರಣಗಳೇನಿರಬಹುದು ಎಂದು ಪ್ರಶ್ನಿಸಿದರೂ ಸುಲಭದಲ್ಲಿ ಉತ್ತರ ಸಿಗುತ್ತದೆ. ಅಮೆರಿಕೆಗೆ ಹೋಗಿಬರುವುದೆಂದರೆ ಈಗ ಅಂಥಾ ದೊಡ್ಡ ಸಂಗತಿಯಾಗಿಲ್ಲದಿರುವುದು, ಈಹಿಂದೆ ಹೋಗಿ ಬಂದವರ ಪೈಕಿ ಅನೇಕರು ಈಗಾಗಲೇ ಬರೆದಿರುವ ಪ್ರವಾಸಕಥನಗಳು ಕನ್ನಡದಲ್ಲೂ ಕಾಸಿಗೊಂದು ಕೊಸರಿಗೆರಡು ಎಂಬಂತೆ ಯಥೇಷ್ಟವಾಗಿರುವುದು ನಮಗೆಲ್ಲ ಗೊತ್ತೇ ಇದೆ. ಆದ್ದರಿಂದ ತಮ್ಮ ಪ್ರವಾಸಕಥನ ಇಟ್ಸ್ ಡಿಫರೆಂಟ್! ಆಗಿರಬೇಕು ಎಂಬುದು ನಾರಣಪ್ಪನವರ ಉದ್ದೇಶ. ಹೇಗೂ ತಾನು ಸಹ ಗದಗದ ನಾರಣಪ್ಪನೇ ಆಗಿರುವಾಗ ಕನ್ನಡದ ಕವಿಶ್ರೇಷ್ಠ ಕುಮಾರವ್ಯಾಸನ ಪ್ರೇರಣೆ ಪೂರ್ಣಪ್ರಮಾಣದಲ್ಲಿದ್ದರೆ ತಪ್ಪೇನು?

ಇಗೋ, ಇಲ್ಲಿವೆ ಈ ಕಪೋಲಕಲ್ಪಿತ ಪ್ರವಾಸಕಥನದಿಂದ ಆಯ್ದ ಕೆಲ ಭಾಗಗಳು - ನಿಮಗಾಗಿ ಮಾತ್ರ, ನಿಮ್ಮ ಮನರಂಜನೆಗಾಗಿ ಮಾತ್ರ!

ಅಮೆರಿಕೆಗೆ ಬಂದಿರುವ ಅಪ್ಪ-ಅಮ್ಮನಿಗೆ ಬೇಸರ ಮೂಡಬಾರದೆಂದು ನಾರಣಪ್ಪನವರ ಮಗ ಪ್ರತಿ ವಾರಾಂತ್ಯವೂ ಒಂದಿಲ್ಲೊಂದು ಔಟಿಂಗ್ ಆಯೋಜಿಸುತ್ತಾನೆ. ಅವರಿರುವ ಊರಿಂದ ನಯಾಗರಾ ಫಾಲ್ಸ್ ಆರು ಗಂಟೆ ಡ್ರೈವ್‌ನಷ್ಟು ದೂರ, ಹಾಗಾಗಿ ಕಾರಲ್ಲೇ ಎಲ್ಲರೂ ಹೋಗಿಬರುವ ಪ್ಲಾನ್ ಹಾಕಿದ್ದಾರೆ. ನಾರಣಪ್ಪನವರಿಗೋ ನೀರು ಬೀಳುವುದನ್ನೇನು ನೋಡೋದು, ಜೋಗಜಲಪಾತ ನೋಡಿಲ್ಲವೇ ಎಂಬ ತಾತ್ಸಾರ. ಆದರೆ ಮಗನಿಗೆ, "ಅಮೆರಿಕೆಗೆ ಅಪ್ಪ-ಅಮ್ಮನನ್ನು ಕರೆಸಿದ ಮೇಲೆ ನಯಾಗರಾವನ್ನೂ ತೋರಿಸದಿದ್ದರೆ ನಾಲಾಯಕ್ ಎನಿಸಿದಂತೆ" - ಪ್ರತಿಷ್ಠೆಯ ಪ್ರಶ್ನೆ.

ಬೋರು ಹೊಡೆವುದು ಬೇಡವೆನ್ನುತ
ವಾರದಾಕೊನೆ ಬಂದ ಕೂಡಲೆ
ಕಾರಿನಲ್ಲಿಯೆ ಹೋಗಿ ಬರುವೆವು ಎಲ್ಲರೊಡಗೂಡಿ
ನೀರು ಧುಮುಕುವ ಜಾಗ ಇರುವುದು
ಆರು ಗಂಟೆಯ ಡ್ರೈವು ದೂರದಿ
ನಾರಣಪ್ಪಗೆ ನೆನಪು ಬಂದಿತು ಜೋಗದಾ ಗುಂಡಿ ||

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X