ಸಾಹಿತ್ಯ ಜೀವನ ಕಲಿಸಬಹುದು, ಅನ್ನ ಹಾಕಲ್ಲ! ಗುಡ್ ಬೈ!

ಯಾಕೋ ಗೊತ್ತಿಲ್ಲ. ಕನ್ನಡ ಭಾಷೆ, ಕನ್ನಡ ಸಾಹಿತ್ಯ ಪರಿಸರದಿಂದ "ಹೋಗಾಚೆ ದೂರ" ಎಂಬ ತೀರ್ಮಾನವನ್ನು ಒಬ್ಬ ಕನ್ನಡಿಗ ತೆಗೆದುಕೊಂಡಿದ್ದಾನೆ. ಈ ಸಂಬಂಧ ಫೇಸ್ ಬುಕ್ಕಿನಲ್ಲಿ ಆತ ಬರೆದುಕೊಂಡ ಬಹಿರಂಗ ಪತ್ರವನ್ನು ನಮ್ಮ ತಾಣದಲ್ಲಿ ಹಂಚಲಾಗಿದೆ. ಓದಿ. ಆತನಿಗೆ ಬೀಳ್ಕೊಡುತ್ತೀರಾ? ಅಥವಾ ಕೈ ಹಿಡಿದು ಜಗ್ಗಿಸಿ ಇಲ್ಲೇ ಇರುವಂತೆ ಒತ್ತಾಯಿಸುತ್ತೀರಾ? ಆಯ್ಕೆ ನಿಮ್ಮದು! - ಸಂಪಾದಕ.

ಮಾತೃ ಭಾಷೆಯನ್ನ, ಸಾಹಿತ್ಯವನ್ನ ಸಾಹಿತ್ಯದ ಚಹರೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ನಿತರ ಚಟುವಟಿಕೆ, ಕೆಲಸಗಳನ್ನ ನಿರ್ವಹಿಸುತ್ತಿರುವ ನನ್ನಂತ ಬಹುಪಾಲು ಜನ ನಿರುದ್ಯೋಗಿಗಳಾಗಿ ಹೊಟ್ಟೆಹೊರೆಯಲೂ ಸಾಧ್ಯವಾಗದೆ ಸಾಗುತ್ತಿರುವುದು ಸತ್ಯ.

More focused on my livelihood not language Kannada, An open letter

ಇನ್ನು ಭಾಷೆ, ಸಾಹಿತ್ಯ, ಮಣ್ಣು, ಮಸಿ ಇವುಗಳಲ್ಲಿ ಸರ್ಯಾದ ರೀತಿಯಲ್ಲಿ ಜೈಸಿಕೊಂಡು ಬದುಕುತ್ತಿರುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಮಿಕ್ಕ ಇತರರು ಇದೇ ಮಾರ್ಗದಲ್ಲಿ ಮುಂದುವರಿಯಲು, ಪ್ರಚಾರ, ಭ್ರಷ್ಟಾಚಾರ, ಪ್ರಕಾಶನ, ಪ್ರಕಟಣೆ, ಟ್ರಸ್ಟ್, ಸಂಘ, ಸಂಘಟನೆ ಎಂಬ ದಂಧೆಗೆ ಬೀಳಬೇಕಾದುದು ವಿಪರ್ಯಾಸ. ಅದು ಅವರ ತಪ್ಪಲ್ಲ, ತೇಜಸ್ವಿಯ ಹಾಗೆ ಯಾರ ಹಂಗಿಲ್ಲದೆ ಬದುಕುವುದು ಈ ಅಮೂಢ ಜನಸಾಂದ್ರತೆಯಲ್ಲಿ ದು:ಸ್ವಪ್ನ.

ಕೊನೆ ಟಿಪ್ಪಣಿ

ಪೆಟ್ಟಿ ಅಂಗಡಿಯಲ್ಲಿ ಚಾ ಮಾಡುವ ಸಂತೋಷಣ್ಣ
ಹರಿದ ಚಪ್ಪಲಿ, ಬ್ಯಾಗು ಹೊಲೆಯುವ ರಮೇಶ
ಜೀವನವಿಡೀ ಕಪ್ಪಾದ ಕೈಯಿಂದ ಅನ್ನ ಉಣ್ಣುವ ಪಂಚರ್ ಶಾಪಿನ ಜಲೀಲ
ಎಲ್ಲರೂ ಕುಶಿಯಾಗಿದ್ದಾರೆ.
ನಾನೂ ಅವರಂತಾಗಬೇಕೆಂದುಕೊಂಡಿದ್ದೇನೆ
ಸಾಹಿತ್ಯ ಜೀವನ ಕಲಿಸಬಹುದು ಅನ್ನ ಹಾಕಿ ಜೀವ ಉಳಿಸಲಾರದು.

ನಾನಿನ್ನು ಬರುತ್ತೇನೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+