ನಡಿನಡಿತಾ ನಲೀನಲೀ ಏನೇ ಆಗಲೀ

* ಧವಳ
ಡಾಗು..ಕ್ಯಾಟು. ಟರ್ಟಾಯ್ಸು...! ಎಲ್ಲ ರೀತಿಯದ್ದು ಇರುತ್ತದೆ. ಅವ್ಯಾವುದು ಗೊತ್ತಿಲ್ಲದೆ ನಡೆಯುವ ನಮ್ಮ ನಿಮ್ಮಂತಹವರೆ ಈ ಪರಪಂಚದಾಗೆ ಹೆಚ್ಚಾಗಿರೋದು. ಇವೆಲ್ಲ ಸ್ಟೈಲು ನಿನ್ನೆ ಮೊನ್ನೆ ತಾನೇ ನಮಗೆ ಗೊತ್ತಾಗಿದ್ದು! ಆದ್ರೆ ಜನ್ಮಕ್ಕೆ ಅಂಟಿದ ನಡುಗೆ ಶೈಲಿ ಬಗ್ಗೆ ಹೇಳೋಕೆ ಹೊರಟರೆ ಸಿಕ್ಕಾಪಟ್ಟೆ ಹೊಸ ಹೊಸ ಸಂಗತಿಗಳು ನಮ್ಮಲ್ಲಿ ಆಶ್ಚರ್ಯ ಹುಟ್ಟಿಸುತ್ತೆ.
ನಾವು ಹಾಗೆ ಕಣ್ರೀ ಕಾಮನ್ ಪೀಪಲ್ ಎಲ್ಲದಕ್ಕೂ ನಮಗೆ ಸಿಕ್ಕಾಪಟ್ಟೆ ಆಶ್ಚರ್ಯ! ವಾಕಿಂಗ್ ಸ್ಟೈಲ್ ಕಡೆಗೆ ಸ್ವಲ್ಪ ದೃಷ್ಟಿ ಹಾಯಿಸೋಕೆ ಹೋದ್ರೆ ಅಮ್ಮೋ... ಇವೆಲ್ಲ ನಾನು ಒಪ್ಪಲ್ಲ ನಡಿ ನಡಿ.. ಅಂತ ನೀವ್ ಹೇಳಬಹುದು. ಆದರೆ ಇರುವುದು ಇದ್ದಂಗೆ ಹೇಳಿದ್ರೆ ನೀವ್ಯಾಕೆ ಎದ್ದು ನಡೆದುಕೊಂಡು ಬಂದು!
* ಕೆಲವರು ನಡಿತಾ ಇರತಾರೆ...ಅವರ ತಲೆ ಭೂಮಿತಾಯಿಗೆ ಅಂಟಿಕೊಂಡು ಬಿಟ್ಟಿರುತ್ತದೆ. ಡಿಟೆಕ್ಟೀವ್ ರೀತಿಯಲ್ಲಿ ಅವರ ಕಣ್ಣು ನೆಲದಲ್ಲಿ ಅದೇನನ್ನೋ ಕಳೆದು ಹೋದ ನಿಶ್ಚಿತಾರ್ಥದ ಉಂಗುರ ಇರಬಹುದು, ಸದಾ ಹುಡುಕಾಡ್ತಾ ಇರುತ್ತೆ ಅಂತಹವರು ಹೆದುಪುಕ್ಲ-ಪುಕ್ಲಿಗಳು, ಜೊತೆಗೆ ಒಂಟಿತನ ಅಂದ್ರೆ ಇವರಿಗೆ ಪಂಚಪ್ರಾಣ, ಹೊಸಬರನ್ನು ಕಂಡ್ರೆ ಮುಟ್ಟಿದರೆ ಮುನಿಯಂತೆ ಬಚ್ಚಿಟ್ಟುಕೊಳ್ಳುವ ಟೈಪ್ ಇವರದು. ಮನೆ ಬಿಟ್ಟಾಗ ಬಗ್ಗಿಸಿದೊರು ತಲೆ ಉಹುಂ ಎತ್ತೋಕೆ ಹೋಗಲ್ಲ ಎನ್ನುವಂತಹ ಹೆಮ್ಮೆ ನಿಮಗೆ ಇದ್ರೆ ನೀವು!
* ಕೆಲವರು ತಲೆ ಬಾಗಿಸಿರುತ್ತಾರೆ ಕಾಮನಬಿಲ್ಲಿನ ಟೈಪ್, ಅದರ ಜೊತೆ ಭುಜವು ಸಹ ಜಾರಿ ಇಳಿಬಿದ್ದಿರುತ್ತದೆ. ಈ ರೀತಿಯ ಗುಣ ಉಳ್ಳವರಲ್ಲಿ ಆತ್ಮ ವಿಶ್ವಾಸ ಕಡಿಮೆ! ಹೀಗೆ ತಲೆ ಬಾಗಿಸಿ, ಬೆಚ್ಚಿಬೆದರಿದ ಜಿಂಕೆ ಮರಿಯಂತೆ ಓಡಾಡುವ ಹೆಣ್ಣುಮಕ್ಕಳ ಮೇಲೆ ಗಂಡ್ ಕಣ್ಣುಗಳಿಗೆ ಗಮನ ಬಿ ಕೇರ್ ಫುಲ್. ಈ ರೀತಿಯ ಗುಣ ಇರುವ ಹುಡುಗರು ಸ್ವಭಾವತಃ ಮಖೇಡಿಗಳು.. ಅಂತಹವರು ಆ ಗುಣ ಕಿತ್ತು ಬಿಸಾಡಿ ಮುನ್ನುಗ್ಗಿ ನಡೆಯಿರಿ!
* ನಡೀತಾ ಇರ್ತಾರೆ, ಕೈಯಲ್ಲಿ ಏನೂ ಇರಲ್ಲ, ಆದರೆ ಸ್ಟೈಲ್ ನೋಡಿದ್ರೆ ನೂರು ಕೆಜಿ ಭಾರ ಹೊತ್ತಂಗೆ ಇರುತ್ತೆ. ಅಷ್ಟು ಕಷ್ಟಪಟ್ಟು ಜೋತಾಡಿಸಿಕೊಂಡು ನಡೆಯುತ್ತಾರೆ. ಅವರಿಗೆ ತಮ್ಮ ಕೈಗಳನ್ನು ಏನು ಮಾಡಬೇಕೋ ಎಂದು ತಿಳಿಯದ ಸಂದಿಗ್ಧತೆ. ನಿಸೂರಾಗಿ ಪ್ಯಾಂಟ್ ಜೇಬಿನಲ್ಲಿ ಕೈ ಇಟ್ಟುಕೊಂಡು ನಡೀತಾರೆ, ಇಂತಹವರು ಸ್ವಲ್ಪ ಜಾಸ್ತೀನೆ ಕೋಪಿಷ್ಟರು. ಇದೆ ರೀತಿ ಗುಣ ಹೆಣ್ಣು ಮಕ್ಕಳಲ್ಲೂ ಇರುತ್ತದೆ, ಅಂತಹವರು ಒಂದು ಕೈಲಿ ಬ್ಯಾಗು ಇಲ್ಲವೇ ಪುಸ್ತಕ ಅವಚಿ ಹಿಡಿದಿರುತ್ತಾರೆ, ಮತ್ತೊಂದು ಕೈ ನೇರವಾಗಿ ಅಲುಗಾಡದೆ, ಡೀಸೆಂಟಾಗಿ ಇರುತ್ತದೆ. ಈ ಟೈಪ್ ಹೆಣ್ಣು ಮಕ್ಕಳು ಹೆಚ್ಚು ಕೋಪಿಷ್ಟರಾಗಿರ್ತಾರೆ ಇಲ್ಲವೇ ಹೆದರುಪುಕ್ಲಿಗಳು.
* ತೆಂಗಿನಗರಿಯಂತೆ ತೇಲು ನಡಿಗೆ ಕೆಲವರ ಸಂಪತ್ತು. ಇಂತವರು ವೆರಿ ಆಕ್ಟೀವ್ ಪರ್ಸನಾಲಿಟಿ ಹೊಂದಿರುತ್ತಾರೆ, ನಗು ಅವರ ನಗ ನಾಣ್ಯ... ಜೋವಿಯಲ್ ಸ್ವಭಾವ... ಅವರಿದ್ದ ಕಡೆ ನಗುವಿಗೇನು ಬರವಿರಲ್ಲ.
* ನಡಿತಾನೇ ಇರ್ತಾರೆ ಆದ್ರೆ ಈ ಮನುಷ್ಯ ಎಲ್ಲಿ ಯಾವಾಗ ಬಿದ್ ಹೋಗ್ತಾನೋ ಅನ್ನುವ ಭಾವನೆ ಆತನನ್ನು ಕಂಡಾಗ ಅನಿಸದೆ ಇರದು. ಸ್ವಲ್ಪ ಬೆನ್ನುಬಾಗಿಸಿ ಇರ್ತಾರೆ, ಬ್ಯುಸಿಯಾಗಿರುವ ಗುಣ ಇವರದು, ನಡುಗೆಯು ಸಹ ವಕ್ರವಕ್ರ!
* ಒಂದು ಪಾದ ಮೃದುವಾಗಿ ಮತ್ತೊಂದು ವಕ್ರವಾಗಿ ಇಟ್ಟುಕೊಂಡು ನಡೆಯುವವರಲ್ಲಿ ಧೈರ್ಯ ಕಡಿಮೆ, ಎಲ್ಲವು ಗೊಂದಲಮ ಕಿರಿಕಿರಿ, ಕಷ್ಟಪಡುವ ಬದುಕು ಇವರಿಗೆ ಬೇಕಾಗಿಲ್ಲ. ತೊಂದ್ರೆ ಬಂದ್ರೆ ಓಟ ಕೀಳ್ತಾರೆ.
ಎಂತಹ ಗುಣ ಇದ್ರೇನು ನಾವು ನಡೆಯೋ ಹಂಗೆ ನಡೆಯೋದು, ನಮ್ ಗುರೀನೇ ಬೇರೇರೀ ಅಂತೀರಾ.... ಗುಡ್ ನಿಮ್ಮಂಗೆ ನೀವಿರಿ! ನನ್ನಂಗೆ ನಾನಿರ್ತೀನ್.
* ಔಚ್ : ಎರಡು ಜಿರಲೆಗಳು ಆಸ್ಪತ್ರೆಗೆ ಸೇರಿದ್ವು. ತೀವ್ರ ನಿಗಾ ಘಟಕಕ್ಕೆ ಅಡ್ಮಿಟ್ ಮಾಡಲಾಗಿತ್ತು. ಪಕ್ಕ ಪಕ್ಕ ಬೆಡ್. ಸ್ವಲ್ಪ ಚೇತರಿಕೆ ಬಂದಾಗ ಒಂದು ಜಿರಲೆ ಇನ್ನೊಂದು ಜಿರಲೆಗೆ ಕೇಳ್ತು : ಏನ್..ಬೇಗಾನ್?
ಇನ್ನೊಂದು ಜಿರಲೆ : ಇಲ್ಲಪ್ಪಾ, ಪ್ಯಾರಗಾನ್!
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications